Advertisements

ಸತ್ಯ ಯುಗದ ಅಂತ್ಯ ಹೇಗೆ ಆಗಿತ್ತು ಗೊತ್ತಾ? ವಿಷ್ಣು ಮೀನಾಗಿ ಏಳೆದ ದೋಣಿಯಲ್ಲಿ ಏನೆಲ್ಲಾ ಇತ್ತು ನೋಡಿ..

Adyathma

ನಮಸ್ತೆ ಸ್ನೇಹಿತರೆ, ಸತ್ಯಯುಗದ ಕಾಲದಲ್ಲಿ ವಿಷ್ಣುವಿನ ಅಪ್ರತಿಮ ಭಕ್ತನಾಗಿದ್ದ ಸತ್ಯವ್ರತ ಅನ್ನುವ ಧರ್ಮವನ್ನ ಪಾಲಿಸುವ ರಾಜನಿದ್ದ. ಒಮ್ಮೆ ಸೂರ್ಯೋದಯ ವೇಳೆ ನದಿಯ ಹತ್ತಿರ ಸ್ನಾನ ಮಾಡಿದ ಸತ್ಯವ್ರತಾ ಬೊಗಸೆಯಲ್ಲಿ ನೀರು ತೆಗೆದಾಗ ಅದರಲ್ಲಿ ಚಿಕ್ಕ ಮೀನು ಇತ್ತು.. ಇನ್ನೇನು ಸತ್ಯವ್ರತಾ ಮೀನನ್ನು ನೀರಿಗೆ ವಾಪಸ್ ಬಿಡಬೇಕು ಅನ್ನುವಷ್ಟರಲ್ಲಿ ಮೀನು ಮಾತಾಡೋಕೆ ಶುರುಮಾಡುತ್ತೆ.. ನದಿಯಲ್ಲಿ ದೊಡ್ಡ ದೊಡ್ಡ ಜೀವಿಗಳು ನನ್ನಂತಹ ಸಣ್ಣ ಸಣ್ಣ ಮೀನುಗಳನ್ನ ತಿಂದು ಬಿಡುತ್ತವೆ. ಈಗಾಗಿ ನನ್ನನ್ನ ರಕ್ಷಣೆ ಮಾಡಿ ಎಂದು ಕೇಳುತ್ತದೆ. ಆಗ ರಾಜ ಆ ಮಿನನ್ನು ನದಿಯಲ್ಲಿ ಬಿಡದೇ ಅರಮನೆಗೆ ಹೋಗಿ ನೀರಿನ ಪಾತ್ರೆಯಲ್ಲಿ ಬಿಟ್ಟ..

Advertisements

ಆದರೆ ಆ ರಾತ್ರಿ ಆ ಮೀನಿನ ದೇಹ ದೊಡ್ಡದಾಗಿ ಆ ಪಾತ್ರೆಯಲ್ಲಿ ಜಾಗ ಸಾಲಲಿಲ್ಲ.. ಈಗಾಗಿ ಸತ್ಯವ್ರತನನ್ನ ಕರೆದ ಮೀನು ನನಗೆ ಈ ಜಾಗ ಸಾಲುತ್ತಿಲ್ಲ ಯಾವುದಾದರೂ ದೊಡ್ಡ ಪಾತ್ರೆಯಲ್ಲಿ ಹಾಕಿಡು ಎಂದು ಕೇಳುತ್ತದೆ.. ಆಗ ಸತ್ಯವ್ರತ ಮೀನನ್ನ ದೊಡ್ಡ ಪಾತ್ರೆಯಲ್ಲಿ ಹಾಕಿದ.. ಮತ್ತೆ ಮರುದಿನ ನೋಡಿದಾಗ ಆ ಮೀನು ಮತ್ತಷ್ಟು ಬೆಳೆದಿತ್ತು. ಆಗ ಅದಕ್ಕೆ ದೊಡ್ಡ ಪಾತ್ರೆಯೂ ಸಹ ಸಾಲತ್ತಿರಲಿಲ್ಲ.. ಈಗಾಗಿ ಆ ಮೀನು ನನಗೆ ಇಲ್ಲಿಯೂ ಕೂಡ ಜಾಗ ಸಾಲುತ್ತಿಲ್ಲ. ಬೇರೆ ಎಲ್ಲಾದರೂ ಜಾಗ ಮಾಡಿಕೊಡು ಎಂದು ಬೇಡಿಕೊಳ್ಳುತ್ತದೆ. ಆಗ ಸತ್ಯವ್ರತಾ ದೊಡ್ಡ ಸರೋವರದಲ್ಲಿ ಆ ಮೀನಿಗೆ ವ್ಯವಸ್ಥೆ ಮಾಡಿದ.. ಆದರೆ ಆ ಮೀನು ಮತ್ತೆ ಸರೋವರದಷ್ಟು ದೊಡ್ಡದಾಗುತ್ತದೆ.

ಈಗಾಗಿ ಸತ್ಯವ್ರತಾ ಆ ಮೀನನ್ನ ನದಿಗೆ ಬಿಟ್ಟ ಅಲ್ಲಿಯೂ ಕೂಡ ಜಾಗ ಸಾಲದೆ ಹೋದ ಕಾರಣ ಸಮುದ್ರದಲ್ಲಿ ಬಿಡುತ್ತಾನೆ.. ಆದರೆ ಸಮುದ್ರದಲ್ಲೂ ಬಾರಿ ದೊಡ್ಡ ಗಾತ್ರಕ್ಕೆ ಬೆಳೆದ ಮೀನು. ನನಗೆ ಇಲ್ಲಿಯೂ ಕೂಡ ಜಾಗ ಸಾಲುತ್ತಿಲ್ಲ ಎಂದು ಹೇಳುತ್ತದೆ. ಹಾಗ ಸತ್ಯವ್ರತನಿಗೆ ಅರ್ಥವಾಗುತ್ತದೆ ಇದು ಸಾಧಾರಣ ಮೀನಲ್ಲ ಯಾವುದೋ ದಿವ್ಯ ಶಕ್ತಿಯ ಅವತಾರ ಇರಬೇಕು ಅಂತ.. ಈಗಾಗಿ ನಿಜರೂಪ ದರ್ಶನ ಕೊಡುವಂತೆ ಬೇಡಿಕೊಳ್ಳುತ್ತಾನೆ.. ಸತ್ಯವ್ರತನ ಬೇಡಿಕೆಯಂತೆ ಮೀನಿನ ರೂಪದಲ್ಲಿ ಇದ್ದ ವಿಷ್ಣು ತನ್ನ ನಿಜರೂಪ ದರ್ಶನವನ್ನ ಕೊಡುತ್ತಾನೆ..

ಆಗ ಸತ್ಯವ್ರತ ಈ ಮತ್ಸ್ಯ ಅವತಾರಕ್ಕೆ ಕಾರಣ ಕೇಳಿದಾಗ ಮಾತನಾಡಿದ ವಿಷ್ಣು ಇನ್ನು ಏಳು ದಿನಗಳಲ್ಲಿ ಭೂಮಿಯ ಮೇಲೆ ಬಾರಿ ಪ್ರ’ಳಯ ಉಂಟಾಗುತ್ತದೆ. ಇಡೀ ಭೂಮಿ ನೀರಲ್ಲಿ ಮುಳುಗೊಗುತ್ತೆ.. ಆಗ ನನ್ನ ಪ್ರೇರಣೆಯಿಂದ ನಿನ್ನ ಬಳಿ ಒಂದು ನೌಕೆ ಬರುತ್ತದೆ ನೀನು ಮೊದಲೇ ನಿನ್ನ ಪತ್ನಿ, ಸಪ್ತ ಋಷಿಗಳು, ಸೃಷ್ಟಿಯ ಎಲ್ಲಾ ಒಂದೊಂದು ಜೋಡಿ ಜೀವಿಗಳು ಮತ್ತು ಅಗತ್ಯವಾದ ಬೀಜಗಳನ್ನು ಒಟ್ಟಿಗೆ ಮಾಡಿಕೋ. ಪ್ರ’ಳಯದ ವೇಳೆ ನಾನು ಮೀನಿನ ರೂಪದಲ್ಲಿ ಬಂದು ನಿನ್ನನ್ನ ಕಾಪಾಡುತ್ತೇನೆ ಎಂದು ಹೇಳುತ್ತಾರೆ.. ವಿಷ್ಣು ಹೇಳಿದಂತೆ ಏಳು ದಿನಗಳ ಬಳಿಕ ಬೀಕರ ಪ್ರ’ವಾಹ ಬಂದೇಬಿಡುತ್ತದೆ. ಇಡೀ ಭೂಮಿ ತುಂಬಾ ನೀರು ಆವರಿಸಿಕೊಳ್ಳುತ್ತದೆ.

ಈ ವೇಳೆ ವಿಷ್ಣುವಿನ ಪ್ರೇರಣೆಯಿಂದ ಬಂದ ನೌಕೆಯಲ್ಲಿ ಸತ್ಯವ್ರತಾ ತನ್ನ ಪತ್ನಿ, ಸಪ್ತ ಋಷಿಗಳು ವೇದಗಳು, ಇಡೀ ಸೃಷ್ಟಿಯ ಎಲ್ಲಾ ಒಂದೊಂದು ಜೋಡಿ ಜೀವಗಳು ಹಾಗು ಅಗತ್ಯ ಸಸ್ಯದ ಬೀಜಗಳನ್ನ ತುಂಬಿಕೊಳ್ಳುತ್ತಾರೆ‌‌.. ಈ ವೇಳೆ ವಿಷ್ಣು ಮತ್ಸ್ಯ ರೂಪದಲ್ಲಿ ವಿಷ್ಣು ಪ್ರಕಟವಾಗುತ್ತಾರೆ.. ಆ ಮೀನು ನೌಕೆ ನಡುವೆ ವಾಸುಕಿ ನಾಗ ಅಗ್ಗವಾಗುತ್ತಾನೆ. ನಂತರ ಆ ನೌಕೆಯನ್ನ ಸುಮೇರು ಪರ್ವತಕ್ಕೆ ಎಳೆದುಕೊಂಡು ಹೋಗುತ್ತಾರೆ.. ಪ್ರವಾಹ ಇಳಿದ ಬಳಿಕ ಹೊಸ ಮನ್ವಂತರದೊಂದಿಗೆ ಭೂಮಿಯಲ್ಲಿ ಹೊಸ ಜೀವ  ಸಂಕುಲದ ಸೃಷ್ಟಿಯಾಗುತ್ತದೆ.. ನಂತರ ಅದೇ ಸತ್ಯವ್ರತನನ್ನ ಮನು ಎಂದು  ಕರೆಯಲಾಯಿತು. ಸ್ನೇಹಿತರೆ ಒಟ್ಟಿನಲ್ಲಿ ವಿಷ್ಣು ಮತ್ಸ್ಯ ಅವತಾರವನ್ನು ತಾಳಲು ಮೂಲ ಉದ್ದೇಶ ಸೃಷ್ಟಿಯ ಜೀವ ಸಂಕುಲವನ್ನ ಉಳಿಸುವುದೇ ಆಗಿತ್ತು..