Advertisements

ಸುಪ್ರೀಂ ಕೋರ್ಟ್ ವರೆಗೂ ಹೋಗಿ ಪ್ರೀತಿಯನ್ನು ಜಯಿಸಿ ಬಂದ ಜಗ್ಗೇಶ್.. ಅಷ್ಟಕ್ಕೂ ಅಂದು ಏನೆಲ್ಲಾ ನಡೆದಿತ್ತು ಗೊತ್ತಾ?

Cinema

ನಮಸ್ತೇ ಸ್ನೇಹಿತರೆ, ಜಗ್ಗೇಶ್ ಕನ್ನಡ ನಾಡಿಗೆ, ಹಾಗೂ ಕನ್ನಡ ಚಿತ್ರರಂಗಕ್ಕೆ ಸಿಕ್ಕ ಅಪರೂಪದ ಮುತ್ತು.. ಅವರ ಹಾಸ್ಯ ನಟನೆಯಿಂದ ದುಃಖದಲ್ಲಿ ಇರುವ ಅದೆಷ್ಟೋ ಜನರ ಮುಖದಲ್ಲಿ ನಗು ಮೂಡುತ್ತದೆ. ಜೀವನದ ಡೆ’ಡ್ ಎಂಡ್ ನೋಡಿದ ಅದೆಷ್ಟೋ ಜನರಲ್ಲಿ ಅವರ ಮಾತುಗಳು.. ಹೊಸ ಆಸೆಯ ಚಿಗುರನ್ನು ಮೂಡಿಸಿದೆ. ಪ್ರಾಯದಲ್ಲಿ ಪ್ರೀತಿಯ ಅಲೆಯಲ್ಲಿ ಬಿದ್ದು ಒದ್ದಾಡುತ್ತಿರುವ ಅದೆಷ್ಟೋ ಪ್ರೇಮಿಗಳಿಗೆ ಇವರ ಪ್ರೇಮ ಕಥೆ ಹೊಸ ಬರವಸೆಯನ್ನು ಮೂಡಿಸಿದೆ.. ಇಂತಹ ಪರಿಪೂರ್ಣ ನಟನನ್ನು ನೋಡುವುದು ತುಂಬಾ ಅಪರೂಪ. ಜಗ್ಗೇಶ್ ಅವರ ಮನೆ ಹೇಗಿದೆ ಎಂದು ನೋಡೊಣ ಬನ್ನಿ..

Advertisements

ಹರೆಯದ ಪ್ರಾಯದಲ್ಲಿ ಪ್ರೀತಿಯಲ್ಲಿ ಬಿದ್ದು ಎಷ್ಟೇ ಕಷ್ಟಗಳು, ಹಿಂ’ಸೆಗಳು ಕಂಡರು.. ಕೊನೆಗೂ ಸುಪ್ರೀಂ ಕೋರ್ಟ್ ವರೆಗೂ ಹೋಗಿ ಪ್ರೀತಿಯನ್ನು ಜಯಿಸಿ ಬಂದ ಜಗ್ಗೇಶ್ ಅವರಂತೆ ಎಷ್ಟು ಪ್ರೇಮಿಗಳು ಇದ್ದಾರೆ ಹೇಳಿ. ಏನು ಇಲ್ಲದೇ, ಕೈಯಲ್ಲಿ ಹಣವಿಲ್ಲದೇ ಒಂದು ಚಿಕ್ಕ ರೂಮಿನಲ್ಲಿ ಅಡುಗೆ ಮಾಡಿಕೊಂಡು.. ಅಲ್ಲೇ ಸಂಸಾರವನ್ನು ಆರಂಭಿಸಿ. ನಂತರ ಗಾಂಧಿನಗರದಲ್ಲಿ ನಕ್ಷತ್ರದಂತೆ ಮಿಂಚಿದ ನಟ ಜಗ್ಗೇಶ್ ಮತ್ತೆ ಜೀವನದಲ್ಲಿ ಏಟು ತಿಂದರು. ಅಲ್ಲಿಗೆ ನಿಂತಿದ್ದೇ ಜಗ್ಗೇಶ್ ಅವರ ಛಲ ಮತ್ತೆ ಪುಟಿದೆದ್ದು ಬಂದು..

ಇವತ್ತು ಬಿಡುವಿಲ್ಲದ ನಟನಾಗಿ ಮಿಂಚುತ್ತಿದ್ದಾರೆ. ಅವರ ಧೈರ್ಯದ ಮುಂದೆ.. ಯಾವ ಕಷ್ಟ ಕೂಡ ನಿಲ್ಲಲಿಲ್ಲ. ಜಗ್ಗೇಶ್ ಅವರ ಯಶಸ್ಸಿನ ಹಿಂದೆ ಅವರ ಬೆನ್ನೆಲುಬಾಗಿ ನಿಂತವರು ಅವರ ಪತ್ನಿ. ಎಷ್ಟೇ ಕಷ್ಟಗಳು ಬಂದರೂ ತನ್ನ ಮುದ್ದಿನ ಗಂಡನ ಜೊತೆ ನಿಂತವರು ಪರಿಮಳ ಅವರು. ಇದೇ ನೋಡಿ ಜಗ್ಗೇಶ್ ಅವರ ಸುಂದರ ಮನೆ.. ಇತ್ತೀಚಿಗೆ ತನ್ನ ಮನೆಯ ಹಳೆ ಡಿಸೈನ್ ಬದಲಾಯಿಸಿರುವ ಪರಿಮಳ ಅವರು.. ಮನೆಯ ಹಾಲ್, ಡೈರಿಂಗ್ ರೂಮ್, ಹಾಗು ಇತರ ರೂಮ್ ಗಳನ್ನು ವಿಭಿನ್ನವಾಗಿ, ಆಕರ್ಷಣೆಯಾಗಿ ಕಾಣುವಂತೆ ಡಿಸೈನ್ ಮಾಡಿಸಿದ್ದಾರೆ.

ಪರಿಮಳ ಚಿಂತನೆಯಂತೆ ಬದಲಾದ ಮನೆಯ ಒಳಾಂಗಣ ಎಂದು ಹೇಳಿರುವ ಜಗ್ಗೇಶ್ ಅವರು.. ಮನೆಯೇ ಮಂತ್ರಾಲಯ ಎಂದು ಹೇಳಿದ್ದಾರೆ. ಪರಿಸರವನ್ನು ಉಳಿಸುವ ಬಗ್ಗೆ ಕಾಳಜಿವಯಿಸಿರುವ ಜಗ್ಗೇಶ್ ಅವರು ತನ್ನ ಕೈ ಮೀರಿ ಕಷ್ಟದಲ್ಲಿ ಇರುವವರಿಗೆ ಸಹಾಯ ಮಾಡುತ್ತಾರೆ ಅನ್ನೊದು ಅವರ ಒಳ್ಳೆಯ ಗುಣಕ್ಕೆ ಹೇಳಿದ ಕನ್ನಡಿ.. ಜಗ್ಗೇಶ್ ಅವರು ಈಗೆ ಹೊಸ‌ ಹೊಸ ವಿಭಿನ್ನ ಹಾಗೂ ಹಾಸ್ಯ ಚಿತ್ರಗಳನ್ನು ಮಾಡಲಿ ಎಂದು ಎಲ್ಲರೂ ಆಶಿಸೋಣ.