Advertisements

7 ಸಾವಿರ ಕೋಟಿಗೆ ಅಧಿಪತಿ, ಆದರೆ ಬೇಕರಿಯಲ್ಲಿ ಕೆಲಸ ಮಾಡುತ್ತಿದ್ದಾನೆ! ಕಾರಣ ಏನು ಗೊತ್ತಾ?

Uncategorized

‌ನಮಸ್ತೆ ಸ್ನೇಹಿತರೆ, ಅಪ್ಪ ತುಂಬಾ ಆಸ್ತಿ ಮಾಡಿದ್ದಾರೆ ನಾನು ಮೋಜಿ ಮಸ್ತಿ ಮಾಡುತ್ತೇನೆ ಎನ್ನುವ ಮಕ್ಕಳು ಕೆಲವರು ಇದ್ದಾರೆ.. ಅಪ್ಪ ಮಾಡಿದ ಆಸ್ತಿಯ ಹಿಂದೆ ಎಂತಹ ಪರಿಶ್ರಮ ಇದೆ ಎನ್ನುವುದು ಮಕ್ಕಳಿಗೆ ತಿಳಿದಿರುವುದಿಲ್ಲ.. ಈಗಾಗಿ ಇಲ್ಲೊಬ್ಬ ಕೋಟ್ಯಾಂತರ ವ್ಯವಹಾರ ಮಾಡುವ ಉದ್ಯಮಿಯೊಬ್ಬರು ಮಗನಿಗೆ ಹಣದ ಬೆಲೆ ತಿಳಿಯಲಿ, ನಾನು ಪಟ್ಟ ಕಷ್ಟ ಅವನಿಗೂ ತಿಳಿಯಲಿ ಏಂದು ಏನು ಮಾಡಿದ್ದಾರೆ ನೋಡಿ.. ಇದ್ಯಾವುದೋ ಸಿನಿಮಾ ಕಥೆ ಹೇಳ್ತಾಯಿದಿವಿ ಅಂತ ಅನ್ಕೊಬೇಡಿ ಇದು ತಂದೆ ಮಗನ ನಡುವೆ ನಡೆದಿರುವಂತಹ ರಿಯಲ್ ಸ್ಟೋರಿ..

Advertisements

ಸಾ’ವಜಿ ದೊಲಾಕಿಯಾ ಅನ್ನುವವರು ಪ್ರತಿವರ್ಷ ತನ್ನ ಸಿಬ್ಬಂದಿಗಳಿಗೆ 400 ಅಪಾರ್ಟ್ಮೆಂಟ್ ಗಳು ಹಾಗೂ ಸಾವಿರ ಕಾರುಗಳನ್ನು ಕೊಟ್ಟು ದೇಶದಲ್ಲೇ ಪ್ರಸಿದ್ಧಿಯಾಗಿದ್ದಾರೆ.. ಹರೇ ಕೃಷ್ಣ ಡೈಮಂಡ್ ಕಂಪನಿ ಓನರ್ ಆಗಿರುವ ಇವರ ಒಟ್ಟು ಆಸ್ತಿ 7000 ಕೋಟಿ.. ಸಾ’ವಜಿ ದೊಲಾಕಿಯಾ ಅವರ ಕಠಿಣ ಶ್ರಮದ ಫಲ ಇಂದು ದೊಡ್ಡ ಉದ್ಯಮಿಯಾಗಿದ್ದಾರೆ.. ಇನ್ನು ಇವರ ಮಗ ದ್ರವ್ಯ ದೊಲಾಕಿಯಾ ಅಮೇರಿಕಾದಲ್ಲಿ ಎಂಬಿಎ ಮುಗಿಸಿಕೊಂಡು ಬಂದಿದ್ದು ಇತನಿಗೆ ತನ್ನ ಕಂಪನಿ ಜವಾಬ್ದಾರಿ ಕೊಡಲು ಸಾ’ವಜಿ ದೊಲಾಕಿಯಾ ಮುಂದಾಗುತ್ತಾರೆ.. ಆದರೆ ಮಗ ಐಶಾರಾಮಿ ಜೀವನದಲ್ಲಿ ಮುಳುಗಿದ್ದು ಆತನಿಗೆ ಹಣದ ಬೆಲೆ ತಿಳಿದಿಲ್ಲ, ನಾನು ಪಟ್ಟ ಕಷ್ಟ ಅವನಿಗೆ ಅರಿವು ಮಾಡಿಸಬೇಕೆಂದು ಒಂದು ಪ್ಲಾನ್ ಮಾಡುತ್ತಾರೆ..

ಅದರಂತೆಯೇ ಮಗ ದ್ರವ್ಯಾ ಕೈಗೆ 7000 ರೂಪಾಯಿ ಕೊಟ್ಟ ಸಾ’ವಜಿ ದೊಲಾಕಿಯಾ ನೀನು ಎಲ್ಲಿಯಾದರೂ ಹೋಗಿ ಸಾಮಾನ್ಯ ಜನರಲ್ಲಿ ಬೆರೆತು ದುಡಿಯಬೇಕು ಎಂದು ನಾಲ್ಕು ಷರತ್ತುಗಳನ್ನು ಮುಂದಿಡುತ್ತಾರೆ.. ನೀನು ನನ್ನ ಮಗ ಎಂದು ಎಲ್ಲಿಯೂ ಕೂಡ ಹೇಳಿಕೊಳ್ಳಬಾರದು, ಕಷ್ಟ ಪಟ್ಟು ಹಣ ದುಡಿಯಬೇಕು, ಮೊಬೈಲ್ ಬಳಸಬಾರದು, ಒಂದೇ ಸ್ಥಳದಲ್ಲಿ ವಾರಕ್ಕಿಂತ ಹೆಚ್ಚು ದಿನ ಕೆಲಸ ಮಾಡುವಾಗಿಲ್ಲ.. ನಿನ್ನ ತಾಯಿ ಹಾಗೂ ಮೂವರೂ ಸಹೋದರಿಯರ ಜೊತೆ ಮಾತನಾಡಬಾರದು, ನಿನಗೇನಾದ್ರೂ ತುಂಬಾ ಎ’ಮರ್ಜೆನ್ಸಿ ಇದ್ದರೆ ಮಾತ್ರ ಯಾರಲ್ಲಾದರು ಮೊಬೈಲ್ ತೆಗೆದುಕೊಂಡು ನನಗೆ ಕಾಲ್ ಮಾಡು ಎಂದು ಹೇಳುತ್ತಾರೆ..

ಇನ್ನು ದ್ರವ್ಯ ತಂದೆಯ ಮಾತನ್ನು ಚಾಲೆಂಜ್ ಹಾಗಿ ತೆಗೆದುಕೊಂಡು ಕೇರಳದ ಕೊಚ್ಚಿಗೆ ಹೋಗುತ್ತಾನೆ.. ಆದರೆ ಕೊಚ್ಚಿಗೆ ಹೋಗುವಷ್ಟರಲ್ಲಿ ತಂದೆ ಕೊಟ್ಟಿದ್ದ 7000 ರೂಪಾಯಿಯನ್ನ ಖರ್ಚು ಮಾಡಿಬಿಟ್ಟಿದ್ದ.. ದ್ರವ್ಯ ದೊಲಾಕಿಯಾಗೆ ಕೇರಳದ ಬಾಷೆ ಬರದಿದ್ದ ಕಾರಣ ಎಲ್ಲಿಯೂ ಕೂಡ ಕೆಲಸ ಸಿಗಲಿಲ್ಲ.. ಒಂದು ವಾರ ಅಲ್ಲಿ ಇಲ್ಲಿ ಊಟವನ್ನ ಕೇಳಿ ಬಸ್ಟ್ ಸ್ಟಾಪ್ ನಲ್ಲೇ ಮಲಗಿದ್ದ ದ್ರವ್ಯಾಗೆ ಬೇಕರಿಯೊಂದರಲ್ಲಿ ಕೆಲಸ ಸಿಗುತ್ತದೆ.. ಬೇಕರಿಯಲ್ಲಿ ಒಂದು ವಾರ ಕೆಲಸ ಮಾಡಿ ನಂತರ ಆರ್ ಡಿ ದಾಸ್ ಶೊರೂಮ್ ನಲ್ಲಿ ಕೆಲಸಕ್ಕೆ ಸೇರಿಕೊಳ್ಳುತ್ತಾನೆ ಆದರೆ ಶೊರೂಮ್ ನಲ್ಲಿ ದ್ರವ್ಯ ಆಕ್ಟಿವ್ ಹಾಗಿ ಇರದಿದ್ದ ಕಾರಣ ಎರಡೇ ದಿನಕ್ಕೆ ಕೆಲಸದಿಂದ ತೆಗೆದುಬಿಡುತ್ತಾರೆ..

ಕಾಲಸೆಂಟರ್, ಚಪ್ಪಲಿ ಅಂಗಡಿ ಸೇರಿದಂತೆ ಹಲವು ಕಡೆ ಕೆಲಸ ಮಾಡುತ್ತಾನೆ. ಈಗೇ ಒಂದು ದಿನ ಮೆಗ್ ಡೊನಾಲ್ಡ್ಸ್ ಸಲ್ಲಿ ಕೆಲಸ ಮಾಡುತ್ತಿದ್ದ ದ್ರವ್ಯ ಅವರನ್ನು ನೋಡಿದ ಸಾ’ವಜಿ ಅಸಿಸ್ಟೆಂಟ್ ವಾಪಸ್ ಬರುವಂತೆ ಹೇಳುತ್ತಾರೆ.. ನಂತರ ಈತನ ಬಗ್ಗೆ ಎಲ್ಲಾ ಕಡೆ ಸುದ್ದಿಯಾಗಿ ಕೆಲಸ ಮಾಡಿಸಿಕೊಂಡವರು, ಬೈದವರಂತೂ ಒಂದು ಕ್ಷಣ ಬೆರಗಾಗುತ್ತಾರೆ.. ನಂತರ ದ್ರವ್ಯ ತಂದೆ ಸಾ’ವಜಿ ದೊಲಾಕಿಯಾ ಬಳಿ ಹೋಗಿ ನನಗೆ ನಿಜವಾದ ಜೀವನ ಏನು ಅನ್ನುವುದು ಅರ್ಥವಾಗಿದೆ, ನಿಮ್ಮ ಸಾಧನೆಯ ಹಿಂದೆ ಎಷ್ಟೊಂದು ಕಠಿಣ ಪ್ರರಿಶ್ರಮವಿದೆ ಎಂದು ಹೇಳುತ್ತಾನೆ.. ಸ್ನೇಹಿತರೆ ನೋಡಿದರಲ್ವಾ ತಂದೆ ಮಗನ ನಡುವೆ ನಡೆದಂತಹ ನಿಜವಾದ ಸ್ಟೋರಿ. ಈ ರಿಯಲ್ ಸ್ಟೋರಿ ಬಗ್ಗೆ ನಿಮ್ಮ ಅನಿಸಿಕೆಯನ್ನ ತಿಳಿಸಿ..