Advertisements

ಶಿವ ವಿಷ್ಣು ಯು’ದ್ಧ ನಡೆದಾಗ ಸೃಷ್ಟಿಯಲ್ಲಿ ಏನಾಗಿತ್ತು ಗೊತ್ತಾ? ವಿಷ್ಣು ಶಿವ ನಡುವೆ ನಡೆದ ಭ’ಯಾನಕ ಯು’ದ್ಧ ನೋಡಿ..

Adyathma

ನಮಸ್ತೆ ಸ್ನೇಹಿತರೆ, ವಿಷ್ಣು ಸೃಷ್ಟಿಯ ಪಾಲಕ ಅದೇ ರೀತಿ ಶಿವ ಸೃಷ್ಟಿಯ ಸಂ’ಹಾರಕ ಎಂದು ನಂಬಲಾಗಿದೆ. ಇಬ್ಬರು ಸಮಾನವಾದ ಶಕ್ತಿ ಹೊಂದಿದ್ದು ಪರಸ್ಪರ ಭಕ್ತರಾಗಿದ್ದಾರೆ. ಆದರೂ ಒಂದು ಸಲ ಇವರ ಮಧ್ಯೆ ಅತಿ ಭ’ಯಂಕರ ಯು’ದ್ಧ ನಡೆದಿತ್ತು. ಸೃಷ್ಟಿಯಲ್ಲಿ ಪ್ರ’ಳಯದ ವಾತಾವರಣ ನಿರ್ಮಾಣವಾಗಿತ್ತು. ಒಂದು ಬಾರಿ ಲಕ್ಷ್ಮಿ ತನ್ನ ತಂದೆ ಸಮುದ್ರದೇವನನ್ನು ನೋಡುವುದಕ್ಕೆ ಬರುತ್ತಾರೆ. ಈ ವೇಳೆ ಸಮುದ್ರ ದೇವ ತುಂಬಾ ಬೇಸರದಲ್ಲಿರುವುದನ್ನು ಕಂಡು ಕಾರಣವನ್ನು ಕೇಳುತ್ತಾರೆ.

Advertisements

ಅದಕ್ಕೆ ಉತ್ತರಿಸಿದ ಸಮುದ್ರ ದೇವ ನಿನ್ನ ಮದುವೆ ವಿಷ್ಣು ಜೊತೆ ಹಾಗಿದೆ ಆದರೆ ನಿನ್ನ ಐವರು ಸಹೋದರಿಯರು ಕೂಡ ವಿಷ್ಣುವನ್ನೇ ತನ್ನ ಪತಿ ಎಂದು ಮನಸಲ್ಲೇ ನಿರ್ಧರಿಸಿಬಿಟ್ಟಿದ್ದಾರೆ. ಅದಕ್ಕಾಗಿ ಘೋ’ರವಾದ ತಪಸ್ಸನ್ನು ಮಾಡುತ್ತಿದ್ದಾರೆ‌ ಎಂದು ಹೇಳುತ್ತಾರೆ. ಇದರಿಂದ ಲಕ್ಷ್ಮಿಗೆ ತುಂಬಾ ಚಿಂತೆಯಾಗುತ್ತದೆ‌. ಸೀದಾ ವಿಷ್ಣುವಿನ ಹತ್ತಿರ ಹೋಗಿ ನಿಮ್ಮ ಹೃದಯದಲ್ಲಿ ನನಗೆ ಮಾತ್ರ ಜಾಗವನ್ನು ಕೊಡಬೇಕು ಎಂದು ಹೇಳುತ್ತಾರೆ. ಆಗ ವಿಷ್ಣು ನನ್ನ ಅರ್ಧ ಹೃದಯದಲ್ಲಿ ಶಿವ ಇದ್ದಾರೆ ಎಂದು ನಿನಗೆ ಗೊತ್ತಲ್ವ ಎಂದು ಹೇಳುತ್ತಾರೆ.

ಆಗ ಲಕ್ಷ್ಮಿ ನಿಮ್ಮ ಉಳಿದ ಅರ್ಧ ಭಾಗದಲ್ಲಿ ನನಗೆ ಮಾತ್ರ ಜಾಗ ಕೊಡಿ ಎಂದು ಕೇಳುತ್ತಾರೆ. ಆಗ ಉತ್ತರಿಸಿದ ವಿಷ್ಣು ಹೇ ಲಕ್ಷ್ಮಿ ನಾನು ಈ ಜಗತ್ತಿನ ಪಾಲಕ ಈಗಾಗಿ ಉಳಿದರ್ಧ ಭಾಗದಲ್ಲಿ ನನ್ನ ಭಕ್ತರು ಮತ್ತು ನಾನು ತುಂಬಾ ಪ್ರೀತಿಸುವ ಈ ಭೂಮಿ ಇದೆ ಎಂದು ನಿನಗೆ ಗೊತ್ತಲ್ವಾ ಎಂದು ಹೇಳುತ್ತಾರೆ‌. ಇದರಿಂದ ಬೇಸರಗೊಂಡ ಲಕ್ಷ್ಮಿ ಈ ಸೃಷ್ಟಿ ನನಗೂ ಇಷ್ಟ ಆದರೆ ನಾನು ನನ್ನ ಹೃದಯದಲ್ಲಿ ನಿಮಗೆ ಮಾತ್ರ ಜಾಗ ಕೊಟ್ಟಿದ್ದೇನೆ ನನಗೆ ನಿಮ್ಮ ಪ್ರೀತಿ ಸಂಪೂರ್ಣವಾಗಿ ಬೇಕು ಇಲ್ಲ ಅಂದರೆ ನನ್ನನ್ನ ನಿಮ್ಮ ಹೃದಯದಿಂದ ತೆಗೆದು ಹಾಕಿ ಎಂದು ಹೇಳುತ್ತಾರೆ.

ನಂತರದಲ್ಲಿ ಲಕ್ಷ್ಮಿ ಸಹೋದರಿಯರು ತಮ್ಮ ತಪಸ್ಸಿನಲ್ಲಿ ಯಶಸ್ವಿಯಾಗುತ್ತಾರೆ. ಈ ವೇಳೆ ಪಾ’ತಾಳ ಲೋಕಕ್ಕೆ ತೆರಳಿ ದರ್ಶನ ನೀಡಿದ ವಿಷ್ಣು ಏನು ವರಬೇಕು ಕೇಳಿ ಎಂದು ಹೇಳಿದರು. ಆಗ ಲಕ್ಷ್ಮಿಯ ಐವರು ಸಹೋದರಿಯರು ನೀವು ನಿಮ್ಮ ಎಲ್ಲ ನೆನಪಿನ ಶಕ್ತಿಯನ್ನ ಮರೆತು ನಮ್ಮ ಪತಿಯಾಗಿ ಪಾ’ತಾಳಲೋಕದಲ್ಲಿ ವಾಸಮಾಡಬೇಕೆಂದು ಬೇಡಿಕೊಳ್ಳುತ್ತಾರೆ. ಅದಕ್ಕೆ ಒಪ್ಪಿಕೊಂಡ ವಿಷ್ಣು ತನ್ನ ಎಲ್ಲಾ ನೆನಪಿನ ಶಕ್ತಿ ಕರ್ತವ್ಯವನ್ನು ಮರೆತು ಪಾ’ತಾಳಲೋಕದಲ್ಲಿ ವಾಸಿಸುವುದಕ್ಕೆ ಶುರು ಮಾಡುತ್ತಾನೆ. ವಿಷ್ಣು ಪಾ’ತಾಳಲೋಕಕ್ಕೆ ಹೋಗುತ್ತಿದ್ದ ಹಾಗೆ ಸೃಷ್ಟಿಯಲ್ಲಿ ಸಮತೋಲನ ಹಾಳಾಗಿ ಹೋಯ್ತು.

ಆಗ ಲಕ್ಷ್ಮಿ ಸೀದಾ ಶಿವನ ಬಳಿಹೋಗಿ ಸಹಾಯ ಕೇಳುತ್ತಾರೆ. ಆಗ ಲಕ್ಷ್ಮಿಗೆ ತಿಳಿ ಹೇಳುವ ಪಾರ್ವತಿ ನನ್ನ ಪತಿಯ ಅರ್ಧ ಭಾಗದಲ್ಲಿ ವಿಷ್ಣು ಇದಾರೆ ಉಳಿದರ್ಧ ಭಾಗದಲ್ಲಿ ಅವರ ಭಕ್ತರೊಂದಿಗೆ ನಾನು ಇದ್ದೇನೆ ನೀನು ವಿಷ್ಣುವಿನ ಹೃದಯದಲ್ಲಿ ನಿನಗೆ ಮಾತ್ರ ಸ್ಥಾನ ಬೇಕು ಅಂತ ಕೇಳುವುದು ಸರಿಯಲ್ಲ ಎಂದು ಹೇಳುತ್ತಾರೆ. ಆಗ ಲಕ್ಷ್ಮಿಗೆ ತನ್ನ ತಪ್ಪಿನ ಅರಿವಾಗುತ್ತದೆ. ಸೃಷ್ಟಿಯ ಸಮತೋಲನ ಕಾಪಾಡಲು ವಿಷ್ಣುವನ್ನ ಪಾ’ತಾಳ ಲೋಕದಿಂದ ವೈಕುಂಠಕ್ಕೆ ಕರೆತರುವುದು ಅನಿವಾರ್ಯವಾಗಿತ್ತು. ಈಗಾಗಿ ಶಿವ ವೃಷಭಾವತಾರವನ್ನ ತಾಳಿ ಪಾ’ತಾಳಲೋಕಕ್ಕೆ ಹೋದರು. ಇದನ್ನು ಕಂಡ ವಿಷ್ಣು ಕೋಪಗೊಂಡ್ರು ಇಬ್ಬರ ನಡುವೆ ಭ’ಯಂಕರ ಯು’ದ್ಧ ಶುರುವಾಯಿತು.

ಇಬ್ಬರೂ ಪರಸ್ಪರ ಬಾರಿ ಅ’ಸ್ತ್ರಗಳನ್ನು ಚಲಾಯಿಸಿದರು. ಆದರೆ ಹಲವಾರು ವರ್ಷಗಳಾದರೂ ಕೂಡ ಇಬ್ಬರ ಮದ್ಯೆ ಯಾರಿಗೂ ಗೆಲ್ಲುವುದಕ್ಕೆ ಸಾಧ್ಯವಾಗಲಿಲ್ಲ. ಕೊನೆಗೆ ವಿಷ್ಣು ತಮ್ಮ ನಾರಾಯಣ ಅ’ಸ್ತ್ರವನ್ನು ಪ್ರಯೋಗಿಸಿದರೆ, ಶಿವ ಪಾಶುಪತಾ’ಸ್ತ್ರವನ್ನು ಚಲಾಯಿಸಿದರು. ಇದರಿಂದ ಇಬ್ಬರು ಬಂಧನಕ್ಕೆ ಒಳಪಟ್ಟರು. ಇದನ್ನು ಕಂಡ ದೇವತೆಗಳು ಚಿಂತೆಗೊಳಗಾದರು. ಇಂತಹ ಸ್ಥಿತಿಯಲ್ಲಿ ಗಣಪತಿ ಲಕ್ಷ್ಮಿಯ ಐವರ ಸಹೋದರಿಯರ ಬಳಿಹೋಗಿ ಈಗಲೂ ವಿಷ್ಣುವಿಗೆ ನೆನಪಿನ ಶಕ್ತಿ ವಾಪಸ್ ಬರದೇ ಹೋದರೆ ಇಬ್ಬರೂ ಪರಸ್ಪರ ಬಂ’ಧಿಗಳಾಗಿ ಇರುತ್ತಾರೆ.

ಇದರಿಂದ ಸೃಷ್ಟಿ ನಾ’ಶವಾಗುತ್ತದೆ ಎಂದು ಹೇಳುತ್ತಾರೆ. ಆಗ ಆ ಐವರು ಸಹೋದರಿಯರು ವಿಷ್ಣುವಿನ ಬಳಿಬಂದು ತಾವು ವಿಧಿಸಿದ್ದ ಶರತ್ತುಗಳಿಂದ ಮುಕ್ತಗೊಳಿಸಿದರು. ಆಗ ವಿಷ್ಣುವಿಗೆ ಎಲ್ಲವೂ ನೆನಪಿಗೆ ಬರುತ್ತದೆ. ಶಿವ ಮತ್ತು ವಿಷ್ಣು ಪರಸ್ಪರ ಬಂ’ಧನದಿಂದ ಮುಕ್ತಗೊಳಿಸಿಕೊಳ್ಳುತ್ತಾರೆ. ನಂತರ ಶಿವ ತಮ್ಮ ನಿಜರೂಪಕ್ಕೆ ಬಂದು ವಿಷ್ಣುವನ್ನು ಪಾ’ತಾಳ ಲೋಕದಿಂದ ವೈಕುಂಠಕ್ಕೆ ಕರೆದುಕೊಂಡು ಬರುತ್ತಾರೆ. ಸ್ನೇಹಿತರೆ ಇದು ಶಿವ ಮತ್ತು ವಿಷ್ಣುವಿನ ನಡುವೆ ನಡೆದ ಭ’ಯಂಕರ ಯು’ದ್ಧದ ಕಥೆ. ಸ್ನೇಹಿತರೇ, ಹರಿ ಹರರಲ್ಲಿ ಯಾವುದೇ ಭೇದವಿಲ್ಲ..ಅದಕ್ಕೆ ಪುರಾಣಗಳಲ್ಲಿ ಹೇಳಲಾಗಿದೆ ‘ಶಿವಾಯ ವಿಷ್ಣು ರುಪಾಯ, ಶಿವರೂಪಾಯ ವಿಷ್ಣವೇ, ಶಿವಶ್ಚ ಹೃದಯಂ ವಿಷ್ಣುಃ ವಿಷ್ಣೋಶ್ಚ ಹೃದಯಗಂ ಶಿವಃ’