Advertisements

ಪಕ್ಷಿಗಳು ವಿದ್ಯುತ್ ತಂತಿಯ ಮೇಲೆ ಕುಳಿತರೆ ಕರೆಂಟ್ ಹೊಡೆಯೋದಿಲ್ಲ ಯಾಕೆ ಗೊತ್ತಾ? ನೋಡಿ..

Kannada Mahiti

ನಮಸ್ತೆ ಸ್ನೇಹಿತರೆ, ಒಂದು ವೇಳೆ ನಾವು ಕರೆಂಟ್ ಇರೋ ವೈರನ್ನ ಮುಟ್ಟಿದ್ರೆ ನಮಗೆ ಕರೆಂಟ್ ಶಾಕ್ ಹೊಡೆಯುತ್ತೆ‌.. ಆದರೆ ನಾವು ನೋಡಿರ್ತೀವಿ.. ನಮ್ಮ ಮನೆಯಲ್ಲಿ ಇರುವಂತಹ ಕರೆಂಟ್ ಕಂಬದ ವೈರಗಳ ಮೇಲೆ ಪಕ್ಷಿಗಳು ಆರಾಮಾಗಿ ಕುತ್ಕೊಂಡು ಮೀಟಿಂಗ್ ಮಾಡುತ್ತವೆ.. ಹಾಗಾದ್ರೆ ಅವುಗಳಿಗೆ ಕರೆಂಟ್ ಯಾಕೆ ಹೊಡೆಯೋದಿಲ್ಲ ಅನ್ನುವ ಪ್ರಶ್ನೆಗೆ ಉತ್ತರ ಸಿಗಬೇಕಾದರೆ. ಮೊದಲು ಕರೆಂಟ್ ಹೇಗೆ ಕೆಲಸ ಮಾಡುತ್ತೆ ಅನ್ನೊದು ಗೊತ್ತಾಗಬೇಕು.. ಕರೆಂಟ್ ಯಾವಾಗಲೂ ಜ್ಯಾಸ್ತಿ ವೋಲ್ಟೇಜ್ ಕಡೆಯಿಂದ ಕಡಿಮೆ ವೋಲ್ಟೇಜ್ ಇರೋ ಕಡೆ ಹೋಗ್ತಾಯಿರುತ್ತೆ.. ಹಾಗೆ ಪ್ಲೋ ಹಾಗಬೇಕು ಅಂದರೆ ಒಂದು ಕ್ಲೋಸಡ್ ಪಾತ್ ಅನ್ನೊದು ಇರಬೇಕು.. ಒಂದು ವೇಳೆ ಅದರ ಮದ್ಯದಲ್ಲಿ ಪಾತ್ ಓಪನ್ ಆದ್ರೆ ಸರ್ಕ್ಯೂಟ್ ಕಂಪ್ಲೀಟ್ ಹಾಗದೆ ಇರೋದ್ರಿಂದ ಕರೆಂಟ್ ಪ್ಲೋ ಆಗೋದಿಲ್ಲ‌.

Advertisements

ಇದೆ ಥಿಯರಿ ಇಲ್ಲೂ ಕೂಡ ನಡೆಯುತ್ತೆ.. ಒಂದು ಕಂಬದಿಂದ ಇನ್ನೊಂದು ಕಂಬಕ್ಕೆ ಕನೆಕ್ಟ್ ಹಾಗಿರುವ ವೈರ್’ಗಳು ಎಲ್ಲೂ ಒಂದಕ್ಕೊಂದು ಸೇರಿರೋದಿಲ್ಲ.. ಈ ವೈಯರ್ ಮೇಲೆ ಒಂದು ಪಕ್ಷಿ ಬಂದು ಕುತ್ಕೊಳೊತ್ತೆ ಅಂದುಕೊಳ್ಳೊಣ.. ಆ ಪಕ್ಷಿ ಒಂದೇ ವೈಯರ್ ಮೇಲೆ ಇದೆ ಎಲ್ಲೂ ಕೂಡ ಸರ್ಕ್ಯೂಟ್ ಕ್ಲೋಸ್ ಹಾಗಿರೋದಿಲ್ಲ‌‌.. ಹಾಗಾಗಿ ಕರೆಂಟ್ ಪಕ್ಷಿಗಳಿಗೆ ಹೊಡೆಯೋದಿಲ್ಲ.. ಒಂದು ವೇಳೆ ಇದೇ ಪಕ್ಷಿ ಹಾರುವಾಗ ತನ್ನ ರೆಕ್ಕೆಗಳಿಂದ ಎರಡು ವೈರಗಳನ್ನು ಟಚ್ ಮಾಡಿದಾಗ ಕರೆಂಟ್ ಪ್ಲೋ ಆಗೋದಕ್ಕೆ ಒಂದು ಕ್ಲೊಸ್ ಪಾತ್ ಎರ್ಪಡುತ್ತೆ‌‌.. ಆಗ ಆ ಕರೆಂಟ್ ಪಕ್ಷಿ ಒಳಗಡೆಯಿಂದ ಕರೆಂಟ್ ಪ್ರವೇಶ ಮಾಡದ್ರೊದಿಂದ ಪಕ್ಷಿಗೆ ಕರೆಂಟ್ ಹೊಡೆಯುತ್ತೆ.. ಹಾಗಾಗಿ ಒಂದೇ ವೈಯರ್ ಮೇಲೆ ಕೂತಿರುವ ಪಕ್ಷಿಗಳಿಗೆ ಏನೂ ಆಗುವುದಿಲ್ಲ..

ಹಾಗದ್ರೆ ಮನುಷ್ಯರಿಗೆ ಇದೇ ಥಿಯರಿ ಕೆಲಸ ಮಾಡುತ್ತೆ ಅಂದರೆ ಇಲ್ಲ.. ನಾವು ಕರೆಂಟ್ ಕಂಬದ ಪವರ್ ಅಥವಾ ನ್ಯೂಟ್ರಲ್ ಯಾವುದೇ ಒಂದು ವೈಯರ್ ಅನ್ನು ಹಿಡಿದುಕೊಂಡಾಗ ಒಂದು ಕ್ಲೋಸ್ ಪಾಥ್ ಎರ್ಪಡದೇ ಇದ್ರು ನಮಗೆ ಕರೆಂಟ್ ಹೊಡೆಯುತ್ತೆ.. ಯಾಕೆಂದರೆ ನಮ್ಮ ದೇಹ ಉತ್ತಮ ವಿದ್ಯುತ್ ವಾಹಕವಾಗಿರುತ್ತದೆ ಹಾಗಾಗಿ ನಮಗೆ ಕರೆಂಟ್ ಹೊಡೆಯುತ್ತೆ, ಆದರೆ ಪಕ್ಷಿಗಳ ಕಾಲಿನಲ್ಲಿರುವ ಚರ್ಮವು ನಮ್ಮ ದೆಹಕ್ಕಿಂತ ಭಿನ್ನವಾಗಿದ್ದು ಅದು ಅವಾಹಕವಾಗಿ ಕೆಲಸ ಮಾಡುತ್ತೆ.. ಹಾಗಾಗಿ ಪಕ್ಷಿಗಳು ಒಂದು ವೈಯರ್ ಮೇಲೆ ಕುತ್ಕೊಂಡ್ರೆ ಕರೆಂಟ್ ಹೊಡೆಯೋದಿಲ್ಲ..