Advertisements

ನಟ ಚರಣ್ ರಾಜ್ ರವರ ಮಗ ಯಾರು ಗೊತ್ತಾ? ಇವರೂ ಕೂಡ ಕನ್ನಡದ ಟಾಪ್ ನಟ..

Cinema

[widget id=”custom_html-3″]

ನಟ ಚರಣ್ ರಾಜ್ ರವರ ಮಗ ಯಾರು ಗೊತ್ತಾ. ಇವರು ಕೂಡ ಕನ್ನಡದ ಫೇಮಸ್ ನಟ ಕನ್ನಡದ ಆಶಾ ಚಿತ್ರದ ಮೂಲಕ ನಮ್ಮ ಸಿನಿಮಾ ಪಯಣ ಆರಂಭ ಮಾಡಿದ ನಟ ಚರಣ್ ರಾಜ್ ರವರು ನಂತರ ತಾಳಿಯಭಾಗ್ಯ ಸಿನಿಮಾದಲ್ಲಿ ನಟಿಸಿದ್ದರು. ನಮ್ಮ ಕರ್ನಾಟಕದ ಬೆಳಗಾವಿಯಲ್ಲಿ ಹುಟ್ಟಿದ ನಟ ಚರಣ್ ರಾಜ್ ಅವರು ಕನ್ನಡದಲ್ಲಿ ಅವಕಾಶಗಳು ಇಲ್ಲದೆ ತೆಲುಗು ತಮಿಳು ಭಾಷೆಗಳತ್ತ ಮುಖ ಮಾಡಿದರು. ಚರಣ್ ರಾಜ್ ರವರ ಪ್ರತಿಭೆಯನ್ನ ಗುರುತಿಸಿದ ಅಂದಿನ ತೆಲುಗು ತಮಿಳು ನಿರ್ದೇಶಕರು ನಟ ಚರಣ್ ರಾಜ್ ಅವರನ್ನ ಕರೆದು ಅವಕಾಶ ನೀಡಿದರು. ಇದನ್ನು ಸರಿಯಾಗಿ ಉಪಯೋಗಿಸಿಕೊಂಡ ಚರಣ್ ರಾಜ್ ಅವರು ಇಂದು ಬೆಳೆದು ದಕ್ಷಿಣ ಭಾರತದ ಖ್ಯಾತ ನಟರಲ್ಲಿ ಸ್ಥಾನ ಪಡೆದುಕೊಂಡರು.

[widget id=”custom_html-3″]

Advertisements

ಬೇರೆ ಭಾಷೆಗಳಲ್ಲಿ ಎಷ್ಟೇ ಹೆಸರು ಮಾಡಿದರು ಕೂಡ ಕನ್ನಡ ಚಿತ್ರರಂಗವನ್ನು ಮರೆಯಲಿಲ್ಲ. ಕನ್ನಡದಲ್ಲಿ ನಾಯಕನಟರಾಗಿ ಪೋಷಕ ನಟರಾಗಿ ಖಳನಟರಾಗಿ ಹಲವಾರು ಸಿನಿಮಾಗಳಲ್ಲಿ ನಟಿಸಿದ್ದರು. ಕನ್ನಡದಲ್ಲಿ ಆಫ್ರಿಕಾದಲ್ಲಿ ಶೀಲಾ ಗಂಧದಗುಡಿ ಭಾಗ2 ಸಮರ ಅಣ್ಣಾವ್ರ ಮಕ್ಕಳು ಇನ್ನು ಮುಂತಾದ ಚಿತ್ರಗಳು ಇವರಿಗೆ ತುಂಬಾ ಹೆಸರು ತಂದುಕೊಟ್ಟವು. ಕನ್ನಡದಲ್ಲಿ 25ಕ್ಕೂ ಹೆಚ್ಚು ತಮಿಳುನಲ್ಲಿ 45ಕ್ಕೂ ಹೆಚ್ಚು ಮತ್ತು ತೆಲುಗಿನಲ್ಲಿ 30ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟ ಚರಣ್ ರಾಜ್ ಅವರು ನಟಿಸಿದ್ದಾರೆ. ಮಲಯಾಳಂ ಹಾಗೂ ಹಿಂದಿ ಚಿತ್ರಗಳಲ್ಲಿ ನಟಿಸಿ ತಮ್ಮ ನಟನಾ ಕೌಶಲ್ಯವನ್ನ ತೋರಿಸಿದ್ದಾರೆ.

[widget id=”custom_html-3″]

ಇವರು ನಟರಾಗಿ ನಿರ್ದೇಶಕರಾಗಿ ಸಂಗೀತ ನಿರ್ದೇಶಕರಾಗಿ ಬರಹಗಾರರಾಗಿ ನಿರ್ಮಾಪಕರಾಗಿ ದಕ್ಷಿಣ ಭಾರತದ ಚಿತ್ರರಂಗದಲ್ಲಿ ತಮ್ಮ ಬಹುಮುಖ ಪ್ರತಿಭೆಯನ್ನು ತೋರಿಸಿದ್ದಾರೆ. ಇನ್ನು ನಟ ಚರಣ್ ರಾಜ್ ಅವರಿಗೆ ಒಬ್ಬ ಮಗ ಇದ್ದು ಹೆಸರು ತೇಜ ರಾಜ್ ಇವರು ಕೂಡ ತಂದೆಯಂತೆ ತಮಿಳು ಫಿಲಂ ಇಂಡಸ್ಟ್ರಿಯಲ್ಲಿ ಮಿಂಚುತ್ತಿದ್ದಾರೆ. ತೇಜ ರಾಜ್ ಅವರು ತಮಿಳು ನೈಂಟಿ ಎಂಎಲ್ ಸಿನಿಮಾದಲ್ಲಿ ನಟಿಸಿದ್ದಾರೆ. ತಮಿಳಿನ ಇನ್ನು ಎರಡು ಮೂರು ಸಿನಿಮಾಗಳಲ್ಲಿ ಬಣ್ಣಹಚ್ಚಿದ್ದಾರೆ ತೇಜ ರಾಜ್ ಭರತ ಬಾಹುಬಲಿ ಎಂಬ ಕನ್ನಡ ಸಿನಿಮಾದಲ್ಲಿ ನಟ ತೇಜ ರಾಜ್ ರವರು ಕಾಣಿಸಿಕೊಂಡಿದ್ದಾರೆ.

[widget id=”custom_html-3″]