Advertisements

ನಿಮ್ಮ ಜೀವನದಲ್ಲಿ ಇಂತಹ ಘಟನೆಯನ್ನು ನೀವು ಕೇಳಿರೋದಿಲ್ಲ, ನೋಡಿರೋದಿಲ್ಲ! ಇಲ್ಲಿ ಹುಡುಗನೇ ಹುಡುಗನಿಗಾಗಿ ಮಾಡಿದ್ದೇನು?

Kannada Mahiti

ಸತಿ ವೆಚ್ಚಕ್ಕೆ ಹೊನ್ನು ಇರುವಾಗ ಸ್ವರ್ಗಕ್ಕೆ ಕಿಚ್ಚು ಹಚ್ಚೆಂದ ಸರ್ವಜ್ಞ. ಈ ರೀತಿ ಹೇಳಿದ ಸರ್ವಜ್ಞನ ಮಾತುಗಳು ಈ ಕುಟುಂಬಕ್ಕೆ ಅನ್ವಯಿಸುತ್ತವೆ ಅಷ್ಟೊಂದು ಸುಖಿ ಮತ್ತು ಸುಂದರವಾಗಿತ್ತು ಕುಟುಂಬ ಹಾಗೆ ಆರತಿಗೊಬ್ಬ ಮಗಳು. ಕೀರ್ತಿಗೊಬ್ಬ ಮಗ ಇದ್ದ. ಇಬ್ಬರೂ ಓದಿನಲ್ಲಿ ಮುಂದುವರೆದಿದ್ದರು. ಹೀಗಿದ್ದ ಕುಟುಂಬಕ್ಕೆ ಅದು ಯಾರ ಕಣ್ಣು ಬಿತ್ತೋ ಗೊತ್ತಿಲ್ಲ. ಕುಟುಂಬ ಸರ್ವ ನಾಶವಾಗಿ, ಸಂಪೂರ್ಣ ನರಕವಾಯಿತು. ಏನಾಯಿತು ಈ ಕುಟುಂಬಕ್ಕೆ? ಯಾರು ಈ ಕುಟುಂಬಕ್ಕೆ ಏನು ಮಾಡಿದರು? ಈ ದುರಂತ ಘಟನೆಯದರೂ ಏನು? ಈ ಎಲ್ಲ ವಿವರಗಳು ಈ ಲೇಖನದ ಮೂಲಕ ತಿಳಿಸುತ್ತೇವೆ ಇದನ್ನು ಪೂರ್ಣವಾಗಿ ಓದಿ.
ಹರಿಯಾಣದ ರೋಟಿಕ್ ಎಂಬಲ್ಲಿ ಪ್ರದೀಪ್ ಮತ್ತು ಸಂತೋಷ ಎಂಬ ದಂಪತಿಗಳ ಸುಖಿ ಸಂಸಾರ ನೆಲೆಸಿತ್ತು. ಇವರಿಗೆ ಇಬ್ಬರು ಮಕ್ಕಳು. ಮಗ ಅಭಿಷೇಕ್ ಮತ್ತು ಮಗಳು ನೇಹಾ ನೋಡಲು ಸುಂದರ ಮತ್ತು ಓದಿನಲ್ಲಿ ಯು ಅಷ್ಟೇ ಜಾಣರಾಗಿದ್ದರು. ಪ್ರತಿ ಪಿಗೆ ಕುಟುಂಬದ ಮೇಲೆ ಹೆಚ್ಚು ವ್ಯಾಮೋಹ. ಪ್ರದೀಪ್ ಚಂಡಿಗಡದಲ್ಲಿ ರೈಲು ಎಸ್ಟೇಟ್ ಬಿಸಿನೆಸ್ಸ್ ನಲ್ಲಿ ತೊಡಗಿದ್ದವರು. ಇವರಿಗೆ ಮೊದಲು ತುಂಬಾ ಬಡತನವಿತ್ತು. ಆದರೆ ಈ ಬಿಜಿನೆಸ್ ಕೈಹಿಡಿದಿದ್ದು, ಕೇವಲ ಐದು ವರ್ಷಗಳಲ್ಲಿ ಕೋಟ್ಯಾಧೀಶ ರನ್ನಾಗಿ ಮಾಡಿತ್ತು.

Advertisements

ಇವರು ಬಡತನದಿಂದ ಬೆಳೆದು ಸಿರಿತನ ಕಂಡವರು ಆದ್ದರಿಂದ ಬಡತನದ ನೋವು-ನಲಿವುಗಳು ಮಕ್ಕಳಿಗೆ ಗೊತ್ತಾಗದಂತೆ ಬೆಳೆಸಿದ್ದರು. ಮಕ್ಕಳನ್ನು ಅತಿ ಮುದ್ದಾಗಿ ಕೇಳಿದ್ದು ಇಲ್ಲ ಎನ್ನದೆ ಎಲ್ಲವನ್ನು ಪೂರೈಸುತ್ತಿದ್ದರು. ಮಕ್ಕಳಿಬ್ಬರು ಸಹ ತಂದೆಯ ಆಸೆಯಂತೆ ಓದಿನಲ್ಲಿ ಸಾಧನೆ ಮಾಡುತ್ತಾ ಇದ್ದರು ಮಗಳು ನೇಹಾ ಬುದ್ಧಿವಂತಿಕೆಯ ಜೊತೆಗೆ ಪ್ರತಿಭಾವಂತರಾಗಿದ್ದರು. ಸಹೋದರ ಅಭಿಷೇಕ್ ಗಿಂತ ಮುಂದೆ ಇದ್ದಳು. ಹೀಗಿದ್ದ ಕುಟುಂಬಕ್ಕೆ ಅದೊಂದು ಬರ ಸಿಡಿಲು ಬಡಿಯಿತು. ಅದು ಯಾವ ದುಷ್ಟ ಶಕ್ತಿ ಕಣ್ಣು ಈ ಕುಟುಂಬದ ಮೇಲೆ ಬಿದ್ದಿತೋ ಗೊತ್ತಿಲ್ಲ. ಅಭಿಷೇಕ್ ಹೆಣ್ಣು ಮಕ್ಕಳಂತೆ ವರ್ತಿಸತೊಡಗಿದ್ದ. 20 ವರ್ಷ ದ ಅಭಿಷೇಕ್ ಏರ್ಲನ್ ಕೋರ್ಸ್ಗೆ ಜೈನ್ ಆಗಿದ್ದ. ಆದರೆ ಅವನಲ್ಲಿ ಹೆಣ್ಣಿನ ಭಾವನೆಗಳು ಹುಟ್ಟಲು ಪ್ರಾರಂಭಿಸಿದ್ದವು. ಅವನು ಹೆಣ್ಣುಮಕ್ಕಳಂತೆ ಆಡುತ್ತಿದ್ದ. ಸಾಲದ್ದಕ್ಕೆ ತನ್ನ ಸಹೋದ್ಯೋಗಿ ಜೊತೆ ಸ’ಲಿಂ’ಗಿಯ ಸಂಪರ್ಕವಿಟ್ಟುಕೊಂಡಿದ್ದ. ಇದು ವರ್ಷಗಳವರೆಗೆ ಮುಂದುವರೆಯಿತು. ವಯಸ್ಸಿಗೆ ಬಂದ ಮೇಲೆ ಅವನು ಯುವಕನನ್ನು ವಿವಾಹವಾಗಲು ಬಯಸಿದ್ದ. ಆದರೆ ತಾನು ಒಬ್ಬ ಯುವಕ ಎಂಬುದು ಸಂಪೂರ್ಣವಾಗಿ ಮರೆತು ಹೋಗಿದ್ದ.


ಈ ವಿಷಯವನ್ನು ಒಂದುದಿನ ಮನೆಯವರಿಗೆ ಧೈರ್ಯವಾಗಿ ಹೇಳಿಯೇಬಿಟ್ಟ. ಆದರೆ ಕುಟುಂಬಸ್ಥರು ಇದಕ್ಕೆ ಒಪ್ಪಲಿಲ್ಲ.ನಿನಗೆ ವೈದ್ಯರ ಅವಶ್ಯಕತೆ ಇದೆ, ನೀನು ಹುಡುಗ, ಹೀಗೆ ಆಡಬಾರದು ಎಂದು ಎಷ್ಟೇ ತಿಳಿಹೇಳಿದರೂ ಆತ ಒಪ್ಪಲಿಲ್ಲ.ಸಹೋದರಿ ನೇಹಾ ಅಣ್ಣನಿಗೆ ಒಂದು ವೇಳೆ ಹಾಗೆ ಅನಿಸ್ತಿದೆ ಅಂದ್ರೆ ವೈದ್ಯರ ಬಳಿ ಹೋಗೋಣ ಎಂದಳು. ಇದಕ್ಕೆ ವೈಜ್ಞಾನಿಕ ಚಿಕಿತ್ಸೆ ಗಳು ಇವೆ. ಒಂದು ವೇಳೆ ಆಪರೇಷನ್ ಮಾಡಿ ನಿನ್ನ ಹಾರ್ಮೋನ್ಸ್ ಗಳನ್ನು ಚೇಂಜ್ ಮಾಡಬಹುದು ಎಂದು ಸಲಹೆ ನೀಡಿದಳು. ಈ ಉತ್ತರಗಳನ್ನು ಮೊದಲೇ ನಿರೀಕ್ಷಿಸಿದ್ದ ಅಭಿಷೇಕ್ ನಾನು ವಿವಾಹವಾದರೆ ಯುವಕನನ್ನೇ ಎಂದು ಹಠ ಹಿಡಿದ. ಒಂದು ವೇಳೆ ನಾನು ಆಪರೇಷನ್ ಮಾಡಿಕೊಳ್ಳುವುದಾದರೆ ಹುಡುಗಿಯಾಗುವಂತೆ ಆಪರೇಷನ್ ಮಾಡಿಸಿಕೊಳ್ಳುವೆ. ಆಗ ಪ್ರೀತಿಸಿದ ಅವನನ್ನೇ ವಿವಾಹವಾಗುತ್ತೇನೆ. ಇಲ್ಲವಾದಲ್ಲಿ ‘ಗೆ ‘ ಆಗಿ ಉಳಿಯುತ್ತೇನೆ ಎಂದು ಕುಟುಂಬಸ್ಥರಿಗೆ ಧಮಕಿ ಹಾಕಿದ. ಇದಕ್ಕೆ ಕುಟುಂಬಸ್ಥರು ವಿರೋಧಿಸಿದರು. ಆತನ ಜೊತೆ ಸಂಪರ್ಕವಿಟ್ಟುಕೊಂಡು ಸಹೋದ್ಯೋಗಿಯೊಂದಿಗೆ ಮಾತನಾಡಿದಾಗ ಸಹೋದ್ಯೋಗಿ ಅವನ ಜೊತೆ ನಾನಿದ್ದೇನೆ ಅವರ ಚಿಂತೆ ಬಿಡಿ ಎಂದು ಕುಟುಂಬ ಕ್ಕೆ ಧೈರ್ಯ ಹೇಳಿದ್ದ.


ಅಭಿಷೇಕ್ ನಲ್ಲಿ ಭಾವನೆಗಳು ವಿಪರೀತಕ್ಕೆ ಏರಿದ್ದವು. ಆತನಲ್ಲಿ ಹಲವಾರು ಬದಲಾವಣೆಗಳು ಆಗಿದ್ದವು. ಅಭಿಷೇಕ್ ಮನೆಯವರ ಮೇಲೆ ಈ ಕಾರಣಕ್ಕೆ ದ್ವೇಷ ಬೆಳಸಿಕೊಂಡಿದ್ದ. ಆಗ ಆತ ಎಲ್ಲರನ್ನೂ ಕೊಂ’ದು’ಬಿಡುವ ಯೋಜನೆಯೊಂದನ್ನು ರೂಪಿಸಿದ. ನಂತರ ತಾನು ಆಪರೇಷನ್ನು ಮಾಡಿಕೊಂಡು ತನ್ನ ಸಹೋದ್ಯೋಗಿಯೊಂದಿಗೆ ಮದುವೆಯಾಗಿ ಸುಖಿಯಾಗಿರಲಿ ಯೋಚಿಸಿದ್ದ. ಅದರಂತೆ 2021 ಆಗಸ್ಟ್ 27ರಂದು ತಂದೆ ರೂಮಿನಲ್ಲಿದ್ದ ಪ್ರೈವೇಟ್ ಗ’ನ್ ಕದ್ದುಕೊಂಡು ತಂಗಿ ನೇಹ ಇದ್ದ ರೂಮಿಗೆ ಹೋಗಿದ್ದ. ಅವಳು ಹಿಂದಿ ಸಿನಿಮಾ ನೋಡುತ್ತಿದ್ದಳು. ಕೈಯಲ್ಲಿದ್ದ ರಿಮೋಟ ನ್ನು ಕಿತ್ತುಕೊಂಡ ಅಭಿಷೇಕ್ ಬೇರೆ ಹಿಂದಿ ಸಾಂಗ್ ಒಂದು ಜೋರಾಗಿ ಹಚ್ಚಿ ಅವಳ ತಲೆಗೆ ಗುರಿಯಿಟ್ಟು ಮಾಡಿದ್ದ. ನೇಹಾ ಹಿಂದೆ ತಿರಿಗಿದ ಕಾರಣ ಗುಂಡು ಅವಳ ಬಲ ದವಡೆಗೆ ತಾಕಿ ನೆಲಕ್ಕೆ ಬಿದ್ದಳು. ಅವಳ ರೂಮಿನ ಟಿವಿ ಸೌಂಡ್ ಜಾಸ್ತಿ ಮಾಡಿ, ಅಭಿಷೇಕ ರೂಮ್ ಲಾಕ್ ಮಾಡಿಕೊಂಡು ಆಚೆ ಬಂದ. ನಂತರ ಅಜ್ಜಿ ರೂಮಿಗೆ ಹೋಗಿ ಯಥಾಸ್ಥಿತಿ ಟಿವಿ ಸೌಂಡ್ ಅನ್ನು ಜೋರಾಗಿ ಇಟ್ಟು ಅಜ್ಜಿಯನ್ನು ಸಹ ಕೊಂ’ದ. ನಂತರ ಅಡುಗೆಮನೆಯಲ್ಲಿದ್ದ ತಾಯಿಯನ್ನು ರೂಮಿಗೆ ಕರೆದುಕೊಂಡು ಹೋಗಿ, ಅವಳ ಹಣೆಗೆ ನೇರವಾಗಿ ಗುಂಡಿಟ್ಟು ಕೊಂ’ದಿ’ದ್ದ. ಟಿವಿ ಯ ಶಬ್ದವು ಅತಿಯಾಗಿ ಇಟ್ಟಿದ್ದರಿಂದ ಹಾಲ್ನಲ್ಲಿ ಯಾವುದೋ ಲೆಕ್ಕಪತ್ರದಲ್ಲಿ ತೊಡಗಿದ್ದ ತಂದೆಗೆ ಇದರ ಅರಿವೇ ಇರಲಿಲ್ಲ.


ಹಾಲಿನ ಸೋಫಾದಲ್ಲಿ ಕುಳಿತಿದ ತಂದೆಯ ಬಳಿ ಹೋದ ಅಭಿಷೇಕ್ ಅವರ ಎದುರು ನಿಂತು.. ಇನ್ನುಳಿದ ಮೂರು ಗುಂಡುಗಳನ್ನು ಅವರ ಹಣೆಗೆ ನೇರವಾಗಿರಿಸಿ ಬಿಟ್ಟಿದ್ದ. ನಂತರ ಏನೂ ನಡೆದೇ ಇಲ್ಲ ಎನ್ನುವಂತೆ ತನ್ನ ಲಗೇಜನ್ನು ಪ್ಯಾಕ್ ಮಾಡಿಕೊಂಡು, ಮನೆಯಲ್ಲಿದ್ದ ಹಣವನ್ನು ದೋ’ಚಿ ದೆಹಲಿ ವಿಮಾನ ನಿಲ್ದಾಣಕ್ಕೆ ಹೋಗಿದ್ದ. ಅಲ್ಲಿಂದ ತನ್ನ ಸಹೋದ್ಯೋಗಿಗೆ ಕರೆ ಮಾಡಿ ನಡೆದ ಎಲ್ಲ ಘ’ಟ’ನೆ ತಿಳಿಸಿ ಅಲ್ಲಿಂದ ಮಾಯವಾಗಿದ್ದ. ಇತ್ತ ಮಾವನಿಗೆ ಕರೆ ಮಾಡಿ ನನ್ನ ಕರೆಗಳನ್ನು ಮನೆಯಲ್ಲಿ ಯಾರೂ ಕೂಡ ಸ್ವೀಕರಿಸುತ್ತಿಲ್ಲ. ನಾನು ಬೇರೆ ಕಡೆ ಇದ್ದೇನೆ ನೀವು ಸ್ವಲ್ಪ ಮನೆಗೆ ಹೋಗಿ ಏನಾಯಿತು ಎಂದು ವಿಚಾರಿಸಿ ಎಂದು ಕರೆ ಮಾಡಿ ತಿಳಿಸುತ್ತಾನೆ. ವಿಷಯ ತಿಳಿದಕೂಡಲೇ ಮಾವ ತಂಗಿಯ ಮನೆಗೆ ಹೋಗುತ್ತಾನೆ. ಅಲ್ಲಿ ಹೋಗಿ ನೋಡಿದರೆ ಎಲ್ಲರೂ ರಕ್ತದ ಮಡುವಿನಲ್ಲಿ ಬಿದ್ದು ಒದ್ದಾಡಿ ಪ್ರಾ’ಣ ಬಿಟ್ಟಿದ್ದರು. ಆದರೆ ಸ್ನೇಹ ಮಾತ್ರ ಉ’ಸಿ’ರಾಡುತ್ತಿದ್ದಳು. ಇವಳನ್ನು ಆಸ್ಪತ್ರೆಗೆ ಸೇರಿಸಿದ ರಾದರೂ ಎರಡು ದಿನಗಳ ಬಳಿಕ ಇವಳು ಸಹ ಸಾವನ್ನಪ್ಪಿದಳು. ಅಭಿಷೇಕ್ ಮನೆಯಿಂದ ಲಗೆಜ್ ಸಮೇತ ಹೊರಹೋದ ದೃಶ್ಯಗಳು ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿತ್ತು. ಅನುಮಾನಗೊಂಡ ಪೊಲೀಸರು ಆತನನ್ನು ಬಂಧಿಸಿ ಸ್ಟೇಷನ್ಗೆ ಕರೆತಂದರು. ಮೊದಮೊದಲು ನನಗೇನು ಗೊತ್ತಿಲ್ಲ ಎಂದ ಅಭಿಷೇಕ ನಂತರ ಪೊಲೀಸರ ಭಾಷೆಯಲ್ಲಿ ಕೇಳಿದಾಗ ನಡೆದ ದುರಂತ ಕಥೆಯನ್ನು ಹೇಳಿದ. ತನ್ನ ಇಷ್ಟ ಆಸೆಗಳನ್ನು ಪೂರೈಸಿಕೊಳ್ಳಲು ಆತ ಮನೆಬಿಟ್ಟು ಹೋಗಬಹುದಾಗಿತ್ತು ಅಥವಾ ದೇಶ-ವಿದೇಶಗಳಿಗೆ ಹೋಗಬಹುದಾಗಿತ್ತು ಆದರೆ ಕುಟುಂಬವನ್ನೇ ಸರ್ವನಾಶ ಮಾಡಬರದಿತ್ತು. ಹೆತ್ತು ಹೊತ್ತ ತಂದೆ ತಾಯಿಯನ್ನು ನಿರ್ಧಾಕ್ಷಿಣ್ಯವಾಗಿ ಕೊಂದ ಅಭಿಷೇಕನ ಈ ದುರಂತ ಘ’ಟ’ನೆ ಎಲ್ಲರನ್ನು ದಂಗಗುವಂತೆ ಮಾಡಿದೆ..