ನಮಸ್ತೆ ಸ್ನೇಹಿತರೆ, ಕರ್ಣ ಮಹಾಭಾರತದಲ್ಲಿ ಸರ್ವಶ್ರೇಷ್ಠ ವೀರರಲ್ಲಿ ಒಬ್ಬನಾಗಿದ್ದ. ಕರ್ಣನಿಗಿಂತ ಮಹಾದಾನಿ ಯಾರು ಇರಲಿಲ್ಲ. ಇದೇ ಕಾರಣಕ್ಕಾಗಿ ಕರ್ಣನಿಗೆ ದಾನ ವೀರ ಕರ್ಣ ಎಂದು ಬಿರುದು ಸಿಕ್ಕಿತ್ತು.. ಇನ್ನು ಅರ್ಜುನನು ಒಬ್ಬ ಶ್ರೇಷ್ಠ ಯೋಧನಾಗಿದ್ದ ಆದರೆ ಕರ್ಣನಿಗೆ ಹೋಲಿಸಿದರೆ ಅರ್ಜುನ ಯಾವುದರಲ್ಲಿಯೂ ಸರಿಸಾಟಿ ಇರಲಿಲ್ಲ.. ತುಂಬಾ ಸಲ ಅರ್ಜುನ ಮತ್ತು ಕರ್ಣ ಮುಖಾಮುಖಿಯಾಗಿದ್ದರು. ಪ್ರತೀ ಸಲ ಅರ್ಜುನನ ಸೋಲು ನಿಶ್ಚಯವಾಗಿತ್ತು. ದುರ್ಯೋಧನ ಮತ್ತು ಕರ್ಣ ಆತ್ಮೀಯ ಸ್ನೇಹಿತರು, ಇದೇ ಆತ್ಮೀಯತೆಯಲ್ಲಿ ದುರ್ಯೋಧನ ಕರ್ಣನನ್ನು ಅಂಗದೇಶದ ರಾಜನಾಗಿ ಮಾಡಿದ್ದ. ಕರ್ಣ ಒಬ್ಬ ಮಹಾದಾನಿ ಎಂದು ಎಲ್ಲರಿಗೂ ತಿಳಿದಿತ್ತು. ಅಂಗದೇಶದ ಜನರಿಗೆ ಮಹಾದಾನಿ ಹಾಗು ಪರೋಪಕಾರಿ ರಾಜ ಕರ್ಣ ಅಂದರೆ ಬಹಳ ಪ್ರೀತಿ..

ಕರ್ಣನು ಒಂದು ನಿಯಮವನ್ನು ಮಾಡಿದ್ದ ಅದರ ಅನುಸಾರ ದಿನದಲ್ಲಿ ಅವನು ಕನಿಷ್ಠ ಒಂದು ಬಾರಿಯಾದರೂ ದಾನ ಮಾಡುತ್ತಿದ್ದ. ಕಷ್ಟ ಎಂದು ಕರ್ಣನ ಬಳಿ ಹೋದರೆ ಯಾರು ಕೂಡ ಬರೀ ಕೈಯಲ್ಲಿ ವಾಪಸ್ ಬರುತ್ತಿರಲಿಲ್ಲ.. ಒಂದು ಬಾರಿ ಕೃಷ್ಣ ಕರ್ಣನ ಬಗ್ಗೆ ಪ್ರಶಂಸೆ ಮಾಡುತ್ತಿದ್ದ.. ಇದನ್ನು ಕೇಳಿದ ಅರ್ಜುನ ಕರ್ಣ ಒಬ್ಬ ಚಿಕ್ಕ ದೇಶದ ರಾಜ, ನಾನು ದೊಡ್ಡ ದೇಶದ ರಾಜ ನನ್ನಷ್ಟು ದಾನ ಮಾಡಲು ಕಾರ್ಣನಿಗೆ ಸಾಧ್ಯವಿಲ್ಲ ಎಂದು ಹೇಳುತ್ತಾನೆ.. ಇದನ್ನು ಕೇಳಿದ ಕೃಷ್ಣ ನಗುತ್ತಾ ಸಮಯ ಬಂದಾಗ ಉತ್ತರ ಕೊಡುತ್ತೇನೆ ಅರ್ಜುನ ಎಂದು ಹೇಳುತ್ತಾನೆ.. ಇನ್ನು ತುಂಬಾ ದಿನಗಳು ಕಳೆದ ಮೇಲೆ ಜೋರಾದ ಮಳೆ ಶುರುವಾಗಿ ನಿರಂತರ ಐದು ದಿನಗಳ ಕಾಲ ಮಳೆ ನಿಲ್ಲುವುದೇ ಇಲ್ಲ.. ಈ ವೇಳೆ ಒಬ್ಬ ಬ್ರಾಹ್ಮಣ ಅರ್ಜನನ ಅರಮನೆಗೆ ಬಂದು ಕಷ್ಟಗಳನ್ನು ಪಾರು ಮಾಡಿ ಎಂದು ಕೇಳಿಕೊಳ್ಳುತ್ತಾನೆ..

ಮಹಾರಾಜರೇ ನನ್ನ ತಂದೆಯ ಅಂತಿಮ ಸಂಸ್ಕಾರಕ್ಕಾಗಿ ಗಂಧದ ಕಟ್ಟಿಗೆಗಳು ಬೇಕು, ಆದರೆ ನಿರಂತರ ಮಳೆಯಿಂದಾಗಿ ನನಗೆ ಎಲ್ಲೂ ಕೂಡ ಒಣ ಕಟ್ಟಿಗೆಗಳು ಸಿಗುತ್ತಿಲ್ಲ ಎಂದು ಹೇಳುತ್ತಾನೆ.. ಆಗ ಅರ್ಜುನ ಬ್ರಾಹ್ಮಣ ಕೇಳಿದ್ದನ್ನು ಕೊಡುವುದು ಹೇಗೆ, ಮಳೆ ತುಂಬಾ ಬೀಳುತ್ತಿದೆ ಒಣ ಕಟ್ಟಿಗೆಗಳನ್ನು ತರುವುದಾದರು ಎಲ್ಲಿ ಎಂದು ತುಂಬಾ ಯೋಚನೆ ಮಾಡುತ್ತಾನೆ. ಆದರೆ ಯಾವುದೇ ಉಪಾಯ ಅರ್ಜನನಿಗೆ ಹೊಳೆಯಲಿಲ್ಲ.. ಕೊನೆಗೆ ಅರ್ಜುನ ಈ ಕೆಲಸ ತನ್ನಿಂದಾಗದು, ಜೋರಾದ ಮಳೆಯಿಂದ ಕಟ್ಟಿಗೆಗಳು ನೆನೆದಿರುತ್ತವೆ, ಒಣ ಕಟ್ಟಿಗೆಗಳನ್ನು ತರಲು ಹೇಗೆ ಸಾಧ್ಯ ಎಂದು ಕ್ಷಮೆಯಾಚಿಸುತ್ತಾನೆ.. ಅರ್ಜುನನ ಮಾತಿಗೆ ನಿರಾಶನಾಗಿ ಹಿಂತಿರುಗುತ್ತಿದ್ದ ಬ್ರಾಹ್ಮಣನನ್ನು ತಡೆದ ಕೃಷ್ಣ ಕರ್ಣನ ಬಳಿ ಸಹಾಯ ಕೇಳು ಎಂದು ಹೇಳುತ್ತಾನೆ.. ಇದನ್ನು ಕೇಳಿದ ಅರ್ಜುನ ಇದು ಸಾಧ್ಯವಾಗದ ಮಾತು ಎಂದು ವ್ಯಂಗ್ಯವಾಗಿ ಮಾತನಾಡುತ್ತಾನೆ..

ಅರ್ಜುನನ ಅಹಂಕಾರ ಅರಿತ ಕೃಷ್ಣ ಕರ್ಣ ಕಟ್ಟಿಗೆಗಳನ್ನು ಕೊಡಲು ವಿಫಲನಾದರೆ ನಾನು ಅವನನ್ನು ಧಾನ ವೀರ ಕರ್ಣನೆಂದು ಕರೆಯುವುದು ನಿಲ್ಲಿಸುತ್ತೇನೆ ಎಂದು ಹೇಳುತ್ತಾನೆ.. ನಂತರ ಬ್ರಾಹ್ಮಣ ಕರ್ಣನ ಆಸ್ಥಾನಕ್ಕೆ ಹೋಗಿ ತನ್ನ ಸಮಸ್ಯೆಯನ್ನು ಹೇಳಿಕೊಳ್ಳುತ್ತಾನೆ.. ಬ್ರಾಹ್ಮಣನ ಮಾತು ಕೇಳಿದ ಕರ್ಣ ಕೂಡಲೇ ಸೈನಿಕರಿಗೆ ತನ್ನ ಅರಮನೆಯಲ್ಲಿದ್ದ ಕಂಬಗಳನ್ನು ಕಿತ್ತು ಬ್ರಾಹ್ಮಣನಿಗೆ ಕೊಡಲು ಆದೇಶ ಮಾಡುತ್ತಾನೆ.. ಈ ವಿಷಯ ತಿಳಿದ ಅರ್ಜನನಿಗೆ ತುಂಬಾ ಅವಮಾನವಾಗುತ್ತದೆ.. ಯಾಕೆಂದರೆ ಕರ್ಣನ ಅರಮನೆಗಿಂತ ಜ್ಯಾಸ್ತಿ ಕಂಬಗಳು ಅರ್ಜುನನ ಅರಮನೆಯಲ್ಲಿದ್ದವು.. ಸ್ನೇಹಿತರೆ ಕರ್ಣ ಶ್ರೇಷ್ಠನೋ ಅಥವಾ ಅರ್ಜುನ ಶ್ರೇಷ್ಠನೋ ಅನ್ನುವ ನಿರ್ದಾರ ನಿಮಗೆ ಬಿಡುತ್ತೇನೆ.. ಇನ್ನೂ ಕರ್ಣ ಬಗ್ಗೆ ಹೇಳಬೇಕೆಂದರೆ..

ಕರ್ಣನು ಒಬ್ಬ ಸರ್ವಶ್ರೇಷ್ಠ ಧನುರ್ಧಾರಿ , ಮಹಾನ್ ದಾನವೀರಶೂರ, ಅಪ್ರತಿಮ ತೇಜಸ್ಸು ಹೊಂದಿದವನು, ಕರ್ಣನ ವ್ಯಕ್ತಿತ್ವಕ್ಕೆ ಸಾಕ್ಷಾತ್ ಶ್ರೀ ಕೃಷ್ಣನೇ ಮನಸೋತಿದ್ದನು, ಗುರು ಪರಶರಾಮರ ಪ್ರೀತಿಯ ಶಿಷ್ಯ, ಅಭೇದ್ಯ ಕವಚ ಕುಂಡಲಗಳನ್ನು ಹೊಂದಿದ್ದವನು, ಪ್ರಾ’ಣಕ್ಕೆ ಕು’ತ್ತು ಬಂದಿದ್ದರು ಕೊಟ್ಟ ಮಾತನ್ನು ಮರೆಯದೇ ತೊಟ್ಟ ಬಾಣವನ್ನು ತೊಡದ ಮೇರು ವ್ಯಕ್ತಿತ್ವದವನು, ಜೀವನದ ಕೊನೆಯ ಕ್ಷಣದವರೆಗೂ ಸ್ನೇಹಕ್ಕಾಗಿ ಬದುಕಿದ ಸ್ನೇಹಜೀವಿ.
ತಾಯಿ ಕುಂತಿಗೆ ನಿನ್ನ 5 ಜನ ಮಕ್ಕಳನ್ನು ಉಳಿಸಿಕೊಡುತ್ತೇನೆ ಎಂದು ವಚನವನ್ನು ನೀಡಿ ತೊಟ್ಟ ಬಾಣವನ್ನು ಪುನಃ ತೊಡುವುದಿಲ್ಲ ಎಂದು ಅರ್ಜುನನ ಪ್ರಾ’ಣವನ್ನು ಉಳಿಸುತ್ತಾನೆ. ಇಂದ್ರನಿಗೆ ಪ್ರಾ’ಣಕ್ಕೆ ಸಂಚಕಾರ ಬರುತ್ತದೆ ಎಂದು ಗೊತ್ತಿದ್ದರು ತನ್ನ ಕವಚ ಕುಂಡಲಗಳನ್ನು ದಾನ ಮಾಡುತ್ತಾನೆ. ಸಾ’ವಿನ ಕೊನೆಯಲ್ಲೂ ಸಾಕ್ಷಾತ್ ವಿಷ್ಣುವಿನ ಆವತಾರವಾದ ಶ್ರೀ ಕೃಷ್ಣನಿಗೆ ತನ್ನ ಚಿನ್ನದ ಹಲ್ಲುಗಳನ್ನು ಕಿತ್ತು ಕೊಡುತ್ತಾನೆ. ಒಂದು ವೇಳೆ ಕರ್ಣ ತಾನು ನೀಡಿದ ವಚನವನ್ನೆಲ್ಲ ಪಾಲಿಸದೇ ಇದ್ದಿದ್ದರೆ ಖಂಡಿತವಾಗಿ ಪಾಂಡವರಿಗೆ ಸೋಲಾಗುತ್ತಿತ್ತು. ಸೂರ್ಯ ಚಂದ್ರರಿರುವವರೆಗೂ ಅಜರಾಮರವಾಗಿ ಉಳಿಯುವ ಒಂದೇ ಒಂದು ಮಹಾಭಾರತದ ದಂತಕಥೆ ಅದು ಸೂರ್ಯಪುತ್ರ ಕರ್ಣ..