Advertisements

ಮೊದಲಬಾರಿಗೆ ತನ್ನ ಮಗುವಿನ ಬಗ್ಗೆ ಹೇಳಿಕೆ ನೀಡಿದ ಮೇಘನ ರಾಜ್..

Cinema

ನಟ ಚಿರಂಜೀವಿ ಸರ್ಜಾ ಅವರ ಅಗಲಿಕೆಯ ಬಳಿಕ, ಮೇಘನ ರಾಜ್ ಅವರು ಮೊದಲಬಾರಿಗೆ ತನ್ನ ಮಗುವಿನ ಜೊತೆ ದೀಪಾವಳಿ ಹಬ್ಬವನ್ನ ಆಚರಿಸಿದ್ದಾರೆ.. ಕೆಲವು ತಿಂಗಳಿಂದ ನೋವಿನಲ್ಲಿ ಇದ್ದ ಮೇಘನ ಜೀವನದಲ್ಲಿ ಚಿರು ಮತ್ತೆ ಪುಟ್ಟ ಮಗುವಿನ ರೂಪದಲ್ಲಿ ಹುಟ್ಟಿ ಬಂದಿದ್ದಾರೆ.. ಜೀವನವೇ ಬೇಡ ಎಂದಿದ್ದ ಮೇಘನ ಅವರು ಇದೀಗ ಮಗುವಿನ ಭವಿಷ್ಯಕ್ಕಾಗಿ ಮತ್ತೆ ಬದುಕುತ್ತೇನೆ ಮಗುವನ್ನ ದೊಡ್ಡ ವ್ಯಕ್ತಿಯನ್ನಾಗಿ ಮಾಡುತ್ತೇನೆ ಎಂದು ಹೇಳಿದ್ದಾರೆ.. ಕಳೆದ ವಾರ ಮಗನ ತೊಟ್ಟಿಲ ಶಾಸ್ತ್ರ ಮಾಡಿದ್ದ ಮೇಘನ ಇನ್ನೇನು ಕೆಲವೇ ದಿನಗಳಲ್ಲಿ ನಾಮಕರಣ ಕೂಡ ಮಾಡುತ್ತೇವೆ ಎಂದು ಹೇಳಿದ್ದರು..

Advertisements

ಕಳೆದ ವರ್ಷ ಚಿರು ಜೊತೆ ದೀಪಾವಳಿ ಹಬ್ಬವನ್ನ ತುಂಬಾ ಸಡಗರದಿಂದ ಆಚರಿಸಿದ್ದ ಮೇಘನ ಅವರು ಈ ವರ್ಷ ಚಿರು ಇಲ್ಲದೇ ದುಃಖ ಪಟ್ಟಿದ್ದಾರೆ.. ಕಳೆದ ವರ್ಷದ ಚಿರು ಪೊಟೊವನ್ನ ಹಂಚಿಕೊಂಡ ಮೇಘನ ನನ್ನ ಮಗುವಿಗೆ ಇದು ಮೊದಲ ವರ್ಷದ ದೀಪಾವಳಿ.. ಕಳೆದ ವರ್ಷ ಚಿರು ನನ್ನ ಜೊತೆ ಇದ್ದರು ಈಗ ಅವರ ಮಗನಿದ್ದಾನೆ.. ಆದರೆ ಈ ಬಾರಿ ಚಿರುವನ್ನ ತುಂಬಾ ಮಿಸ್ ಮಾಡಿಕೊಳ್ಳುತ್ತಿದ್ದೇನೆ, ಚಿರು ನನ್ನ ಮಗುವಿನ ಮುಖದಲ್ಲಿ ಸದಾ ಇರ್ತಾರೆ ಎಂದು ಮೇಘನ ರಾಜ್ ಅವರು ಹೇಳಿಕೊಂಡಿದ್ದಾರೆ..