Advertisements

ವಿಭಿನ್ನವಾಗಿ ಹಬ್ಬವನ್ನು ಆಚರಿಸಿದ ನಟಿ ಸುಧಾರಾಣಿ! ಅಭಿಮಾನಿಗಳ ಮುಂದೆ ಕಾಣಿಸಿಕೊಂಡ ಮಾಲಾಶ್ರಿ ಹಾಗು ಅವರ ಮಕ್ಕಳು..

Cinema

ಕನ್ನಡ ಚಿತ್ರರಂಗದ ಕನಸಿನ ರಾಣಿ ಮಾಲಾಶ್ರಿಯವರು ಸದ್ಯಕ್ಕೆ ಚಿತ್ರರಂಗದಿಂದ ದೂರ ಉಳಿದಿದ್ದು ಮಕ್ಕಳು ಮತ್ತು ಕುಟುಂಬದೊಂದಿಗೆ ಸಮಯವನ್ನು ಕಳೆಯುತ್ತಿದ್ದಾರೆ.. ಮಾಲಶ್ರಿಯವರು ತಮ್ಮ ಕುಟುಂಬದೊಂದಿಗೆ ಈ ವರ್ಷದ ದೀಪಾವಳಿ ಹಬ್ಬವನ್ನ ಆಚರಣೆ ಮಾಡಿದ್ದಾರೆ.. ಈ ಪೊಟೊಗಳನ್ನು ಈಗ ಮಾಲಾಶ್ರೀಯವರು ಸಾಮಾಜಿಕ ಜಾಲತಾಣದಲ್ಲಿ ಅಂಚಿಕೊಂಡಿದ್ದು ಹಲವು ದಿನಗಳ ನಂತರ ಅಭಿಮಾನಿಗಳ ಮುಂದೆ ಕಾಣಿಸಿಕೊಂಡಿದ್ದಾರೆ..

Advertisements

ಈ ಪೋಟೊಗಳಲ್ಲಿ ನಟಿ ಮಾಲಾಶ್ರಿ, ರಾಮು ಮತ್ತು ಇಬ್ಬರು ಮಕ್ಕಳು ದೀಪ ಹಿಡಿದುಕೊಂಡು ಪೋಟೊಗೆ ಪೋಸ್ ನೀಡಿದ್ದಾರೆ.. ಮಾಲಾಶ್ರಿಯವರ ಮಗ ಈಗಾಗಲೇ ಅಪ್ಪ ಅಮ್ಮನಿಗಿಂತ ಎತ್ತರ ಬೆಳೆದಿದ್ದು ಸಿನಿಮಾರಂಗಕ್ಕೆ ಎಂಟ್ರಿಕೊಡಲು ಎಲ್ಲಾ ತಯಾರಿ ಮಾಡಿಕೊಳ್ಳುತ್ತಿದ್ದಾನೆ..

ನಟಿ ಸುಧಾರಣಿಯವರು ಈ ವರ್ಷದ ದೀಪಾವಳಿ ಹಬ್ಬವನ್ನು ತುಂಬಾ ವಿಭಿನ್ನವಾಗಿ ಆಚರಣೆ ಮಾಡಿದ್ದಾರೆ.. ಎಲ್ಲರೂ ಕೂಡ ದೀಪಾವಳಿಯಂದು ದೀಪ ಹಚ್ಚುವ ಮೂಲಕ ದೀಪಾವಳಿ ಆಚರಣೆ ಮಾಡಿದ್ದಾರೆ.. ಸುಧಾರಾಣಿಯವರು ಕುಕುರ್ ತಿಹಾರ್ ಅನ್ನು ಸಂಭ್ರಮದಿಂದ ಆಚರಿಸಿದ್ದಾರೆ.. ಕುಕುರ್ ತಿಹಾರ್ ಎನ್ನುವುದು ಮನುಷ್ಯರ ಮತ್ತು ಪ್ರಾಣಿಯ ನಡುವಿನ ಸಂಬಂಧದ ಸಂಕೇತವಾಗಿದೆ.. ನೇಪಾಳದಲ್ಲಿ ದೀಪಾವಳಿ ಎರಡನೇ ದಿನವನ್ನು ನಾಯಿಗಳಿಗೆ ಪೂಜೆ ಮಾಡುವ ಮೂಲಕ ಆಚರಣೆ ಮಾಡುತ್ತಾರೆ.. ನಟಿ ಸುಧಾರಣಿ ಅವರು ಸಹ ಈ ಹಬ್ಬವನ್ನು ನಿನ್ನೆ ಆಚರಿಸಿದ್ದಾರೆ..

ಮನೆಯ ನಾಯಿಗಳ ಜೊತೆ ತಮ್ಮ ಬೀದಿಯಲ್ಲಿರುವ ನಾಯಿ ಹಾಗು ಅದರ ಮರಿಗಳಿಗೂ ಪೂಜೆ ಮಾಡಿದ್ದಾರೆ.. ನಿಯತ್ತಿಗೆ ಮತ್ತೊಂದು ಹೆಸರಾಗಿರುವ ನಾಯಿಗಳಿಗೆ ಧನ್ಯವಾದ ತಿಳಿಸಿದ್ದಾರೆ.. ಸುಧಾರಾಣಿ ಹಾಗು ಅವರ ಮಗಳು ಕೂಡ ನಾಯಿಯ ಪ್ರೇಮಿಯಾಗಿದ್ದು ಅವರ ಮನೆಯಲ್ಲಿ ಮಿಕ್ಕಿ ಹಾಗು ಮಿನಿಯೆಂಬ ನಾಯಿಗಳಿವೆ.. ಈ ಎರಡು ನಾಯಿಗಳಿಗೂ ಕುಂಕುಮ ಮತ್ತು ಹಾರವನ್ನು ಹಾಕಿ ಪೂಜೆ ಸಲ್ಲಿಸಿದ್ದಾರೆ.. ಸುಧಾರಣಿಯವರ ಬೀದಿಯಲ್ಲಿರುವ ಗಂಗಮ್ಮ ಎನ್ನುವ ನಾಯಿಯಿದ್ದು ಅದು ಕೂಡ ಮರಿಹಾಕಿವೆ ಅವುಗಳಿಗೂ ಕೂಡ ಸುಧಾರಾಣಿ ಪೂಜೆ ಸಲ್ಲಿಸಿದ್ದಾರೆ..