ಕನ್ನಡ ಸಿನಿಮಾ ಮತ್ತು ಸೀರಿಯಲ್ ನಟ ನಟಿಯರು ಈ ವರ್ಷದ ದೀಪಾವಳಿ ಹಬ್ಬವನ್ನು ಬಹಳ ಸಂಭ್ರಮದಿಂದ ಆಚರಿಸಿದ್ದಾರೆ.. ನಟ ದರ್ಶನ್ ಸೇರಿದಂತೆ ನಾಡಿನ ಜನತೆಗೆ ಹಾಗು ಅಭಿಮಾನಿಗಳಿಗೆ ಶುಭ ಆರೈಸಿದ್ದಾರೆ. ನಟ ದರ್ಶನ್ ಅವರು, ಬದುಕಿನ ಅಂಧಕಾರಗಳೆಲ್ಲವೂ ದೂರವಾಗಿ ಎಲ್ಲರ ಮನೆ ಮನಗಳಲ್ಲಿ ನೆಮ್ಮದಿ, ಖುಷಿ ಸಡಗರ ತುಂಬಿ ತುಳುಕಲಿ ಎಂದು ದೇವರಲ್ಲಿ ಪ್ರಾರ್ಥಿಸುತ್ತ, ತೂಗುದೀಪ ಪರಿವಾರದಿಂದ ಸರ್ವರಿಗೂ ದೀಪಾವಳಿ ಹಬ್ಬದ ಹಾರ್ಧಿಕ ಶುಭಾಶಯಗಳು ಎಂದು ಪೋಸ್ಟ್ ಮಾಡಿದ್ದಾರೆ..

ನಟ ಉಪೇಂದ್ರ ಅವರು ವಿಚಾರದ ದೀಪ ನಮ್ಮಲ್ಲೇ ಬೆಳಗಿಸಿಕೊಳ್ಳುವುದರ ಜೊತೆ ಹಬ್ಬ ಆಚರಿಸೋಣ ಎಲ್ಲರಿಗೂ ದೀಪಾವಳಿ ಹಬ್ಬದ ಶುಭಾಶಯಗಳು ಹಾರ್ಧಿಕ ಶುಭಾಶಯಗಳು ಎಂದು ಹೇಳುತ್ತ, ಜನರಿಂದ ಒಂದು ಗುಂಪು ನಾಯಕರಾಗಿ ಅಧಿಕಾರ ಚಲಾಯಿಸುವ ವ್ಯವಸ್ಥೆ ಪ್ರಜಾಪ್ರಭುತ್ವವೇ, ಜನರೇ ತಂತ್ರಜ್ಞಾನದಿಂದ ಸರಳವಾಗಿ ನಾಯಾಕರಾಗಿ ಪಾಲ್ಗೊಂಡು ಅಧಿಕಾರ ನಡೆಸುವ ವ್ಯವಸ್ಥೆ ಪ್ರಜಾಪ್ರಭುತ್ವವೇ, ಯಾವುದು ಸರಿ? ಎಂದು ಪ್ರಶ್ನಿಸಿದ್ದಾರೆ..

ಕಿಚ್ಚ ಸುದೀಪ್, ಯಶ್, ದ್ರುವ ಸರ್ಜಾ, ಸತೀಶ್ ನೀನಾಸಂ, ನಿಖಿಲ್ ಕುಮಾರಸ್ವಾಮಿ ಸೇರಿದಂತೆ ಕಿರುತೆರೆ ನಟ ನಟಿಯರಾದ ಗಟ್ಟಿಮೇಳ ಅಮೂಲ್ಯ, ವೇದಾಂತ್. ಜೊತೆಜೊತೆಯಲಿ ಅನು, ಆರ್ಯವರ್ದನ್ ಕೂಡ ನಾಡಿನ ಜನತೆಗೆ ಹಾಗು ಅಭಿಮಾನಿಗಳಿಗೆ ದೀಪಾವಳಿ ಹಬ್ಬದ ಶುಭಾಶಯಗಳು ಎಂದು ಶುಭ ಕೋರಿದ್ದಾರೆ..