Advertisements

ಜಗತ್ತಿಲ್ಲಿ ಎಲ್ಲಿಯು ಕಾಣಸಿಗದ 7 ವಿಚಿತ್ರ ಸ್ಥಳಗಳು..ಈ ಊರುಗಳು ವಿಚಿತ್ರ ಇಲ್ಲಿನ ಜನರು ಕೂಡ ವಿಚಿತ್ರ !

Kannada Mahiti

ನಮಸ್ತೇ ಸ್ನೇಹಿತರೇ, ಅಚ್ಚರಿಗಳ ಆಗರವಾಗಿರುವ ಈ ಜಗತ್ತಿನಲ್ಲಿ ನಮಗೆ ಗೊತ್ತಿಲ್ಲದ ಅದ್ಭುತ ಹಾಗೂ ನಿಗೂಢಗಳಿವೆ. ರಹಸ್ಯ ಎನಿಸುವ ಅದೆಷ್ಟೋ ವಿಚಾರಗಳಿವೆ. ಇನ್ನು ಈ ಪ್ರಪಂಚದಲ್ಲಿ ಪ್ರದೇಶದಿಂದ ಮತ್ತೊಂದು ಪ್ರದೇಶಕ್ಕೆ ಎಲ್ಲವೂ ಬದಲಾಗುತ್ತೆ..ಭಾಷೆ, ಸಂಸ್ಕೃತಿ, ಜೀವನಶೈಲಿ, ಆಚರಣೆ ಎಲ್ಲವೂ.. ಕೆಲವು ಕಡೆ ನಿಗೂಢ ಸ್ಥಳಗಳು ವಿಚಿತ್ರ ಜನ ಇರ್ತಾರೆ. ಅಂತಹ ವಿಚಿತ್ರ ಜನ ಹಾಗೂ ನಿಗೂಢ ಸ್ಥಳಗಳ ಬಗ್ಗೆ ನಿಮ್ಮಲ್ಲಿ ಕುತೂಹಲ ಇದ್ದರೆ ಮುಂದೆ ನೋಡಿ ತಿಳಿಯಿರಿ..ನೀವು ಸಿನಿಮಾಗಳಲ್ಲಿ ಉದ್ದದ ಜಡೆ ಹೊಂದಿರುವ ಹೆಣ್ಣಿನ ಪಾತ್ರವನ್ನ ನೋಡಿರುತ್ತೀರಾ..ಆದರೆ ಅದು ಸಿನಿಮಾಗೆ ಮಾತ್ರ ಸೀಮಿತ..ಏಕೆಂದರೆ ಅಷ್ಟು ಉದ್ದದ ಜಡೆ ಇರುವವರು ಸಿಗುವುದು ಅಪರೂಪ. ಆದರೆ ಚೀನಾ ದೇಶದ ಹೂವಾಗ್ಲೂ ಎಂಬ ಪ್ರದೇಶದಲ್ಲಿ ಉದ್ದದ ಜಡೆ ಹೊಂದಿರುವ ಹೆಣ್ಣುಮಕ್ಕಳು ತುಂಬಾ ಜನ ಸಿಗ್ತಾರೆ.

ಇಲ್ಲಿ ಎಲ್ಲಾ ಹೆಣ್ಣುಮಕ್ಕಳ ಜಡೆ ತುಂಬಾ ಉದ್ದವಾಗಿದ್ದು ಇವರು ಯಾವುದೇ ಕಾರಣಕ್ಕೂ ತಮ್ಮ ಜಡೆಯನ್ನ ಕಟ್ ಮಾಡೋದಿಲ್ಲ. ಜಡೆ ಉದ್ದ ಹೆಚ್ಚಿದ್ದರೆ ಸುಂದರವಾಗಿ ಕಾಣುತ್ತೇವೆ ಎಂಬುದು ಇಲ್ಲಿರುವವರ ನಂಬಿಕೆ.

Advertisements

ಶನಿ ಸಿಂಗ್ನಾಪುರ..ಈ ಪುಣ್ಯ ಸ್ಥಳದ ಬಗ್ಗೆ ನೀವೆಲ್ಲಾ ಕೇಳಿಯೇ ಇರುತ್ತೀರಿ. ನಮ್ಮ ಪಕ್ಕದ ಮಹಾರಾಷ್ಟ್ರ ರಾಜ್ಯದಲ್ಲಿ ಶನಿ ಸಿಂಗ್ನಾಪುರ ಎಂಬ ಹಳ್ಳಿಯಿದೆ. ಮಹಾರಾಷ್ಟ್ರದ ಅಹಮಾದ್ ನಗರ ಜಿಲ್ಲೆಯ ನೆವಸಾ ತಾಲ್ಲೂಕಿನಲ್ಲಿರುವ ಈ ಗ್ರಾಮದಲ್ಲಿ ಸ್ವಾಮಿ ಶನಿದೇವರು ನೆಲೆಸಿದ್ದಾರೆ. ಆದರೆ ಇಲ್ಲಿ ಶನಿಮಹಾತ್ಮನಿಗೆ ದೇವಸ್ಥಾನವೇ ಇಲ್ಲ. ಈ ಗ್ರಾಮದಲ್ಲಿರುವ ಯಾವುದೇ ಮನೆ, ಕಛೇರಿ, ಅಂಗಡಿ, ಬ್ಯಾಂಕುಗಳಿಗೂ ಕೂಡ ಬಾಗಿಲುಗಳೇ ಇಲ್ಲ. ಕಾರಣ ಈ ಪುಣ್ಯ ಸ್ಥಳದಲ್ಲಿ ಕಳ್ಳತನ ಆಗೋದೇ ಇಲ್ಲ. ಇಲ್ಲಿನ ಜನಕ್ಕೆ ಕಳ್ಳತನ ಎಂದರೆ ಏನಂತೂ ಸಹ ಗೊತ್ತಿಲ್ಲ. ಇನ್ನು ಇಲ್ಲಿನ ಪೊಲೀಸ್ ಠಾಣೆಯಲ್ಲಿ ಇಲ್ಲಿಯ ತನಕ ಒಂದು ಕಳ್ಳತನದ ಪ್ರಕರಣ ಕೂಡ ದಾಖಲಾಗಿಲ್ಲ. ಸಾಕ್ಷಾತ್ ಶನಿ ಮಹಾತ್ಮ ದೇವರೇ ಈ ಪ್ರದೇಶವನ್ನ ಕಾಯುತ್ತಿದ್ದಾರೆ ಎಂಬುದು ಇಲ್ಲಿನ ಜನರ ನಂಬಿಕೆಯಾಗಿದೆ.

ಬೆಂಗ್ ಕಲಾ..ಭೂಲೋಕದ ಸ್ವರ್ಗ ಅಂತಲೇ ಕರೆಯುವ ಇದು ಇಂಡೋನೇಶ್ಯದ ಬಾಲಿಯಲಿರುವ ಪುಟ್ಟ ಹಳ್ಳಿ. ಪ್ರವೋಸೋದ್ಯಮದಲ್ಲಿ ಫೇಮಸ್ ಆಗಿರುವ ಪ್ರದೇಶ ಈ ಬಾಲಿ. ಆದರೆ ಬೆಂಗ್ ಕಲಾ ಎಂಬ ಪ್ರದೇಶದಲ್ಲಿ ವಿಚಿತ್ರ ಜನರಿದ್ದಾರೆ. ಇನ್ನು ಇಲ್ಲಿನವರು ವಿಚಿತ್ರ ಭಾಷೆಯಲ್ಲಿ ಮಾತಾಡ್ತಾರೆ. ಇದಕ್ಕೆ ಸೈನ್ ಲ್ಯಾಂಗ್ವೇಜ್ ಅಂತಲೂ ಕರೆಯುತ್ತಾರೆ. ವಿಚಿತ್ರ ಎಂದರೆ ಕೈ ಸನ್ನೆ ಬಾಯಿಸನ್ನೆಯಿಂದಲೇ ಇಲ್ಲಿನ ಜನ ಮಾತನಾಡ್ತಾರೆ. ಇನ್ನು ಈ ಭಾಷೆಗೂ ಒಂದು ಹೆಸರಿದ್ದು ಕಾಟ ಬೊಲೊಗ್ ಅಂತ ಕರೆಯುತ್ತಾರೆ. ಸ್ನೇಹಿತರೆ ಇಲ್ಲೊಂದು ಪ್ರದೇಶವಿದೆ..ಆ ಸ್ಥಳದ ಬಗ್ಗೆ ನೀವು ತಿಳಿದ್ರೆ ಶಾಕ್ ಆಗೋದು ಖಂಡಿತಾ..ಏಕೆಂದರೆ ಇಲ್ಲಿ ಒಬ್ಬ ಪುರುಷನಿಗೆ ಮೂರು ಜನ ಯುವತಿಯರು.! ಇದರ ಬಗ್ಗೆ ಹೆಚ್ಚಿನ ಮಾಹಿತಿ ತಿಳಿಯುವ ಕುತೂಹಲ ನಿಮ್ಮಲ್ಲಿದ್ದರೆ ಈ ವೀಡಿಯೊ ನೋಡಿ..