Advertisements

ಕಿವಿ ಕೇಳಲ್ಲ ಮಾತು ಬರೋಲ್ಲ ! ಕನ್ನಡದಲ್ಲಿ ನಟಿಸಿರುವ ಈ ನಟಿ ಯಾರು ? ನಟಿ ಆಗಿದ್ದಾದರೂ ಹೇಗೆ ಗೊತ್ತಾ ?

Cinema

ನಮಸ್ತೇ ಸ್ನೇಹಿತರೇ, ನಮ್ಮ ಆಸೆಗಳನ್ನಾಗಲಿ ಭಾವನೆಗಳನ್ನಾಗಲಿ ವ್ಯಕ್ತಪಡಿಸಬೇಕೆಂದರೆ ಮಾತು ಬರಬೇಕು..ಇನ್ನು ಬೇರೆಯವರ ಮಾತುಗಳನ್ನಾಗಲಿ ಮಕ್ಕಳ ತುಂಟ ತೊದಲಿನ ಮಾತುಗಳನ್ನಾಗಲಿ ಕೇಳಬೇಕೆಂದರೆ ಕಿವಿ ಕೇಳಿಸಲೇಬೇಕು. ಆದರೆ ದುರದೃಷ್ಟವಶಾತ್ ಇವೆರಡು ಕೆಲಸ ಮಾಡಲ್ಲ ಅಂದರೆ ಅಂತಹ ವ್ಯಕ್ತಿಯ ಜೀವನವನ್ನ ಊಹೆ ಮಾಡಿಕೊಳ್ಳುವುದು ಕೂಡ ಕಷ್ಟವೇ ಸರಿ. ಆದರೆ ಸ್ನೇಹಿತರೇ, ಮಾತು ಬಾರದ ಕಿವಿ ಕೇಳಿಸದ ಎಷ್ಟೋ ಜನ ಸಾಧನೆ ಮಾಡಿದವರು ನಮ್ಮ ನಡುವೆ ಇದ್ದಾರೆ. ಅದಕ್ಕೆ ನಿದರ್ಶನವೆಂಬಂತೆ ಯುವತಿಯೊಬ್ಬಳು ತನಗೆ ಕಿವಿ ಕೇಳಿಸದಿದ್ದರೂ ಮಾತು ಬರದೇ ಇದ್ದರೂ ಸಹ ನಟಿಯಾಗಿ ಬಣ್ಣದಲೋಕದಲ್ಲಿ ಮಿಂಚಬೇಕು ಎಂಬ ಕನಸನ್ನ ಕಾಣುತ್ತಾಳೆ.

ಕೊನೆಗೂ ತನ್ನ ಕನಸನ್ನ ನನಸು ಮಾಡಿಕೊಂಡು ಈಗ ನಟಿಯಾಗಿ ಚಿತ್ರರಂಗದಲ್ಲಿ ಅಭಿನಯಿಸುತ್ತಿದ್ದಾಳೆ. ಹಾಗಾದ್ರೆ ಯಾರೂ ಆ ನಟಿ ಎಂದು ನೋಡೋಣ ಬನ್ನಿ..ತನಗೆ ಕಿವಿ ಕೇಳೋದಿಲ್ಲ, ಮಾತು ಬರೋದಿಲ್ಲ ಎಂದು ಸುಮ್ಮನೆ ಕೂರದೆ ಜೀವನದಲ್ಲಿ ಏನಾದರೂ ಸಾಧನೆ ಮಾಡಬೇಕು ಎಂದು ಚಾಲೆಂಜಿಂಗ್ ಆಗಿ ತೆಗೆದುಕೊಂಡ ಈ ನಟಿಯ ಹೆಸರು ಅಭಿನಯ. ಪುನೀತ್ ರಾಜ್ ಕುಮಾರ್, ಶ್ರೀನಗರ ಕಿಟ್ಟಿ ಹಾಗೂ ಲೂಸ್ ಮಾದ ಯೋಗಿ ಅಭಿನಯಸಿದ್ದ ಹುಡುಗರು ಚಿತ್ರದಲ್ಲಿ ನಟಿಸಿದ್ದಾರೆ. ಪುನೀತ್ ಗೆ ಸಹೋದರಿಯಾಗಿ ಕಿಟ್ಟಿಗೆ ಲವರ್ ಆಗಿ ತಮ್ಮ ಪಾತ್ರವನ್ನ ಅಚ್ಚುಕಟ್ಟಾಗಿ ನಿಭಾಯಿಸಿದ್ದಾರೆ ನಟಿ ಅಭಿನಯ. ತಮ್ಮ ನೈಜ ಅಭಿನಯದಿಂದ ಎಲ್ಲರೂ ಮೂಗಿನಮೇಲೆ ಬೆರಳಿಟ್ಟುಕೊಳ್ಳುವಂತೆ ಮಾಡಿದ ಅದ್ಭುತ ಕಲಾವಿದೆ ಈ ನಟಿ.

Advertisements

ಇನ್ನು ನಟಿ ಅಭಿನಯವರ ವೈಯುಕ್ತಿಕ ವಿಚಾರಕ್ಕೆ ಬಂದರೆ ಅವರು ಹುಟ್ಟಿದ ಮೂರೇ ತಿಂಗಳಿಗೆ ಮಾತನಾಡುವ ಹಾಗೂ ಕಿವಿ ಕೇಳಿಸುವ ಶಕ್ತಿಯನ್ನ ಕಳೆದುಕೊಂಡಿದ್ದಾರೆ. ಅಂದಿನಿಂಲೇ ತನ್ನ ಜೀವನದಲ್ಲಿ ಕಷ್ಟಗಳನ್ನೇ ನೋಡುತ್ತಾ ಬಂದ ಅಭಿನಯ ಟಿವಿ ಮುಂದೆ ಕುಳಿತು ಸಿನಿಮಾಗಳನ್ನ ನೋಡುತ್ತಿದ್ದಾಗ ಅವರಿಗೆ ಏನೊಂದು ಅರ್ಥವಾಗುತ್ತಿರಲಿಲ್ಲ. ಆದರೆ ತನ್ನ ಮಗಳು ಪ್ರತೀ ದಿನ ನೋವು ತಿನ್ನುವುದನ್ನ ನೋಡುತ್ತಿದ್ದ ಅವರ ತಂದೆ ಆನಂದ್ ವರ್ಮಾ ಅವರು ತನ್ನ ಮಗಳಿಗೆ ಮಾತುಗಳನ್ನ ಅರ್ಥ ಮಾಡಿಸುವ ಸಲುವಾಗಿ ಪ್ರತೀ ದಿವಸ ಅದರ ಬಗ್ಗೆ ತರಭೇತಿಯನ್ನ ಕೊಡುತ್ತಿದ್ದರು. ಕೊನೆಗೆ ಅದರಲ್ಲಿ ಯಶಸ್ವಿಯಾದರೂ ಕೂಡ.

ಇನ್ನು ಅಭಿನಯವರಿಗೆ ಸಿನಿಮಾದಲ್ಲಿ ನಟಿಸಬೇಕೆಂಬ ಆಸೆ ಬಂದಿದ್ದೆ ತಡ ಮಗಳನ್ನ ನಟಿಯನ್ನಾಗಿ ಮಾಡಬೇಕೆಂದು ಅವರ ತಂದೆ ಅಭಿಯವರನ್ನ ಮಾಡೆಲಿಂಗ್ ಕಳುಹಿಸುತ್ತಾರೆ. ಆದರೆ ಅಭಿನಯವರಿಗೆ ಮಾತು ಬರೋದಿಲ್ಲ ಕಿವಿ ಕೇಳೋದಿಲ್ಲ ಎಂದು ತಿಳಿದು ಅನೇಕರು ಅವರಿಗೆ ಅವಕಾಶ ಕೊಡುವುದಕ್ಕೆ ಹಿಂದೆ ಮುಂದೆ ನೋಡುತ್ತಾರೆ. ಆದರೆ ನಾಡೋಡಿಗಳ್ ಚಿತ್ರದ ನಿರ್ದೇಶಕ ಅಭಿನಯವರ ನಟನಾ ಅಭಿನಯವನ್ನ ನೋಡಿ ಅವರಿಗೆ ಚಿತ್ರದಲ್ಲಿ ಅವಕಾಶ ನೀಡುತ್ತಾರೆ. ಇನ್ನು ಈ ಚಿತ್ರ ತೆಲುಗು ಸೇರಿದಂತೆ ಕನ್ನಡದ ಹುಡುಗರು ಚಿತ್ರದ ಮೂಲಕ ರಿಮೇಕ್ ಆಗುತ್ತದೆ. ಇನ್ನು ಈ ಚಿತ್ರಗಳಲ್ಲೂ ಅಭಿನಯವರು ಅಭಿನಯಿಸುವ ಮೂಲಕ ತುಂಬಾ ಫೇಮಸ್ ಆಗುತ್ತಾರೆ.

ಅವಾರ್ಡ್ ಗಳ ಜೊತೆಗೆ ಅವಕಾಶಗಳು ಕೂಡ ಹುಡುಕಿಕೊಂಡು ಬರುತ್ತವೆ. ಇನ್ನು ಇಲ್ಲಿಯವರೆಗೂ ೩೦ ಕ್ಕಿಂತ ಹೆಚ್ಚು ಚಿತ್ರಗಳಲ್ಲಿ ನಟಿಸಿದ್ದಾರೆ ಅಭಿನಯ. ತನ್ನ ಮಗಳ ಜೀವನದಲ್ಲಿ ಹೊಸ ಆಶಾಕಿರಣವವೊಂದನ್ನ ಮೂಡಿಸಿ ಮಗಳಿಗಾಗಿ ಹೊಸ ಬದುಕನ್ನೇ ಕಟ್ಟಿಕೊಟ್ಟರು ತಂದೆ ಆನಂದ್ ರಾವ್. ತನಗೆ ಏನೇ ನ್ಯೂನತೆಗಳಿದ್ದರೂ ಅವುಗಳನ್ನೆಲ್ಲ ಎದುರಿಸಿ ಇಂದು ಒಬ್ಬ ಅದ್ಭುತ ಕಲಾವಿದೆಯಾಗಿ ನಿಂತಿದ್ದಾರೆ ನಟಿ ಅಭಿನಯ. ಮನುಷ್ಯನಿಗೆ ಸಾಧಿಸುವ ಛಲ ಹೊಂದಿದ್ದರೆ ಏನು ಬೇಕಾದರೂ ಆಗಬಹುದು ಎಂಬುದಕ್ಕೆ ನಟಿ ಅಭಿನಯ ಜೀವಂತ ನಿದರ್ಶನವಾಗಿದ್ದಾರೆ.