Advertisements

ಬ್ರಹ್ಮಚಾರಿ ದತ್ತಣ್ಣನ ಹಿಸ್ಟರಿ ಕೇಳಿದ್ರೆ ನಿಜಕ್ಕೂ ಬೆರಗಾಗ್ತೀರಾ.. ಸಿನಿಮಾಗೆ ಎಂಟ್ರಿ ಕೊಡುವ ಮೊದ್ಲು ಎಂಥ ಕೆಲಸದಲ್ಲಿ ಇದ್ರು ಗೊತ್ತಾ?

Cinema

ನೈಜ ನಟನೆಯ ಮೂಲಕ ಜನರ ಮನಸ್ಸಿಗೆ ಹತ್ತಿರವಾಗಿರುವ ಎಂಬತ್ತರ ಆಸುಪಾಸಿನ ದತ್ತಣ್ಣ ಅವರ ಬದುಕಿನ ಸಂಕ್ಷಿಪ್ತ ನೋಟ ನಿಮ್ಮ ಮುಂದೆ. ಮೂಲತಃ ಹರಿಹರದವಾರದ ದತ್ತಣ್ಣ 20 ವರ್ಷ ವಾಯುದಳದಲ್ಲಿ ಕಾರ್ಯ ನಿರ್ವಹಿಸಿ ಸುದೀರ್ಘ ವೃತ್ತಿ ಜೀವನದಿಂದ ನಿವೃತ್ತಿ ಪಡೆದ ಮೇಲೆಯೇ ಸಿನಿರಂಗದತ್ತ ಹೆಜ್ಜೆ ಹಾಕಿದ್ದಾರೆ. ಎಸ್‌ಎಸ್‌ಎಲ್‌ಸಿಯಲ್ಲಿ ರಾಜ್ಯಕ್ಕೆ ಪ್ರಥಮ ಬಂದಿದ್ರೆ, ಪಿಯುಸಿಯಲ್ಲಿಯೂ ಸಹ ಉತ್ತಮವಾದ ಅಂಕಗಳನ್ನು ಗಳಿಸಿದ್ದಾರೆ. ಮುಂದಿನ ಜೀವನಕ್ಕಾಗಿ ಮದ್ರಾಸ್‌ನಲ್ಲಿ ಇಂಜಿನಿಯರಿಂಗ್ ಗೆ ಸೇರುತ್ತಾರೆ. ಆದ್ರೆ ಅದ್ಯಾಕೋ ತನ್ನದಲ್ಲದ ಊರಲ್ಲಿ ಬದುಕಲು ಮನಸ್ಸು ಬಾರದೇ ಮತ್ತೆ ಬೆಂಗಳೂರಿನಲ್ಲಿ ಇಂಜಿನಿಯರಿಂಗ್ ಗೆ ಸೇರಿಕೊಳ್ತಾರೆ.

[widget id=”custom_html-3″]

Advertisements

ನಂತರ ಇಂಜಿನಿಯರಿಂಗ್ ಗೆ ಅಂತಿಮ ಹಂತದಲ್ಲಿರುವಾಗ ದೇಹದಲ್ಲಿ ಒಂದು ಮಹತ್ವದ ಬೆಳವಣಿಗೆಯಾಗುತ್ತಿರುತ್ತೆ. ಭಾರತ ಹಾಗೂ ಚೀ’ನಾ ದೇಶದ ಮಧ್ಯೆ ಒಡಕು ಉಂಟಾಗಿರುತ್ತೆ, ಆ ಸಂದರ್ಭದಲ್ಲಿ ದೇಶದಲ್ಲಿರುವ ಅಂತಿಮ ಹಂತದ ವಿದ್ಯಾರ್ಥಿಗಳಿಗೆ ಸೇನೆಗೆ ಸೇರಲು ನೆಹರು ಅವಕಾಶ ಕಲ್ಪಿಸಿಕೊಡುತ್ತಾರೆ. ಆ ಅವಕಾಶದಲ್ಲಿಯೇ ದತ್ತಣ್ಣ ಸಹ ಆಯ್ಕೆಯಾಗ್ತಾರೆ ವಾಯುದಳದಲ್ಲಿ ಕಾರ್ಯನಿರ್ವಹಿಸ್ತಾರೆ. ವಿಂಗ್ ಕಮಾಂಡರ್ ಆಗಿ ನಿವೃತ್ತಿಯಾದ ಬಳಿಕ ಸಹ ದೆಹಲಿಯ ಹೆಚ್‌ಎಎಲ್ ಅಕಾಡೆಮಿಯಲ್ಲಿ ಪ್ರಾಂಶುಪಾಲರಾಗಿ ಕಾರ್ಯನಿರ್ವಹಿಸ್ತಾರೆ. ಮುಂದೆ ಕಿರುಚಿತ್ರದ ಮೂಲಕ ಸಿನಿರಂಗಕ್ಕೆ ಎಂಟ್ರಿಯಾಗ್ತಾರೆ, ಆದರೆ ಅವರಿಗೆ ಅತೀ ಹೆಚ್ಚು ಹಿಟ್ ತಂದು ಕೊಟ್ಟಂತದ್ದು ಮಾತ್ರ ಮಾಯಾಮೃಗ ಧಾರವಾಹಿಯ ಅಭಿನಯ ಮುಂದೆ ಟಿಎನ್ ನಾಗಭರಣ ಅವರ ನಿರ್ದೆಶನದ ಆ ಸ್ಫೋ’,ಟ ಸಿನಿಮಾ.

[widget id=”custom_html-3″]

ಈ ಸಿನಿಮಾದ ಮನೋಜ್ಞ ಅಭಿನಯಕ್ಕೆ ರಾಜ್ಯಪ್ರಶಸ್ತಿ ಸಹ ಲಭಿಸುತ್ತೆ. ಇಲ್ಲಿಂದ ಶುರುವಾದ ದತ್ತಣ್ಣನ ಪಯಣ ಈಗಲೂಸಹ ಸಾಕಷ್ಟು ಪ್ರಶಸ್ತಿಗಳನ್ನು ಬಾಚಿಕೊಂಡು ಸಾಗುತ್ತಿದೆ. ಅಂತಾರಾಷ್ಟ್ರೀಯ ಫಿಸಿ ಚಿತ್ರೋತ್ಸವದಲ್ಲಿ ಅತ್ಯುತ್ತಮ ಕಲಾವಿದ ಪ್ರಶಸ್ತಿಗೆ ಭಾಜನರಾದ ಕನ್ನಡದ ಏಕೈಕ ಕಲಾವಿದ ಎಂಬ ಹೆಗ್ಗಳಿಕೆ ದತ್ತಣ್ಣನಿಗಿದೆ. ಅಷ್ಟೇ ಅಲ್ಲ ಹಿಂದಿಯ ಅಕ್ಷಯ್ ಕುಮಾರ್ ಹಾಗೂ ವಿದ್ಯಾಬಾಲನ್ ಅಭಿನಯದ ಮಿಷನ್ ಮಂಗಲ್ ಸಿನಿಮಾದಲ್ಲಿ ಬಣ್ಣ ಹಚ್ಚುವ ಮೂಲಕ ದತ್ತಣ್ಣ ಬಾಲಿವುಡ್‌ಗೂ ಸಹ ಎಂಟ್ರಿ ಕೊಟ್ಟಿದ್ದಾರೆ. ತನ್ನ 20 ವರ್ಷದ ಈ ಸುದೀರ್ಘ ಸಿನಿಮಾದಲ್ಲಿ 200ಕ್ಕೂ ಅಧಿಕ ಸಿನಿಮಾದಲ್ಲಿ ಬಣ್ಣ ಹಚ್ಚಿ ಹೆಸರಾಂತ ಕಲಾವಿದ ಎಂಬ ಹೆಗ್ಗಳಿಕೆಗೆ ಪಾತ್ರರಾಗಿರುವ ದತ್ತಣ್ಣನಿಗೆ ಅನೇಕ ರಾಜ್ಯ ಹಾಗೂ ರಾಷ್ಟ್ರ ಪ್ರಶಸ್ತಿಗಳು ಅರಸಿ ಬಂದಿವೆ..