Advertisements

1500ರೂ ಹಣಕ್ಕಾಗಿ 80 ವರ್ಷದ ತಾಯಿಯನ್ನ ಮಂಚದ ಸಮೇತ ಬ್ಯಾಂಕಿಗೆ ಎಳೆದುಕೊಂಡು ಹೋದ 60 ವರ್ಷದ ಮಗಳು !

News

ಕೊರೋನಾ ಲಾಕ್ ಡೌನ್ ಹಿನ್ನಲೆಯಲ್ಲಿ ಸಾಮಾನ್ಯ ಜನರು ತುಂಬಾ ಸಂಕಷ್ಟದ ಪರಿಸ್ಥಿತಿಯನ್ನ ಎದುರಿಸುತ್ತಿದ್ದಾರೆ. ಕೇಂದ್ರ ಸರ್ಕಾರ ಕೂಡ ಬಡವರ ನೆರವಿಗೆ ಬಂದಿದ್ದು, ಹಲವಾರು ಯೋಜನೆಗಳನ್ನ ಕೈಗೊಂಡಿದೆ. ಆದರೆ ದೇವರು ಕೊಟ್ಟರೂ ಪೂಜಾರಿ ಕೊಡೋದಿಲ್ಲ ಅನ್ನೋ ಗಾದೆಯಂತೆ 500 ರೂಪಾಯಿ ಪಿಂಚಣಿ ಪಡೆಯುವ ಸಲುವಾಗಿ ಅನಾರೋಗ್ಯದಿಂದ ಬಳಲುತ್ತಿದ್ದ ತನ್ನ 80 ವರ್ಷದ ವೃದ್ಧ ತಾಯಿಯನ್ನ ಮಂಚದ ಸಾಮೆತ ಬ್ಯಾಂಕ್ ಗೆ ಎಳೆದುಕೊಂಡು ಹೋದ ಮನಕಲುಕುವ ಘಟನೆ ನಡೆದಿದೆ.

Advertisements

ಹೌದು, ಕೊರೋನಾ ಹಿನ್ನಲೆಯಲ್ಲಿ ಬಡ ಮಹಿಳೆಯರ ನೆರವಿಗೆ ಧಾವಿಸಿದ್ದ ಕೇಂದ್ರ ಸರ್ಕಾರ ಜನಧನ್ ಬ್ಯಾಂಕ್ ಖಾತೆಯ ಮೂಲಕ ಏಪ್ರಿಲ್ ನಿಂದ ಜೂನ್ ವರೆಗೆ ಮೂರೂ ತಿಂಗಳು ಪ್ರತೀ ತಿಂಗಳಿಗೆ 500 ರುಗಳನ್ನ ನೀಡುವುದಾಗಿ ಪ್ರಕಟಣೆ ಮಾಡಿತ್ತು. ಹಾಗಾಗಿ ಮೂರು ತಿಂಗಳಿನ ಒಟ್ಟು 1500 ಸಾವಿರ ರುಗಳನ್ನ ಪಡೆಯುಲು ಪುಂಜಿಮತಿ ದೇವಿ ಎಂಬ ೬೦ ವರ್ಷದ ಮಹಿಳೆ ಒಡಿಶಾದ ನೌಪರ ಜಿಲ್ಲೆಯಲ್ಲಿರುವ ಗ್ರಾಮವೊಂದರ ಸ್ಥಳೀಯ ಶಾಖೆಗೆ ಹೋಗಿದ್ದಾರೆ.

ಆದರೆ ಬ್ಯಾಂಕ್ ಮ್ಯಾನೇಜರ್ ಅವರು ನಿಮ್ಮ ತಾಯಿಯನ್ನೇ ಬ್ಯಾಂಕ್ ಗೆ ಕರೆದುಕೊಂಡು ಬನ್ನಿ ಎಂದು ಹಣ ಕೊಡಲು ನಿರಾಕರಿಸಿದ್ದಾರೆ. ಆದರೆ ತನ್ನ ತಾಯಿ ಅನಾರೋಗ್ಯದಿಂದ ಹಾಸಿಗೆ ಇಡಿದಿದ್ದಾರೆ, ಅವರು ಬರಲು ಸಾಧ್ಯವಿಲ್ಲ ಎಂದು ಹೇಳಿದರೂ ಬ್ಯಾಂಕ್ ಮ್ಯಾನೇಜರ್ ಹಣ ಕೊಡಲು ಒಪ್ಪಿಲ್ಲ. ಆಗ ಬೇರೆ ದಾರಿ ಕಾಣದ ೬೦ ವರ್ಷದ ಪುಂಜಿಮತಿ ದೇವಿ ಮಂಚದ ಮೇಲೆ ಹಾಸಿಗೆ ಹಿಡಿದಿದ್ದ ೮೦ ವರ್ಷದ ತಾಯಿಯನ್ನ ಮಂಚದ ಸಮೇತ ಬ್ಯಾಂಕ್ ಗೆ ಎಳೆದು ತಂದು ಹಣ ಪಡೆದುಕೊಂಡಿದ್ದಾರೆ.

ಇನ್ನು ಹೀಗೆ ಮಂಚದ ಸಮೇತ ತನ್ನ ತಾಯಿಯನ್ನ ಎಳೆದು ತಂಡ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು ಬ್ಯಾಂಕ್ ನವರ ಈ ಅವಮಾನವೀಯತೆಗೆ ಎಲ್ಲೆಡೆ ಆಕ್ರೋಶ ವ್ಯಕ್ತವಾಗಿತ್ತು. ಇನ್ನು ಎಲ್ಲೆಡೆ ಆಕ್ರೋಶ ವ್ಯಕ್ತವಾದ ಕಾರಣ ಎಚ್ಚೆತ್ತ SBI ಬ್ಯಾಂಕ್ ನ ಅಧಿಕಾರಿಗಳು ಆ ಬ್ಯಾಂಕ್ ಮ್ಯಾನೇಜರ್ ನ್ನ ಸಸ್ಪೆಂಡ್ ಮಾಡಿದ್ದಾರೆ.