Advertisements

ಮಹಾಭಾರತ ಬಜೆಟ್, ಕಲಾವಿದರ ಒಂದು ದಿನದ ಸಂಭಾವನೆಯ ಕಂಪ್ಲೀಟ್ ಡೀಟೇಲ್ಸ್..

Cinema

ನಮಸ್ತೆ ಸ್ನೇಹಿತರೆ, ಸ್ಯಾಂಡಲ್ವುಡ್, ಕಾಲಿವುಡ್, ಬಾಲಿವುಡ್, ಟಾಲಿವುಡ್ ಅಂಡ್ರೆಡ್ ಕ್ಲಬ್ ಮೂವಿಗಳನ್ನು ನೋಡಿ ಎಂಜಾಯ್ ಮಾಡಿರ್ತಿರಾ. ಆದರೆ ಒಂದು ಸಿನಿಮಾ ಅಂದರೆ ಹೆಚ್ಚಾಗಿ 40 ರಿಂದ 50 ಕೋಟಿ ಬಜೆಟ್ ನಲ್ಲಿ ಮಾಡಿರೋದನ್ನ ನೋಡಿರ್ತೀರಾ.. ಆದರೆ ಈ ಒಂದು ಧಾರಾವಾಹಿ ಗೋಸ್ಕರ 100 ಕೋಟಿ ಬಜೆಟ್ ನಲ್ಲಿ ಅದ್ಬುತ ನಿರ್ಮಾಣ ಮಾಡಿದ್ದಾರೆ.. ಕನ್ನಡ ಸುವರ್ಣ ವಾಹಿನಿಯಲ್ಲಿ ಸೂಪರ್ ಡೂಪರ್ ಹಿಟ್ ಆದ ಮಹಾಭಾರತ ಧಾರವಾಹಿ ಏಳು ವರ್ಷಗಳ ಹಿಂದೆ ನಿರ್ಮಾಣವಾಗಿತ್ತು.. ಮಹಾಭಾರತ ಕಥೆ ಸಿನಿಮಾ, ಧಾರವಾಹಿಗಳಾಗಿ ಮತ್ತೆ ಮತ್ತೆ ಹಲವಾರು ಬಾರಿ ಬಂದು ಹೋಗಿದೆ.. ಆದರೂ ಕೂಡ ನೂರು ಕೋಟಿ ಬಜೆಟ್ ಹಾಕಿ ಮಹಾಭಾರತ ಸೀರಿಯಲ್ ಮಾಡಿದ್ದು ಸಖತ್ ಹಿಟ್ ಹಾಗಿದೆ..

Advertisements

ಇನ್ನು ಇದರಲ್ಲಿರುವ ಪಾತ್ರಗಳು ಕೂಡ ಹೇಳಿ ಮಾಡಿಸಿದಂತಿದೆ.. ಅಷ್ಟರ ಮಟ್ಟಿಗೆ ಮಹಾಭಾರತ ಸೀರಿಯಲ್ ನಲ್ಲಿ ಅಭಿನಯಿಸಿದ್ದಾರೆ.. ಇನ್ನು ಮಹಾಭಾರತ ಸೀರಿಯಲ್ ಅನ್ನು ನೋಡುವರುಗಂತೂ ಅವರೇ ನಿಜವಾದ ಅರ್ಜುನ, ಕೃಷ್ಣ, ದುರ್ಯೋಧನ, ಭೀಷ್ಮ, ದ್ರೌಪದಿ ಇವರೆಲ್ಲ ಕುದ್ದು ಹೀಗೆ ಇದ್ದರೆನೋ ಅನ್ನುವಷ್ಟರ ಮಟ್ಟಿಗೆ ನೋಡುಗರಿಗೆ ಹಾಗಿದೆ.. ಇನ್ನು ಇಂತಹ ಅದ್ಬುತ ಕಲಾವಿದರಿಗೆ ಒಂದು ದಿನದ ಸಂಭಾವನೆ ಎಷ್ಟಿರಬಹುದು ಗೊತ್ತಾ? ಮಹಾಭಾರತ ಪಾಂಡು ರಾಜನಾಗಿ ಅಭಿನಯಿಸಿದ್ದ ಅರ್ಜುನ್ ಸಿಂಗ್ ರಾಣಾ ಅವರ ಸಂಭಾವನೆ 20 ಸಾವಿರ ರೂಪಾಯಿ, ಸತ್ಯವತಿ ಪಾತ್ರದಲ್ಲಿ ಅಭಿನಯಿಸಿದ್ದ ಸಯಂತಿನಿ ಅವರಿಗೆ ದಿನಕ್ಕೆ 20 ಸಾವಿರ ರೂಪಾಯಿ, ವಿಧುರ ಪಾತ್ರದಾರಿ ನವೀನ್ ಅವರಿಗೆ ಒಂದು ದಿನಕ್ಕೆ 25 ಸಾವಿರ ರುಪಾಯಿ..

ಅಶ್ವತ್ಥಾಮ  ಪಾತ್ರದಾರಿ ಅಂಕಿತ್ ಮೋಹನ್ ಗೆ ದಿನದ ಸಂಭಾವನೆ 25 ಸಾವಿರ ರುಪಾಯಿ, ದ್ರೋಣಾಚಾರ್ಯ ಪಾತ್ರದಲ್ಲಿ ಅಭಿನಯಿಸಿದ ನಿಸಾರ್ಕಾನ್ ಅವರ ಒಂದು ದಿನದ ಸಂಭಾವನೆ 25 ಸಾವಿರ ರೂಪಾಯಿ, ವೃಶಾಲಿ ಪಾತ್ರದಲ್ಲಿ ಅಭಿನಯಿಸಿರೋ ನಸಿಯೋ ಹಾಸನ್  ಸೈಯದ್ ಅವರಿಗೆ ಒಂದು ದಿನಕ್ಲೆ 25 ಸಾವಿರ ಪಡೆಯುತ್ತಾರೆ.. ಉತ್ತರೆ ಪಾತ್ರದಲ್ಲಿ ಅಭಿನಯಿಸಿದ ರಿಚಾ ಮುಖರ್ಜಿಗೂ ಕೂಡ 25 ಸಾವಿರ ರುಪಾಯಿ, ಅಂಬಾ ಹಾಗು ಶಿಖಂಡಿನಿ  ಪಾತ್ರದಲ್ಲಿ ಅಭಿನಯಿಸಿದ ಶಿಖಾಸಿನ್ ಅವರ ಸಂಭಾವನೆ 25 ಸಾವಿರ, ಬಲರಾಮ ಪಾತ್ರದಾರಿ ತರುಣ್ ಅವರಿಗೆ ಒಂದು ದಿನದ ಸಂಭಾವನೆ 35 ಸಾವಿರ, ನಕುಲ ಸಹದೇವ 35 ಸಾವಿರ ರೂಪಾಯಿ, ಅತ್ಯಂತ ಮುಖ್ಯವಾದ ಪಾತ್ರ ಕುಂತಿ ಶಪಾಜ್ ನಾಜ್ ಪಡೆದ ಒಂದು ದಿನದ ಸಂಭಾವನೆ 35 ಸಾವಿರ..

ಅಭಿಮನ್ಯು ಪರಾಸ್ ಅರೋರ ಅವರ ಒಂದು ದಿನದ ಸಂಭಾವನೆ 40 ಸಾವಿರ ರುಪಾಯಿ, ಗಾಂಧಾರಿ ಪಾತ್ರದಲ್ಲಿ ಮಿಂಚಿದ ರಿಯಾ ಅವರಿಗೆ ಒಂದು ದಿನಕ್ಕೆ 45 ಸಾವಿರ ರುಪಾಯಿ, ಯುದಿಷ್ಠಿರ ಪಾತ್ರದಾರಿ ರೋಹಿತ್ ಭಾರದ್ವಾಜ್ ಅವರಿಗೆ ದಿನಕ್ಕೆ 50 ಸಾವಿರ ರೂಪಾಯಿಗಳು.. ದುತರಾಷ್ಟ್ರ ಪಾತ್ರದಾರಿ ಠಾಕೂರ್ ಅನುಪ್ ಸಿಂಗ್ ಅವರಿಗೆ ಒಂದು ದಿನದ ಸಂಭಾವನೆ 60 ಸಾವಿರ ರೂಗಳು, ಬೀಮನ ಪಾತ್ರದಾರಿ ಸೌರವ್ ಅವರಿಗೆ ಒಂದು ದಿನಕ್ಕೆ 75 ಸಾವಿರ ರೂಪಾಯಿ, ದುರ್ಯೋಧನ ಪಾತ್ರದಾರಿ ಅರ್ಪಿತ್ ರಂಕಾಗೆ 80 ಸಾವಿರ ರೂಪಾಯಿ, ಶಕುನಿ ಪಾತ್ರಧಾರಿ ಪ್ರಣಿತ್ ಭಟ್ ಗೆ ದಿನದ ಸಂಭಾವನೆ 85 ಸಾವಿರ..

ಭೀಷ್ಮ ಪಾತ್ರದಲ್ಲಿ ಅಭಿನಯಿಸಿದ ಅರವುದ್ ಚೌದ್ರಿಯವರಿಗೆ ಒಂದು ದಿನಕ್ಕೆ 95 ಸಾವಿರ ರುಪಾಯಿ, ಕರ್ಣನ ಪಾತ್ರದಾರಿ ಅಹಂ ಶರ್ಮಾಗೆ ದಿನಕ್ಕೆ ಒಂದು ಲಕ್ಷದ ಮೂವತ್ತೈದು ಸಾವಿರ ರುಪಾಯಿ, ದ್ರೌಪದಿ ಪಾತ್ರಧಾರಿ ಪೂಜಾ ಶರ್ಮಾಗೆ ಒಂದು ದಿನಕ್ಕೆ ಒಂದು ಲಕ್ಷದ ನಲವತ್ತು ಸಾವಿರ, ಇನ್ನು ಅರ್ಜುನನ ಪಾತ್ರದಾರಿ ಸಹಿದ್ ಶೇಕ್ ಅವರಿಗೆ ಒಂದು ದಿನಕ್ಕೆ ಎರಡು ಲಕ್ಷದ ಇಪ್ಪತ್ತೈದು ಸಾವಿರ, ಕೊನೆದಾಗಿ ಶ್ರೀ ಕೃಷ್ಣನ ಪಾತ್ರದಾರಿ ಸೌರಬ್ ರಾಜ್ ಜೈನ್ ಅವರು ಪಡೆಯುತ್ತಿದ್ದ ದಿನದ ಸಂಭಾವನೆ ಎರಡು ಲಕ್ಷದ ಐವತ್ತು ಸಾವಿರ ರೂಪಾಯಿ.. ಸ್ನೇಹಿತರೆ ಇದಿಷ್ಟು ಮಹಾಭಾರತ ಧಾರವಾಹಿಯ ಪಾತ್ರಧಾರಿಗಳ ಒಂದು ದಿನದ ಸಂಭಾವನೆ.. ಇವರು ಒಂದು ದಿನದಲ್ಲಿ ಹಲಾವರು ಎಪಿಸೋಡ್ ಗಳನ್ನು ಶೂಟ್ ಮಾಡಿ ಮಹಾಭಾರತದ ಅತ್ಯದ್ಭುತ ಧಾರವಾಹಿಯನ್ನು ನಿರ್ಮಾಣ ಮಾಡಿದ್ದಾರೆ..