Advertisements

ಆನೆ ಗುಡ್ಡ ಗಣಪತಿ ಸ್ವಾಮಿಯನ್ನ ನೆನೆಯುತ್ತಾ ಈ ದಿನದ ನಿಮ್ಮ ರಾಶಿಫಲ ಹೇಗಿದೆ ನೋಡಿ

Astrology

ನಮಸ್ತೇ ಸ್ನೇಹಿತರೇ, ನವೆಂಬರ್ ೨೨ರ ಈ ಶುಭ ಭಾನುವಾರ ಚಂದ್ರನು ಕುಂಭ ರಾಶಿಗೆ ಪ್ರವೇಶ ಮಾಡುವ ದಿನವಾಗಿದ್ದು ಈ ದಿನದ ನಿಮ್ಮ ರಾಶಿ ಭವಿಷ್ಯ, ರಾಶಿ ಫಲಗಳು ಹೇಗಿದೆ ? ಶುಭವೋ ಅಶುಭವೋ ನೋಡಿ..

ಮೇಷ ರಾಶಿ : ನಿಮ್ಮ ಕುಟುಂಬದ ಸದಸ್ಯರ ಅಸೂಯೆಯಿಂದಾಗಿ ನಿಮಗೆ ಕಿರಿ ಕಿರಿ ಉಂಟಾಗುವ ಸಂಭವ ಇದೆ. ಆದರೆ ನೀವು ನಿಮ್ಮ ತಾಳ್ಮೆಯನ್ನ ಕಳೆದುಕೊಳ್ಳದೆ ಪರಿಸ್ಥಿತಯನ್ನ ನಿಯಂತ್ರಣ ಮಾಡುವುದು ಒಳ್ಳೆಯದು. ನಿಮ್ಮ ತಾಯಿಯ ಕಡೆಯಿಂದ ಧನಲಾಭವಾಗುವ ಸಾಧ್ಯತೆ ಇದೆ. ನೀವು ತುಂಬಾ ಇಷ್ಟಪಡುವವರನ್ನ ಕ್ಷಮಿಸಿ. ನಿಮ್ಮ ಕುಟುಂಬದವರಿಂದ ಆರ್ಥಿಕವಾಗಿ ಬೆಂಬಲ ಸಿಗಲಿದೆ.

ವೃಷಭ : ಹಾಲಿನ ಉದ್ಯಮ ಮಾಡುವವರು ಆರ್ಥಿಕವಾಗಿ ಲಾಭ ಪಡೆಯುವ ಸಾಧ್ಯತೆಗಳಿವೆ. ನಿಮ್ಮ ತಿಳುವಳಿಕೆಗೆ ಪ್ರತಿಫಲ ಸಿಗುವ ದಿನವಾಗಿದೆ. ಇಂದು ಏನಾದರೂ ನೀವು ಸಾಧಿಸುವ ದಿನವಾಗಿದೆ. ಯಾವುದೇ ಕಾರಣಕ್ಕೂ ಆತುರದ ನಿರ್ಧಾರ ಒಳ್ಳೆಯದಲ್ಲ. ಇಂದು ನೀವು ನಿಮ್ಮ ಕಚೇರಿಯಲ್ಲಿ ಮಾಡುತ್ತಿರುವ ಕೆಲಸ ಮುಂದೊಂದು ದಿನ ಬೇರೆಯದೇ ಉಪಯೋಗಕ್ಕೆ ಬರಲಿದೆ.

ಮಿಥುನ ರಾಶಿ : ಇಂದು ನಿಮಗೆ ಆತ್ಮವಿಶ್ವಾಸ ಹೆಚ್ಚಿಸುವ ದಿನವಾಗಿದ್ದು ಆರೋಗ್ಯ ದೃಷ್ಟಿಯಿಂದಲೂ ಸಹ ಉತ್ತಮವಾಗಿದೆ. ಆಭರಣಗಳಲ್ಲಿ ಮಾಡುವ ಇನ್ವೆಸ್ಟ್ಮೆಂಟ್ ನಿಮಗೆ ಲಾಭ ತರಲಿದೆ. ನಿಮ್ಮ ಮನೆಗೆ ಅತಿಥಿಗಳು ಬರುವ ಸಾಧ್ಯತೆ ಇದೆ. ಇಂದು ದೂರದ ಪ್ರಯಾಣ ಕೈಗೊಳ್ಳುವುದು ಲಾಭದಾಯಕವಾಗಿರಲಿದೆ.

ಕಟಕ : ನಿಮ್ಮ ಆಪ್ತ ಗೆಳೆಯನ ಸಹಾಯದಿಂದ ಲಾಭವಾಗುವ ಸಾಧ್ಯತೆ ಇದೆ. ಇನ್ನು ಈ ಆರ್ಥಿಕ ಲಾಭದಿಂದ ನಿಮ್ಮ ಹಲವು ಸಮಸ್ಯೆಗಳಿಗೆ ಪರಿಹಾರ ಸಿಗಲಿದೆ. ಇಂದು ನೀವು ಪ್ರಭಾವಿ ವ್ಯಕ್ತಿಗಳ ಜೊತೆನಿಕಟ ಸಂಪರ್ಕ ಹೊಂದುವಂತೆ ಮಾಡಲಿದೆ.

ಸಿಂಹ ರಾಶಿ : ನಿಮಗೆ ಅನಾರೋಗ್ಯ ಸಮಸ್ಯೆ ಕಾಡುವ ಸಾಧ್ಯತೆ ಇದೆ. ಅನಿರಕ್ಷಿತವಾಗಿ ನಿಮ್ಮ ಮನೆಗೆ ಅತಿಥಿಗಳು ಬರುವ ಸಾಧ್ಯತೆ ಇದೆ. ನೀವು ಸುಮ್ಮನೆ ಕುಳಿತು ಸಮಯ ಕಳೆಯುವ ಬದಲು ಏನನ್ನಾದರೂ ಮಾಡಿ.. ಇದರಿಂದ ಲಾಭವಗಲಿದೆ. ನೀವು ಅರ್ಥ ಮಾಡಿಕೊಳ್ಳುವ ಅವಶ್ಯಕತೆ ಇದೆ.

ಕನ್ಯಾ ರಾಶಿ : ಇಂದು ನೀವು ವ್ಯಾಪಾರದಲ್ಲಿ ಲಾಭ ಗಳಿಸಲು ನಿಮ್ಮ ಸ್ನೇಹಿತನಿಂದ ಸಲಹೆ ಸಿಗಲಿದೆ. ನಿಮ್ಮ ಗೆಳೆಯನ ಸಲಹೆಯಂತೆ ನಡೆದುಕೊಂಡರೆ ನಿಮಗೆ ಆರ್ಥಿಕವಾಗಿ ಲಾಭವಾಗುತ್ತದೆ. ನಿಮ್ಮ ಕೆಲಸದ ಸ್ಥಳದಲ್ಲಿ ವಿರೋಧ ಉದ್ಭವವಾಗುವ ಸಾಧ್ಯತೆ ಇದ್ದರೂ ನೀವು ಧೈರ್ಯದಿಂದ ಇರಬೇಕು. ಸ್ನೇಹ ಕಳೆದುಕೊಳ್ಳುವ ಸಾಧ್ಯತೆ ಇರುವುದರಿಂದ ಎಚ್ಚರಿಕೆಯಿಂದಿರುವುದು ಉತ್ತಮ.

ತುಲಾ : ನೀವು ತುಂಬಾ ದಿನಗಳಿಂದ ಅನುಭವಿಸುತ್ತಿದ್ದ ತೊಂದರೆಗಳಿಂದ ಮುಕ್ತಿ ಸಿಗಲಿದೆ. ಇನ್ನು ಈ ಸಮಸ್ಯೆಗಳು ಜೀವನ ಪೂರ್ತಿ ಬರದಂತೆ ಮಾಡಲು ನಿಮ್ಮ ಜೀವನ ಶೈಲಿಯನ್ನ ಬದಲಾಯಿಸಿಕೊಳ್ಳಬೇಕಾಗಿದೆ.ನೀವು ನಿಮ್ಮ ಮನೆಯ ಹಿರಿಯರಿಂದ ಆರ್ಥಿಕವಾಗಿ ಹಣ ಗಳಿಸುವುದರ ಬಗ್ಗೆ ಸಲಹೆ ತೆಗೆದುಕೊಂಡು ಅದರಂತೆ ನೀವು ಕಾರ್ಯ ನಿರತರಾಗಬೇಕಾಗಿದೆ. ಮನರಂಜನಾ ಚಟುವಟಿಕೆಗಳಲ್ಲಿ ಸ್ವಲ್ಪ ಸಮಯ ಕಳೆಯುವುದು ನಿಮಗೆ ಉತ್ತಮವಾಗಲಿದೆ.

ವೃಚ್ಚಿಕ ರಾಶಿ : ನೀವು ಮೊದಲೇ ಕೊಟ್ಟಿರುವ ಸಾಲವನ್ನ ಹಿಂದಿರುಗಿಸದ ನಿಮ್ಮ ಸಂಬಂಧಿಕರಿಗೆ ಮತ್ತೆ ಸಾಲ ಕೊಡಬೇಡಿ. ನಿಮ್ಮ ಅಭಿಪ್ರಾಯಗಳನ್ನ ನಿಮ್ಮ ಮಕ್ಕಳೇ ಮೇಲೆ ಏರುವು ಬದಲು ಅದನ್ನ ಅರ್ಥ ಮಾಡಿಸುವುದು ಒಳ್ಳೆಯದು. ವಿಶೇಷವಾದ ವ್ಯಕ್ತಿಯನ್ನ ಭೇಟಿ ಮಾಡುವಿರಿ.

ಧನಸ್ಸು : ಇಂದು ನೀವು ಮನೆಯಿಂದ ಹೊರ ಹೋಗುವ ಸಂದರ್ಭದಲ್ಲಿ ಹಿರಿಯರ ಆಶೀರ್ವಾದ ಪಡೆದು ಹೋಗಿ. ಆರೋಗ್ಯದ ಬಗ್ಗೆ ಗಮನವಿರಲಿ. ಭೂಮಿ ಒಪ್ಪಂದಗಳನ್ನ ಮಾಡುವಾಗ ಎಚ್ಚರಿಕೆಯಿಂದಿರಿ.

ಮಕರ ರಾಶಿ : ನಿಮ್ಮ ಹಣಕಾಸು ಪರಿಸ್ಥಿತಿ ಸುಧಾರಿಸುವ ದಿನವಾಗಲಿದೆ. ಇಂದು ನೀವು ಮಾಡುವ ಕೆಲಸದಿಂದ ಬೇರೆಯವರಿಗೆ ಗೌರವ ಸಿಗಲಿದೆ. ಮುಂದಿನ ದಿನಗಳಲ್ಲಿ ಉತ್ತಮ ಫಲಿತಾಂಶ ಸಿಗಲಿದೆ.

ಕುಂಭ ರಾಶಿ : ನೀವು ಬೇರೆಯವರ ಮೇಲೆ ಹೆಚ್ಚು ಖರ್ಚನ್ನ ಮಾಡಲಿದ್ದಾರೆ. ಹಾಗಾಗಿ ನೋಡಿಕೊಂಡು ಖರ್ಚು ಮಾಡಿ. ನಿಮ್ಮ ರಹಸ್ಯ ಮಾಹಿತಿಯನ್ನ ನಿಮ್ಮ ಸಂಗಾತಿಯೊಂದಿಗೆ ಹಂಚಿಕೊಳ್ಳಲು ಮುಂದಾದ್ರೆ ಅದಕ್ಕೂ ಮುಂಚೆ ಯೋಚಿಸಿ ನಿರ್ಧಾರ ತೆಗೆದುಕೊಳ್ಳುವುದು ಉತ್ತಮ. ವ್ಯವಹಾರ ಮಾಡುವವರಿಗೆ ಇಂದು ಉತ್ತಮವಾದ ದಿನವಾಗಿದೆ.

ಮೀನಾ ರಾಶಿ : ಇನ್ನು ನಿಮಗೆ ಒತ್ತಡವಿದ್ದರೂ ಸಹ ಆರೋಗ್ಯ ಉತ್ತಮವಾಗಿರಲಿದೆ. ಮನೆಯಲ್ಲಿ ಹಬ್ಬದ ವಾತಾವರಣ ಇರಲಿದೆ. ವ್ಯಾಪಾರಿಗಳು ಇಂದು ತಮ್ಮ ಕುಟುಂಬದ ಸದಸ್ಯರೊಂದಿಗೆ ಸಮಯ ಕಳೆಯಲಿದ್ದಾರೆ. ಇದು ನಿಮ್ಮ ಕುಟುಂಬ ವರ್ಗದಲ್ಲಿ ಸಾಮರಸ್ಯ ಉಂಟುಮಾಡಲು ಸಹಾಯವಾಗಲಿದೆ.