Advertisements

ಏನೇ ಆದರೂ ನಾನು 1 ರೂಪಾಯಿಗೇ ಇಡ್ಲಿ ಮಾರುತ್ತೇನೆ. ಇಳಿ ವಯಸ್ಸಲ್ಲೂ ಮಾನವೀಯತೆ ಮೆರೆಯುತ್ತಿರುವ ಅಜ್ಜಿ.

News

ಈ ಲಾಕ್ ಡೌನ್ ವೇಳೆ ಅಡುಗೆ ಸಾಮಾಗ್ರಿಗಳ ಬೆಲೆ ಏರಿಕೆ ಆಗಿದೆ. ದಿನನಿತ್ಯ ಬಳಕೆ ಮಾಡುವ ವಸ್ತುಗಳ ಬೆಲೆಯೂ ಕೂಡ ದುಬಾರಿಯಾಗಿದೆ. ಕೆಲವರು ಇದೇ ಸರಿಯಾದ ಸಮಯ ಎಂದು ದುಪ್ಪಟ್ಟು ಬೆಲೆಗೆ ಅಗತ್ಯ ವಸ್ತುಗಳನ್ನು ಮಾರಾಟ ಮಾಡಿ ಹಣವನ್ನು ಗಳಿಸುತ್ತಿದ್ದಾರೆ. ಆದರೆ ಇಲ್ಲೊಬ್ಬ ಬಡ ಅಜ್ಜಿ 1 ರೂ ಬೆಲೆಗೆ ಇಡ್ಲಿಯನ್ನು ಮಾರಾಟ ಮಾಡುತ್ತಿದ್ದಾರೆ.

Advertisements

ತಮಿಳುನಾಡಿನ ವಡಿವೇಲಪಾಲ್ಯಂ ಗ್ರಾಮದ ಇಡ್ಲಿ ಅಜ್ಜಿ ಎಂದು ಪ್ರಸಿದ್ಧ ಹೊಂದಿರುವ 85 ವರ್ಷದ ಅಜ್ಜಿ ಕಮಲಥಾಲ್ ಈ ಕೊರೊನಾ ಲಾಕ್ ಡೌನ್ ವೇಳೆಯಲ್ಲೂ ಸಹ ಕೇವಲ ಒಂದು ರೂಪಾಯಿಗೆ ಇಡ್ಲಿಯನ್ನು ಮಾರಾಟ ಮಾಡುತ್ತಿದ್ದಾರೆ. ಕೆಲವರು ಸಾಮಾಗ್ರಿಗಳ ಮೇಲೆ ದುಪ್ಪಟ್ಟು ಬೆಲೆಗೆ ಮಾರುತ್ತಿದ್ದಾರೆ ಆದರೆ ಈ ಅಜ್ಜಿ ಸಾಮಾಗ್ರಿಗಳ ಬೆಲೆ ದುಬಾರಿಯಾದರು ಬಡವರ ಅಸಿವು ನೀಗಿಸಲು ಒಂದು ರೂಪಾಯಿಗೆ ಇಡ್ಲಿಯನ್ನು ಮಾರಾಟ ಮಾಡಿ ಮಾನವೀಯತೆ ಮೆರೆದಿದ್ದಾರೆ.

ಅಜ್ಜಿ ಕಮಲಥಾಲ್ ವಡಿವೇಲಪಾಲ್ಯಂ ಗ್ರಾಮದ ನಿವಾಸಿಯಾಗಿದ್ದು. ಪ್ರತಿದಿನ ಬೆಳಗ್ಗೆ ತಮ್ಮ ಹೋಟೆಲ್ ನ ಬಾಗಿಲು ತೆಗೆದು, ಸ್ವಾದಿಷ್ಟ ಹಾಗೂ ರುಚಿಕರವಾದ ಚಟ್ನಿ, ಸಾಂಬಾರ್ ಜೊತೆಗೆ ಅತಿ ಕಡಿಮೆ 1 ಒಂದು ರೂಪಾಯಿಯ ಬೆಲೆಗೆ 30 ವರ್ಷದಿಂದ ಇದೇ ರೀತಿ ಇಡ್ಲಿ ಮಾರಾಟ ಮಾಡಿ ಜನರ ಹಸಿವು ನೀಗಿಸುತ್ತ ತಮ್ಮ ಜೀವನವನ್ನು ನಡೆಸುತ್ತಿದ್ದಾರೆ.

ಈ ಲಾಕ್ ಡೌನ್ ವೇಳೆ ಅಡುಗೆ ಸಾಮಗ್ರಿಗಳ ಬೆಲೆ ದುಪ್ಪಟ್ಟಾಗಿದೆ. ಇಂತಹ ಸಂಕಷ್ಟದ ಪರಿಸ್ಥಿತಿಯ ಸಂದರ್ಬದಲ್ಲಿ ಬಡವರು ಹೆಚ್ಚು ಹಣವನ್ನು ನೀಡಿ ಆಹಾರವನ್ನು ಪಡೆಯಲು ಕಷ್ಟವಾಗುತ್ತದೆ. ಲಾಭಕ್ಕಾಗಿ ನಾನು ಈ ಕೆಲಸ ಮಾಡುತ್ತಿಲ್ಲ. ಬಡವರಿಗೆ ಹಸಿದು ಬಂದವರಿಗೆ ಆಹಾರ ಕೊಡಬೇಕು ಎನ್ನುವುದು ನನ್ನ ಆಶಯ. ಏನೇ ಹಾಗಲಿ ಸಾಮಾಗ್ರಿಗಳ ಬೆಲೆ ಹೆಚ್ಚಾದರೂ ನಾನು 1 ರೂಪಾಯಿಗೆ ಇಡ್ಲಿಯನ್ನು ಮಾರಾಟ ಮಾಡುತ್ತೇನೆ ಎನ್ನುತ್ತಾರೆ ಈ ಅಜ್ಜಿ.

ಸಾಮಗ್ರಿಗಳ ಬೆಲೆ ದುಪ್ಪಟ್ಟು ಹಾಗಿರುವುದರಿಂದ. ಇಡ್ಲಿ ತಯಾರು ಮಾಡಲು ಕಷ್ಟಕರ. ಉದ್ದಿನ ಬೇಳೆಯ ಬೆಲೆ ಕೆಜಿಗೆ 100 ರಿಂದ 150 ರೂಪಾಯಿ ಆಗಿದೆ. ಮೆಣಸು 150 ರಿಂದ 200 ರುಪಾಯಿ ಅಗಿದೆ ಆದರೂ ಕೂಡ ನಾನು ಇಡ್ಲಿ ಕಡಿಮೆ ಬೆಲೆಗೆ ಮಾರಾಟ ಮಾಡುತ್ತೇನೆ. ಆದರೆ ಹಲವರು ಅಡುಗೆಗೆ ದಿನಸಿ ಸಾಮಾಗ್ರಿಗಳು ತರಕಾರಿಗಳನ್ನು ನನಗೆ ತಂದುಕೊಟ್ಟು ಸಹಾಯವನ್ನು ಮಾಡುತ್ತಾರೆ. ಹೇಗೋ ಈ ಪರಿಸ್ಥಿತಿಯನ್ನು ನಾನು ನಿಬಾಯಿಸುತ್ತೇನೆ ಎಂದು ಅಜ್ಜಿ ಏಳಿದ್ದಾರೆ.

ಬೇರೆ ಪ್ರದೇಶಗಳಿಂದ ಬಂದ ಜನರು ಲಾಕ್ ಡೌನ್ ನಲ್ಲಿ ಸಿಲುಕಿಕೊಂಡು ಸಾಕಷ್ಟು ಮಂದಿ ಸಂಕಷ್ಟದಲ್ಲಿದ್ದಾರೆ ಅವರಿಗೆ ನನ್ನಿಂದ ಸಹಾಯವಾಗಲಿ ಎಂದು ಅಜ್ಜಿ ದಿನಕ್ಕೆ 300ಕ್ಕೂ ಹೆಚ್ಚು ಮಂದಿಗೆ ಸಾಮಾಜಿಕ ಅಂತರ ಕಾಯ್ದುಕೊಂಡು ಗ್ರಾಹಕರಿಕೆ ಇಡ್ಲಿ ಪಾರ್ಸಲ್ ಮಾಡುತ್ತಿದ್ದಾರೆ. ಇಂದಿಗೂ ಇಡ್ಲಿಯನ್ನು 1 ರೂಪಾಯಿಗೆ ಮಾರುತ್ತಾ ಮಾನವೀಯತೆ ಮೆರೆದಿದ್ದಾರೆ.