Advertisements

ಸೊಪ್ಪು ಮಾರಲು ಮಹಿಳೆಯ ಮನೆಗೆ ಬಂದ ಅಜ್ಜಿ ಮಾಡಿದ ಕೆಲಸ ನೋಡಿದ್ರೆ! ಕೈ ಮುಗಿಯುತ್ತೀರಾ..

Kannada Mahiti

ನಮಸ್ತೆ ಸ್ನೇಹಿತರೆ, ಈಗಿನ ಕಾಲದಲ್ಲಿ ಎಲ್ಲಿ ನೋಡಿದ್ರು ಮೋಸ ಮಾಡಿ, ಕಳ್ಳತನ ಮಾಡಿ, ಕೆಲಸ ಕಾರ್ಯ ವಿಲ್ಲದೆ ಸೋಮಾರಿತನದಿಂದ ಬದುಕುವ ಕೆಲವು ಜನರಿದ್ದಾರೆ.. ಆದರೆ ಈ 80 ವರ್ಷದ ಅಜ್ಜಿಯ ಕಥೆಯನ್ನ ಕೇಳಿದರೆ ನಿಜಕ್ಕೂ ನೀವು ಹೆಮ್ಮೆ ಪಡುತ್ತೀರಾ.. ಈ ಅಜ್ಜಿಯ ಹೆಸರು ಶಾರದಮ್ಮ, ಇವರಿಗೆ 80 ವರ್ಷವಾದರು ತಮ್ಮ ಕುಟುಂಬ ನಿರ್ವಹಣೆಗಾಗಿ ಇಂದಿಗೂ ಕೂಡ ಕೆಲಸ ಮಾಡುತ್ತಿದ್ದಾರೆ.. ದೇಹಕ್ಕೆ ವಯಸ್ಸಾಗಿದೆ ವರೆತು ಆತ್ಮಬಲಕ್ಕಲ್ಲ ಎಂಬಂತೆ ಈ ಅಜ್ಜಿ ಈಗಲೂ ಕೂಡ ಮನೆ ಮನೆಗೆ ಹೋಗಿ ಕೊತ್ತಂಬರಿ ಸೊಪ್ಪನ್ನು ಮಾರಿ ಜೀವನವನ್ನು ನಡೆಸುತ್ತಿದ್ದಾರೆ..

Advertisements

ಎಂದಿನಂತೆ ಈ ಅಜ್ಜಿ ಮನೆ ಮನೆಗೆ ಹೋಗಿ ಕೊತ್ತಂಬರಿ ಸೊಪ್ಪನ್ನು ಮಾರುತ್ತಿದ್ದ ಸಮಯದಲ್ಲಿ ಮೂರನೇ ಮಹಡಿಯಿಂದ ಒಬ್ಬ ಮಹಿಳೆ ಸೊಪ್ಪು ಬೇಕು ತೆಗೆದುಕೊಂಡು ಬಾ ಎಂದು ಅಜ್ಜಿಯನ್ನು ಕರೆಯುತ್ತಾರೆ.. ಇನ್ನು ಈ ಅಜ್ಜಿ ಸೊಪ್ಪಿನ ಬ್ಯಾಗ್ ತೆಗೆದುಕೊಂಡು ಮೂರನೇ ಮಹಡಿಗೆ ಹೋಗಿ ಆ ಮಹಿಳೆಗೆ ಎರಡು ಕಟ್ಟು ಸೊಪ್ಪನ್ನು ಕೊಡುತ್ತಾರೆ.. ಈ ಎರಡು ಕಟ್ಟು ಸೊಪ್ಪಿನ ಬೆಲೆ 20 ರೂಪಾಯಿ ಆದರೆ ಆ ಮಹಿಳೆ ಅಜ್ಜಿಗೆ 100 ರೂಪಾಯಿ ಕೊಡುತ್ತಾರೆ.. ಆದರೆ ಈ ಅಜ್ಜಿ ನನ್ನ ಹತ್ತಿರ ನೂರು ರೂಪಾಯಿಗೆ ಚೇಂಜ್ ಇಲ್ಲ ಎಂದು ಹೇಳಿದಾಗ ಆ ಮಹಿಳೆ ಪರವಾಗಿಲ್ಲ ಏಗಿದ್ದರೂ ಮತ್ತೆ ಈ ರಸ್ತೆಯಲ್ಲಿ ಬರುತ್ತೀರಾ ಆಗ ಕೋಡಿ ಎಂದು ಹೆಳುತ್ತಾರೆ..

ನಂತರ ಅಜ್ಜಿ ಸರಿ ಎಂದು ಮಹಡಿಯಿಂದ ಕೆಳಗೆ ಇಳಿದು ಹೋಗುತ್ತಾರೆ.. ಒಂದು ಗಂಟೆಯ ಬಳಿಕ ಶಾರದಮ್ಮ ಅಜ್ಜಿ ಮಹಿಳೆಗೆ ನೂರು ರುಪಾಯಿಗೆ ಚಿಲ್ಲರೆ ಕೊಡಬೇಕೆಂದು ಪುನಃ ಮೂರನೇಯ ಮಹಡಿವರೆಗೂ ಬಂದು ಚೀಲದಿಂದ 80 ರೂಪಾಯಿಯನ್ನು ತೆಗೆದು ಆ ಮಹಿಳೆಗೆ ಕೊಡುತ್ತಾರೆ.. ಅಜ್ಜಿ ಚಿಲ್ಲರೆ ಕೊಡಲು ಪುನಃ ಮನೆಗೆ ಬಂದಿದ್ದನ್ನು ನೋಡಿದ ಮಹಿಳೆ ಮತ್ತೆ ಬಂದಾಗ ಕೊಡಬಹುದಿತ್ತು ನೀವೇಕೆ ಈ ವಯಸ್ಸಿನಲ್ಲಿ ಮೂರನೇ ಮಹಡಿ ಅತ್ತಿ ಬಂದಿದ್ದೀರಾ ಎಂದು ಅಜ್ಜಿಗೆ ಕೇಳುತ್ತಾರೆ..

ಆಗ ಶಾರದಮ್ಮ ಅಜ್ಜಿ ನಾನು ನಾಳೆ ಬದುಕಿರುತ್ತೆನೋ ಇಲ್ಲವೋ ಗೊತ್ತಿಲ್ಲ ಬಾಕಿ ಹಣ ಏಕೆ ಉಳಿಸಿಕೊಳ್ಳಬೇಕು ಒಬ್ಬರ ಬಾಕಿ ಹಣ ನನ್ನಲ್ಲಿ ಇದ್ದರೆ ನನ್ನ ಮನಸ್ಸಿಗೆ ನೆಮ್ಮದಿ ಸಿಗುವುದಿಲ್ಲ ಎಂದು ಹೇಳುತ್ತಾರೆ.. ಅಜ್ಜಿಯ ಈ ಮಾತನ್ನು ಕೇಳಿದ ಮಹಿಳೆ ಒಂದು ನಿಮಿಷ ನಿಂತುಕೊಳ್ಳಿ ಎಂದು ಅಜ್ಜಿಯ ಕಾಲಿಗೆ ನಮಸ್ಕರಿಸಿದ್ದಾರೆ.. ನೀವು ತುಂಬಾ ಗ್ರೇಟ್ ಬೇರೆಯವರ ದುಡ್ಡನ್ನು ಕದ್ದು ಬದುಕುವ ಈಗಿನ ಕಾಲದಲ್ಲಿ ನಿಮ್ಮಂತವರು ಇದ್ದಾರಲ್ವಾ ಏನು ಹೇಳಬೇಕು ಗೊತ್ತಾಗಲಿಲ್ಲ ಕಾಲಿಗೆ ನಮಸ್ಕಾರ ಮಾಡಿದೆ ಎಂದು ಮಹಿಳೆ ಶಾರದಮ್ಮ ಅಜ್ಜಿಗೆ ಹೇಳುತ್ತಾರೆ.. ಸ್ನೇಹಿತರೆ ಈ ಕಥೆಯ ಬಗ್ಗೆ ನಿಮಗೆ ಏನು ಅನಿಸಿತು ಎಂಬುದನ್ನು ಕಾಮೆಂಟ್ ಮೂಲಕ ತಿಳಿಸಿ..