Advertisements

ರೈತ ಕಷ್ಟ ಪಟ್ಟು ಸಂಪಾದಿಸಿದ್ದ 60 ಸಾವಿರ ದುಡ್ಡನ್ನು ತಿಂದು ತೇಗಿದ ಮೇಕೆ.. ಆಮೇಲೆ ಮೇಕೆ ಕಥೆ ಏನಾಯ್ತು ಗೊತ್ತಾ?

Uncategorized

ನಮಸ್ತೆ ಸ್ನೇಹಿತರೆ, ಒಬ್ಬ ಬಡ ವ್ಯಕ್ತಿ ಬಹಳ ಕಷ್ಟಪಟ್ಟು ದುಡಿದಿದ್ದ 60 ಸಾವಿರ ರೂಪಾಯಿ ಹಣವನ್ನು ಒಂದು ಮೇಕೆ ತಿಂದುಬಿಟ್ಟಿದೆ.. ನಿಮಗೆ ಆಶ್ಚರ್ಯವಾಗಬಹುದು ಆದರೆ ಇದು ನೈಜ ಘಟನೆ.. ಎರಡು ಸಾವಿರ ಮುಖ ಬೆಲೆಯ ಸುಮಾರು 60 ಸಾವಿರದಷ್ಟು ಬೆಲೆ ಬಾಳುವ ನೋಟುಗಳನ್ನು ತಿಂದು ಹಾಕಿದೆ.. ಈ ಘ’ಟನೆ ನಡೆದಿರುವುದು ಉತ್ತರ ಪ್ರದೇಶದಲ್ಲಿ.. ಸರ್ವೇಶ್ವರ್ ಪಟೇಲ್ ಎಂಬ ವ್ಯಕ್ತಿ ಬಹಳ ವರ್ಷದಿಂದ ಮೇಕೆಯನ್ನು ಸಾಕಾಣಿಕೆ ಮಾಡುತ್ತಿದ್ದ. ಸರ್ವೇಶ್ವರ್ ಒಬ್ಬ ಬಡರೈತನಾಗಿದ್ದು ತಾನು ಕಷ್ಟ ಪಟ್ಟು ದುಡಿದ ಹಣವನ್ನು ಮನೆಯ ಪೆಟ್ಟಿಗೆಯಲ್ಲಿ ಇಟ್ಟಿದ್ದ.. ಒಂದು ದಿನ ಇದ್ದಕಿದ್ದ ಹಾಗೆ ಸರ್ವೇಶ್ವರ್ ಪೆಟ್ಟಿಗೆಯಲ್ಲಿ ಇಟ್ಟಿದ್ದ ಹಣವನ್ನು ಬ್ಯಾಂಕ್ ನಲ್ಲಿ ಇಡೋಣ ಎಂದು ಯೋಚನೆ ಮಾಡುತ್ತಾನೆ..

Advertisements

ಈಗೆ ಯೋಚನೆ ಮಾಡಿದ ನಂತರ ಪೆಟ್ಟಿಗೆಯಲ್ಲಿ ಇಟ್ಟಿದ್ದ ಹಣವನ್ನು ಪ್ಯಾಂಟ್ ನಲ್ಲಿ ಇಟ್ಟುಕೊಂಡು ಬ್ಯಾಂಕ್ ಹತ್ತಿರ ಬರುತ್ತಾನೆ.. ಆದರೆ ಆ ದಿನ ಬ್ಯಾಂಕ್ ರಜೆ ಇದ್ದ ಕಾರಣ ಮತ್ತೆ ಮನೆಗೆ ವಾಪಸ್ ಬರುತ್ತಾನೆ.. ಈ ಹಣದ ಜೊತೆ ಮತ್ತಷ್ಟು ಹಣವನ್ನು ಕೂಡಿಟ್ಟು ಒಂದು ಮನೆ ಕಟ್ಟಿಸಬೇಕೆಂಬ ಕನಸನ್ನು ಹೊತ್ತಿದ್ದ.. ಇನ್ನು ಬ್ಯಾಂಕ್ ರಜೆ ಇದ್ದ ಕಾರಣ ಮನೆಗೆ ಬಂದ ಸರ್ವೇಶ್ವರ್ ಯಾವುದೋ ಯೋಚನೆಯಲ್ಲಿ ಪ್ಯಾಂಟ್ ಜೋಬಿನಲ್ಲಿ ಇದ್ದ ಹಣವನ್ನು ಪೆಟ್ಟಿಗೆಯಲ್ಲಿ ಇಡದೇ ಮರೆತುಬಿಡುತ್ತಾನೆ.. ನಂತರ ಬಟ್ಟೆಯನ್ನು ಬದಲಾಯಿಸಿದ ಸರ್ವೇಶ್ವರ್ ಲುಂಗಿಯುಟ್ಟು ಹೊರಗಡೆ ಹೋಗುತ್ತಾನೆ.. ಇನ್ನು ಸಾಕಿದ್ದ ಮೇಕೆಯನ್ನು ಸರ್ವೇಶ್ವರ್ ಕಟ್ಟಿ ಹಾಕುತ್ತಿರಲಿಲ್ಲ ಮಕ್ಕಳಂತೆ ಅದೂ ಕೂಡ ಮನೆಯೆಲ್ಲಾ ಓಡಾಡುತ್ತಿತ್ತು..

ಇದೇ ರೀತಿ ಆ ದಿನ ಮೇಕೆ ಮನೆಯಲ್ಲಿ ಓಡಾಡುತ್ತಿತ್ತು. ಈಗೆ ಓಡಾಡುವ ಸಂದರ್ಭದಲ್ಲಿ ಸರ್ವೇಶ್ವರ್ ಅವರ ಪ್ಯಾಂಟ್ ನ್ನು ಎಳೆದು ಆ ಕಡೆ ಈ ಕಡೆ ಉರುಳಿಸುತ್ತದೆ.. ಆಗ ಪ್ಯಾಂಟ್ ನಲ್ಲಿ ಇದ್ದ ಗರಿ ಗರಿ ನೋಟುಗಳು ಚೆಲ್ಲಾಪಿಲ್ಲಿಯಾಗುತ್ತವೆ.. ಇನ್ನು ಈ ಮೇಕೆಗೆ ಕಾಗದಗಳನ್ನು ತಿನ್ನುವ ಚಪಲವಿತ್ತು ಈಗಾಗಿ ಹಣದ ನೋಟುಗಳನ್ನು ನೋಡಿದ ಈ ಮೇಕೆ ತಿಂದು ಹಾಕಿಬಿಡುತ್ತದೆ.. ಇನ್ನು ಹೊರಗಡೆ ಹೋಗಿದ್ದ ಸರ್ವೇಶ್ವರ್ ಮನೆಗೆ ಬಂದು ನೋಡಿದಾಗ ಶೇಕಡಾ 90ರಷ್ಟು ಹಣವನ್ನು ಈ ಮೇಕೆ ಹೊಟ್ಟೆಗೆ ಸೇರಿಸಿಕೊಂಡಿತ್ತು.. ಇನ್ನು ಮೇಕೆ ಜಗಿಯುತ್ತಿದ್ದ ಎರಡು ಸಾವಿರ ನೋಟುಗಳನ್ನು ಹೊರತೆಗೆಯುತ್ತಾನೆ.. ಸುಮಾರು 56 ಸಾವಿರ ನೋಟನ್ನು ಅದಾಗಲೇ ಮೇಕೆ ತಿಂದುಹಾಕಿರುತ್ತದೆ..

ಈ ವಿಷಯ ಪಕ್ಕದ ಮನೆಯವರಿಗೆ ತಿಳಿದು ನೋಡಲು ಬರುತ್ತಾರೆ ಆಗ ಸರ್ವೇಶ್ವರ್ ಗೆ ನೋಡು ನೀನು ಈ ಮೇಕೆಯನ್ನು ಪ್ರೀತಿಯಿಂದ ಸಾಕಿದ್ದೇ ತಪ್ಪಾಯಿತು ಮೊದಲು ಇದನ್ನು ಮಾರಿಬಿಡು ಎಂದು ಸಲಹೆಗಳನ್ನು ಕೊಡುತ್ತಾರೆ.. ಆದರೆ ಜನರ ಮಾತಿಗೆ ಸ್ವಲ್ಪ ಸಮಯ ಬೇಸರದಲ್ಲಿದ್ದ ಸರ್ವೇಶ್ವರ್ ನೋಡಿ ಈ ಮೇಕೆಯನ್ನು ನನ್ನ ಮಕ್ಕಳ ಹಾಗೆ ಸಾಕಿದ್ದೇನೆ ಇದೇ ಕೆಲಸ ಮಕ್ಕಳು ಮಾಡಿದ್ದರೆ ಅವರನ್ನು ನಾವು ಮಾರಬೇಕಾ ಇಲ್ಲಾ ತಾನೆ.. ದುಡ್ಡು ಇವತ್ತಲ್ಲಾ ನಾಳೆ ಸಂಪಾದನೆ ಮಾಡಬಹುದು.. ಇದರಲ್ಲಿ ಮೇಕೆಯ ತಪ್ಪು ಏನು ಇಲ್ಲ, ಮೇಕೆಗೆ ಹಣ ಸಿಗುವ ಹಾಗೆ ಇಟ್ಟಿದ್ದು ನನ್ನ ತಪ್ಪು.. ಮೇಕೆಗೆ ಮನುಷ್ಯರಂತೆ ತಿಳುವಳಿಕೆ ಇದೆಯಾ, ಇದು ಹಣ ಎಂದು ಇಲ್ಲಾ ತಾನೆ ಎಂದು ಜನರ ಮಾತಿಗೆ ಸರ್ವೇಶ್ವರ್ ತೆರೆ ಎಳೆಯುತ್ತಾನೆ.. ಸ್ನೇಹಿತರೆ ಈ ನೈಜ ಘಟನೆಯ ಬಗ್ಗೆ ನಿಮ್ಮ ಅನಿಸಿಕೆಯನ್ನು ತಿಳಿಸಿ..

ಸ್ನೇಹಿತರೇ, ರಾತ್ರಿ ಕಳೆದು ಬೆಳಗಾಗುವುದರೊಳಗಾಗಿ ಭಾರತದಾದ್ಯಂತ ಸ್ಟಾರ್ ಆಗಿದ್ದ ರಾನು ಮೊಂಡಲ್ ಪಟ್ಟ ಅಹಂಕಾರಕ್ಕೆ ಈಗ ಏನಾಗಿದ್ದಾಳೆ ಗೊತ್ತಾ ? ಯಾವ ಪರಿಸ್ಥಿತಿಯಲ್ಲಿದ್ದಾಳೆ ಗೊತ್ತಾ ? ತಿಳಿಯಲು ಈ ವಿಡಿಯೋ ನೋಡಿ..