Advertisements

ಅಬ್ದುಲ್ ಕಲಾಂ ಅವರ ವೃತ್ತಿ ಬದುಕಿನಲ್ಲಿ ಆದ ಅದೊಂದು ಸೋಲು ಅವರಿಗೆ ಒಂದು ದೊಡ್ಡ ಪಾಠವನ್ನೇ ಕಲಿಸಿತ್ತು !

Inspire

ಅಂದು 1979ರಲ್ಲಿ ಬಾಹ್ಯಾಕಾಶ ಉಡಾವಣೆ ಒಂದಿತ್ತು. ಅದರ ನೇತೃತ್ವ ನಮ್ಮೆಲ್ಲರ ಹೆಮ್ಮೆಯ ಮಾಜಿ ರಾಷ್ಟ್ರಪತಿ ಅಬ್ದುಲ್ ಕಲಾಂ ಅವರದಾಗಿತ್ತು. ಆ ರಾಕೆಟ್ 40 ಬಾಹ್ಯಾಕಾಶ ಉಪಕರಣಳನ್ನು ಹೊಂದಿತ್ತು. ಉಪಗ್ರಹದ ಹೆಸರು SLV-3 ಎಂದು. ಇನ್ನೇನು ರಾಕೆಟ್ ಉಡಾವಣೆ ಆಗಬೇಕಿತ್ತು, ಕೆಲವೇ ನಿಮಿಷಗಳು ಬಾಕಿ ಇತ್ತು. ಆದರೆ ಕಂಪ್ಯೂಟರರ್ ರಾಕೆಟ್ ಉಡಾವಣೆ ನಿಲ್ಲಿಸಬೇಕು ಎಂದು ತೋರಿಸಿತು. ಆಗ ವಿಜ್ಞಾನಿಗಳು ಎಲ್ಲರು ಸೇರಿ ಸಿಸ್ಟಮ್ ನಲ್ಲಿ ಆದ ತಪ್ಪುಗಳನ್ನು ಸರಿಪಡಿಸಿದರು ಹಾಗೂ ಮ್ಯಾನು ಯಲ್ ಆಗಿ ಲಾಂಚ್ ಮಾಡಲು ಕಲಾಂ ಅವರಿಗೆ ಸಲಹೆ ನೀಡಿದರು.

Advertisements

ಸರಿ ಅಬ್ದುಲ್ ಕಲಾಂ ಅವರು ಮ್ಯಾನುಯಲ್ ಲಾಂಚ್ ಗೆ ಒಪ್ಪಿಕೊಂಡರು. ಉಪಗ್ರಹ ಉಡಾವಣೆಯಾಯಿತು. ಆದರೆ ನೋಡು ನೋಡುತ್ತಿದ್ದಂತೆಯೇ ಸಮುದ್ರಕ್ಕೆ ಬಿದ್ದು ನೀರು ಪಾಲಾಯಿತು. ಇದು ಕಲಾಂ ಅವರು ನೋಡಿದ ಅತಿ ದೊಡ್ಡ ಸೋಲು. ಆಗ ರಾಷ್ಟ್ರ ಅಂತರಾಷ್ಟ್ರೀಯ ಸುದ್ದಿ ಮಾಧ್ಯಮಗಳ ಎದುರು ಸುದ್ದಿಗೋಷ್ಠಿ ಕೊಡಬೇಕಾಯಿತು. ಕಲಾಂ ಅದನ್ನು ಹೇಗೆ ನಿಭಾಯಿಸಲಿ ಎಂದು ಯೋಚಿಸುತ್ತಿರುವಾಗಲೇ ಇಸ್ರೋದ ಅಧ್ಯಕ್ಷರಾದ ಸತೀಶ್ ಧವನ್ ಸೋಲನ್ನು ನನಗೆ ಬಿಡಿ ನಾನು ಸುದ್ದಿಗೋಷ್ಠಿ ನಡೆಸುತ್ತೇನೆ ಎಂದು ಇಡೀ ಸೋಲಿನ ಜವಾಬ್ದಾರಿ ತನ್ನ ಮೇಲೆ ಹಾಕಿಕೊಂಡರು.

ಸುದ್ದಿ ಗೋಷ್ಠಿ ನಡೆಸಿದರು. ಆಗ ಪತ್ರಕರ್ತರು ನೀವು ಅದೇಗೆ ಸಾವಿರಾರು ಕೋಟಿ ಜನರ ದುಡ್ಡನ್ನು ಸಮುದ್ರದ ಪಾಲು ಮಾಡಿದಿರಿ ಎಂಬೆಲ್ಲ ಪ್ರಶ್ನೆಗಳನ್ನು ಕೇಳಿದರು. ಅದನ್ನೆಲ್ಲ ಸತೀಶ್ ಧವನ್ ನಿಭಾಯಿಸಿದರು. ಮುಂದೆ ಇದೇ ಉಪಗ್ರಹ ಉಡಾವಣಿಯಾಗಿ ಯಶಸ್ಸು ಕಂಡಾಗ ಸುದ್ದಿಗೋಷ್ಠಿ ನಡೆಸಲು ಅವರು ಅಬ್ದುಲ್ ಕಲಾಂ ಅವರನ್ನು ಮುಂದೆ ಬಿಟ್ಟರಂತೆ. ಇದೇ ನಾಯಕತ್ವದ ಗುಣ ಎಂದು ಸತೀಶ್ ಧವನ್ ಅವರನ್ನು ಜೀವಮಾನವಿಡೀ ನೆನಪಿಸಿಕೊಳ್ಳುತ್ತಾರೆ. ಜೀವನವು ಅಂದುಕೊಂಡಷ್ಟು ಸರಳ ಅಲ್ಲ. ನಾವು ಜೀವನದಲ್ಲಿ ಸೋಲು ಎದುರಿಸುವುದು ತುಂಬಾ ಮುಖ್ಯ ಎಂದು ಕಲಾಂ ಹೇಳಿದ್ದಾರೆ. ಸ್ನೇಹಿತರೇ, ಇದರ ಬಗ್ಗೆ ನಿಮ್ಮ ಅನಿಸಿಕೆ ಏನೆಂದು ತಿಳಿಸಿ..