Advertisements

ಇಲ್ಲಿದ್ದಾರೆ ನೋಡಿ ದೇಶದ 7 ಅತೀ ದೊಡ್ಡ ಶ್ರೀಮಂತ ಭಿಕ್ಷುಕರು..ಇವರ ತಿಂಗಳ ಸಂಪಾದನೆ ಆಸ್ತಿ ಹಾಗೂ ಲೈಫ್ ಸ್ಟೈಲ್ ಬಗ್ಗೆ ಕೇಳಿದ್ರೆ ನೀವು ನಂಬೋದೇ ಇಲ್ಲ !

Kannada Mahiti

ನಮಸ್ತೇ ಸ್ನೇಹಿತರೇ, ಯಾವ ಹುತ್ತದಲ್ಲಿ ಏನಿರುತ್ತೋ ಎಂದು ಹಿರಿಯರು ಹೇಳಿದ ಗಾದೆಯೆಂತೆ ಮನುಷ್ಯನ ಮುಖ ನೋಡಿ ಅವನು ಹೀಗೇ ಅಂತ ಹೇಳಲು ಸಾಧ್ಯವಿಲ್ಲ. ಮುಖ ನೋಡಿ ಮೊಳೆ ಹಾಕಬೇಡ ಎಂಬ ಹಾಡನ್ನು ಸಹ ನೀವು ಕೇಳಿರುತ್ತೀರಾ. ಹೌದು, ರಸ್ತೆಯ ಬದಿಯಲ್ಲೋ, ದೇವಸ್ಥಾನಗಳ ಬಳಿಯೋ ನಾವು ಭಿಕ್ಷೆ ಬೇಡುವವರನ್ನ ನೋಡಿರುತ್ತೇವೆ. ಅವರನ್ನನೋಡಿದ ತಕ್ಷಣ ನಮ್ಮ ಮನಸ್ಸಿಗೆ ಬರುವುದು ಏನೂ ಇಲ್ಲದವರು ಭಿಕ್ಷೆ ಬೇಡುತ್ತಾರೆ ಎನ್ನುವದು. ಆದರೆ ಭಿಕ್ಷೆ ಬೇಡುವವರಲ್ಲೂ ಕೂಡ ಕೋಟ್ಯಾಧಿಪತಿಗಳು ಇದ್ದಾರೆ ಎಂದರೆ ನೀವು ಶಾಕ್ ಆಗ್ತೀರಾ ! ಹೌದು, ಇಲ್ಲಿದ್ದಾರೆ ನೋಡಿ ಭಾರತದ ೬ ಟಾಪ್ ಲೆವೆಲ್ ಶ್ರೀಮಂತ ಭಿಕ್ಷುಕರು..

ಭರತ್ ಜೈನ್ : 50 ವರ್ಷದ ಈತ ಭಾರತದ ಭಿಕ್ಷುಕರಲ್ಲೇ ಅತೀ ದೊಡ್ಡ ಸಿರಿವಂತ. ಭಿಕ್ಷೆ ಬೇಡುತ್ತಲೇ ತಿಂಗಳಿಗೆ ಬರೋಬ್ಬರಿ 75 ಸಾವಿರ ಸಂಪಾದನೆ ಮಾಡುತ್ತಾನೆ ಈತ. ಜ್ಯೂಸ್ ಅಂಗಡಿಯೊಂದನ್ನ ಬಾಡಿಗೆ ಪಡೆದಿರುವ ಈ ಭಿಕ್ಷುಕ ಅದರ ಮೂಲಕ ತಿಂಗಳಿಗೆ 10 ಸಾವಿರ ರೂಪಾಯಿಗಳನ್ನ ಸಂಪಾದನೆ ಮಾಡುತ್ತಾನೆ. ಇಷ್ಟೇ ಅಲ್ಲದೆ ಬರೋಬ್ಬರಿ 70 ಲಕ್ಷ ಮೌಲ್ಯದ ಎರಡು ಫ್ಲಾಟ್ ಗಳನ್ನ ಹೊಂದಿದ್ದಾನೆ. ಮುಂಬೈನ ಛತ್ರಪತಿ ಶಿವಾಜಿ ಟರ್ಮಿನಸ್ ಬಳಿ ವಾಸ ಮಾಡುವ ಈತ ಭಾರತದ ಟಾಪ್ ಶ್ರೀಮಂತ ಭಿಕ್ಷುಕರಲ್ಲಿ ಮೊದಲಿಗನಾಗಿದ್ದಾನೆ.

Advertisements

ಪಪ್ಪು ಕುಮಾರ್ : ಅ’ಪಘಾ’ತವೊಂದರಲ್ಲಿ ಕಾಲು ಕಳೆದುಕೊಂಡ ಬಳಿಕ ಭಿಕ್ಷೆ ಬೇಡಲು ಶುರು ಮಾಡಿದ ಈ ಪಪ್ಪು ಕುಮಾರ್ ಬರೋಬ್ಬರಿ 1.25 ಕೋಟಿಗಳ ಹಣದ ಮೊತ್ತವನ್ನ ಹೊಂದಿದ್ದಾನೆ. ಭಾರತದ ಟಾಪ್ ಸಿರಿವಂತ ಭಿಕ್ಷುಕರಲ್ಲಿ ಈತ ಕೂಡ ಒಬ್ಬ. ಪಾಟ್ನಾದ ರೈಲು ನಿಲ್ದಾಣದ ಬಳಿ ಭಿಕ್ಷೆ ಬೇಡುವ ಈತ ನಾಲ್ಕು ಬ್ಯಾಂಕ್ ಖಾತೆಗಳನ್ನ ಹೊಂದಿದ್ದಾನೆ. ಅಷ್ಟೇ ಅಲ್ಲದೆ ಸಣ್ಣ ಸಣ್ಣ ವ್ಯಾಪಾರಿಗಳಿಗೆ ಹಣವನ್ನ ಸಾಲವಾಗಿ ಕೂಡ ಕೊಟ್ಟಿದ್ದಾನೆ.

ಲಕ್ಷ್ಮಿ ದಾಸ್ : ತನ್ನ ಹದಿನಾರನೇ ವಯಸ್ಸಿನಿಂದಲೇ ಭಿಕ್ಷೆ ಬೇಡುವುದನ್ನ ಶುರು ಮಾಡಿದ ಈಕೆ, ಕೋಲ್ಕತ್ತಾದ ಬೀದಿಗಳಲ್ಲಿ ಭಿಕ್ಷೆ ಬೇಡುತ್ತಾಳೆ. 44 ವರ್ಷಗಳಿಂದ ಭಿಕ್ಷೆ ಬೇಡುತ್ತಿರುವ ಲಕ್ಷ್ಮಿ ದಾಸ್ ಇಲ್ಲಿಯವರೆಗೆ 90 ಕೆಜಿಯ ಕಾಯಿನ್ ಗಳನ್ನ ಹೊಂದಿದ್ದಾಳೆ. ಭಿಕ್ಷೆ ಬೇಡುವುದನ್ನೇ ತನ್ನ ಕೆಲಸವನ್ನಾಗಿಸಿಕೊಂಡಿರುವ ಈಕೆ ಅತೀ ದೊಡ್ಡ ಮೊತ್ತದ ಹಣವನ್ನ ಕೂಡಿಟ್ಟಿದ್ದಾಳೆ ಎಂದು ಹೇಳಲಾಗಿದೆ. ಬ್ಯಾಂಕ್ ನಲ್ಲಿ ಖಾತೆಯನ್ನ ಹೊಂದಿರುವ ಲಕ್ಷ್ಮಿ ದಾಸ್ ಬಾರಿ ಮೊತ್ತದ ಹಣವನ್ನ ಸೇವಿಂಗ್ಸ್ ಮಾಡಿದ್ದಾಳೆ ಎಂದು ಹೇಳಲಾಗಿದೆ. ಇನ್ನು ಈಕೆ ಭಿಕ್ಷೆ ಬೇಡಿ ಒಂದು ತಿಂಗಳಿಗೆ ೩೦ ಸಾವಿರದವರೆಗೆ ಸಂಪಾದನೆ ಮಾಡುತ್ತಾಳೆ.

ಸರ್ಮತಿಯ ದೇವಿ : ತನ್ನ ಗಂಡ ತೀರಿಕೊಂಡ ಮೇಲೆ ಭಿಕ್ಷೆ ಬೇಡಲು ಶುರು ಮಾಡಿದ ಈ ಮಹಿಳೆ ವಾರ್ಷಿಕ ವಿಮೆಯಾಗಿ 36 ಸಾವಿರ ರುಗಳನ್ನ ಕಟ್ಟುತ್ತಿದ್ದಾಳಂತೆ. ಪಾಟ್ನಾದಲ್ಲಿ ಭಿಕ್ಷೆ ಬೇಡುವ ಈಕೆ ಭಾರತದ ಟಾಪ್ ಮಹಿಳಾ ಭಿಕ್ಷುಕರಲ್ಲಿ ಒಬ್ಬರಾಗಿದ್ದು ಈಕೆಯ ಒಂದು ತಿಂಗಳ ಆದಾಯ 50 ಸಾವಿರ. ಇನ್ನು ಈ ಮಹಿಳಾ ಭಿಕ್ಷುಕಿ ತೀರ್ಥ ಯಾತ್ರಾ ಸ್ಥಳಗಳು ಸೇರಿದಂತೆ ಅನೇಕ ಸ್ಥಳಗಳಿಗೆ ಹೋಗಿ ಬಂದಿದ್ದಾರೆ. ಇನ್ನು ಈಕೆಗೆ ಒಬ್ಬ ಮಗಳಿದ್ದು ಒಳ್ಳೆಯ ಕಡೆ ಮದುವೆ ಮಾಡಿಕೊಟ್ಟಿದ್ದಾಳೆ. ಇನ್ನು ಬರೋಬ್ಬರಿ 10 ಲಕ್ಷ ಮೌಲ್ಯದ ಮನೆಯನ್ನ ಪಾಟ್ನಾದಲ್ಲಿ ಹೊಂದಿದ್ದಾಳೆ.

ಮಾಸು / ಮಲಾನಾ : ತಾನು ಭಿಕ್ಷೆ ಬೇಡುವು ಕೆಲಸವನ್ನೇ ಗಂಭೀರವಾಗಿ ಪರಿಗಣಿಸಿರುವ ಈತ ತುಂಬಾ ಆರಾಮವಾಗಿ ಭಿಕ್ಷೆ ಬೇಡುತ್ತಾನೆ. ತಮಾಷೆ ವಿಷಯ ಎಂದರೆ ಭಿಕ್ಷೆ ಬೇಡಲು ಆಟೋ ಮೂಲಕ ತೆರಳುವ ಈ ಭಿಕ್ಷುಕ, ಅಲ್ಲಿ ತನ್ನ ಬಟ್ಟೆಗಳನ್ನ ಬದಲಾಯಿಸಿಕೊಂಡು ಎಂಟರಿಂದ ಹತ್ತು ಗಂಟೆಗಳ ಕಾಲ ಭಿಕ್ಷೆ ಬೇಡಿ ಮತ್ತೆ ತನ್ನ ಬಟ್ಟೆಗಳನ್ನ ಬದಲಾಯಿಸಿಕೊಂಡು ಆಟೋದ ಮೂಲಕವೇ ಮನೆಗೆ ತೆರಳುತ್ತಾನೆ. ತಿಂಗಳಿಗೆ 40 ರಿಂದ 50ನ್ ಸಾವಿರದವರೆಗೆ ಆದಾಯ ಭಿಕ್ಷೆ ಬೇಡುವುದರಿಂದ ಸಂಪಾದನೆ ಮಾಡುತ್ತಾನೆ.

ಸಂಭಾಜಿ ಕಾಳೆ : ಪಚ್ಚಿಮ ಮುಂಬೈನಲ್ಲಿ ತನ್ನ ಕುಟುಂಬದ ಸಮೇತ ವಾಸ ಮಾಡುವ ಈತ ಸೋಲಾಪುರದಲ್ಲಿ ತನ್ನ ಹೆಸರಿನಲ್ಲಿ ಜಮೀನನ್ನು ಕೂಡ ಹೊಂದಿದ್ದಾನೆ. ಎರಡು ಮನೆಗಳ ಜೊತೆಗೆ ಫ್ಲಾಟ್ ಒಂದರ ಮಾಲೀಕ ಕೂಡ ಈ ಭಿಕ್ಷುಕ. ಇಷ್ಟೇ ಇಲ್ಲದೆ ಈತನ ಬ್ಯಾಂಕಿನ ಖಾತೆಯಲ್ಲಿ ಒಂದು ಲಕ್ಷ ರೂಗಳವರೆಗೆ ಹಣ ಕೂಡ ಸೇವಿಂಗ್ಸ್ ಮಾಡಿದ್ದಾನೆ. ಪ್ರತಿ ದಿನ ಈತನ ಆದಾಯ ಒಂದು ಸಾವಿರದವರೆಗೆ ಇದೆ. ಇದೆ ಅಲ್ಲದೆ ಬೇರೆ ಬೇರೆ ವ್ಯವಹಾರಗಳಲ್ಲಿ ಹಣವನ್ನ ಹೂಡಿಕೆ ಮಾಡಿದ್ದಾನೆ.

ಕೃಷ್ಣ ಕುಮಾರ್ : ಭಾರತದ ಖ್ಯಾತ ಶ್ರೀಮಂತ ಭಿಕ್ಷುಕರಲ್ಲಿ ಈತ ಕೂಡ ಒಬ್ಬ. ಈತ ಮುಂಬೈನ ಚಾರ್ನಿ ರಸ್ತೆಯ ಬಳಿ ಭಿಕ್ಷೆ ಬೇಡುವ ಈತ ದಿನಕ್ಕೆ 1500ರೂ ವರೆಗೆ ಕಲೆಕ್ಷನ್ ಮಾಡುತ್ತಾನೆ. ಮುಂಬೈನ ನಲ್ಲಸೋಪರ ಎಂಬ ಟೌನ್ ನಲ್ಲಿ ಬರೋಬ್ಬರಿ 5 ಲಕ್ಷ ಮೌಲ್ಯದ ಫ್ಲಾಟ್ ನ್ನ ಹೊಂದಿದ್ದಾನೆ. ತನ್ನ ಅಣ್ಣನ ಜೊತೆ ವಾಸ ಮಾಡುವ ಈತನ ಹಣದ ವ್ಯವಹಾರವನ್ನೆಲ್ಲಾ ಕೃಷ್ಣ ಕುಮಾರ್ ಅಣ್ಣನೇ ನೋಡಿಕೊಳ್ಳುತ್ತಾನೆ.