Advertisements

ಮೇಘನ ರಾಜ್ ಮಗುವಿಗಾಗಿ ಸುಮಲತಾ ಅಂಬರೀಶ್ ಕೊಟ್ಟ ವಿಶೇಷ ಉಡುಗೊರೆ ಏನು ಗೊತ್ತಾ?

Cinema

ನಮಸ್ತೆ ಸ್ನೇಹಿತರೆ, ಮೇಘನ ರಾಜ್ ಮಡಿಲಿಗೆ ಪುಟಾಣಿ ಬಂದ ದಿನದಿಂದ ನೋವುಗಳೆಲ್ಲ ಮಾಯವಾಗಿ ಸಂತೋಷ ತುಂಬಿ ತುಳುಕುತ್ತಿದೆ.. ಅಷ್ಟೇ ಅಲ್ಲದೇ ಜೂನಿಯರ್ ಚಿರುವನ್ನು ನೋಡಲು ಚಿತ್ರರಂಗದ ಅನೇಕ ನಟ ನಟಿಯರು ಬರುತ್ತಿದ್ದಾರೆ.‌‌. ಮಗುವಿಗಾಗಿ ವಿಶೇಷ ಉಡುಗೊರೆಗಳನ್ನ ಹೊತ್ತು ತರುತ್ತಿದ್ದಾರೆ.. ಇದೀಗ  ಅಂಬರೀಶ್ ಮನೆಯಿಂದ ಸುಮಲತಾ ಅಂಬರೀಶ್ ಹಾಗು ಅಭಿಷೇಕ್ ಅಂಬರೀಶ್ ಮೇಘನ ಮನೆಗೆ ಬಂದು ಮಗುವಿಗಾಗಿ ಈ ವಿಶೇಷ ಉಡುಗೊರೆಯನ್ನು ತಂದಿದ್ದಾರೆ..

Advertisements

ಹಾಗಾದರೆ ಸುಮಲತಾ ಅವರು ಕೊಟ್ಟ ಉಡುಗೊರೆ ಏನಿರಬಹುದು ಎಂದು ತಿಳಿಯೋಣ.. ಮೇಘನ ಅವರು ಸಧ್ಯಕ್ಕೆ ತಮ್ಮ ಮಗುವಿನ ಜೊತೆ ತಾಯಿತನವನ್ನ ಅನುಭವಿಸುತ್ತಿದ್ದಾರೆ.. ಚಿರು ಹಾಗು ಮೇಘನ ಮಗುವನ್ನ ನೋಡಲು ಸುಂದರ್ ರಾಜ್ ಮನೆಗೆ ಸುಮಲತಾ ಹಾಗು ಮಗ ಅಭಿಷೇಕ್ ಅಂಬರೀಶ್ ಬಂದಿದ್ದಾರೆ.. ಸುಂದರ್ ರಾಜ್ ಕುಟಂಬಕ್ಕೂ ಹಾಗು ಅಂಬರೀಶ್ ಕುಟುಂಬಕ್ಕು ತುಂಬಾ ಹಳೆಯ ಸ್ನೇಹ ಮತ್ತು ಅಭಿನಾಭಾವ ಸಂಬಂಧ ಇವರದ್ದು..

ಅಂಬರೀಶ್  ಹಾಗು ಸುಂದರ್ ರಾಜ್ ತುಂಬಾ ಉತ್ತಮ ಸ್ನೇಹಿತರು ಕೂಡ.. ಇದೀಗ ಸುಮಲತಾ ಅವರು ಈ ಮೊದಲು ಯಶ್ ಹಾಗು ರಾಧಿಕ ಮಗುವಿಗೆ ಬಣ್ಣದ ತೊಟ್ಟಿಲನ್ನು ಉಡುಗೊರೆಯಾಗಿ ನೀಡಿದ್ದರು.. ಇದೀಗ ಚಿರು ಮೇಘನ ಮಗವಿಗೆ ಬೆಳ್ಳಿ ಕಾಲ್ಗಡಗವನ್ನ ಕೊಟ್ಟಿದ್ದಾರೆ.. ಮಗು ಚಿರುವಿನ ತರ ಮುದ್ದಾಗಿ ಇದ್ದಾನೆ ಎಂದು ಸುಮಲತಾ ಅವರು ಹೇಳಿದ್ದಾರೆ‌.. ಹಾಗು ಬಹಳಷ್ಟು ಸಮಯವನ್ನ ಮಗುವಿನೊಂದಿಗೆ ಕಳೆದಿದ್ದಾರೆ.. ಮೇಘನ ಅರೋಗ್ಯವನ್ನ ವಿಚಾರಿಸಿಕೊಂಡು ಕೆಲ ಸಮಯ ಅವರಿಗೆ ಸಲಹೆಗಳನ್ನು ಕೊಟ್ಟು ಹೋಗಿದ್ದಾರೆ.