Advertisements

ಒಳ್ಳೆಯವರಿಗೆ ಯಾಕೆ ಯಾವಾಗಲು ಕಷ್ಟ ಬರುತ್ತದೆ ಗೊತ್ತಾ? ಕೃಷ್ಣ ಹೇಳಿದ್ದೇನು ನೋಡಿ..

Adyathma

ನಮಸ್ತೆ ಸ್ನೇಹಿತರೆ, ನಾನು ಯಾರಿಗೂ ಕೆಟ್ಟದ್ದನ್ನ ಮಾಡಿಲ್ಲ ಮತ್ತೆ ಯಾಕೆ ನನಗೆ ಕಷ್ಟಗಳು ಬರುತ್ತದೆ. ನಾನು ಯಾವಾಗಲೂ ನೀತಿ, ಧರ್ಮದ ರೀತಿಯಲ್ಲಿ ಸಾಗುತ್ತೇನೆ.. ಆದರೂ ಯಾಕೆ ನನಗೆ ಕೆಟ್ಟದ್ದಾಗುತ್ತದೆ ಎಂದು ತುಂಬಾ ಸರಿ ನಮ್ಮಲ್ಲಿ ಪ್ರಶ್ನೆಗಳು ಹುಟ್ಟಿಕೊಳ್ಳುತ್ತವೆ‌. ಈ ಪ್ರಶ್ನೆಗೆ ಉತ್ತರ ಸಿಗಬೇಕೆಂದರೆ ಕೃಷ್ಣ ಹೇಳಿದ ಈ ಮಾತುಗಳನ್ನು ಕೇಳಲೇ ಬೇಕು.. ಒಮ್ಮೆ ಅರ್ಜುನ ಶ್ರೀ ಕೃಷ್ಣನಿಗೆ ಇದೇ ರೀತಿ ಪ್ರಶ್ನೆಗಳನ್ನು ಕೇಳಿದಾಗ ಕೃಷ್ಣ ಒಂದು ಕಥೆಯ ಮೂಲಕ ಉತ್ತರವನ್ನು ನೀಡುತ್ತಾನೆ.. ಒಂದು ಊರಿನಲ್ಲಿ ಇಬ್ಬರೂ ವ್ಯಕ್ತಿಗಳಿದ್ದರು.. ಒಬ್ಬ ವ್ಯಾಪಾರಿ ಇನ್ನೊಬ್ಬ ಕಳ್ಳ, ವ್ಯಾಪಾರಿ ತುಂಬಾ ಒಳ್ಳೆಯವನಾಗಿದ್ದ‌. ಯಾವಾಗಲೂ ನೀತಿ, ಧರ್ಮ ದಂತೆ ಸಾಗುತ್ತಿದ್ದ, ದೇವರಲ್ಲಿ ಬಹಳ ಭಕ್ತಿಯನ್ನು ಇಟ್ಟಿದ್ದ, ಪ್ರತಿದಿನವೂ ಕೂಡ ದೇವರ ಮಂದಿರಕ್ಕೆ ಹೋಗುತ್ತಿದ್ದ..

Advertisements

ಆದರೆ ಇನ್ನೊಬ್ಬ ವ್ಯಕ್ತಿ ಕ’ಳ್ಳನಾಗಿದ್ದ, ತುಂಬಾ ದು’ಷ್ಟ.ಯಾವಾಗಲೂ ಅನೀತಿ ಮತ್ತು ಅಧರ್ಮದಂತೆ ನಡೆದುಕೊಳ್ಳುತ್ತಿದ್ದ. ಈ ಕಳ್ಳ ಕೂಡ ದೇವಸ್ತಾನಕ್ಕೆ ಹೋಗುತ್ತಿದ್ದ ಆದರೆ ದೇವರ ಭಕ್ತಿಯಿಂದ ಅಲ್ಲ ದೇವಸ್ತಾನದ ಬಳಿ ಚಪ್ಪಲಿಗಳನ್ನು ಹಾಗೂ ದೇವರ ಹುಂಡಿಯ ಹಣವನ್ನು ಕದಿಯಲು.. ಒಂದು ದಿನ ಆ ಊರಲ್ಲಿ ತುಂಬಾ ಮಳೆ ಯಾಗುತ್ತಿತ್ತು. ತುಂಬಾ ಮಳೆ ಬೀಳುತ್ತಿದ್ದ ಕಾರಣ ದೇವರ ಮಂದಿರ ಬಳಿ ಯಾರು ಇರಲಿಲ್ಲ. ಇದನ್ನರಿತ ಕಳ್ಳ ದೇವಸ್ಥಾನಕ್ಕೆ ಬಂದು ದೇವರ ಹುಂಡಿಯ ಹಣವನ್ನೆಲ್ಲಾ ಕದ್ದು ಪರಾರಿಯಾಗುತ್ತಾನೆ.. ಆಗ ಯಾರೋ ಒಬ್ಬ ಮನುಷ್ಯ ವ್ಯಾಪಾರಿಯೇ ಕಳ್ಳತನ ಮಾಡಿದ್ದು ಎಂದು ಚೀರಾಡಲು ಶುರುಮಾಡುತ್ತಾನೆ. ಆಗ ಜನರೆಲ್ಲರೂ ವ್ಯಾಪರಿಯನ್ನು ಹೊಡೆಯಲು ಶುರುಮಾಡುತ್ತಾರೆ..

ಇದರಿಂದ ವ್ಯಾಪಾರಿಗೆ ತುಂಬಾ ಅವಮಾನವಾಗಿ ಅಳುತ್ತಾ ಮನೆಗೆ ಹೋಗುತ್ತಿರುವ ಸಂದರ್ಭದಲ್ಲಿ ಒಂದು ಚಿಕ್ಕ ಅಪಘಾ’ತವಾಗುತ್ತದೆ.. ಅದೇ ಸಮಯದಲ್ಲಿ ಕಳ್ಳನಿಗೆ ಒಂದು ಚೀಲ ಸಿಗುತ್ತದೆ ಆ ಚೀಲದಲ್ಲಿ ನೂರು ಚಿನ್ನದ ನಾಣ್ಯಗಳು ಇದ್ದದ್ದನ್ನು ನೋಡಿ ಕುಣಿದು ಕುಪ್ಪಳಿಸುತ್ತಾನೆ‌‌.. ಇದನ್ನು ಕಂಡ ವ್ಯಾಪಾರಿ ದುಃಖಪಡುತ್ತಾ ಮನೆಗೆ ಹೊರಟುಹೋಗಿ ಮನೆಯಲ್ಲಿರುವ ದೇವರ ವಿಗ್ರಹಗಳನ್ನು ತೆಗೆದುಹಾಕುತ್ತಾನೆ.. ಇನ್ನು ಈ ವ್ಯಾಪಾರಿ ದೇವರ ಮೇಲೆ ನಂಬಿಕೆ ಕಳೆದುಕೊಂಡು ಜೀವನ ನಡೆಸುತ್ತಾನೆ.. ತುಂಬಾ ವರ್ಷಗಳು ಕಳೆದ ಮೇಲೆ ವ್ಯಾಪಾರಿ ಹಾಗೂ ಕಳ್ಳ ಸಾ’ವನ್ನಪ್ಪುತ್ತಾರೆ.. ಸ’ತ್ತಮೇಲೆ ಈ ಇಬ್ಬರು ಯಮರಾಜನ ಮುಂದೆ ನಿಲ್ಲುತ್ತಾರೆ.

ಆಗ ವ್ಯಾಪಾರಿ ಬೇಸರ ಹಾಗೂ ಸಿಟ್ಟಿನಿಂದ ಯಮರಾಜನಿಗೆ ಕೇಳುತ್ತಾನೆ. ತನ್ನ ಯಾವ ತಪ್ಪಿಗೆ ಇಷ್ಟೊಂದು ಶಿಕ್ಷೆ ಕೊಟ್ಟೆ, ನಾನು ಒಳ್ಳೆಯವನಾಗಿದ್ದರು ಯಾಕೆ ನನಗೆ ಕೆಟ್ಟದ್ದನ್ನು ಮಾಡಿದೆ ಎಂದು ಕೇಳುತ್ತಾನೆ. ಆದರೆ ಅಧರ್ಮಿಯಾದ ಕಳ್ಳನಿಗೆ ಯಾಕೆ ಒಳ್ಳೆಯದನ್ನ ಮಾಡಿದೆ ಎಂದು ಕೇಳುತ್ತಾನೆ.. ಈ ಮಾತನ್ನು ಕೇಳಿದ ಯಮರಾಜ ನಗುತ್ತಾ ಆ ದುರ್ಘಟನೆ ನಡೆದ ದಿವಸ ನಿನಗೆ ಕೊನೆಯ ದಿನವಾಗಿತ್ತು. ನಿನ್ನ ಸಾ’ವು ಆ ದಿನವೇ ನಿಶ್ಚಯವಾಗಿತ್ತು..

ಆದರೆ ನೀನು ಮಾಡಿದ ಪುಣ್ಯದ ಕೆಲಸಗಳಿಂದ ನಿನ್ನ ಮೃ’ತ್ಯುವನ್ನು ನೀನೆ ಮುಂದೆ ಹಾಕಿಕೊಂಡೆ, ಆದರೆ ಆ ಕಳ್ಳನಿಗೆ ಈ ಜನ್ಮದಲ್ಲಿ ರಾಜಯೋಗ ಬರೆದಿತ್ತು ಆದರೆ ಅವನು ಮಾಡಿದ ಪಾಪಗಳಿಂದ ಆ ರಾಜಯೋಗ ನೂರು ಚಿನ್ನದ ನಾಣ್ಯಗಳಾಗಿ ಬದಲಾಯಿತು. ಸ್ನೇಹಿತರೆ ದೇವರು ನಮಗೆ ಯಾವ ರೂಪದಲ್ಲಿ ಸಹಾಯ ಮಾಡುತ್ತಿದ್ದಾನೆ ಎಂದು ತಿಳಿಯಲು ತುಂಬಾ ಕಷ್ಟ, ಆದರೆ ನೀವು ಒಳ್ಳೆಯ ಕೆಲಸ, ಧಾನ, ಧರ್ಮ ಮಾಡುತ್ತಿದ್ದರೆ, ಕೆಟ್ಟ ಕೆಲಸಗಳಿಂದ ದೂರವಿದ್ದರೆ, ದೇವರು ಯಾವಾಗಲೂ ನಿಮ್ಮ ಜೊತೆ ಇದ್ದು ಕಾಪಾಡುತ್ತಿರುತ್ತಾನೆ.. ದೊಡ್ಡ ದೊಡ್ಡ ಅ’ನಾಹುತಗಳನ್ನು ಚಿಕ್ಕ ಚಿಕ್ಕ ಅಪಘಾ’ತಗಳು ನೀಡಿ ಸಹಾಯ ಮಾಡುತ್ತಿದ್ದಾನೆ.. ಯಾವತ್ತಿಗೂ ಕೂಡ ಕಷ್ಟಗಳು ಇದೆಯೆಂದು ದುಃಖ ಪಡಬೇಡಿ, ಬಂದದ್ದನ್ನು ಸ್ವೀಕರಿಸಿ ಮುನ್ನಡೆಯಿರಿ, ನೀವು ನಂಬಿದ ದೇವರು ನಿಮ್ಮನ್ನು ಕಾಪಾಡುತ್ತಾನೆ..