1940ರಿಂದ 1990ರ ಮಧ್ಯೆ ಹುಟ್ಟಿರೋ ನಾವು ಅದ್ಭುತವಾದ ಮಂದಿ. ನಮ್ಮ ಬದುಕೇ ಇದಕ್ಕೆ ಜೀವಂತ ಸಾಕ್ಷಿ. ಶಾಲೆಗಳಿಗೆ ನಾವು ಪ್ರಾಣಿಗಳಂತೆ ಕಂತೆ ಕಂತೆ ಪುಸ್ತಕಗಳನ್ನ ಒತ್ತು ಹೋಗಲಿಲ್ಲ. ಆಟ ಆಡುವಾಗ ಸೈಕಲ್ ಸವಾರಿ ಮಾಡುವಾಗ ನಮಗೆ ಹೆಲ್ಮೆಟ್ ಧರಿಸಿಕೊಳ್ಳುವ ಧಾವಂತವಿರಲಿಲ್ಲ. ಶಾಲೆ ಮುಗಿದ ಮೇಲೆ ಮುಸ್ಸಂಜೆಯಾಗುವವರೆಗೂ ನಾವು ಆಟವಾಡುತ್ತಿದ್ದೆವು. ನಮಗೆ ಟಿವಿ, ಕಂಪ್ಯೂಟರ್ ಗಳ ಗೊಡವೆ ಇರಲಿಲ್ಲ. ನಮ್ಮ ನಿಜವಾದ ಗೆಳೆಯರೊಂದಿಗಷ್ಟೇ ನಾವು ಆಡಿದೆವು, ಕುಣಿದಾಡಿದೆವು, ಜಗಳ ಆಡಿದೆವು, ಮಾತನಾಡಿದೆವು. ನಾವು ಮುಖ ನೋಡದೆ ಎದುರು ಬದುರು ಭೇಟಿಯಾಗದ ಆನ್ಲೈನ್ ಗೆಳೆಯರೊಂದಿಗೆ ಅಲ್ಲ.

ಬಾಯಾರಿಕೆಯಾದಾಗ ಧಾರಾಳವಾಗಿ ನಳ್ಳಿ ನೀರನ್ನೋ, ಹಳ್ಳದ ನೀರನ್ನೋ, ಕೆರೆಯ ನೀರನ್ನೋ ಕುಡಿದೆವು. ಬಾಟಲ್ ನೀರಿಗಾಗಿ ಹುಡುಕಾಡಲಿಲ್ಲ. ಒಂದೇ ಹಣ್ಣನ್ನ ನಾಲ್ಕು ಮಂದಿ ಸೇರಿ ತಿಂದಾಗಲೂ, ಒಂದೇ ಗ್ಲಾಸಿನಲ್ಲಿ ನಾಲ್ಕು ಮಂದಿ ಕಚ್ಚಿ ನೀರು ಕುಡಿದಾಗಲೂ ನಮಗೆ ಯಾವುದೇ ರೋಗ ಬರಲಿಲ್ಲ. ಆ ಭೀತಿಯು ನಮಗಿರಲಿಲ್ಲ. ತಟ್ಟೆ ತುಂಬಾ ಸಿಹಿ ತಿಂಡಿಗಳನ್ನ ತಿಂದರೂ, ದಂಡಿ, ದಂಡಿ ಅನ್ನ ಉಂಡರೂ ನಮ್ಮ ತೂಕ ಹೆಚ್ಚಾಗಲಿಲ್ಲ.
ಬರಿಗಾಲಲ್ಲೇ ಊರು ಸುತ್ತಿದರೂ ನಮ್ಮ ಪಾದಗಳಿಗೆ ಏನೂ ಆಗಲಿಲ್ಲ. ಕ್ರಿಮಿಕೀಟಗಳು ಹತ್ತಿಕೊಳ್ಳಲಿಲ್ಲ. ವಿಟಮಿನ್, ಪ್ರೊಟೀನ್, ಕ್ಯಾಲ್ಸಿಯಂ, ಸೋಡಿಯಂ, ಪೊಟ್ಯಾಸಿಯಮ್, ಮಣ್ಣು ಮಸಿ ಅಂತ ನಾವು ಮಾತ್ರೆ ನುಂಗಲಿಲ್ಲ. ಸಿರಪ್ ಕುಡಿಯಲಿಲ್ಲ. ಆದರೂ ನಾವು ಆರೋಗ್ಯವಾಗಿದ್ದೇವೆ. ನಮ್ಮ ಆಟಿಕೆಗಳನ್ನ ನಾವೇ ತಯಾರುಮಾಡಿಕೊಂಡು ಆಡಿದವರು ನಾವು. ಅದಕ್ಕಾಗಿ ಅಮ್ಮ ಅಪ್ಪ, ಆಂಟಿ, ಅಂಕಲ್ ಗಳು ಸಾವಿರಾರು ರೂಪಾಯಿಗಳನ್ನ ಸುರಿಯಲಿಲ್ಲ.

ಒಂದು ಹೊತ್ತಿನ ಗಂಜಿ ಊಟವನ್ನ ನೆಮ್ಮದಿಯಾಗಿ ಉಣ್ಣುತ್ತಿದ್ದೆವು. ಬಗೆ ಬಗೆಯ ಫಲ್ಯಗಳು ಇರಲಿಲ್ಲ. ನಮ್ಮ ಅಪ್ಪ ಅಮ್ಮ ಅಸಹ್ಯ ಹುಟ್ಟಿಸುವಷ್ಟು ಶ್ರೀಮಂತರಾಗಿರಲಿಲ್ಲ. ಅವರು ಹಣ ಮತ್ತು ಸಂಪತ್ತನ್ನು ಸಂಗ್ರಹಿಸುವುದಕ್ಕಾಗಿ ಬದುಕಿರಲಿಲ್ಲ. ಅವರು ಈ ಭೋಗವಸ್ತುಗಳಿಗಿಂತಲೂ ಹೆಚ್ಚಾಗಿ ಮಕ್ಕಳಿಗೆ ಪ್ರೀತಿ ಕೊಟ್ಟರು. ನಮ್ಮ ಭಾವನೆಗಳನ್ನ ಹಂಚಿಕೊಳ್ಳಲು ನಾವು ಮೊಬೈಲ್ ಫೋನ್ ಗಳನ್ನ ಉಪಯೋಗಿಸಲಿಲ್ಲ. ಆ ಸಂಕೇತಗಳನ್ನು ಬಳಸಲಿಲ್ಲ. ನಮ್ಮ ಬಳಿ ಸೆಲ್ ಫೋನ್, ಡಿವಿಡಿ, ಪೆನ್ ಡ್ರೈವ್, ವಿಡಿಯೋಗೇಮ್, ಲ್ಯಾಪ್ ಟಪ್, ಇಂಟರ್ನೆಟ್ ಗಳು ಇರಲಿಲ್ಲ. ಅದರ ಬದಲು ಗೆಳೆಯರಿದ್ದರು.

ನಮ್ಮ ನೆಂಟರಿಷ್ಟರ ಮನೆಗೆ ಅಜ್ಜಿ ಮನೆಗೆ ನಮಗೆ ಬೇಕು ಬೇಕಾದಾಗಲೆಲ್ಲಾ ಹೋಗಿ ಬರುತ್ತಿದ್ದೆವು. ಕಾಲ್ ಮಾಡಿ ಪರ್ಮಿಷನ್ ಕೇಳುತ್ತಿರಲಿಲ್ಲ. ನಮಗೆ ನೆಂಟರಿಷ್ಟರು ಹಿತೈಷಿಗಳಾಗಿದ್ದರು. ಇನ್ಸೂರೆನ್ಸ್ ಇಲ್ಲದೆಯೂ ನಾವು ಬದುಕಬಹುದಿತ್ತು. ನಮ್ಮ ಫೋಟೋಗಳು ಬರೀ ಬ್ಲಾಕ್ ಅಂಡ್ ವೈಟ್ ಇರಬಹುದು. ಆದರೆ ನೆನಪುಗಳು ವರ್ಣರಂಜಿತವಾಗಿದೆ. ನಮ್ಮ ಅಪ್ಪ ಅಮ್ಮನಿಗಿಂತ ನಾವು ತಿಳಿದವರೆನ್ನುವ ಭಾವನೆಗಳು ನಮಗೆಂದೂ ಬರಲಿಲ್ಲ. ಆದರೆ ನಮ್ಮ ಮಕ್ಕಳು ನಮಗಿಂತ ಬುದ್ದಿವಂತರೆಂದು ಹೆಮ್ಮೆ ಪಡುತ್ತಿದ್ದರು. ಒಟ್ಟಿನಲ್ಲಿ ನಾವೇ ಭಾಗ್ಯಶಾಲಿಗಳು, ಪುಣ್ಯವಂತರು. ಸ್ನೇಹಿತರೆ, ನೀವು ಇದೆ ವರ್ಷದಲ್ಲಿ ಹುಟ್ಟಿದ್ದರೆ ನಿಮ್ಮ ಬಾಲ್ಯದ ಸವಿನೆನಪಿನ ಮಾಹಿತಿಯನ್ನ ಕಾಮೆಂಟ್ ಮಾಡಿ ಹಂಚಿಕೊಳ್ಳಿ..