Advertisements

ಈ ಬರಗಾಲದಲ್ಲಿ ಕಡಿಮೆ ಜಮೀನಿನಲ್ಲಿ ಕಡಿಮೆ ಖರ್ಚಿನಲ್ಲಿ ಬೆಳೆಯನ್ನು ಬೆಳೆದು ಲಕ್ಷ ಲಕ್ಷ ಸಂಪಾದನೆ ಮಾಡುತ್ತಿರುವ ರೈತ. ಇವರು ಮಾಡಿದ ಐಡಿಯಾ ಏನು ಗೊತ್ತಾ?

Kannada Mahiti

ವರ್ಷಪೂರ್ತಿ ದುಡಿದರು ಕೈಗೆ ಅಣಸಿಗದೆ ಹೆಚ್ಚಾಗಿ ಕೃಷಿಯೇ ಬೇಡ ಎಂದು ಕೆಲವು ಬೇಸರ ಪಡುತ್ತಿರುತ್ತಾರೆ, ಅದರಲ್ಲೂ ಈ ನಡುವೆ ರೈತರ ಕಷ್ಟ ಅಷ್ಟಿಷ್ಟಲ್ಲ‌. ಆದರೆ ಇಲ್ಲೊಬ್ಬ ರೈತ ತನ್ನ ಚಾಣಾಕ್ಷತನದಿಂದ ಚೆಂಡು ಹೂವನ್ನು ಬೆಳೆಯುವ ಮೂಲಕ ಅದರಲ್ಲೂ ಒಂದೇ ಏಕರೆಯ ಜಮೀನಿನಲ್ಲಿ ಲಕ್ಷ ಲಕ್ಷ ಆದಾಯ ಮಾಡುತ್ತಿದ್ದಾರೆ.

Advertisements

ಲಕ್ಷ್ಮೇಶ್ವರ ತಾಲೂಕಿನ ಕುಂದ್ರಳ್ಳಿ ಗ್ರಾಮದ ರೈತರಾದ ಶಿವಯೋಗಿ ಹಮ್ಮಗಿ ಅವರು ಉತ್ತಮ ಲಾಭವನ್ನು ಗಳಿಸುವುದು ಹೇಗೆ ಎಂದು ಮಾಡಿ ತೋರಿಸಿದ್ದಾರೆ. ಹೌದು ತಮ್ಮ ಒಂದು ಎಕೆರೆ ಜಮೀನಿನಲ್ಲಿ ಚೆಂಡುಹೂವನ್ನು ಬೆಳೆದು ಹೆಚ್ಚು ಆದಾಯ ಮಾಡುವ ಮೂಲಕ ಉತ್ತಮ ಮಾರ್ಗವನ್ನು ಕಂಡುಕೊಂಡಿದ್ದಾರೆ. ಕಡಿಮೆ ಖರ್ಚಿನಲ್ಲಿ ಹೆಚ್ಚಾಗಿ ಲಾಭವನ್ನು ಮಾಡಲು ಚೆಂಡೂ ಹೂವಿನ ಕೃಷಿಯಿಂದ ಮಾತ್ರ ಸಾಧ್ಯ. ಇನ್ನೂ ಶಿವಯೋಗಿ ಅವರು ಕಂಡುಕೊಂಡ ಐಡಿಯಾವನ್ನು ತಿಳಿಸಿದ್ದಾರೆ. ಒಂದು ಏಕರೆಯಲ್ಲಿ ಸೂಮರು ಇಪ್ಪತ್ತು ಟನ್ ಹೂವನ್ನು ಮಾತ್ರ ಬೆಳೆಯಬಹುದು, ಹಾಗೂ ಇದಕ್ಕೆ ಐದು ಸಾವಿರದಿಂದ ಇಡಿದು ಆರು ಸಾವಿರ ವರೆಗೂ ಖರ್ಚು ಆಗುತ್ತದೆ. ಮೂರು ನಾಲ್ಕು ತಿಂಗಳಿನಲ್ಲಿ ಸೂಮಾರು ಒಂದು ಲಕ್ಷ ಇಪ್ಪತ್ತು ಸಾವಿರ ರೂ ಅನ್ನು ಗಳಿಸಬಹುದು ಎಂದು ಇವರು ಹೇಳಿದ್ದಾರೆ.

ಲಕ್ಷೇಶ್ವರ ಮತ್ತು ಶಿರಹಟ್ಟಿ ತಾಲ್ಲೂಕಿನ ಒಟ್ಟಾಗಿ ಈಗ ಎಂಟುನೂರು ಎಕೆರೆಯಿಂದ ಸಾವಿರ ಎಕರೆಯವರಿಗೂ ಚೆಂಡು ಹೂವನ್ನೇ ಬೆಳೆಯುತ್ತಿದ್ದಾರೆ. ನಲವತ್ತೈದು ದಿನಗಳಲ್ಲಿ ಹೂ ಬಿಡಲು ಪ್ರಾರಂಭಿಸುವ ಚೆಂಡೂ ಹೂವಿನ ಗಿಡದಲ್ಲಿ ಇಪ್ಪತ್ತು ಬಾರಿ ಹೂವಿನ ಕೊಯ್ಲನ್ನು ಮಾಡಿ ಕಂಪನಿಯೊಂಡು ತಗೆದುಕೊಂಡು ಹೋಗುತ್ತಿದ್ದಾರೆ. ರೈತರಿಗೆ ಇಪ್ಪತ್ತೈದು ಪೈಸೆ ಪ್ರೊತ್ಸಾಹ ಧನ ನೀಡುವ ಮೂಲಕ ರೈತರ ಜೀವನಕ್ಕೆ ಚೆಂಡುಹೂವಿನ ಕೃಷಿ ಅರ್ಥಿಕ ಸಂಜೀವಿನಿಯಾಗಿದೆ ಎನ್ನುತ್ತಾರೆ.