Advertisements

ಹೀರೋಗಳಿಗೂ ಇಲ್ಲ ಇವರ ಡಿಮ್ಯಾಂಡ್.. ಪ್ರತೀ ಸಿನಿಮಾಗೂ ಇವರೇ ಬೇಕು ಯಾಕೆ ಗೊತ್ತಾ?

Cinema

ಕನ್ನಡದ ಪ್ರಖ್ಯಾತ ಪೋಷಕ ನಟ ಅಚ್ಯುತ್ ಕುಮಾರ್ ಅವರ ವಯಕ್ತಿಕ ಜೀವನದ ಕಿರುನೋಟ ನಿಮ್ಮ ಮುಂದೆ. ಸ್ನೇಹಿತರೇ ತನ್ನ ಸರಳ ವ್ಯಕ್ತಿತ್ವದ ಮೂಲಕ ಸುಂದರವಾದ ಅಭಿನಯದ ಮುಖೇನ ಕನ್ನಡ ಸಿನಿರಂಗದಲ್ಲಿ ಗುರುತಿಸಿಕೊಂಡವರು ನಟ ಅಚ್ಯುತ್ ಕುಮಾರ್. ಇವರು ಮೂಲತಃ ತುಮಕೂರಿನ ತಿಪಟೂರಿನವರು, ಆದರೆ ಎಷ್ಟೋ ಜನ ಇವರ ಭಾಷಾ ಶೈಲಿಗೆ, ಹಾಗೂ ಕಥೆಯನ್ನು ಆಯ್ಕೆ ಮಾಡಿಕೊಳ್ಳುವ ರೀತಿಗೆ ಕರಾವಳಿ ಭಾಗದವರಾ ನೀವು ಅಂತ ಕೇಳಿದ್ದು ಉಂಟು. ತನ್ನ ಹುಟೂರಿನಲ್ಲಿಯೇ ಎಲ್ಲ ವಿಧ್ಯಾಭ್ಯಾಸವನ್ನು ಪೂರೈಸಿ ಕಲ್ಪತರು ಫಸ್ಟ್ ಗ್ರೇಡ್ ಕಾಲೇಜಿನಲ್ಲಿ ಪದವಿಯನ್ನು ಮುಗಿಸಿದ್ದಾರೆ. ಬಿಕಾಂನಲ್ಲಿ ಪದವಿ ಪಡೆದ್ರು, ಇವರ ಮನಸ್ಸು ವಾಲಿದ್ದು ಮಾತ್ರ ರಂಗಭೂಮಿಯತ್ತ.

[widget id=”custom_html-3″]

Advertisements

ನೀನಾಸಂ ತಂಡವನ್ನು ಸೇರಿಕೊಂಡು ಅಭಿನಯವನ್ನು ಕಲಿತು ತಂಡದೊಂದಿಗೆ ಬಹುತೇಕ ಪ್ರದರ್ಶನವನ್ನು ಅಚ್ಯುತ್ ಅವರು ಪ್ರದರ್ಶಿಸಿದ್ದಾರೆ, ನಂತರ ತನ್ನದೇ ಒಂದು ತಂಡ ಕಟ್ಟಿ ಒಂದು ದಶಕಗಳ ಕಾಲ ಆ ತಂಡವನ್ನು ಮುನ್ನೆಡೆಸಿದ ಕೀರ್ತಿಯೂ ಅಚ್ಯುತ್‌ಗಿದೆ. ಸಿನಿಮಾ ರಂಗದಲ್ಲಿ ಪ್ರಜ್ವಲಿಸ್ತಾಯಿರುವ ಅಚ್ಯುತ್ ಅವರಿಗೆ ನೇರವಾಗಿ ಚಂದನವನದಲ್ಲಿ ಬಣ್ಣ ಹಚ್ಚುವ ಅವಕಾಶ ಸಿಗಲಿಲ್ಲ, ಅದು ಸುಮಾರು ಎರಡು ಸಾವಿರನೇ ಇಸವಿಯ ಕಾಲ. ಆ ಸಂದರ್ಭದಲ್ಲಿ ಕನ್ನಡ ಧಾರವಾಹಿ ಲೋಕವನ್ನು ಖಾಸಗಿ ವಾಹಿನಿಗಳು ಆಳ್ವಿಕೆ ನಡೆಸ್ತಾ ಇರಲಿಲ್ಲ, ಆಗ ದೂರದರ್ಶನ ಡಿಡಿಯಲ್ಲಿ ಮಾತ್ರ ಧಾರವಾಹಿಗಳು ಬರ್ತಾಯಿತ್ತು. ಗಿರೀಶ್ ಕಾಸರವಳ್ಳಿಯವರ ಗೃಹಭಂಗ ಅನ್ನೋ ಧಾರವಾಹಿ ಮುಖೇನ ಅಚ್ಯುತ್ ಅವರು ಸೀರಿಯಲ್ ಲೋಕಕ್ಕೆ ಎಂಟ್ರಿ ಕೊಡ್ತಾರೆ..

[widget id=”custom_html-3″]

ಅದಾದ ಬಳಿಕ ಗುಪ್ತಗಾಮಿನಿ, ಪ್ರೀತಿಯಿಲ್ಲದ ಮೇಲೆ ಅನೇಕ ಪ್ರಖ್ಯಾತ ಧಾರವಾಹಿಗಳಲ್ಲಿ ಬಣ್ಣ ಹಚ್ತಾರೆ. ನಂತರ ಮೌನಿ ಅನ್ನೋ ಸಿನಿಮಾದ ಮೂಲಕ ಸಿನಿ ಪಯಣವನ್ನು ಆರಂಭಿಸ್ತಾರೆ. ಆದರೆ ಅಚ್ಯುತ್ ಅವರಿಗೆ ಬಿಗ್ ಹಿಟ್ ತಂದುಕೊಟ್ಟ ಸಿನಿಮಾ ಅಂದರೆ ಮೊಗ್ಗಿನ ಮನಸ್ಸು. ಟಿನೇಜ್ ಹುಡುಗಿಯ ತಂದೆಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದು, ಅಪಾರ ಜನಮನ್ನಣೆಯನ್ನು ಗಳಿಸಿದ್ದಾರೆ. ನಂತರ ಆ ದಿನಗಳು, ಜೋಷ್, ಮನಸಾರೆ, ಉಳಿದವರು ಕಂಡಂತೆ, ಲೂಸಿಯಾ, ಕಿರಿಕ್ ಪಾರ್ಟಿ, ದೃಶ್ಯಂ ಹೀಗೆ ಸಾಲು ಸಿನಿಮಾಗಳಲ್ಲಿ ಅಭಿನಯಿಸ್ತಾರೆ.

[widget id=”custom_html-3″]

ಅಚ್ಯುತ್ ಎಷ್ಟು ಬ್ಯುಸಿಯಾದ್ರು ಅಂದ್ರೆ, ವರ್ಷಕ್ಕೆ ಹದಿನೈದರಿಂದ ಹದಿನಾರು ಸಿನಿಮಾಗಳಲ್ಲಿ ಮುಖ್ಯಪಾತ್ರದಲ್ಲಿ ಕಾಣಿಸಿಕೊಳ್ಳುವಷ್ಟು ಬ್ಯುಸಿಯಾದ್ರು. ನೂರಕ್ಕೂ ಹೆಚ್ಚು ಸಿನಿಮಾಗಳಲ್ಲಿ ಅಭಿನಯಿಸಿದ್ದು, ಮೂರು ಫಿಲ್ಮ್ ಫೇರ್ ಅವಾರ್ಡ್, ಹಾಗೂ ಎರಡು ರಾಜ್ಯ ಪ್ರಶಸ್ತಿಯನ್ನು ಸಹ ಮುಡಿಗೇರಿಸಿಕೊಂಡಿದ್ದಾರೆ. ಉಳಿದಂತೆ ಸಾಕಷ್ಟು ಪ್ರಶಸ್ತಿ ಸನ್ಮಾನವನ್ನು ಸಹ ಅಚ್ಯುತ್ ಸ್ವೀಕರಿಸಿದ್ದಾರೆ. ನೈಜ ಅಭಿನಯದ ಮೂಲಕ ಕನ್ನಡಿಗರ ಹೃದಯ ಗೆದ್ದಿರುವ ಅಚ್ಯುತ್ ಸಿನಿಮಾಗಳಲ್ಲಿ ಅಭಿನಯಿಸುವ ಬ್ಯುಸಿ ನಟನಾಗಲಿ ಎಂಬುವುದೇ ನಮ್ಮ ಆಶಯ.. ಇವರ ಬಗ್ಗೆ ನೀವೇನ್ ಹೇಳ್ತಿರಾ..