Advertisements

ಮದುವೆ ಬೇಡ ಎಂದು ಮನೆ ಬಿಟ್ಟು ಹೋದ ಈ ಯುವತಿ , 7 ವರ್ಷಗಳ ನಂತರ ಅದೇ ಉರಿಗೆ ಬಂದದ್ದು ಸರ್ಕಾರಿ ಅಧಿಕಾರಿಯಾಗಿ.. ಎಲ್ಲರೂ ಶಾಕ್..

Inspire

ಸಾಮಾನ್ಯವಾಗಿ ಹೆಣ್ಣು ಮಕ್ಕಳನ್ನು ಮದುವೆ ವಯಸ್ಸಿಗೆ ಬಂದರೆ ಅವರ ಕನಸುಗಳನ್ನು ಮರೆತು ಮೊದಲು ಮದುವೆ ಮಾಡಿ ಗಂಡನ ಮನೆಗೆ ಕಳುಹಿಸಿಬಿಟ್ಟರೆ ಸಾಕು ಎನ್ನುವುದು ಹಲವು ಪೋಷಕರ ಮನಸ್ಥಿತಿ.. ಆದರೆ ಇಲ್ಲೊಬ್ಬ ಯುವತಿಗೂ ಕೂಡ ಮನೆಯಲ್ಲಿ ಮದುವೆ ಮಾಡಿಕೋ ಎಂದು ಒತ್ತಾಯವನ್ನು ಹೇರಿದ್ದರೂ ಆದರೆ ಈ ಯುವತಿ ಮದುವೆ ಮಾಡಿಕೊಳ್ಳಲು ಒಪ್ಪದೆ ಮನೆ ಬಿಟ್ಟು ಸತತ ಏಳು ವರ್ಷಗಳ ಕಾಲ ಕಷ್ಟಪಟ್ಟು ಸಾಧನೆ ಮಾಡಿ ಮತ್ತೆ ಮನೆಗೆ ಸರ್ಕಾರಿ ಅಧಿಕಾರಿಯಾಗಿ ಬಂದಿದ್ದಾರೆ..

Advertisements

ಮೀರತ್ ನ ಸಂಜು ರಾಣಿ ಎಂಬುವವರೇ ಈ ಸಾಧನೆ ಮಾಡಿರುವುದು.. ಇನ್ನೂ ಇವರ ತಾಯಿ ಅ’ನಾರೋಗ್ಯದಿಂದ 2013 ರಲ್ಲಿ ತೀರಿಕೊಳ್ಳುತ್ತಾರೆ.. ನಂತರ ತಾಯಿಯನ್ನು ಕಳೆದುಕೊಂಡ ಸಂಜುರಾಣಿ ಆರ್ ಜಿ ಕಾಲೇಜಿನಲ್ಲಿ ಪದವಿ ಮುಗಿಸಿ, ದೆಹಲಿಯಲ್ಲಿ ತಮ್ಮ ವಿದ್ಯಾಭ್ಯಾಸವನ್ನು ಮುಂದುವರೆಸುತ್ತಿದ್ದರು.. ನಂತರ ಕುಟುಂಬದವರು ಮದುವೆ ಮಾಡಿಕೊಳ್ಳುವಂತೆ ಮನೆಯಲ್ಲಿ ಒ’ತ್ತಾಯ ಮಾಡುತ್ತಾರೆ..

ಆದರೆ ಸಂಜು ರಾಣಿಯವರು ನಾನು ಜೀವನದಲ್ಲಿ ಏನಾದರೂ ಸಾಧನೆ ಮಾಡಬೇಕು ಎಂದು ಕನಸನ್ನು ಕಟ್ಟಿಕೊಂಡಿದ್ದರು.. ಕೊನೆಗೆ ನನಗೆ ಕುಟುಂಬಕ್ಕಿಂತ ಗುರಿ ಮುಖ್ಯ ಎಂದು ಮನೆಯನ್ನು ಬಿಡುತ್ತಾರೆ.. ಅದರಂತೆಯೇ ಮನೆ ಬಿಟ್ಟು ಬಂದ ಇವರು ಏಳು ವರ್ಷಗಳಲ್ಲಿ ಕಷ್ಟಪಟ್ಟು ಓದನ್ನು ಮುಂದುವರೆಸಿದ್ದಾರೆ.. ನಂತರ ವಾಣಿಜ್ಯ ಸೇವೆ ಅಧಿಕಾರಿಯಾಗಲು.. ಸಾರ್ವಜನಿಕ ಸೇವಾ ಆಯೋಗದ ಪಿ.ಎಸ್.ಸಿ ಪರೀಕ್ಷೆಯನ್ನು ಬರೆದು ಇಂದು ಉತ್ತೀರ್ಣರಾಗಿದ್ದಾರೆ..

ಇನ್ನೂ ಸಂಜನಾ ಎಳು ವರ್ಷದಲ್ಲಿ ತಮ್ಮ ಗುರಿಯನ್ನು ತಲುಪಲು ಏನೆಲ್ಲಾ ಕಷ್ಟ ಪಟ್ಟಿದ್ದಾರೆ ನೋಡಿ.. ನಾನು ಮನೆಬಿಟ್ಟಾಗ ಕೈಯಲ್ಲಿ ಒಂದು ರೂಪಾಯಿ ಇರಲಿಲ್ಲ.. ಕೊನೆಗೆ ಕಷ್ಟಪಟ್ಟು ಒಂದು ಬಾಡಿಗೇ ರೂಮ್ ತೆಗೆದುಕೊಂಡೆ.. ಆ ರೋಮಿನಲ್ಲೇ ಮಕ್ಕಳಿಗೆ ಟ್ಯೂಶನ್ ಮಾಡುತ್ತಿದ್ದೆ.. ನಂತರ ಖಾಸಗಿ ಶಾಲೆಯಲ್ಲಿ ಪಾರ್ಟ್ ಟೈಮ್ ಟೀಚರ್ ಹಾಗಿ ಕೆಲಸ ಮಾಡಿ, ಇದರ ಜೊತೆಯಲ್ಲಿ ವಿದ್ಯಾಬ್ಯಾಸವನ್ನು ಮಾಡಿಕೊಂಡು ಪರೀಕ್ಷೆಯನ್ನು ಬರೆದಿದ್ದು ಇಂದು ಉತ್ತೀರ್ಣರಾಗಿದ್ದೇನೆ.. ಜಿಲ್ಲಾಧಿಕಾರಿ ಆಗುವ ಕನಸು ಇದೆ ಎಂದು ತಮ್ಮ ಸಾಧನೆಯ ಹಾದಿಯನ್ನು ತಿಳಿಸುತ್ತಾ ಮುಂದಿನ ಗುರಿಯನ್ನು ತಿಳಿಸಿದ್ದಾರೆ..