Advertisements

ಪ್ರೀತಿಯ ಪತ್ನಿಯ ಹುಟ್ಟುಹಬ್ಬಕ್ಕೆ ಅನಿರುದ್ದ್ ಕೊಟ್ಟ ಸರ್ ಪ್ರೈಸ್ ಗಿಪ್ಟ್ ಏನು ಗೊತ್ತಾ? ನಿಜಕ್ಕೂ ಗ್ರೇಟ್.

Cinema

ನಮಸ್ತೆ ಸ್ನೇಹಿತರೆ ಇತ್ತೀಚಿಗೆ ಅತಿ ಹೆಚ್ಚು ನೋಡುವ ಧಾರವಾಹಿಯಲ್ಲಿ ಟಾಪ್ ಲಿಸ್ಟ್ ನಲ್ಲಿ ಇರುವ ಧಾರವಾಹಿ ಎಂದರೆ ಅದು ಜೊತೆಜೊತೆಯಲಿ. ಹೌದು ಈ ಧಾರವಾಹಿಯನ್ನು ನೋಡಲು ಪ್ರೇಕ್ಷಕರು ಮಿಸ್ ಮಾಡುವುದೇ ಇಲ್ಲ. ಇನ್ನೂ ಜೊತೆಜೊತೆಯಲಿ ನಟ ಅನಿರುದ್ದ್ ಅವರ ಪಾತ್ರ ಅಂತು ಅದ್ಬುತವಾಗಿದೆ ಇವರಿಗೆ ಎಷ್ಟು ಅಂಕಗಳನ್ನು ಕೊಟ್ಟರು ಕಮ್ಮಿನೆ ಅಷ್ಟರ ಮಟ್ಟಿಗೆ ತಮ್ಮ ಪಾತ್ರಕ್ಕೆ ಜೀವ ತುಂಬಿದ್ದಾರೆ.

Advertisements

ಇನ್ನು ಇಂದು ಅನಿರುದ್ದ್ ಅವರ ಪ್ರೀತಿಯ ಪತ್ನಿ ಕೀರ್ತಿ ವಿಷ್ಣುವರ್ದನ್ ಅವರ ಹುಟ್ಟ ಹಬ್ಬ ಇಂದು. ಧಾರವಾಹಿಯ ನಟನೆ ಮಾತ್ರವಲ್ಲದೆ ಹಲವು ಸಿನಿಮಾಗಳ ಮೂಲಕ ಸೈ ಎನಿಸಿಕೊಂಡಿರುವ ಇವರು ಯಾವುದೇ ಅಹಂ ತೋರದೆ ಸರಳವಾದ ಮಾತು ನಯ ವಿನಯವನ್ನು ನೋಡಿದ ಅಭಿಮಾನಿಗಳಿಗೆ ಇನ್ನಷ್ಟು ಹತ್ತಿರವಾಗಿದೆ‌. ಎಷ್ಟಾದರೂ ಡಾ.ವಿಷ್ಣುವರ್ಧನ್ ಅವರ ಕುಟುಂಭವಲ್ಲವೇ ಅವರ ರಕ್ತದಲ್ಲಿಯೇ ಬಂದಿದೆ ಸರಳತನ ಅನ್ನುವುದು.

ಇನ್ನೂ ಅನಿರುದ್ದ್ ಅವರು ಜಾಲತಾಣದಲ್ಲಿ ತುಂಬಾ ಆಕ್ಟಿವ್ ಇದ್ದು ಹಲವರಿಗೆ ಸ್ಪೂರ್ತಿಯನ್ನು ತುಂಬುವಂತಹ ಮಾತುಗಳನ್ನು ಹೇಳುತ್ತಿರುತ್ತಾರೆ. ಇನ್ನೂ ಕುಟುಂಬದ ಪೊಟೊಗಳನ್ನು ಸಹ ಅನಿರುದ್ದ್ ಅವರು ಹಂಚಿಕೊಳ್ಳುತ್ತಾ ಇರುತ್ತಾರೆ. ಈ ಹಿಂದೆಯು ಕೂಡ ಅನಿರುದ್ದ್ ಅವರು ತಮ್ಮ ಮಕ್ಕಳ ಜೊತೆ ಡ್ಯಾನ್ಸ್ ಮಾಡುವ ವೀಡಿಯೊ ಒಂದನ್ನು ಹಾಕಿದ್ದರು ಈ ವೀಡಿಯೋ ತುಂಬಾ ವೈರಲ್ ಆಗಿ ಅಭಿಮಾನಿಗಳು ಮೆಚ್ಚುಗೆಯನ್ನು ವ್ಯಕ್ತಪಡಿಸಿದ್ದರು. ಇನ್ನು ಇವರು ಪೊಟೊ ಜೊತೆಗೆ ಬರೆಯುವ  ಸಾಲುಗಳನ್ನು ನೋಡಿದರೆ ಕವಿಯಾಗಿಬಿಡುತ್ತಾರೆ ಅನಿಸುತ್ತದೆ ಅಷ್ಟು ಚಂದದ ಪದಗಳನ್ನು ಜೋಡಿಸಿ ಬರೆಯುತ್ತಾರೆ. ಇನ್ನೂ ಮುಖ್ಯವಾಗಿ ಅನಿರುದ್ದ್ ಅವರು ಮೊದಲು ಸಂಬಂಧಗಳಿಗೆ ಪ್ರಾಮುಖ್ಯತೆಯನ್ನು ಕೊಡಿ ಎನ್ನುವ ಮಾತುಗಳು ಅದೆಷ್ಟೊ ಸಂಬಂಧಗಳಿಗೆ ಆದರ್ಶವಾಗಿದೆ.

ಇನ್ನು ಇಂದು ಸಾಹಸಸಿಂಹ ಡಾ.ವಿಷ್ಣುವರ್ದನ್ ಅವರ ಪುತ್ರಿ ಅನಿರುದ್ದ್ ಅವರ ಪತ್ನಿ ಕೀರ್ತಿ ವಿಷ್ಣುವರ್ದನ್ ಅವರ ಹುಟ್ಟುಹಬ್ಬ. ಈ ದಿನ ಮಡದಿಗಾಗಿ ವಿಶೇಷ  ರೀತಿಯಲ್ಲಿ ಶುಭಾಶಯಗಳನ್ನು ತಿಳಿಸಿದ್ದು ಇವರು ಬರೆದಿರು ಸಾಲುಗಳ ಮೂಲಕ ತಮ್ಮ ಅಪರೂಪದ ಪೋಟೊವೊಂದನ್ನು ಮಧ್ಯರಾತ್ರಿಯೇ ಪೇಸ್ಬುಕ್ ಪೇಜ್ ನಲ್ಲಿ ಪೋಸ್ಟ್ ಮಾಡಿದ್ದಾರೆ. ಇಲ್ಲಿದೆ ನೋಡಿ ಅನಿರುದ್ದ್ ಅವರು ಮಡದಿಯ ಬಗ್ಗೆ ಅಂಚಿಕೊಂಡಿರುವ ಸಾಲುಗಳು.

ಇಂದು ನೀವು ಹುಟ್ಟಿದ ದಿನ ನನಗಾಗಿ ಹುಟ್ಟಿದ ದಿನವೇ ಇರಬೇಕು. ಬಹಳಷ್ಟು ಬಾರಿ ಹೇಳಿರುವೆನು. ಮತ್ತಷ್ಟು‌ ಬಾರಿ ಹೇಳುವೆನು. ಮುಂದೆಯೂ ಹೇಳುತ್ತಲೇ ಇರುವೆನು. ನನ್ನ ಜೀವನದ ಅತ್ಯಮೂಲ್ಯಗಳಲ್ಲಿ ಒಬ್ಬರು ನೀವು. ಸದಾ ಜೊತೆಯಾಗಿ ನಿಂತಿರುವಿರಿ. ನಾ ಸಾಗುವಾಗ ಪ್ರತಿ ಹೆಜ್ಜೆಯಲ್ಲಿಯೂ ನೀವಿರುವಿರಿ. ನಿಮ್ಮ ಕಾಳಜಿ, ನಿಮ್ಮ ಪ್ರೀತಿ, ನಿಮ್ಮ ಮಮತೆ, ನಿಮ್ಮ ಬಗ್ಗೆ ಹೇಳಲು ಪದಗಳು ಸಾಲದೆನಗೆ. ಕೆಲವೊಮ್ಮೆ ಮೂಕನಾಗುವ ಅನುಭವ ನಿಮ್ಮ ಬಗ್ಗೆ ಮಾತನಾಡುವಾಗ ನನಗಾಗುವುದು. ನನ್ನ ಆತ್ಮವೇ ನೀವಾಗಿರುವಿರಿ. ನನ್ನ ಜೀವನಕ್ಕೆ ಇಂತಹ ಅತ್ಯಮೂಲ್ಯವಾದ ಉಡುಗೊರೆ ನೀಡಿದ ಅಪ್ಪಾವ್ರಿಗೆ. ಅಮ್ಮನಿಗೆ ನಾನೆಂದೂ ಸದಾ ಚಿರಋಣಿಯಾಗಿರುವೆನು. ನನ್ನ ಬಾಳಿನ ದೇವತೆಯೂ ನೀವು. ನನ್ನೊಳಗಿನ ಆತ್ಮವೂ ನೀವು. ಮತ್ತೇನನು ಹೇಳಲಾಗದು. ನನ್ನ ಪ್ರತಿ ಪ್ರಾರ್ಥನೆಯ ಪ್ರಮುಖ ಭಾಗವೂ ನೀವೆ ಆಗಿರುವಿರಿ. ನಿಮ್ಮ ವ್ಯಕ್ತಿತ್ವ ನನಗೆಂದೂ ಸದಾ ಸ್ಪೂರ್ತಿಯೇ ಆಗಿದೆ. ನೂರ್ಕಾಲ ಸದಾ ಸಂತೋಷವಾಗಿ ಬಾಳಿ. ಹುಟ್ಟು ಹಬ್ಬದ ಹಾರ್ದಿಕ ಶುಭಾಶಯಗಳು. ಕೀರ್ತಿಜಿ ನಿಮ್ಮ ಅನಿರುದ್ದ್.

ನಿಜಕ್ಕೂ ಒಂದು ಅಂಗಿ ಬಟ್ಟೆ ಹಾಕಿಕೊಂಡರೆ ಅದು ಕೆಲವು ದಿನಗಳ ನಂತರ ಆ ಅಂಗಿ ಹರಿದು ಹೋಗುತ್ತದೆ
ನಾವು ಇರುವ ತನಕ ಹರಿಯದೇ ಉಳಿಯುವ ಅಂಗಿಯೆಂದರೆ ಅದೇ ಅರ್ಧಾಂಗಿ. ಸುಖಕರವಾಗಿ ಇರಲಿ ಈ ನಿಮ್ಮ ದಾಂಪತ್ಯದ ಜೀವನ ನಗು ನಗುತ ಬಾಳಿ ನೂರಾರು ಕಾಲ ಹುಟ್ಟು ಹಬ್ಬದ ಹಾರ್ಧಿಕ ಶುಭಾಷಯಗಳು ಮೇಡಂ.