ನಮಸ್ತೆ ಸ್ನೇಹಿತರೆ, ಅಮೇರಿಕಾದ ಟೆಕ್ಸಸ್ ನಲ್ಲಿ ವಾಸವಿದ್ದ ಎಮಿಲ್ ನಾಡಲ್ ಎಂಬ ವ್ಯಕ್ತಿ ಮದ್ಯಮ ವರ್ಗದವನಾಗಿದ್ದ.. ಇನ್ನು ಇವರು ಮನೆಗೆ ಒಂದು ಟೇಬಲ್ ಬೇಕೆಂದು ಸೆಕೆಂಡ್ಸ್ ಫರ್ನೀಚರ್ ಶಾಪ್ ಗೆ ಹೋಗುತ್ತಾರೆ. ಇನ್ನು ಅಲ್ಲಿ 90 ವರ್ಷದ ಹಳೆಯ ಟೇಬಲ್ ಅನ್ನು ನೋಡಿ ತುಂಬಾ ಇಷ್ಟ ಪಟ್ಟ ಈ ವ್ಯಕ್ತಿ ನೂರು ಡಾಲರ್ ಕೊಟ್ಟು ಖರೀದಿ ಮಾಡುತ್ತಾರೆ.. ಇನ್ನು ಈ ಟೇಬಲ್ ಅನ್ನು ಸಾಗಿಸುವುದಕ್ಕೆ ಸ್ನೇಹಿತನಿಗೆ ಕಾಲ್ ಮಾಡಿ ಜೀಪ್ ತೆಗೆದುಕೊಂಡು ಬರಲು ಹೇಳಿ ಎಮಿಲ್ ಅವರು ಸ್ನೇಹಿತನ ಜೀಪ್ ನಲ್ಲೇ ಈ ಟೇಬಲ್ ಇಟ್ಟುಕೊಂಡು ಮನೆಗೆ ತೆರಳುತ್ತಾನೆ..

ಆದರೆ ಹೋಗುವ ಮಧ್ಯ ದಾರಿಯಲ್ಲಿ ಟೇಬಲ್ ನಲ್ಲಿ ತುಂಬಾ ಸೌಂಡ್ ಆಗುತ್ತಿತ್ತು.. ಕೊನೆಗೆ ಟೇಬಲ್ ಅನ್ನು ಮನೆಗೆ ಸಾಗಿಸಿ ಇದರಲ್ಲಿ ಏನಿದೆ ನೊಡೋಣ ಎಂದು ಟೇಬಲ್ ಡೋರ್ ಓಪನ್ ಮಾಡುತ್ತಾರೆ.. ನಂತರ ಡೋರ್ ನಲ್ಲಿ ಇದ್ದ ವಸ್ತುಗಳನ್ನು ನೋಡಿದ ಈ ವ್ಯಕ್ತಿ ಒಂದು ಕ್ಷಣ ಶಾಕ್ ಆಗುತ್ತಾನೆ.. ಟೇಬಲ್ ನಲ್ಲಿ ಬಂಗಾರದ ಆಭರಣಗಳು. ಹಳೆಯ ಕರೆನ್ಸಿ, ಈಗೆ ಹಲಾವರು ಅಮೂಲ್ಯವಾದ ವಸ್ತುಗಳನ್ನು ನೋಡುತ್ತಾರೆ.. ಇದನ್ನು ನೋಡಿ ಶಾಕ್ ಅದ ಎಮಿಲ್ ಅವರು ಈ ವಸ್ತುಗಳ ಬೆಲೆ ಎಷ್ಟಿರಬಹುದು ಎಂದು ತಿಳಿದುಕೊಂಡಾಗ ಬರೋಬ್ಬರಿ 98 ಲಕ್ಷ ರೂಪಾಯಿ ಬೆಲೆ ಬಾಳುತ್ತದೆ ಎನ್ನುವುದು ಗೊತ್ತಾಗುತ್ತದೆ..

ನಂತರ ಈ ವ್ಯಕ್ತಿ ಇದನ್ನೆಲ್ಲಾ ಮಾರಿ ಜೀವನಕ್ಕೆ ಉಪಯೋಗಿಸಿಕೊಂಡ ಎಂದು ನಿಮ್ಮ ತಲೆಯಲ್ಲಿ ಅಲೋಚನೆ ಬಂದಿರಬಹುದು.. ಆದರೇ ಈ ವ್ಯಕ್ತಿ ಹಾಗೆ ಮಾಡಲಿಲ್ಲ.. ಎಮಿಲ್ ಅವರು ನಾನು ಟೇಬಲ್ ಮಾತ್ರ ಖರೀದಿ ಮಾಡಿದ್ದೇನೆ ಅದರಲ್ಲಿ ಇರುವ ವಸ್ತುಗಳು ನನ್ನದಲ್ಲ ಎಂದು ಭಾವಿಸಿ.. ಈ ಟೇಬಲ್ ನ ನಿಜವಾದ ಓನರ್ ಯಾರು ಎಂದು ತಿಳಿದುಕೊಂಡು ಹೋಗಿ ಎಲ್ಲಾ ವಸ್ತುಗಳನ್ನು ವಾಪಸ್ ಕೊಡುತ್ತಾರೆ.. ಟೇಬಲ್ ನಲ್ಲಿ ಬೆಲೆಬಾಳುವ ವಸ್ತುಗಳು ಇವೆ ಎಂದು ಓನರ್ ಗೆ ಹೇಳಿದಾಗ ಅವರು ಕೂಡ ಶಾಕ್ ಆಗಿ ಅದು ನಮ್ಮ ತಾತನ ಟೇಬಲ್..

ನಮ್ಮ ತಾತ ಮ’ರಣ ಹೊಂದಿದ ನಂತರ ಆ ಟೆಬಲ್ ಅನ್ನು ಮಾರಿದೆ.. ಆದರೆ ಈ ಟೇಬಲ್ ಹೊಳಗೆ ಎನಿದೆ ಎಂದು ನೋಡಿರಲಿಲ್ಲ ಎಂದು ಹೇಳುತ್ತಾನೆ.. ಕೊನೆಗೆ ಎಮಿಲ್ ಎಲ್ಲಾ ವಸ್ತುಗಳನ್ನು ಆ ವ್ಯಕ್ತಿಗೆ ನೀಡುತ್ತಾನೆ.. ಸ್ನೇಹಿತರೆ ಈಗಿನ ಕಾಲದಲ್ಲಿ ರೋಡಲ್ಲಿ ಯಾರಾದ್ರೂ ಬಿದ್ದರೆ ಅವರನ್ನ ಕಾಪಾಡೋ ಮಾನವೀಯತೆ ಇರೋದಿಲ್ಲ ಬದಲಾಗಿ ಅವರ ಅತ್ತಿರ ಏನಿದೆ ಎಂದು ನೋಡಿ ಕಿತ್ತುಕೊಂಡು ಹೋಗುವಂತಾ ಕಾಲ ಇದು.. ಅಂತಹವರ ನಡುವೆ ಎಮಿಲ್ ಅಂತ ವ್ಯಕ್ತಿ ಇರುವುದು ನಿಜಕ್ಕೂ ಗ್ರೇಟ್ ..