Advertisements

ಬಿ.ಎಸ್ ಯಡಿಯೂರಪ್ಪ ಅವರ ನಿಜವಾದ ಸಂಬಳ ಎಷ್ಟು ಗೊತ್ತಾ?

Kannada Mahiti

ನಮಸ್ತೆ ಸ್ನೇಹಿತರೆ, ಬಿ.ಎಸ್ ಯಡಿಯೂರಪ್ಪನವರು 19 ನೇ ಕರ್ನಾಟಕದ ಮುಖ್ಯಮಂತ್ರಿಯಾಗಿ ಕಾರ್ಯ ನಿರ್ವಹಿಸುತ್ತಿರುವುದು ನಿಮಗೆಲ್ಲ ತಿಳಿದಿರುವ ವಿಚಾರ. ಸ್ನೇಹಿತರೆ ಕರ್ನಾಟಕದ ಮುಖ್ಯಮಂತ್ರಿಯಾಗಿ ಅವರಿಗೆ ಎಷ್ಟು ಸಂಬಳ ಸಿಗುತ್ತದೆ ಆಗೆ ಸರ್ಕಾರದಿಂದ ಕೊಡುವ ಸೌಕರ್ಯಗಳೇನು ಅನ್ನುವುದರ ಬಗ್ಗೆ ತಿಳಿಯೋಣ.. ಕರ್ನಾಟಕದ ಮುಖ್ಯಮಂತ್ರಿ ಬೇಸ್ ಸ್ಯಾಲರಿ 50 ಸಾವಿರ ರೂಪಾಯಿ, ಅದೇ ರೀತಿ ಮನೆ ರೆಂಟ್ ಗಾಗಿ ಒಂದು ಲಕ್ಷವನ್ನ ಕೊಡುತ್ತಾರೆ.. ಇನ್ನು ಮುಖ್ಯಮಂತ್ರಿಯವರು ಓಡಾಡಲು ವಾಹನದ ಸೌಲಭ್ಯಕ್ಕೆ 21 ಲಕ್ಷ ಸರ್ಕಾರದಿಂದ ಕೊಡುತ್ತಾರೆ.. ಇನ್ನು ಮುಖ್ಯಮಂತ್ರಿಯವರು ಪ್ರಯಾಣ ಮಾಡುವುದಕ್ಕೆ ಪ್ರತಿದಿನ 2 ಸಾವಿರ ರೂಪಾಯಿ ಕೊಡುತ್ತಾರೆ..

Advertisements

ಕೆಲವು ಸಂದರ್ಭಗಳಲ್ಲಿ ಮುಖ್ಯಮಂತ್ರಿಯವರು ಹೊರ ರಾಜ್ಯ ಪ್ರಯಾಣ ಮಾಡುವ ಸಂದರ್ಭದಲ್ಲಿ 2500 ರುಪಾಯಿಯನ್ನ ಸರ್ಕಾರ ಕೊಡುತ್ತದೆ.. ಮುಖ್ಯಮಂತ್ರಿ ಓಡಾಡುವ ವಾಹನಗಳ ಇಂಧನಕ್ಕೆ ಒಂದು ಲಿಮಿಟ್ ಇದೆ.. ಅದೇನೆಂದರೆ ಒಂದು ತಿಂಗಳಿಗೆ ಸಾವಿರ ಲೀಟರ್ ಪೆಟ್ರೋಲ್ ಅಥವಾ ಡೀಸೆಲ್.. ಕ್ಷೇತ್ರ ಭತ್ಯೆ ಗಾಗಿ 40 ಸಾವಿರ ರೂಪಾಯಿ ಹಾಗೆ ಕ್ಷೇತ್ರ ಪ್ರಯಾಣ ಭತ್ಯೆಗೆ 45 ಸಾವಿರ ರೂಪಾಯಿಯನ್ನು ಮುಖ್ಯಮಂತ್ರಿಯವರಿಗೆ ಕೊಡುತ್ತಾರೆ.. ಮುಖ್ಯಮಂತ್ರಿಯವಿರಗೆ ತುಂಬಾ ಸಹಾಯವಾಗುವಂತಹ ಒಂದು ಸೌಲಭ್ಯ ಅಂದರೆ ಅದು ಜೀರೋ ಟ್ರಾಪಿಕ್ ಸೌಲಭ್ಯ..

ಜೀರೋ ಟ್ರಾಪಿಕ್ ಅಂದರೆ ಮುಖ್ಯಮಂತ್ರಿಯವರು ಬೆಂಗಳೂರಿನಲ್ಲಿ ಯಾವುದೇ ಒಂದು ಟ್ರಾಪಿಕ್ ಸಿಗ್ನಲ್ ನಲ್ಲಿ ನಿಲ್ಲುವ ಅವಶ್ಯಕತೆ ಇರುವುದಿಲ್ಲ.. ಎಷ್ಟೇ ಟ್ರಾಪಿಕ್ ಇದ್ದರು ಮುಖ್ಯಮಂತ್ರಿ ವಾಹನ ಆರಾಮಾಗಿ ಕಳುಹಿಸಿ ಕೊಡುತ್ತಾರೆ.. ಇಂತಹ ಒಂದು ಸೌಲಭ್ಯ ಭಾರತದಲ್ಲಿರುವ ತುಂಬಾ ಕಡಿಮೆ ಜನರಿಗೆ ಮಾತ್ರ ಸಿಗುತ್ತದೆ. ಇವೆಲ್ಲವನ್ನು ಲೆಕ್ಕಕ್ಕೆ ಇಟ್ಟಿಕೊಂಡರೆ ಮುಖ್ಯಮಂತ್ರಿಯವರಿಗೆ ಅಂದಾಜಿನ ಪ್ರಕಾರ 2 ಲಕ್ಷ ರೂಪಾಯಿ ಸಂಬಳ ಹಾಗೂ ಹೆಚ್ಚಿನ ಸೌಕರ್ಯಗಳು ಪ್ರತಿ ತಿಂಗಳು ಸಿಗುತ್ತದೆ. ಒಟ್ಟಾಗಿ ಮುಖ್ಯಮಂತ್ರಿಯವರ ಕೈಗೆ ವರ್ಷಕ್ಕೆ  24 ಲಕ್ಷ ರೂಪಾಯಿ ಸೇರುತ್ತದೆ..

ಭಾರತದಲ್ಲಿ ಅತಿ ಹೆಚ್ಚು ಸಂಭಾವನೆ ಪಡೆಯುವ ಮುಖ್ಯಮಂತ್ರಿ ಎಂದರೆ ಅದು ತೆಲಾಂಗಣದ ಮುಖ್ಯಮಂತ್ರಿ ಕೆ.ಸಿ.ಆರ್.. ಇವರು 4 ಲಕ್ಷದ 10 ಸಾವಿರ ಸಂಬಳ ಪಡೆಯುತ್ತಾರೆ..ಇನ್ನು ಅತೀ ಕಡಿಮೆ ಸಂಬಳ ಪಡೆಯುವಂತಹ ಮುಖ್ಯಮಂತ್ರಿ ನಾಗ ಲ್ಯಾಂಡ್ ಮುಖ್ಯಮಂತ್ರಿ ಅದು ಒಂದು ಲಕ್ಷದ 10 ಸಾವಿರ ರೂಪಾಯಿ.. ಇದನ್ನು ನೋಡಿದಾಗ ಕರ್ನಾಟಕ ಮುಖ್ಯಮಂತ್ರಿ ಯಡಿಯೂರಪ್ಪ ಅವರು ಹೆಚ್ಚು ಸಂಭಾವನೆ ಪಡೆಯುವುದಿಲ್ಲ ಹಾಗೆ ಅತೀ ಕಡಿಮೆ ಸಂಭಾವನೆಯನ್ನು ಪಡೆಯುವುದಿಲ್ಲ..