Advertisements

ಬಡವರಿಗೆ ದಿನಸಿ ಕಿಟ್ ಕೊಡುವ ಸಲುವಾಗಿ ಸ್ವಂತ ಮನೆ, ಪೆಟ್ರೋಲ್ ಬಂಕ್ ಅಡವಿಟ್ಟ ಮಾಜಿ ಶಾಸಕ !

News

ಕರೋನಾ ಹಿನ್ನಲೆ ಲಾಕ್ ಡೌನ್ ಆಗಿರುವ ಕಾರಣ ಬಡವರು, ನಿರ್ಗತಿಕರು, ಸಾಮಾನ್ಯ ಜನರು ಸಂಕಷ್ಟದ ಪರಿಸ್ಥಿತಿಯಲ್ಲಿದ್ದಾರೆ. ಅನೇಕರು ಒಂದೊತ್ತಿನ ಊಟಕ್ಕೂ ಪರದಾಡುವ ಸ್ಥಿಟಿ ಎದುರಾಗಿದೆ. ಇಂತಹ ಸಂಕಷ್ಟದ ಪರಿಸ್ಥಿತಿಯಲ್ಲಿ ಸೆಲೆಬ್ರೆಟಿಗಳು, ಉದ್ಯಮಿಗಳು, ರಾಜಕಾರಣಿಗಳು ಕಷ್ಟದಲ್ಲಿರುವ ಜನರ ಸಹಾಯಕ್ಕೆ ಮುಂದಾಗಿದ್ದು ದಿನನಿತ್ಯ ಬಳಕೆಗೆ ಬೇಕಾದ ದಿನಸಿ ವಸ್ತುಗಳು, ತರಕಾರಿಗಳನ್ನ ನೀಡುತ್ತಿದ್ದಾರೆ.

Advertisements

ಇನ್ನು ಈಗ ಮಾಜಿ ಸಚಿವರಾಗಿರುವ ಸಾ.ರಾ.ಮಹೇಶ್ ರವರು ಮೈಸೂರಿನ ತಮ್ಮ ಕ್ಷೇತ್ರದ ಸಂಕಷ್ಟದಲ್ಲಿರುವ ಜನರಿಗೆ 5.5 ಕೋಟಿ ರೂಗಳ ವೆಚ್ಚದಲ್ಲಿ ಆಹಾರದ ಕಿಟ್ ಮತ್ತು ತರಕಾರಿಗಳನ್ನ ಕೊಡುತ್ತಿದ್ದಾರೆ. ಇನ್ನು ಮಾಜಿ ಸಚಿವರು ಸ್ವತಃ ರೈತರಿಂದಲೇ 1.5ಕೋಟಿಯಷ್ಟು ವೆಚ್ಚದ ತರಕಾರಿಗಳನ್ನ ಖರೀದಿ ಮಾಡಿದ್ದು, ಇದೇ ತಿಂಗಳ ೧೮ನೇ ತಾರೀಖಿನ ಒಳಗೆ ಹಣ ಕೊಡುವುದಾಗಿ ರೈತರಿಗೆ ಹೇಳಿದ್ದಾರೆ. ಆದರೆ ಲಾಕ್ ಡೌನ್ ಇರುವ ಇಂತಹ ಸಂಕ್ಷತದ ಪರಿಸ್ಥಿತಿಯಲ್ಲಿ ಅಷ್ಟೊಂದು ಹಣ ಹೊಂದಿಸಲು ಸಾಧ್ಯವಾಗದ ಕಾರಣ ತಮ್ಮ ಮನೆ ಹಾಗೂ ಪೆಟ್ರೋಲ್ ಬ್ಯಾಂಕ್ ನ್ನ KR ನಗರದ ಅರ್ಬನ್ ಕೋ ಆಪರೇಟಿವ್ ಬ್ಯಾಂಕಿನಲ್ಲಿ ಸಾಲಕ್ಕಾಗಿ ಅಡ ಇಟ್ಟಿದ್ದು, ಸಾಲವಾಗಿ ಹಣ ಪಡೆದುಕೊಂಡಿದ್ದಾರೆ.

ಇನ್ನು ಲಾಕ್ ಡೌನ್ ಇರುವ ಕಾರಣ ರೈತರು ಸಂಕಷ್ಟದ ಪರಿಸ್ಥಿತಿಯಲ್ಲಿದ್ದಾರೆ. ಹಾಗಾಗಿ ರೈತರಿಂದ ಹದಿನೈದು ಸಾವಿರ ಟನ್ ನಷ್ಟು ತರಕಾರಿ ಖರೀದಿ ಮಾಡಿದ್ದು, ಇದೇ ೧೮ರ ಒಳಗೆ ಹಣ ಕೊಡುವುದಾಗಿ ಮಾತು ಕೊಟ್ಟಿದ್ದೇನೆ. ಇನ್ನು ನಮ್ಮ ಕ್ಷೇತ್ರದಲ್ಲಿ ೭೨ ಸಾವಿರ ಕುಟುಂಬಗಳಿದ್ದು ಬಿಪಿಎಲ್ ಕಾರ್ಡ್ ಇರಲಿ ಇಲ್ಲದಿರಲಿ ಎಲ್ಲರಿಗೂ ಎರಡು ಬರಿ ತರಕಾರಿ ಹಾಗೂ ಆಹಾರದ ಕಿಟ್ ಗಳನ್ನ ವಿತರಣೆ ಮಾಡಿದ್ದೇವೆ ಎಂದು ಸಾ.ರಾ.ಮಹೇಶ್ ರವರು ಹೇಳಿದ್ದಾರೆ. ಒಟ್ಟಿನಲ್ಲಿ ರಾಜಕೀಯದ ಹೊರತಾಗಿ ತನ್ನ ಕ್ಷೇತ್ರದ ಜನರಿಗೋಸ್ಕರ ಮಾಜಿ ಸಚಿವರಾಗಿರುವ ಸಾ.ರಾ. ಮಹೇಶ್ ರವರು ಸಾಲ ಮಾಡಿ ಜನರ ಸಹಾಯಕ್ಕೆ ಮುಂದಾಗಿರುವುದು ಗ್ರೇಟ್ ಅಲ್ಲವೆ. ಇನ್ನು ಇದರ ಬಗ್ಗೆ ನಿಮ್ಮ ಅಭಿಪ್ರಾಯ ಏನಾದರು ಇದ್ದಾರೆ ಕಾಮೆಂಟ್ ಮಾಡಿ ತಿಳಿಸಿ ಸ್ನೇಹಿತರೆ..