ಕರೋನಾ ಬಂದ ಹಿನ್ನಲೆಯಲ್ಲಿ ಮಾನವನ ಜೀವನಶೈಲಿಯೇ ಬದಾಲಾಗುತ್ತಿದೆ. ಈ ಸೋಂಕನ್ನ ನಿಯಂತ್ರಣ ಮಾಡುವ ಸಲುವಾಗಿ ಸರ್ಕಾರಗಳು ಹಲವಾರು ಕಟ್ಟುನಿಟ್ಟಿನ ಕ್ರಮಗಳನ್ನ ತೆಗೆದುಕೊಳ್ಳುತ್ತಿವೆ. ಇನ್ನು ಈಗ ಲಾಕ್ ಡೌನ್ ಸಡಿಲಗೊಳ್ಳುತ್ತಿದ್ದು ಹಲವಾರು ಉದ್ಯಮಗಳು ಶುರುವಾಗಿವೆ. ಆದರೆ ಕರೋನಾ ಹಬ್ಬುವ ಭಯದಿಂದ ಕಟಿಂಗ್ ಶಾಪ್, ಬ್ಯೂಟಿ ಪಾರ್ಲರ್, ಸ್ಪಾಗಳನ್ನ ತೆರೆಯಲು ಇನ್ನು ಹಲವಾರು ರಾಜ್ಯಗಳಲ್ಲಿ ಅವಕಾಶ ನೀಡಿಲ್ಲ.

ಆದರೆ ಈ ರಾಜ್ಯದಲ್ಲಿ ಸಲೂನ್, ಸ್ಪಾ, ಬ್ಯೂಟಿ ಪಾರ್ಲರ್ ಗಳನ್ನ ತೆರೆಯಲು ಪರ್ಮಿಷನ್ ನೀಡಲಾಗಿದೆಯಾದರು ಮಾಲೀಕರು ಹಲವಾರು ಕಂಡೀಷನ್ ಗಳನ್ನ ಪಾಲಿಸಬೇಕಾಗಿದೆ. ಹೌದು,ಇನ್ನು ಮುಂದೆ ಕಟಿಂಗ್ ಶಾಪ್ ಗೆ ಹೋಗುವ ಗ್ರಾಹಕರು ಮರೆಯದೆ ತಮ್ಮ ಜೊತೆ ಆಧಾರ್ ಕಾರ್ಡ್ ತೆಗೆದುಕೊಂಡು ಹೋಗಲೇಬೇಕು. ಇನ್ನು ಮುಂದೆ ಸಲೂನ್ ಮಾಲೀಕರು ತಮ್ಮ ಆಧಾರ್ ಸಂಖ್ಯೆ ಸೇರಿದಂತೆ ಗ್ರಾಹಕರ ರಿಜಿಸ್ಟರ್ ಅನ್ನು ನಿರ್ವಹಿಸಲು ತಮಿಳುನಾಡು ರಾಜ್ಯ ಸರ್ಕಾರ ಆದೇಶಿಸಿದೆ.

ಸಲೂನ್ , ಬ್ಯೂಟಿ ಪಾರ್ಲರ್ಗಳು ಮತ್ತು ಸ್ಪಾಗಳು ತಮ್ಮ ಗ್ರಾಹಕರ ಹೆಸರು, ವಿಳಾಸ, ಮೊಬೈಲ್ ಸಂಖ್ಯೆ ಮತ್ತು ಆಧಾರ್ ಕಾರ್ಡ್ ವಿವರಗಳನ್ನು ನಮೂದಿಸುವುದು ಖಡ್ಡಾಯವಾಗಿದೆ ಎಂದು ಜಿಲ್ಲಾಧಿಕಾರಿಗಳಿಗೆ ತಮಿಳು ನಾಡು ಸರ್ಕಾರ ಆದೇಶ ನೀಡಿದೆ. ಕರೋನ ವೈರಸ್ ಹರಡುವಿಕೆಯನ್ನು ತಡೆಗಟ್ಟುವ ಮತ್ತು ಪತ್ತೆಹಚ್ಚಲು ಸಹಾಯವಾಗುವ ಉದ್ದೇಶದಿಂದ ಈ ಕ್ರಮವನ್ನು ಕೈಗೊಳ್ಳಲಾಗಿದೆ. ಇದೆಲ್ಲದರ ಜೊತೆಗೆ ಇನ್ನು ಹಲವಾರು ಕಂಡೀಷನ್ ಗಳನ್ನ ಸಲೂನ್ , ಬ್ಯೂಟಿ ಪಾರ್ಲರ್ ಮತ್ತು ಸ್ಪಾಗಳಿಗೆ ತಮಿಳು ನಾಡು ಸರ್ಕಾರ ಖಡ್ಡಾಯ ಮಾಡಿದೆ.