ನಮಸ್ತೆ ಸ್ನೇಹಿತರೆ.. ಬಾದಾಮಿ ಇದು ಒಂದು ಪೌಷ್ಟಿಕ ಆಹಾರ. ಇದನ್ನು ನಾವು ಹಲವು ರೀತಿಯಲ್ಲಿ ಸೇವನೆ ಮಾಡಿರುತ್ತೇವೆ. ಕೆಲವರು ಇದರಿಂದ ವಿಧವಿಧವಾದ ಆಹಾರವನ್ನು ಮಾಡಿಕೊಂಡು ತಿಂದರೆ ಇನ್ನು ಕೆಲವರು ಹಾಗೆ ಸೇವನೆ ಮಾಡುತ್ತೇವೆ.. ಇನ್ನೂ ಕೆಲವರಿಗೆ ಬಾದಾಮಿಯ ಇನ್ನೊಂದು ಚಮತ್ಕಾರದ ಬಗ್ಗೆ ತಿಳಿದಿಲ್ಲ. ಹೌದು ಬಾದಾಮಿಯನ್ನು ನೆನೆಸಿಟ್ಟು ತಿನ್ನುವುದರಿಂದ ಏನೆಲ್ಲಾ ಲಾಭವಿದೆ ಅನ್ನೊದು.. ಬಾದಾಮಿಯಲ್ಲಿ ಎರಡು ರೀತಿಯ ವಿಧಗಳಿವೆ.

ಸಿಹಿ ಮತ್ತು ಕಹಿ ಬಾದಾಮಿ. ಸಿಹಿ ಬಾದಾಮಿಯನ್ನು ತಿನ್ನಲು ಉಪಯೋಗಿಸಿದರೆ, ಕಹಿ ಬಾದಾಮಿಯನ್ನ ಎಣ್ಣೆ ತೆಗೆಯಲು ಉಪಯೋಗಿಸುತ್ತಾರೆ. ಬಾದಾಮಿ ಅತಿ ಹೆಚ್ಚು ನಾರಿನಂಶ ಇರುವ ಪದಾರ್ಥವಾಗಿದೆ. ಮಾರುಕಟ್ಟೆಯಲ್ಲಿ ಸಿಗುವಂತಹ ಪ್ರಾಡಕ್ಟ್ ಗಳಿಂದ ನಮ್ಮ ಚರ್ಮದ ನೆರಿಗೆಗಳನ್ನು ನಿವಾರಣೆ ಮಾಡಬಹುದು ಅಥವಾ ಮಾಡದೆ ಇರಬಹುದು. ಆದರೆ ನೈಸರ್ಗಿಕ ಬಾದಾಮಿ.. ಚರ್ಮದ ನೆರಿಗೆಗಳನ್ನು ನಿವಾರಣೆ ಮಾಡುತ್ತದೆ. ಪ್ರತಿದಿನ ರಾತ್ರಿ ಮಲಗುವ ಮುನ್ನ ಬಾದಾಮಿಯನ್ನು ನೀರಿನಲ್ಲಿ ನೆನೆಸಿಟ್ಟು ಬೆಳಗ್ಗೆ ಸೇವನೆ ಮಾಡೊದ್ರಿಂದ ಚರ್ಮದ ನೆರಿಗೆ ಮತ್ತು ವಯಸ್ಸಾಗುವ ವೇಳೆ ಇತರ ಸಮಸ್ಯೆಗಳನ್ನು ಸಂಪೂರ್ಣವಾಗಿ ತಡೆಗಟ್ಟುತ್ತದೆ.

ನೆನೆಸಿಟ್ಟ ಬಾದಾಮಿಯಲ್ಲಿ ಫ್ರೀ ಬಯೋಟಿಕ್ ಅಂಶ ಇರುವುದರಿಂದ ದೇಹದ ಪ್ರತಿರೋಧಕ ಶಕ್ತಿಯನ್ನು ಹೆಚ್ಚಿಸಿ ಹೊಟ್ಟೆಯ ಮೇಲೆ ಬೀರುವ ಸಮಸ್ಯೆಗಳನ್ನ ತಡೆಗಟ್ಟುತ್ತದೆ. ನೆನಸಿಟ್ಟ ಬಾದಾಮಿಯನ್ನ ತಿನ್ನೊದ್ರಿಂದ ಜೀರ್ಣಾಂಗ ವ್ಯವಸ್ಥೆ ಕೂಡ ಸರಾಗವಾಗಿ, ವೇಗವಾಗಿ ಮಾಡಲು ಸಹಾಯ ಮಾಡುತ್ತದೆ. ಇನ್ನು ನೀವೆನಾದರೂ ತಾಯಿ ಆಗುವುದಿದ್ದರೆ ನೆನೆಸಿಟ್ಟ ಬಾದಾಮಿಯನ್ನು ತಪ್ಪದೇ ಸೇವಿಸುವುದರಿಂದ ನೀವು ಮತ್ತು ನಿಮ್ಮ ಮಗುವಿನ ಆರೋಗ್ಯ ಉತ್ತಮವಾಗಿರುತ್ತದೆ..

ಪ್ರತಿದಿನ ನಾಲ್ಕರಿಂದ ಐದು ಬಾದಾಮಿಯನ್ನು ನೆನೆಸಿಟ್ಟು ಸೇವಿಸುವುದರಿಂದ ಮೆದುಳಿಗೆ ಶಕ್ತಿ ನೀಡಿ ಮೆದುಳಿನ ನರಗಳನ್ನು ಉತ್ತಮವಾಗಿ ಕಾರ್ಯನಿರ್ವಹಿಸಲು ಸಹಾಯ ಮಾಡುತ್ತದೆ. ಬೆಳಗ್ಗೆ ನೆನೆಸಿಟ್ಟ ಬಾದಾಮಿಯನ್ನು ಓದುವ ಮಕ್ಕಳಿಗೆ ತಿನ್ನಲು ಕೊಡಿ ಇದರಿಂದ ಜ್ಞಾಪಕ ಶಕ್ತಿಯನ್ನು ಹೆಚ್ಚಿಸುತ್ತದೆ.. ಮಲಬದ್ಧತೆ ಸಮಸ್ಯೆ ಇರುವವರು ಕೂಡ ನೆನಸಿಟ್ಟ ಬಾದಾಮಿಯನ್ನು ಸೇವಿಸಿದರೆ.. ಹೊರಟು ಪ್ರಮಾಣವನ್ನು ಅಧಿಕಗೊಳಿಸಿ ಮಲಬದ್ಧತೆ ನಿವಾರಣೆ ಮಾಡುತ್ತದೆ.

ಇನ್ನು ಅತಿ ಹೆಚ್ಚು ಜನರಿಗೆ ಕಾಡುವ ಸಮಸ್ಯೆ ಬೊಜ್ಜು ಕರಗಿಸುವುದು ಹೇಗೆ ಅನ್ನುವುದು.. ಅಂತಹವರು ಕೂಡ ನೆನಸಿಟ್ಟ ಬಾದಾಮಿಯನ್ನು ಆಹಾರ ಕ್ರಮದಲ್ಲಿ ಸೇವಿಸಿದರೆ ಬೇಗನೆ ಬೊಜ್ಜು ಕರಗಿಸಿ ತೂಕ ಕಡಿಮೆ ಮಾಡಿಕೊಳ್ಳಬಹುದು. ಹಸಿವು ಆಗದೆ ಊಟ ಬೇಡ ಎಂದು ಹಿಂಜರಿಯುವವರು ಕೂಡ ನೆನಸಿಟ್ಟ ಬಾದಾಮಿಯನ್ನು ತಿಂದರೆ ಬೇಗನೆ ಹಸಿವಾಗುತ್ತದೆ.. ಈಗೆ ನೆನೆಸಿಟ್ಟ ಬಾದಾಮಿಯ ಹಲವು ಪ್ರಯೋಜಕ ಅಂಶಗಳಾಗಿವೆ.. ಸ್ನೇಹಿತರೆ, ಮೇಲೆ ತಿಳಿಸಿರುವ ಹಾಗೆ ನೆನೆಸಿಟ್ಟ ಬಾದಾಮಿಯನ್ನು ತಪ್ಪದೇ ಸೇವಿಸಿ ನಿಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳಿ.