Advertisements

ಚಾರ್ಲಿ ಸಿನಿಮಾ ರಿಲೀಸ್ ಯಾವಾಗ! ಹೇಗಿರಲಿದೆ ಗೊತ್ತಾ ಈ ಸಿನಿಮಾ..

Cinema

ಲಾಕ್ ಡೌನ್ ಮುಗಿದ ನಂತರ 100% ಸೀಟು ಭರ್ತಿಗೆ ಅವಕಾಶ ಸಿಕ್ಕ ನಂತರ ಸಾಲು ಸಾಲು ಸಿನಿಮಾಗಳ ಚಿತ್ತಾರ ಬೆಳ್ಳಿ ಪರದೆಯ ಮೇಲೆ ಆಗುತ್ತಿದೆ.. ನಮ್ಮ ಸ್ಯಾಂಡಲ್​ವುಡ್​ನಲ್ಲಿ ವಾರಕ್ಕೆ ಮೂರ್ ಮೂರು ಸಿನಿಮಾಗಳು ತೆರೆಕಾಣುತ್ತಿವೆ.. ಸಿನಿ ಪೈಪೊಟಿಗಳ ನಡುವೆ ಸಿನಿಮಾಗಳ ಸುಗ್ಗಿ ಆಗುತ್ತಿರುವ ಈ ಟೈಮ್​​​ನಲ್ಲಿ ಡಿಂಪಲ್ ಕ್ವೀನ್ ಗಾಗಿ ಕೃಷ್ಣ ಅಜೇಯ್ ರಾವ್ ಗಾಗಿ ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿ ದಾರಿ ಬಿಟ್ಟಿದ್ದಾರೆ.. ಇಂಥದೊಂದು ಸಮಾಚಾರ ಗಾಂಧಿನಗರದ ಗಗನದಲ್ಲಿ ಗಾಳಿಪಟವಾಗಿದೆ.. ರಕ್ಷಿತ್ ಶೆಟ್ಟಿ ನಟನೆಯ 777 ಚಾರ್ಲಿ ಸಿನಿಮಾ ಐದೈದು ಭಾಷೆಗಳಲ್ಲಿ ಡಿಸೆಂಬರ್ 31ನೇ ತಾರೀಖ್ ತೆರೆಕಾಣೋ ಗುರಿಯಲ್ಲಿತ್ತು..

[widget id=”custom_html-3″]

Advertisements

ಡಿಸೆಂಬರ್ 31ನೇ ತಾರೀಖ್ ರಕ್ಷಿತ್ ಶೆಟ್ಟಿ ಪಾಲಿಗೆ ಲಕ್ಕಿ ಡೇ.. ಈ ಕಾರಣಕ್ಕೆ 777 ಚಾರ್ಲಿಯನ್ನ ತೆರೆಗೆ ತಂದು ಬಿಡ ಬೇಕು ಅನ್ನೋ ಲೆಕ್ಕಾಚಾರದಲ್ಲಿತ್ತು ಡೈರೆಕ್ಟರ್ ಕಿರಣ್ ರಾಜ್ ಟೀಮ್.. ಆದ್ರೆ ಈಗ 777 ಚಾರ್ಲಿ ಸಿನಿಮಾ ಡಿಸೆಂಬರ್ 31ನೇ ತಾರೀಖ್ ನಂದು ಬಿಡುಗಡೆ ಆಗುತ್ತಿಲ್ಲ ಅನ್ನೋ ಸಮಾಚಾರ ಸದ್ದು ಮಾಡ್ತಿದೆ.. 777 ಚಾರ್ಲಿ ನಿಗಧಿ ಮಾಡಿಕೊಂಡಿದ್ದ ದಿನಾಂಕದಂದು ಗುರುದೇಶ್ ಪಾಂಡೆ ಮುಂದಾಳತ್ವದ ಕೃಷ್ಣ ಅಜೇಯ್ ರಾವ್ , ರಚಿತಾ ರಾಮ್ ನಟನೆಯ ಲವ್ ಯೂ ರಚ್ಚು ತೆರೆಕಾಣಲಿದೆ ಅನ್ನೋ ಮಾಹಿತಿ ಸಿಕ್ಕಿದೆ.

[widget id=”custom_html-3″]

ರಕ್ಷಿತ್ ಶೆಟ್ಟಿ ಅವರ 777 ಚಾರ್ಲಿ ಸಿನಿಮಾ ಪ್ಯಾನ್ ಇಂಡಯಾ ಸಿನಿಮಾವಾಗಿರೋದ್ರಿಂದ ಪ್ರಚಾರಕ್ಕೆ ಸಮಯ ಮತ್ತು ಬೇರೆ ಬೇರೆ ಭಾಷೆಯ ಪ್ಯಾನ್ ಇಂಡಿಯ ಸಿನಿಮಾಗಳ ರಿಲೀಸ್ ಡೇಟ್ ಫೈನಲ್ ಆಗಿರೋದ್ರಿಂದ 777 ಚಾರ್ಲಿ ಸಿನಿಮಾ ತಂಡ ತನ್ನ ರಿಲೀಸ್ ಡೇಟ್ ಅನ್ನ ಮುಂದುಡವ ಯೋಚನೆಯಲ್ಲಿದೆ.. ಎರಡು ಹಾಡುಗಳನ್ನ ಬಿಟ್ಟು ಸದ್ದು ಮಾಡಿದ್ದ ಶಂಕರ್ ಎಸ್ ರಾಜ್ ಸಾರಥ್ಯದ ಲವ್ ಯೂ ರಚ್ಚು ಡಿಸೆಂಬರ್ 31ನೇ ತಾರೀಖ್ ತೆರೆಕಾಣಲು ಯೋಜನೆ ರೂಪಿಸಿಕೊಂಡಿದೆ.. ಇನೇನು ಕೆಲವೇ ದಿನಗಳಲ್ಲಿ ಅಧಿಕೃತ ಮಾಹಿತಿ ಲವ್ ಯೂ ರಚ್ಚು ತಂಡದಿಂದ ಸಿಗಲಿದೆ.

[widget id=”custom_html-3″]