Advertisements

ಮತ್ತೇ ಗಾರೆ ಕೆಲಸ ಆರಂಭಿಸಿದ ಚಿಕ್ಕಣ್ಣ.. ಯಾಕೆ ಗೊತ್ತಾ?

Cinema

ನಮಸ್ತೆ ಸ್ನೇಹಿತರೆ, ಚಿಕ್ಕಣ್ಣ ಕನ್ನಡ ಚಿತ್ರರಂಗದಲ್ಲಿ ಬಾರಿ ಬೇಡಿಕೆಯಲ್ಲಿರುವ ಹಾಸ್ಯ ನಟ.. ಆದರೆ ಲಾಕ್ಡೌನ್ ಕಾರಣ ಎಲ್ಲಾ ಚಿತ್ರರಂಗದ ಕೆಲಸಗಳು ನಿಂತು ಹೋಗಿವೆ ಹಾಗಾಗಿ ಚಿಕ್ಕಣ್ಣ ಮತ್ತೆ ಗಾರೆ ಕೆಲಸ ಶುರುಮಾಡಿದ್ದಾರೆ. ಚಿತ್ರರಂಗಕ್ಕೆ ಬರೋದಕ್ಕು ಮುಂಚೆ ಚಿಕ್ಕಣ್ಣ ಗಾರೆ ಕೆಲಸ ಮಾಡ್ತಿದ್ರು.. ಆನಂತರ ಸತತ ಪ್ರಯತ್ನಗಳ ನಂತರ ಅವಕಾಶ ಗಿಟ್ಟಿಸಿಕೊಂಡು ತಮ್ಮ ಪ್ರತಿಭೆಯ ಮೂಲಕ ಕನ್ನಡ ಚಿತ್ರರಂಗದಲ್ಲಿ ಬೇಡಿಕೆಯ ನಟನಾಗಿ ಬೆಳೆದರು. ಲಾಕ್ಡೌನ್ ನಿಂದ ಊರು ಸೇರಿರುವ ಚಿಕ್ಕಣ್ಣ ಮತ್ತೆ ಗಾರೆ ಕೆಲಸ ಶುರುಮಾಡಿ ಮನೆಯ ನಿರ್ಮಾಣದ ಕೆಲಸದಲ್ಲಿ ತೊಡಗಿದ್ದಾರೆ..

Advertisements

ಮೈಸೂರಿನ ಬಳಿ ತೋಟದ ಮನೆ ಮಾಡಿಕೊಂಡಿರುವ ಚಿಕ್ಕಣ್ಣ ಅಲ್ಲಿ ಮನೆಯೊಂದು ನಿರ್ಮಾಣ ಮಾಡ್ತಿದ್ದಾರೆ. ಅದೇ ಲಾಕ್ಡೌನ್ ಕಾರಣ ಗಾರೆ ಕೆಲಸಗಾರರು ಸಿಕ್ತಿಲ್ಲ ಹಾಗಾಗಿ ಇದೆಲ್ಲ ತಮಗೆ ಗೊತ್ತಿರುವ ಕೆಲಸ ತಾನೆ ಅಂತ ಹಿಂದೆ ಮುಂದೆ ನೋಡದೆ.. ತಮ್ಮ ಹಳೆಯ ವೃತ್ತಿ ಗಾರೆ ಕೆಲಸವನ್ನ ಮತ್ತೆ ಆರಂಭಿಸಿ ತಮ್ಮ ಮನೆಗೆ ತಾವೇ ಗಾರೆ ಕೆಲಸ ಮಾಡ್ತಿದ್ದಾರೆ. ಸೀಮೆಂಟ್ ಮಿಕ್ಸ್ ಮಾಡೊದ್ರಿಂದ ಹಿಡಿದು ಗೋಡೆಗೆ ಹಚ್ಚಿ ಸಪಾಟು ಮಾಡುವ ಎಲ್ಲಾ ಕೆಲಸವನ್ನ ಚಿಕ್ಕಣ್ಣ ತಾವೇ ಮಾಡ್ಕೊಂಡಿದ್ದಾರೆ..

ಕೈಗೆ ಸ್ವಲ್ಪ ಕಾಸು ಬಂದ ತಕ್ಷಣ ಮಾಡಿ ಮೇಲೆ ಕೂರುವ ಜನರ ಮಧ್ಯೆ ಚಿಕ್ಕಣ್ಣ ಅಪ್ಪಟ ಚಿನ್ನದಾಗೆ ಕಾಣ್ತಾರೆ. ಆಗೆ ಸುಮ್ಮನೆ ಕೂತು ಕಾಲಾಹರಣ ಮಾಡುವ ಬದಲು ಗಾರೆ ಕೆಲಸ ಮಾಡಿ ಮನೆಯನ್ನ ನಿರ್ಮಾಣ ಮಾಡೊದ್ರ ಜೊತೆ ದೇಹಕ್ಕೆ ವ್ಯಾಯಾಮ ಆಗುತ್ತೆ ಅನ್ನೊದು ಚಿಕ್ಕಣ್ಣ ಅವರ ಆಲೋಚನೆ.. ಚಿಕ್ಕಣ್ಣ ಅವರ ಈ ಕೆಲಸಕ್ಕೆ ಎಲ್ಲೆಡೆಯಿಂದ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಚಿಕ್ಕಣ್ಣ ಅವರ ಈ ಕೆಲಸದ ಬಗ್ಗೆ ನೀವೇನ್ ಹೇಳ್ತೀರಾ..