Advertisements

ಮಹಿಳೆ ಮು’ಟ್ಟಾಗಲು ಇಂದ್ರನ ಯಾವ ಕಿತಾಪತಿ ಕಾರಣ ಗೊತ್ತಾ? ಇಂದ್ರನ ಆ ತಪ್ಪು ಯಾವುದು ನೋಡಿ..

Uncategorized

ಸ್ನೇಹಿತರೆ ಮಹಿಳೆಯರು ಪ್ರತಿ ತಿಂಗಳು ಋತುಸ್ರಾ’ವ ನೋವನ್ನ ಅನುಭವಿಸ್ತಾರೆ. ಮಹಿಳೆಯರು ಪ್ರತೀ ತಿಂಗಳು ಈ ನೋವು ಯಾಕೆ ಅನ್ನೋದು ಎಲ್ಲರಲ್ಲೂ ಕಾಡುವ ಪ್ರಶ್ನೆ. ಇದಕ್ಕೆ ವೈಜ್ಞಾನಿಕವಾಗಿ ಕಾರಣಗಳು ಕೂಡ ಇವೆ ಆದರೆ ಹಿಂದೂ ಧರ್ಮ ಗ್ರಂಥಗಳಲ್ಲಿ ಪ್ರತಿಯೊಂದಕ್ಕು ಒಂದೊಂದು ವಿಭಿನ್ನ ಕಾರಣಗಳನ್ನ ಕೊಡಲಾಗಿದೆ. ಅದರಂತೆ ಭಾಗವತ ಪುರಾಣದ ಆರನೇ ಸ್ಕಂದದ ಒಂಬತ್ತನೇ ಅಧ್ಯಾಯದಲ್ಲಿ ಮಹಿಳೆಯರ ಈ ನೋವಿಗೆ ಕಾರಣವನ್ನ ಕೊಡಲಾಗಿದೆ. ಅದರಂತೆ ಇಂದ್ರನ ಪಾ’ಪದಿಂದಾಗಿ ಮಹಿಳೆಯರಿಗೆ ಈ ನೋವು ಬಂತು ಎಂದು ಹೇಳಲಾಗಿದೆ. 

Advertisements

ಒಮ್ಮೆ ದೇವಗುರು ಬೃಹಸ್ಪತಿಗೆ ದೇವತೆಗಳು ಇಂದ್ರ ಸೇರಿಕೊಂಡು ಅಪಮಾನ ಮಾಡಿದ್ರು ಇದರಿಂದ ಬೇಸರಗೊಂಡ ಅವರು ಸ್ವರ್ಗದಿಂದ ಹೊರಟು ಹೋಗಿದ್ದರು. ಇದನ್ನೇ ಬಂಡವಾಳ ಮಾಡಿಕೊಂಡ ರಾ’ಕ್ಷಸರು ಸ್ವರ್ಗದ ಮೇಲೆ ದಾ’ಳಿ ಮಾಡಿ ದೇವತೆಗಳ ಮೇಲೆ ದಾ’ಳಿ ಮಾಡಿದ್ರು. ಅಲ್ಲದೇ ಇಂದ್ರನಿಂದ ಪದವಿಯನ್ನು ಕಿತ್ತುಕೊಂಡು ಹೋಡಿಸಿದ್ರು. ಆಗ ಎಲ್ಲಾ ದೇವತೆಗಳೊಂದಿಗೆ ಇಂದ್ರ ಬ್ರಹ್ಮದೇವನ ಬಳಿ ಹೋಗುತ್ತಾನೆ ಆಗ ಬ್ರಹ್ಮ ತ್ವಷ್ಟ ಮಹರ್ಷಿಯ ಪುತ್ರ ವಿಶ್ವರೂಪಚಾರ್ಯನನ್ನ ತಮ್ಮ ಗುರುವಾಗಿ ಮಾಡಿಕೊಳ್ಳುವಂತೆ ಸಲಹೆ ಕೊಟ್ಟಿದ್ದರು. ನಂತರ ದೇವತೆಗಳು ವಿಶ್ವರೂಪರಚಾರ್ಯ ಬಳಿ ಹೋಗಿ ಸಹಾಯ ಕೇಳಿದ್ದರು.

ಆಗ ವಿಶ್ವರೂಪಚಾರ್ಯ ನಾರಾಯಣಿ ವಿದ್ಯೆ ಮೂಲಕ ರಾ’ಕ್ಷಸರಿಂದ ಸ್ವರ್ಗವನ್ನ ವಾಪಸ್ ಪಡೆದು ದೇವತೆಗಳಿಗೆ ಕೊಟ್ಟಿದ್ದರು. ವಿಶ್ವರೂಪಚಾರ್ಯ ಮೂಲತಃ ರಾ’ಕ್ಷಸರ ವಂಶದವರೇ ಆಗಿದ್ದರು ಈಗಾಗಿ ಒಮ್ಮೆ ದೇವತೆಗಳಿಗೆ ಆಹು’ತಿ ಕೊಡುವಾಗ ರಾ’ಕ್ಷಸರ ಹೆಸರು ಕೂಡ ಹೇಳ್ತಾಯಿದ್ರು‌. ಇದನ್ನು ಕಂಡು ಕೆರಳಿದ ಇಂದ್ರ ವಿಶ್ವರೂಪಚಾರ್ಯ ರುಂ’ಡವನ್ನ ಚೆಂ’ಡಾಡಿದ. ಅಲ್ಲದೇ ಇದರಿಂದ ಗುರುಹ’ತ್ಯೆ ಮತ್ತು ಬ್ರಹ್ಮಹ’ತ್ಯೆ ದೋ’ಷಕ್ಕೆ ಗುರಿಯಾಗಿದ್ದ ಬ್ರಹ್ಮ ಹ’ತ್ಯೆ ಪಾಪ ರಾ’ಕ್ಷಸನ ರೂಪವನ್ನ ತಾಳಿ ಇಂದ್ರನನ್ನ ಬೆನ್ನಟ್ಟಿತ್ತು ಆಗ ಹೆದರಿಹೋದ ಇಂದ್ರ ದಿಕ್ಕಾಪಾಲಾಗಿ ಓಡಿಹೋದ.

ನಂತರ ಸರೋವರ ಒಂದರಲ್ಲಿ ಕದ್ದು ಕುಳಿತು 300 ವರ್ಷಗಳ ಕಾಲ ವಿಷ್ಣುವಿನ ಘೋ’ರ ತಪಸ್ಸನ್ನು ಮಾಡಿದ್ದ. ನಂತರ ಪ್ರತ್ಯಕ್ಷರಾದ ವಿಷ್ಣು ಇಂದ್ರನಿಗೆ ಪಾ’ಪವನ್ನ ತೊಳೆದುಕೊಳ್ಳುವ ಮಾರ್ಗವನ್ನು ಹೇಳಿದ್ದರು. ಅದರಂತೆ ತನ್ನ ಪಾ’ಪವನ್ನ ನಾಲ್ಕು ಭಾಗಗಳನ್ನಾಗಿ ಮಾಡಿ ಒಂದು ಭಾಗವನ್ನ ಮರಕ್ಕೆ, ಎರಡನೇ ಭಾಗವನ್ನ ಭೂಮಿಗೆ, ಮೂರನೇ ಭಾಗವನ್ನ ನೀರಿಗೆ, ನಾಲ್ಕನೇ ಭಾಗವನ್ನ ಸ್ತ್ರೀಯರಿಗೆ ಹಂಚುವಂತೆ ಸಲಹೆ ಕೊಟ್ಟರು. ನಂತರ ಮರ, ಸ್ತ್ರೀ, ಜಲ, ಭೂಮಿಯ ಬಳಿ ತೆರಳಿ ಈ ಬಗ್ಗೆ ಹೇಳಿದಾಗ ಎಲ್ಲರೂ ಇಂದ್ರನ ಪಾ’ಪದ ಕಾಲು ಕಾಲು ಭಾಗವನ್ನ ಪಡೆಯೋಕೆ ಒಪ್ಪಿದರು.

ಆದರೆ ಅದರ ಬದಲಾಗಿ ಒಂದೊಂದು ವರವನ್ನು ಕೊಡುವಂತೆ ಷರತ್ತು ವಿಧಿಸಿದರು. ಅದಕ್ಕೆ ಇಂದ್ರನೂ ಕೂಡ ಒಪ್ಪಿಕೊಂಡ ನಂತರ ಮೊದಲಿಗೆ ಭೂಮಿ ತಾಯಿ ಇಂದ್ರನ ಪಾಪದ ಒಂದು ಭಾಗವನ್ನ ಪಡೆದ್ರು. ಇದರಿಂದಾಗಿ  ಭೂಮಿ ತಾಯಿ ಅಲ್ಲಲ್ಲಿ ಭಂ’ಜೆಯಾದಳು. ನಂತರ ಭೂಮಿಯ ಯಾವ್ಯಾವ ಭಾಗದಲ್ಲಿ ಹೊಂಡಗಳಿವಿಯೋ ಅವುಗಳು ಕಾಲಕ್ರಮೇಣ ತುಂಬುಕೊಳ್ಳುತ್ತದೆ ಎಂದು ಇಂದ್ರ ವರವನ್ನು ಕೊಟ್ಟ. ಇಂದ್ರನ ಪಾ’ಪದ ಎರಡನೇ ಭಾಗವನ್ನ ಮರಗಳು ಪಡೆದವು. ಅದರಂತೆಯೇ ಮರಗಳಲ್ಲಿ ಅಂ’ಟು ಹಿಡಿಯಲು ಶುರುವಾಯಿತು. ಬದಲಾಗಿ ವೃಕ್ಷದ ಯಾವ ಭಾಗವನ್ನ ಕ’ಡಿದರು ಅದು ಪುನಃ ರೂಪುಗೊಳ್ಳುತ್ತದೆ ಎಂದು ಇಂದ್ರ ವರವನ್ನ ಕೊಟ್ಟ.

ನಂತರ ಪಾ’ಪದ ಮೂರನೇ ಭಾಗವನ್ನ ನೀರು ಪಡೆಯಿತು ಈಗಾಗಿ ಸಮುದ್ರದಲ್ಲಿ ಅಲೆ ಮತ್ತು ನೊ’ರೆ ಉತ್ಪತ್ತಿಯಾಗಲು ಶುರುವಾಯಿತು‌. ಬದಲಾಗಿ ಯಾವುದೇ ವಸ್ತುವನ್ನ ಶುದ್ಧ ಮತ್ತು ಪವಿತ್ರಗೊಳಿಸುವ ಶಕ್ತಿಯ ಜೊತೆ ಪುನರ್ ನವೀಕರಣಗೊಳ್ಳುವ ಶಕ್ತಿಯನ್ನ ಪಡೆದುಕೊಂಡಿತು. ಅಂತಿಮವಾಗಿ ಇಂದ್ರನ ಪಾ’ಪದ ನಾಲ್ಕನೇ ಭಾಗವನ್ನ ಸ್ತ್ರೀಯರು ಪಡೆದರು‌. ಇದರಿಂದಾಗಿ ಸ್ತ್ರೀಯರು ಪ್ರತಿ ತಿಂಗಳು ನೋವು ಅನುಭವಿಸಬೇಕಾಯಿತು‌. ಇದಕ್ಕೆ ಪ್ರತಿಯಾಗಿ ಮಹಿಳೆಯರು ಪುರುಷರಿಗಿಂತ ಹೆಚ್ಚಾಗಿ ಕಾ’ಮದ ಆನಂದವನ್ನು ಪಡೆಯುತ್ತಾರೆ ಅಂತ ವರವನ್ನ ಕೊಟ್ಟ ಇಂದ್ರದೇವ. ಸ್ನೇಹಿತರೆ ಈಗೆ ತನ್ನ ಪಾ’ಪವನ್ನ ನಾಲ್ವರಲ್ಲಿ ಸಮನಾಗಿ ಹಂಚಿದ. ಇದೇ ಕಾರಣಕ್ಕೆ ಮಹಿಳೆಯರು ಪ್ರತಿತಿಂಗಳು ನೋವು ಅನುಭವಿಸಬೇಕಾಗುತ್ತೆ ಅಂತ ಪುರಾಣದಲ್ಲಿ ತಿಳಿಸಲಾಗಿದೆ.