Advertisements

ಏಳೆಂಟು ತಿಂಗಳು ಬೇಸತ್ತಿದ್ದ ಅನಿರುದ್ಧ್ ಅವರು ಹೊರಟಿದ್ದೇಲ್ಲಿಗೆ ಗೊತ್ತಾ? ಫೋಟೊ ಗ್ಯಾಲರಿ ಫುಲ್ ವೈರಲ್..

Cinema

ನಮಸ್ತೆ ಸ್ನೇಹಿತರೆ, ಸ್ಯಾಂಡಲ್ವುಡ್ ನಟ ಅನಿರುದ್ಧ್ ಅವರು ಸದ್ಯಕ್ಕೆ ಚಿತ್ರೀಕರಣದಿಂದ ಬ್ರೇಕ್ ಪಡೆದು ಮಾಲ್ಡೀವ್ಸ್ ಪ್ರವಾಸ ಎಂಜಾಯ್ ಮಾಡುತ್ತಿದ್ದಾರೆ.. ಅನಿರುದ್ಧ್ ಅವರ ಜೊತೆ ಪತ್ನಿ ಮತ್ತು ಇಬ್ಬರು ಮಕ್ಕಳು ಸೇರಿದಂತೆ ಹಿರಿಯ ನಟಿ ಭಾರತಿ ವಿಷ್ಣುವರ್ಧನ್ ಸಹ ಮಾಲ್ಡೀವ್ಸ್ ಪ್ರವಾಸಕ್ಕೆ ತೆರಳಿದ್ದಾರೆ. ಸುಮಾರು ಒಂದು ವಾರದಿಂದ ಅನಿರುದ್ಧ್ ಅವರ ಕುಟುಂಬ ಮಾಲ್ಡೀವ್ಸ್ ಪ್ರವಾಸದಲ್ಲಿ ಇದ್ದಾರೆ.. ಅಂದಾಗೆ ಇತ್ತೀಚೆಗೆ ಸಾಕಷ್ಟು ಸೆಲೆಬ್ರಿಟಿಗಳು ಮಾಲ್ಡೀವ್ಸ್ ಕಡೆ ಪ್ರಯಾಣ ಬೆಳೆಸಿದ್ದಾರೆ. ಕನ್ನಡದ ನಟಿಯರಾದ ಶರ್ಮಿಳಾ ಮಂಡ್ರೆ, ಪ್ರಣಿತಾ ಸೇರಿದಂತೆ ಬಾಲಿವುಡ್ ಮತ್ತು ಬೇರೆ ಬೇರೆ ಬಾಷೆಯ ಅನೇಕ ನಟ ನಟಿಯರು ಮಾಲ್ಡೀವ್ಸ್ ಪ್ರವಾಸಕ್ಕೆ ಹೋಗಿ ಮಸ್ತ್ ಮಜಾ ಮಾಡ್ತಿದ್ದಾರೆ..

Advertisements

ಇದೀಗ ಅನಿರುದ್ಧ್ ಅವರ ಕುಟುಂಬದ ಸರದಿ. ಲಾಕ್ ಡೌನ್ ನಿಂದ ಸುಮಾರು ಏಳೆಂಟು ತಿಂಗಳು ಮನೆಯಲ್ಲಿ ಕುಳಿತಿದ್ದ ಸೆಲೆಬ್ರಿಟಿಗಳು ಈಗ ವಿದೇಶ ಪ್ರವಾಸ ಮಾಡಿ ಎಂಜಾಯ್ ಮಾಡ್ತಿದಾರೆ.. ಇದೀಗ ಜೊತೆ ಜೊತೆಯಲಿ ಧಾರವಾಹಿ ಮೂಲಕ ಪ್ರಸಿದ್ಧಿ ಗಳಿಸಿರುವ ಅನಿರುದ್ಧ್ ಕುಟುಂಬದ ಜೊತೆ ಮಾಲ್ಡೀವ್ಸ್ ಪ್ರವಾಸದ ಜಾಲಿ ಮೂಡ್ ನಲ್ಲಿ ಇದ್ದಾರೆ.. ಮಾಲ್ಡೀವ್ಸ್ ಪ್ರವಾಸದ ಪೊಟೊಗಳನ್ನ ಅನಿರುದ್ಧ್ ಅವರು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ..

ಸ್ಕೂಬಾ ಡ್ರೈವಿಂಗ್ ಸೇರಿದಂತೆ ಪತ್ನಿ ಮಕ್ಕಳ ಜೊತೆ ಅನೇಕ ಗೇಮ್ ಗಳಲ್ಲಿ ಭಾಗಿಯಾಗಿದ್ದಾರೆ.. ಅನಿರುದ್ಧ್ ಕುಟುಂಬದ ಸುಂದರ ಪೊಟೊಗಳಿಗೆ ಅಭಿಮಾನಿಗಳಿಂದ ಸಿಕ್ಕಾಪಟ್ಟೆ ಲೈಕ್ಸ್ ಹರಿದು ಬರುತ್ತಿದೆ. ನಟನೆ ಜೊತೆಗೆ ಅನಿರುದ್ಧ್ ಅವರು ಸಮಾಜಮುಖಿ ಕೆಲಸಗಳಲ್ಲಿಯೂ ತೊಡಗಿಸಿಕೊಂಡಿದ್ದಾರೆ.. ಸ್ವಚ್ಛತೆ ಬಗ್ಗೆ ಜಾಗೃತಿ ಮೂಡಿಸುತ್ತಿರುವ ಅನಿರುದ್ಧ್ ಅವರಿಗೆ ಬಿಬಿಎಂಪಿ ಅಧಿಕಾರಿಗಳು ಸಹ ಸಾಥ್ ನೀಡುತ್ತಿದ್ದಾರೆ..