Advertisements

ಶ್ರೀರಾಮ ನಾಯಿಗೆ ನ್ಯಾಯ ಕೊಡಿಸಿದ ಕಥೆ! ನಾಯಿಗೆ ಏನಾಗಿತ್ತು, ಶ್ರೀರಾಮ ಕೊಟ್ಟ ನ್ಯಾಯ ಎಂತಹದ್ದು ಗೊತ್ತಾ?

Adyathma

ನಮಸ್ತೆ ಸ್ನೇಹಿತರೆ, ಪ್ರಾಚೀನ ಕಾಲದ ಉತ್ತರ ಭಾರತದಲ್ಲಿ ಒಂದು ಪ್ರಸಿದ್ಧವಾದ ಮಠವಿತ್ತು. ಅದೇ ಕಾಲಿಂಜರ್ ಮಠ, ಇದು ಆ ಕಾಲದ ಪ್ರಸಿದ್ಧ ಮಠವಾಗಿತ್ತು. ರಾಮನ ಜನನದ ಮುನ್ನವೇ ಇದ್ದ ಈ ಮಠ ತುಂಬಾ ಪ್ರಸಿದ್ಧವಾಗಿತ್ತು. ರಾಮನನ್ನ ನ್ಯಾಯವಾದಿ ರಾಜ ಎಂದು ಕರೆಯಲಾಗುತ್ತಿತ್ತು. ಅದೇ ರೀತಿ ಶ್ರೀ ರಾಮ ಪ್ರತಿದಿನ ತಮ್ಮ ಆಸ್ಥಾನದಲ್ಲಿ ಕುಳಿತು ನ್ಯಾಯ ನೀಡ್ತಾಯಿದ್ರು. ಒಂದು ದಿನ ರಾಮನ ಹತ್ತಿರ ನ್ಯಾಯಕ್ಕಾಗಿ ನಾಯಿಯೊಂದು ಬರುತ್ತದೆ. ಒಂದು ದಿನ ರಾಮ ಹಿಂದಿನಂತೆ ಆಸ್ಥಾನದಲ್ಲಿ ನ್ಯಾಯ ಹೇಳ್ತಾಯಿದ್ರು ದಿನ ಅಂ’ತ್ಯದಲ್ಲಿ ತನ್ನ ತಮ್ಮ ಲಕ್ಷ್ಮಣನನ್ನು ಕರೆದು ಹೊರಗಡೆ ಇನ್ನೂ ಯಾರಾದರೂ ಇದ್ದಾರಾ ನೋಡು ಅಂತಾರೆ. ಅಂದ್ರೆ ನ್ಯಾಯಕ್ಕಾಗಿ ಬಂದವರು ಯಾರು ಕೂಡ ಕಾಲಿ ಕೈಯಲ್ಲಿ ವಾಪಸ್ ಹೋಗಬಾರದು ಎನ್ನುವುದು ಶ್ರೀರಾಮನ ಉದ್ದೇಶವಾಗಿತ್ತು.

Advertisements

ಲಕ್ಷ್ಮಣ ಹೊರಗೆ ಹೋಗಿ ನೋಡಿದಾಗ ಯಾರು ಕೂಡ ಕಾಣಿಸೊದಿಲ್ಲ. ಇಗಾಗಿ ಲಕ್ಷ್ಮಣ ಹೊಳಗಡೆ ಬಂದು ಯಾರು ಇಲ್ಲ ಎಂದು ಹೇಳುತ್ತಾನೆ. ಆದರೆ ರಾಮನಿಗೆ ಯಾಕೋ ಮನಸ್ಸಿಗೆ ಸಮಾಧಾನ ಆಗಲಿಲ್ಲ. ಮತ್ತೆ ನೋಡಿಕೊಂಡು ಬಾ ಎಂದು ಕಳಿಸುತ್ತಾರೆ. ಹೊರಗಡೆ ಹೋದ ಲಕ್ಷ್ಮಣನಿಗೆ ನಾಯಿಯೊಂದು ಕುಳಿತಿರೋದು ಕಾಣಿಸುತ್ತೆ. ನಾಯಿಯ ತಲೆಗೆ ಪೆಟ್ಟಾಗಿ ರ’ಕ್ತ ಸೋರುತ್ತಿರುವುದನ್ನು ಲಕ್ಷ್ಮಣ ನೋಡಿ ಏನಾಯಿತು ಎಂದು ಕೇಳುತ್ತಾನೆ. ಆಗ ನಾಯಿ ನನಗೆ ಅನ್ಯಾಯವಾಗಿದೆ ಶ್ರೀರಾಮನ ಬಳಿ ನ್ಯಾಯವನ್ನು ಕೇಳುವುದಕ್ಕೆ ಬಂದಿದ್ದೇನೆ ಎಂದು ಹೇಳುತ್ತದೆ. ನಂತರ ಲಕ್ಷ್ಮಣ ಶ್ರೀರಾಮನ ಆಸ್ಥಾನಕ್ಕೆ ನಾಯಿಯನ್ನು ಕರೆದುಕೊಂಡು ಹೋಗುತ್ತಾನೆ. ಶ್ರೀರಾಮನ ಮುಂದೆ ಬಂದ ನಾಯಿ ಹೇ ರಾಮ ನನಗೆ ಅನ್ಯಾಯವಾಗಿದೆ, ನ್ಯಾಯಬೇಕು ನನಗೆ ಕಾರಣವಿಲ್ಲದೆ ಹಿಂ’ಸೆ ಕೊಡಲಾಗಿದೆ. ನಾನು ನನ್ನ ಪಾಡಿಗೆ ಸುಮ್ಮನೆ ಕುಳಿತಿದ್ದೆ ಸರ್ವದಾ ಸಿದ್ ಎನ್ನುವ ವ್ಯಕ್ತಿಯೊಬ್ಬ ಕಾರಣವಿಲ್ಲದೆ ತನ್ನ ತಲೆಯ ಮೇಲೆ ಹೊಡೆದು ಪೆಟ್ಟುಮಾಡಿದ್ದಾನೆ ನನಗೆ ನ್ಯಾಯಬೇಕು ಎಂದು ಬೇಡಿಕೊಳ್ಳುತ್ತದೆ..

ನಾಯಿಯ ಮಾತನ್ನು ಕೇಳಿದ ಶ್ರೀರಾಮ ಸರ್ವದಾ ಸಿದ್ ವ್ಯಕ್ತಿ ಯನ್ನು ಕರೆಸುತ್ತಾನೆ ಅಲ್ಲದೇ ನೀನು ಕಾರಣವಿಲ್ಲದೆ ನಾಯಿಗೆ ಹೊಡೆದಿದ್ದೀಯಾ ಎಂದು ಕೇಳುತ್ತಾರೆ. ಆಗ ತಪ್ಪೊಪ್ಪಿಕೊಳ್ಳುವ ಸರ್ವದಾ ಸಿದ್ ಹೌದು ನಾನು ನಾಯಿಗೆ ಹೊಡೆದಿದ್ದೇನೆ. ನನಗೆ ತುಂಬಾ ಹಸಿವಾಗ್ತಾಯಿತ್ತು. ನಾನು ಬರುವ ದಾರಿಯಲ್ಲಿ ಈ ನಾಯಿ ಕುಳಿತುಕೊಂಡಿತ್ತು ಮೊದಲೇ ನಾನು ಅತ್ಯಂತ ಹಸಿವಿನಿಂದ ಕೋಪದಲ್ಲಿದ್ದೆ ಈಗಾಗಿ ಈ ನಾಯಿಗೆ ಹೊಡೆದೆ ಎಂದು ಹೇಳ್ತಾನೆ. ನನಗೆ ನೀವು ಯಾವುದೇ ಶಿ’ಕ್ಷೆ ಕೊಟ್ಟರೂ ಕೂಡ ಅನುಭವಿಸಲು ಸಿದ್ಧ ಎಂದು ಹೇಳ್ತಾನೆ. ತಾನು ಮಾಡಿದ ತಪ್ಪನ್ನು ಸರ್ವದಾ ಸಿದ್ ಒಪ್ಪಿಕೊಳ್ಳುತ್ತಾನೆ ಆದರೆ ಯಾವ ಶಿಕ್ಷೆ ಕೊಡೊದು ಎನ್ನುವುದು ಗೊಂದಲವಾಗುತ್ತದೆ. ಯಾಕೆಂದರೆ ಆಗಿನ ಕಾಲದಲ್ಲಿ ಇಂತಹ ಒಂದು ವಿಚಿತ್ರವಾದ ಅ’ಪರಾಧಕ್ಕೆ ಶಿ’ಕ್ಷೆನೆ ಇರಲಿಲ್ಲ.

ಹೀಗಾಗಿ ಶ್ರೀರಾಮ ಯಾವ ಶಿ’ಕ್ಷೆ ಕೊಡೊದು ಅಂತ ನಾಯಿಯ ಬಳಿ ಕೇಳುತ್ತಾರೆ. ಆಗ ನಾಯಿ ನನ್ನ ಬಳಿ ಉಪಾಯ ಇದೆ ಈತನನ್ನ ಕಾಲಿಂಜರ್ ಮಠದ ಮುಖ್ಯ ಮಹಾಂತನನ್ನಾಗಿ ಮಾಡಿ ಅಂತ ಹೇಳುತ್ತೆ. ಆಗ ನಾಯಿಯ ಮಾತಿಗೆ ಒಪ್ಪಿದ ರಾಮ ತಥಾಸ್ತು ಎಂದು ಹೇಳಿಬಿಡ್ತಾರೆ. ಈ ಸರ್ವದಾ ಸಿದ್ ಕಾಲಿಂಜರ್ ಮಠದ ಮುಖ್ಯ ಮಹಾಂತನನ್ನಾಗಿ ನೇಮಿಸಿದರು. ಅಲ್ಲದೇ ಒಂದು ಆನೆಯನ್ನು ಕೂಡ ಕೊಟ್ಟಿದ್ದರು. ಈ ಶಿಕ್ಷೆಯಿಂದ ಸರ್ವದಾ ಸಿದ್ ತುಂಬಾ ಸಂತೋಷಗೊಂಡು ಆನೆಯ ಮೇಲೆ ಕುಳಿತು ಮಠದ ಕಡೆಗೆ ಹೋದ. ಸರ್ವದಾ ಸಿದ್ ಅಲ್ಲಿಂದ ಹೋದ ಬಳಿಕ ಎಲ್ಲರಿಗೂ ಆಶ್ಚರ್ಯವಾಗುತ್ತದೆ. ಇದೆಂತಾ ಶಿ’ಕ್ಷೆ ಎಂದು ಎಲ್ಲರೂ ಮಾತನಾಡಿಕೊಳ್ಳುತ್ತಾರೆ. ಅದೇ ರೀತಿ ಶ್ರೀರಾಮನಿಗೂ ಗೊಂದಲವಾಗುತ್ತದೆ. ಹೀಗಾಗಿ ನಾಯಿಯ ಬಳಿಯೇ ಆ ಶಿಕ್ಷೆಯ ಹಿಂದಿನ ಕಾರಣವನ್ನ ಕೇಳುತ್ತಾರೆ.

ಆಗ ನಾಯಿ ನಾನು ಹಿಂದಿನ ಜನ್ಮದಲ್ಲಿ ಕಾಲಿಂಜರ್ ಮಠದ ಮುಖ್ಯ ಮಹಂತಾನಾಗಿದ್ದೆ. ನಾನು ಜನರ ಕಲ್ಯಾಣ ಮತ್ತು ಮಠದ ಉದ್ಧಾರ ಮಾಡುವ ಉದ್ದೇಶವನ್ನು ಹೊಂದಿದ್ದೆ.. ನನ್ನ ಮತ್ತು ಇತರೆ ಜನರ ಆಧ್ಯಾತ್ಮಿಕ ಕಲ್ಯಾಣ ಉದ್ದೇಶವನ್ನು ಇಟ್ಟುಕೊಂಡು ಅಲ್ಲಿಗೆ ಹೋಗಿದ್ದೆ. ನನ್ನ ಉದ್ದೇಶವನ್ನು ಈಡೇರಿಸಿಕೊಳ್ಳಲು ಪ್ರಯತ್ನವನ್ನು ಮಾಡಿದ್ದೆ. ಆದರೆ ದಿನಕಳೆದಂತೆ ಆ ಹುದ್ದೆಯಿಂದ ಬರುವ ಖ್ಯಾತಿ ಮತ್ತು ಹೆಸರು ನನ್ನ ಮೆಲೆ ಪ್ರಭಾವ ಬೀರುವುದಕ್ಕೆ  ಶುರುಮಾಡಿದವು. ಹಲಾವರು ಬಾರಿ ನನ್ಮ ಅಹಂಕಾರ ಕೆಲಸ ಮಾಡ್ತಾಯಿತ್ತು. ಜನ ನನ್ನನ್ನ ಓರ್ವ ಧರ್ಮಗುರು ರೀತಿ ನೋಡಕೆ ಶುರುಮಾಡಿದ್ರು ನಾನು ಧರ್ಮ ಗುರು ಅಲ್ಲ ಅನ್ನೊದು ನನಗೆ ಗೊತ್ತಿದ್ದರೂ ಕೂಡ ಜನರಿಗಾಗಿ ಧರ್ಮಗುರು ರೀತಿ ಅಭಿನಯಿಸಿಸಲು ಶುರುಮಾಡಿದೆ.

ಅಲ್ಲದೇ ಓರ್ವ ಧರ್ಮಗುರುವಿಗೆ ಸಿಗಬೇಕಾದ ಸೌಕರ್ಯಗಳಿಗೆ ಬೇಡಿಕೆ ಇಡಲು ಶುರುಮಾಡಿದೆ. ಜನ ನನಗೆ ಬೆಂಬಲ ಕೂಡ ನೀಡಿದ್ರು. ದಿನಕಳೆದಂತೆ ಜನರ ಕಲ್ಯಾಣದ ಬಗ್ಗೆ ನನಗೆ ಇದ್ದ ಆಸಕ್ತಿ ಮಾಯವಾಯಿತು. ದಿನಕಳೆಂದತೆ ನನ್ನ ನೈತಿಕತೆಯು ಕೂಡ ಕುಸಿಯಿತು. ತನ್ನನ್ನ ತಾನು ವಾಪಸ್ ತರಲು ಎಷ್ಟೇ ಪ್ರಯತ್ನ ಪಟ್ಟರು ಕೂಡ ಅದು ಸಾಧ್ಯವಾಗಲಿಲ್ಲ. ಈ ಸರ್ವದ ಸಿದ್ ನಲ್ಲೂ ಕೂಡ ಅಹಂಕಾರವಿದೆ ಈಗಾಗಿ ನಾನು ಕಳೆದ ಜನ್ಮದಲ್ಲಿ ತನ್ನನ್ನ ತಾನು ಶಿ’ಕ್ಷಿಸಿ ಕೊಂಡಂತೆ ಆತನು ಕೂಡ ಶಿ’ಕ್ಷೆ ಅನುಭವಿಸಲಿ ಎಂದು ಹೀಗೆ ಮಾಡಿದೆ ಅಂತ ಹೇಳುತ್ತೆ. ಸ್ನೇಹಿತರೆ ನಾಯಿಯೊಂದು ಶ್ರೀರಾಮನ ಬಳಿ ಬಂದು ನ್ಯಾಯ ಪಡೆದ ಕಥೆ ಈ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ.