Advertisements

ವಿನೋದ್ ರಾಜ್ ಅವರ ಹೆಸರಿನಲ್ಲಿ ಆಗುತ್ತಿರುವ ಮೋಸವೇನು? ವಿನೋದ್ ರಾಜ್ ಹೇಳಿದ್ದೇನು?

News

ನಮಸ್ತೆ ಸ್ನೇಹಿತರೆ, ಕನ್ನಡ ಚಿತ್ರರಂಗ ಕಂಡ ಅದ್ಭುತ ನಮ್ಮ ನಿಮ್ಮೆಲ್ಲೆರ ನೆಚ್ಚಿ‌ನ ನಟ ವಿನೋದ್ ರಾಜ್ ಅವರು ಹಲವು ಸಿನಿಮಾಗಳನ್ನು ನೀಡಿ ಇಂದು ಯಾವುದೇ ಅವಕಾಶಗಳು ಸಿಗದೇ ತಾಯಿಯ ಜೊತೆ ಕೃಷಿ ಕೆಲಸ ಮಾಡುತ್ತಿದ್ದಾರೆ.. ಯಾವುದು ಕೈ ಬಿಟ್ಟರು ಭೂಮಿತಾಯಿ ನಮ್ಮ ಕೈ ಬಿಡುವುದಿಲ್ಲ ಎನ್ನುವುದು ಅಕ್ಷರಶಃ ಸತ್ಯ.. ಹೌದು ಸ್ನೇಹಿತರೆ ಭೂಮಿ ತಾಯಿಯನ್ನೇ  ನಂಬಿದ ನಟ ವಿನೋದ್ ರಾಜ್ ಅವರು ಕೃಷಿ ಕೆಲಸ ಮಾಡುತ್ತಿದ್ದಾರೆ.. ಇನ್ನು ವಿನೋದ್ ರಾಜ್ ಅವರು ಎಂತಹ ನಟ ಎನ್ನುವುದು ನಮ್ಮ ನಿಮ್ಮೆಲ್ಲರಿಗೂ ತಿಳಿದಿರುವ ವಿಚಾರ..

Advertisements

ಹಲವು ಅದ್ಭುತ ಸಿನಿಮಾಗಳನ್ನು ಕನ್ನಡ ಚಿತ್ರರಂಗಕ್ಕೆ ನೀಡಿದ್ದಾರೆ.. ಅಷ್ಟೇ ಅಲ್ಲದೇ  ಸೂಪರ್ ಡ್ಯಾನ್ಸರ್ ಕೂಡ ಹೌದು, ಡ್ಯಾನ್ಸ್ ನೋಡಿದ ಅಭಿಮಾನಿಗಳು ಇವರಿಗೆ ಕನ್ನಡದ ಮೈಕೆಲ್ ಜಾಕ್ಸನ್ ಎಂದು ಕರೆದಿದ್ದಾರೆ.. ಆದರೆ ಈ ದಿನ ಸಿನಿಮಾ ರಂಗ ವಿನೋದ್ ರಾಜ್ ಅವರನ್ನು ಮರೆತು ಹೋಗಿದೆ.. ಇನ್ನು ಕಿರುತೆರೆ ರಿಯಾಲಿಟಿ ಡ್ಯಾನ್ಸ್ ಶೋಗಳಲ್ಲಿ ಗಂಧ ಗಾಳಿ ಗೊತ್ತಿಲ್ದವರನ್ನು ಕರೆದು ಜಡ್ಜ್ ಹಾಗಿ ನೇಮಕ ಮಾಡಿರೋದು ಜನರಿಗೆ ಬೇಸರ ಉಂಟುಮಾಡಿದೆ.. ಡ್ಯಾನ್ಸ್ ಗೊತ್ತಿಲ್ಲದವರನ್ನು ಕರೆಸಿ ಜಡ್ಜ್ ಹಾಗಿ ನೇಮಕ ಮಾಡುವ ಬದಲು ವಿನೋದ್ ರಾಜ್ ಅವರನ್ನು ತೀರ್ಪುಗಾರರನ್ನಾಗಿ ಮಾಡಬೇಕು ಎಂದು ಜನರು ಧ್ವನಿ ಎತ್ತಿದ್ದರು..

ಜನರ ಮಾತಿಗೆ ವಾಹಿನಿಗಳು ಯಾವುದೇ ರೀತಿ ಪ್ರತಿಕ್ರಿಯೆ ನೀಡಲೇ ಇಲ್ಲ.. ಈಗ ಮುಖವಾಡ ಚಿತ್ರತಂಡ ವಿನೋದ್ ರಾಜ್ ಅವರನ್ನು ಕರೆತರುವ ತಯಾರಿ ನಡೆಸಿದ್ದು ವಿನೋದ್ ರಾಜ್ ಅವರು ಒಪ್ಪಿಕೊಂಡರೆ ಅವರನ್ನು ಕರೆತರುತ್ತೇವೆ ಎಂದು ಹೇಳಿದ್ದಾರೆ.. ಇನ್ನು ವಿನೋದ್ ರಾಜ್ ಅವರು ತಾಯಿಯ ಜೊತೆ ನೆಮ್ಮದಿಯಿಂದ ಜೀವನ ನಡೆಸುತ್ತಿದ್ದಾರೆ ಆದರೆ ಅವರಿಗೆ ಕೆಲವು ಕಿಡಿಗೇಡಿಗಳಿಂದ ಬಹಳ ತೊಂ’ದರೆಯಾಗುತ್ತಿದೆ.. ಹೌದು ಸ್ನೇಹಿತರೆ ಈ ಹಿಂದೆ ಬಡ ಜನರಿಗೆ ನಿರ್ಮಿಸಿರುವ ಆಸ್ವತ್ರೆಗೆ ನುಗ್ಗಿದ ಕಿಡಗೇಡಿಗಳು ಒಳಗಡೆ ಪೀಠೋಪಕರಣ, ಔಷದಿ ಯನ್ನು ಹಾಳು ಮಾಡಿ ದ್ವಂ’ಸ ಮಾಡಿದ್ದರು.. ಈ ಕಿಡಗೇಡಿಗಳ ಕೆಲಸಕ್ಕೆ ವಿನೋದ್ ರಾಜ್ ಅವರು ಬಹಳ ಬೇಸರ ವ್ಯಕ್ತಪಡಿಸಿದ್ದರು..

ಇದಾದ ನಂತರ ಕಾರಿನ ಟೈಯರ್ ಪಂಚರ್ ಆಗಿದೆ ಎಂದು ಲೀಲಾವತಿ ಹಾಗು ವಿನೋದ್ ರಾಜ್ ಅವರ ಗಮನವನ್ನು ಬೇರಡೆ ಸೆಳೆದು ಕಾರಿನಲ್ಲಿದ್ದ ಒಂದು ಲಕ್ಷ ಹಣವನ್ನು ಕದ್ದು ಪರಾರಿಯಾಗಿದ್ದರು.. ಇದರ ಬಗ್ಗೆ ಮಾತನಾಡಿದ ನಟ ವಿನೋದ್ ರಾಜ್ ಅವರು ನನಗೆ ತುಂಬಾ ಸಮಸ್ಯೆಯಾಗುತ್ತಿದೆ ಎಂದು ಮಾಧ್ಯಮದ ಮುಂದೆ ನೋವನ್ನು ಹೊರ ಹಾಕಿದ್ದರು..

ಇದೀಗ ವಿನೋದ್ ರಾಜ್ ಅವರ ಹೆಸರಿನಲ್ಲಿ ಪೇಸ್ಬುಕ್ ಅಕೌಂಟ್ ಕ್ರಿಯೇಟ್ ಮಾಡಿ  ಅವರ ಹೆಸರಿನಲ್ಲಿ ದೊಡ್ಡ ವ್ಯಕ್ತಿಗಳಿಗೆ ಮೆಸೇಜ್ ಮಾಡಿ ಹಣ ಕೇಳುತ್ತಿದ್ದಾರೆ.. ಸಾಯಿ ಪ್ರಕಾಶ್ ಕಾಲ್ ಮಾಡಿ ಈ ಬಗ್ಗೆ ಹೇಳಿದ್ದರಿಂದ ವಿನೋದ್ ರಾಜ್ ಅವರಿಗೆ ಗೊತ್ತಾಗಿದೆ.. ಕೂಡಲೇ ಪೋಲಿಸರಿಗೆ ಈ ಮಾಹಿತಿ ನೀಡಿ ನಾನು ಯಾವುದೇ ಸಾಮಾಜಿಕ ಜಾಲತಾಣದಲ್ಲಿ ಇಲ್ಲ ನನ್ನ ಹೆಸರಿನಗೆ ಮಸಿ ಬಳಿಯುತ್ತಿದ್ದಾರೆ‌‌ ಎಂದು ಹೇಳಿದ್ದಾರೆ.. ಇನ್ನು ಈ ರೀತಿ ಸಮಸ್ಯೆ ಕೊಟ್ಟು ನನ್ನ ಹೆಸರು ಹಾಳು ಮಾಡಬೇಡಿ.. ಈಗಾಗಲೇ ಸಾಕಷ್ಟು ಸಮಸ್ಯೆಗಳನ್ನು ಎದುರಿಸುತ್ತಿದ್ದೇನೆ.. ಇನ್ನಷ್ಟು ಕಷ್ಟ ಕೊಡಬೇಡಿ ಎಂದು ಮಾಧ್ಯಮದ ಮುಂದೇ ಹೇಳಿಕೊಂಡಿದ್ದಾರೆ..