Advertisements

11 ತಿಂಗಳ ಪುಟ್ಟ ಮಗುವಿನ ಕಷ್ಟ ನೋಡಿ ದರ್ಶನ್ ಮಾಡಿದ ಸಹಾಯವೇನು ಗೊತ್ತಾ? ನಿಜಕ್ಕೂ ಇದು ದೊಡ್ಡ ಗುಣ. ಮಗುವಿಗೆ ಬೆಚ್ಚಿಬೀಳಿಸುವಂತ ಸಮಸ್ಯೆ..

Kannada Mahiti

ನಮಸ್ತೆ ಸ್ನೇಹಿತರೆ, ಕಳೆದ ನಾಲ್ಕು ದಿನಗಳಿಂದ ಟಿವಿ ಮಾಧ್ಯಮ ಮತ್ತು ಸೋಷಿಯಲ್ ಮೀಡಿಯಾದಲ್ಲಿ ಪ್ರಸಾರವಾಗುತ್ತಿರುವ ಸುದ್ದಿ ಅಂದರೆ 11 ವರ್ಷದ ಪುಟ್ಟ ಮಗುವಿನ ಕರುಣಾಜನಕ ಕಥೆ.. ಈ ಮಗುವಿನ ಕಷ್ಟ ನೋಡಿ ಈಗಾಗಲೇ ಸಾಕಷ್ಟು ರಾಜಕಾರಣಿಗಳು, ಸಿನಿಮಾ ನಟರು ಮತ್ತು ಸಾರ್ವಜನಿಕರು ಕೂಡ ಸ್ವಯಂ ಪ್ರೇರಿತರಾಗಿ ಸಹಾಯ ಮಾಡಲು ಮುಂದಾಗಿದ್ದಾರೆ. ಇದೀಗ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ಈ ಸುದ್ದಿ ಕೇಳಿ ಆ ಮಗುವಿಗೆ ಯಾವ ರೀತಿ ಸಹಾಯ ಮಾಡಿದ್ದಾರೆ ಎಂದು ನೋಡೊಣ ಬನ್ನಿ.

Advertisements

ಅದಕ್ಕೂ ಮುನ್ನ ನೀವು ಕೂಡ ಈ ಪೊಟೊದಲ್ಲಿ ಕಾಣುತ್ತಿರುವ ಅಕೌಂಟ್ ನಂಬರ್  ಹಾಗೂ ಪೋನ್ ಪೇ, ಗೂಗಲ್ ಪೇ ನಂಬರ್ ಗೆ ನಿಮ್ಮ ಕೈಲಾದಷ್ಟು ಹಣವನ್ನು ಹಾಕಿ ಕಷ್ಟದಲ್ಲಿರುವ ಕಂದಮ್ಮನಿಗೆ ಸಹಾಯ ಮಾಡಿ. ಈ ಹನ್ನೊಂದು ತಿಂಗಳ ಕಂದ ಜನೀಶ್ .. ಸಂಜೀವಿನಿ ನಗರದ ನಿವಾಸಿಗಳಾಗಿರುವ ನವೀನ್ ಕುಮಾರ್, ಜ್ಯೋತಿ ದಂಪತಿಗಳ ಪುತ್ರ.. ಇವರ ಕುಟುಂಬದ ಪರಿಸ್ಥಿತಿಯೂ ಅಷ್ಟೇನು ಚೆನ್ನಾಗಿಲ್ಲ‌. ಇದರ ಮಧ್ಯೆ ಮಗುವಿಗೆ ಜೀ’ನ್ಸ್ ಸಮ’ಸ್ಯೆ ಕಾಣಿಸಿಕೊಂಡಿದೆ..

ಇದು ವೈದ್ಯಲೋಕದಲ್ಲೇ ಅಪರೂಪದ ಸಮಸ್ಯೆ ಎಂದು ವೈದ್ಯರು ತಿಳಿಸಿದ್ದಾರೆ. ಈಗ ಜನೀಶ್ ಉಳಿಯಬೇಕಾದರೆ ಬರೋಬ್ಬರಿ 16 ಕೋಟಿಯ ಮೆಡಿಸಿನ್ ಬೇಕಾಗಿದೆ. ಅದು ಅಮೇರಿಕಾದಲ್ಲಿ ಸಿಗುವ ಔಷದಿಯೇ ಬೇಕು.. ಇಷ್ಟೊಂದು ದುಡ್ಡು ಎಲ್ಲಿಂದ ತರುವುದು ಎಂದು ಆ ಪುಟ್ಟ ಮಗುವಿನ ತಂದೆ ತಾಯಿ ಕಣ್ಣೀರು ಇಡುತ್ತಿದ್ದಾರೆ. ಇವರ ಕಷ್ಟ ನೋಡಿ ಇಡೀ ಕರ್ನಾಟಕದ ಜನತೆ ಕೈ ಜೋಡಿಸುತ್ತಿದೆ. ರಾಬರ್ಟ್ ಚಿತ್ರದ ನಿರ್ಮಾಪಕ ಉಮಾಪತಿ ಶ್ರೀನಿವಾಸ್ ಅವರು ಖಾಸಗಿ ಚಾನಲ್ ಗೆ ಕರೆ ಮಾಡಿ ತಮ್ಮ‌ ಕೈಲಾದ ಸಹಾಯವನ್ನು ಮಾಡುತ್ತೇವೆ ಎಂದು ಹೇಳಿದ್ದಾರೆ..

ಈ ವಿಷಯವನ್ನು ದರ್ಶನ್ ಅವರಿಗೆ ಕೂಡ ಮುಟ್ಟಿಸಿದ್ದಾರೆ. ದರ್ಶನ್ ಅವರು ಯಾರಿಗೆ ಸಹಾಯ ಮಾಡಿದ್ರೂ ಎಲ್ಲೂ ಕೂಡ ಹೇಳಿಕೊಳ್ಳುವುದಿಲ್ಲ. ಇದೀಗ ಈ ವಿಚಾರದಲ್ಲೂ ದರ್ಶನ್ ಅವರು ಯಾರಿಗೂ ತಿಳಿಯದಂತೆ.. ರಾಬರ್ಟ್ ಚಿತ್ರತಂಡದ ಮೂಲಕ ಆ ಮಗುವಿನ ಕಷ್ಟಕ್ಕೆ ನೆರವಾಗಿದ್ದಾರೆ ಎಂದು ಹೇಳಲಾಗುತ್ತಿದೆ. ಇನ್ನೂ ಜನೀಶ್  ಮಗುವಿಗೆ ಆದಷ್ಟು ಸಹಾಯ ಮಾಡಿ.. ಈ ಪುಟ್ಟ ಕಂದಮ್ಮ ಆದಷ್ಟು ಬೇಗ ಗುಣಮುಖವಾಗಿ ಬರಲಿ ಎಂದು ದೇವರಲ್ಲಿ ಪ್ರಾರ್ಥನೆ ಮಾಡೋಣ.