Advertisements

ಅನಂತ್ ನಾಗ್ ಅವರ ಮಗಳು ಅಳಿಯ ಹೇಗಿದ್ದಾರೆ ನೋಡಿ..

Cinema

ನಮಸ್ತೆ ಸ್ನೇಹಿತರೆ, ಅನಂತ್ ನಾಗ್ ಅವರು 1948 ರಲ್ಲಿ ಬಾಂಬೆಯಲ್ಲಿ ಹುಟ್ಟಿದರು.. ಇವರಿಗೆ ಈಗ 72 ವರ್ಷ.. ಇವರ ಮಾತೃಭಾಷೆ ಕೊಂಕಣಿ. ಇವರಿಗೆ ಒಬ್ಬ ತಮ್ಮ ಹಾಗೂ ಅಕ್ಕ ಇದ್ದಾರೆ.. ಇವರ ತಮ್ಮನ ಹೆಸರು ಶಂಕರ್ ನಾಗ್ ಹಾಗೂ ಇವರ ಅಕ್ಕನ ಹೆಸರು ಶೈಮಾಲಾ.. ಅನಂತ್ ನಾಗ್ ಅವರು ಒಂದು ಬಾರಿ ಎಮ್,ಏನ್, ಸಿ ಮತ್ತು ಎಮ್,ಎಲ್,ಎ ಆಗಿದ್ದರು.. ಇವರು ಹಿಂದಿ, ಮರಾಠಿ, ತಮಿಳು ಹಾಗೂ ಕನ್ನಡ ಸಿನಿಮಾಗಳಲ್ಲಿ ನಟಿಸಿದ್ದಾರೆ.. ಅದರಲ್ಲೂ ಅನಂತ್ ನಾಗ್ ಅವರು ಹೆಚ್ಚಾಗಿ ಅಭಿನಯಿಸಿರುವ ಸಿನಿಮಾರಂಗವೆಂದರೆ ಅದು ಕನ್ನಡ ಚಿತ್ರರಂಗ.. ಬರೋಬ್ಬರಿ 100 ಕ್ಕಿಂತ ಹೆಚ್ಚು ಸಿನಿಮಾಗಳಲ್ಲಿ ಅನಂತ್ ನಾಗ್ ಅವರು ನಟಿಸಿದ್ದಾರೆ..

Advertisements

ಇನ್ನೂ ಇವರು ಸಿನಿಮಾದಲ್ಲಿ ಅಭಿನಯಿಸುತ್ತಿರುವಾಗಲೇ ನಟಿ ಗಾಯತ್ರಿ ಅವರನ್ನು ಇಷ್ಟಪಡುತ್ತಾರೆ.. ನಂತರ ನಟಿ ಗಾಯತ್ರಿ ಅವರು ಒಪ್ಪಿಗೆ ನೀಡಿದ ನಂತರ 1987 ರಲ್ಲಿ ಇವರಿಬ್ಬರೂ ದಾಂಪತ್ಯ ಜೀವನಕ್ಕೆ ಕಾಲಿಡುತ್ತಾರೆ.. ಅನಂತ್ ನಾಗ್ ಅವರಿಗೆ ಒಬ್ಬ ಹೆಣ್ಣು ಮಗಳು ಕೂಡ ಇದ್ದಾರೆ.. ಇವರ ಹೆಸರು ಅದಿತಿ.. ಇನ್ನೂ ಅದಿತಿಯವರು ಪೋಸ್ಟ್ ಗ್ರಾಜುಯೇಟ್ ಮುಗಿಸಿದ್ದು ಈಗ ಖಾಸಗಿ ಕಂಪನಿಯಲ್ಲಿ ಕೆಲಸವನ್ನು ಮಾಡುತ್ತಿದ್ದಾರೆ.. ಇವರು ಚಿತ್ರರಂಗದ ಕಾರ್ಯಕ್ರಮದಲ್ಲಿ ಅಷ್ಟಾಗಿ ಕಾಣಿಸಿಕೊಂಡಿಲ್ಲ.. ಇನ್ನೂ ಅನಂತ್ ನಾಗ್ ಅವರು ತನ್ನ ಮಗಳಾದ ಅದಿತಿಯವರನ್ನ ವಿವೇಕ್ ಅವರ ಜೊತೆ ಮದುವೆ ಮಾಡಿಕೊಟ್ಟಿದ್ದಾರೆ..

ಹೌದು ಇವರಿಬ್ಬರೂ ಒಂದೇ ಕಂಪನಿ ಕೋಟಕ್ ಮಹಿಂದ್ರಾದಲ್ಲಿ ಕೆಲಸ ಮಾಡುತ್ತಿದ್ದು ಇವರ ನಡುವೆ ಪ್ರೀತಿ ಬೆಳೆದು ನಂತರ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ.. ಈಗ ಅದಿತಿ ಮತ್ತು ವಿವೇಕ್ ಅವರು ಬೆಂಗಳೂರಿನಲ್ಲಿ ಸೆಟಲ್ ಹಾಗಿದ್ದಾರೆ.. ಅನಂತ್ ನಾಗ್ ಹೆಂಡತಿ ಗಾಯತ್ರಿಯವರು ಹೇಳುವ ಪ್ರಕಾರ! ಅನಂತ್ ನಾಗ್ ಅವರಿಗೆ ಅಡುಗೆ ಯಾವಾಗಲೂ ಪ್ರೇಶ್ ಇರಬೇಕು ಮತ್ತು ರಾತ್ರಿಯ ಊಟ ಬೆಳಗ್ಗೆ ಅಥವಾ ಬೆಳಗ್ಗಿನ ಊಟ ರಾತ್ರಿಗೆ ತಿನ್ನುವ ಅಭ್ಯಾಸ ಅನಂತ್ ನಾಗ್ ಅವರಿಗೆ ಇಲ್ಲ.. ಅದರಲ್ಲೂ ಹೊರಗಡೆ ತಿನ್ನುವುದಕ್ಕಿಂತ ಹೆಚ್ಚಾಗಿ ಮನೆಯಲ್ಲಿ ಊಟ ಮಾಡಲು ಬಯಸುತ್ತಾರೆ.. ಅವರು ನೋಡುವುದಕ್ಕೆ ಸ್ಮೂತ್ ಆಗಿ ಇದ್ದರೂ ಇವರಿಗೆ ಬೇಗನೆ ಕೋಪ ಬರುತ್ತದೆ ಎಂದು ನಟಿ ಗಾಯತ್ರಿಯವರು ಹೇಳಿಕೊಂಡಿದ್ದಾರೆ..

ಇನ್ನೂ ಅನಂತ್ ನಾಗ್ ಅವರು ಕೆಜಿಎಫ್ ನಲ್ಲಿ ರಾಕಿ ಬಾಯ್ ಅವರ ಕಥೆ ಹೆಳುವ ಪಾತ್ರವನ್ನು ಬಹಳ ಅದ್ಬುತವಾಗಿ ಅಭಿನಯಿಸಿದ್ದು ಜಗತ್ತಿಗೆ ಪರಿಚಿತರಾಗಿದ್ದಾರೆ.. ಬೇಸರದ ಸಂಗತಿ ಏನೆಂದರೆ ಕೆಜಿಎಫ್ ಭಾಗ ಎರಡಲ್ಲಿ ಅನಂತ್ ನಾಗ್ ಅವರು ಇಲ್ಲ ಎಂದು ತಿಳಿದು ಬಂದಿದೆ.. ಕೆಜಿಎಫ್ ಭಾಗ ಒಂದರಲ್ಲಿ ಕುತೂಹಲದಿಂದ ಸ್ಟೋರಿಯನ್ನು ಹೇಳುತ್ತಿದ್ದ ಅನಂತ್ ನಾಗ್ ಅವರು ಕೆಜಿಎಫ್ ಎರಡರಲ್ಲಿ ಇದ್ದಿದ್ದರೆ ಇನ್ನಷ್ಟು ಚೆನ್ನಾಗಿ ಇರುತ್ತಿತ್ತು ಎಂದು ಪ್ರೇಕ್ಷಕರ ಅಭಿಪ್ರಾಯವಾಗಿದೆ.. ಸ್ನೇಹಿತರೆ ನಿಮಗೆ ಅನಂತ್ ನಾಗ್ ಅವರು ನಟಿಸಿರುವ ಸಿನಿಮಾಗಳಲ್ಲಿ ಯಾವ ಸಿನಿಮಾ ತುಂಬಾ ಬಾರಿ ನೋಡಿದ್ದೀರಾ ಮತ್ತು ಆ ಸಿನಿಮಾ ಯಾವುದು ಎಂದು ನಿಮ್ಮ ಅನಿಸಿಕೆ ತಿಳಿಸಿ..