Advertisements

ಯುವಕರಿಗೆ ರೋಲ್ ಮಾಡೆಲ್ ಆದ ಈ ನಟನ ಬಗ್ಗೆ ನಿಮಗೆಷ್ಟು ಗೊತ್ತು.. ಸೌತ್ ಸಿನಿಮಾ ರಂಗವೇ ಮೆಚ್ಚಿಕೊಂಡಿದ್ದ ಪ್ರತಿಬೆ ಕಿಶೋರ್ ಏನೆಲ್ಲಾ ಕೆಲಸ ಮಾಡ್ತಾರೆ ಗೊತ್ತಾ?

Cinema

ಈ ಮಾಡರ್ನ್ ಯುಗದಲ್ಲಿ ಅನೇಕರು ಹೆಸರಿಗಷ್ಟೇ ನಾನು ಕೃಷಿಕ ದೇಶದ ಅನ್ನದಾತ ಅಂತ ಬಿಲ್ಡಪ್ ಕೊಟ್ಟು ಶೋಕಿ ಲೈಫ್ ಲೀಡ್ ಮಾಡ್ತಾರೆ. ಅಂತವರ ಮಧ್ಯೆ ಬದುಕಿನಲ್ಲಿ ವೈಭೋವೋಪೇತ ಜೀವನವನ್ನು ನಡೆಸುವ ಅವಕಾಶವಿದ್ರು ಸಹ ಸರಳವಾದ ಜೀವನ ನಡೆಸುತ್ತಾ ಕೃಷಿಯತ್ತ ಬದುಕನ್ನು ಸಾಗಿಸಿಕೊಂಡ ಆ ಬ್ಯುಸಿಯೆಸ್ಟ್ ನಟನ ಸಿಂಪಲ್ ಲೈಫಿನ ಬಗ್ಗೆ ಇವತ್ತು ನಾವು ನಿಮಗೆ ಹೇಳ್ತೀವಿ.. ನಟನೋರ್ವ ಕೃಷಿಕನಾಗಿದ್ದಾನೆ ಅಂದಾಗಲೇ ನಿಮಗೆ ಆ ಖಡಕ್ ಅಭಿನಯದ ಚಿತ್ರಣ ಕಣ್ಣಮುಂದೆ ಬಂದಿರಬಹುದು, ಅಂದಹಾಗೇ ನಿವೇನಾದರೂ ಅದು ನಟ ಕಿಶೋರ್ ಅಂತ ಗೆಸ್ ಮಾಡಿದ್ರೆ ನಿಮ್ಮ ಊಹೆ ಖಂಡಿತ ತಪ್ಪಲ್ಲ..

[widget id=”custom_html-3″]

Advertisements

ಎಸ್ ಚೆನ್ನಪಟ್ಟಣದಲ್ಲಿ ಹುಟ್ಟಿದ ಕಿಶೋರ್ ಅವರು ನ್ಯಾಷನಲ್ ಕಾಲೇಜಿನಲ್ಲಿ ಪದವಿ ಮುಗಿಸಿ ಪದವಿ ಅಂತಿಮ ವರ್ಷದಲ್ಲಿ ಸಿನಿಮಾ ಸೇರಬೇಕು ಅಂತ ಆಸೆ ಪಡ್ತಾರೆ, ಕೆಲ ನಾಟಕಗಳಲ್ಲಿಯೂ ಸಹ ಅಭಿನಯಿಸಿದ್ದಾರೆ, ತೆರೆಗಳು ಅವುಗಳಲ್ಲಿ ಪ್ರಮುಖವಾದ ನಾಟಕ. ನಂತರ ನೇರವಾಗಿ ಸಿನಿರಂಗಕ್ಕೆ ಹೋಗುವ ಅವಕಾಶ ಸಿಕ್ಕಿಲ್ಲವಾದ್ದರಿಂದ ಶಿಕ್ಷಕನಾಗಿ ಕೆಲ ಕಾಲ ಕೆಲಸ ಮಾಡ್ತಾರೆ. ಸಾಹಿತ್ಯದಲ್ಲಿ ಅಪಾರ ಆಸಕ್ತಿಯಿದ್ದ ಕಿಶೋರ್ ಅವರು ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಕನ್ನಡ ವಿಷಯದಲ್ಲಿ ಸ್ನಾತಕ್ಕೋತ್ತರ ಪದವಿಯನ್ನು ಸಹ ಪಡೆದುಕೊಳ್ತಾರೆ. ನಂತರ 2004ರಲ್ಲಿ ಕಂಠಿ ಸಿನಿಮಾದಲ್ಲಿ ಆಕಸ್ಮಿಕವಾಗಿ ಅಭಿನಯಿಸಿ ಪ್ರೇಕ್ಷಕರ ನೆಚ್ಚಿನ ಪೋಷಕನಟನಾಗಿ ಗುರುತಿಸಿಕೊಂಡ್ರು..

[widget id=”custom_html-3″]

ಜೊತೆಗೆ ಈ ಸಿನಿಮಾದ ಅಭಿನಯಕ್ಕೆ ರಾಜ್ಯ ಪ್ರಶಸ್ತಿಯನ್ನು ಸಹ ಮುಡಿಗೇರಿಸಿಕೊಂಡ್ರು. ನಂತರ ಪುನೀತ್ ರಾಜಕುಮಾರ್ ಅಭಿನಯದ ಆಕಾಶ್ ಸಿನಿಮಾದಲ್ಲಿಯೂ ಸಹ ಅಭಿನಯಿಸಿ ಸೈ ಎನಿಸಿಕೊಂಡ್ರು.. ನಂತರ ಡೆ’ಡ್ಲಿ ಸೋಮ, ಕ್ಷಣ ಕ್ಷಣ, ದುನಿಯಾ, ಗೂಳಿ, ಇಂತಿ ನಿನ್ನ ಪ್ರೀತಿಯ ಹೀಗೆ ಸಾಲು ಸಾಲು ಸಿನಿಮಾಗಳಲ್ಲಿ ಅಭಿನಯಿಸಿದ್ರು. ಬಳಿಕ ಟಾಲಿವುಡ್‌ನಲ್ಲಿಯೂ ಸಹ ಬಣ್ಣ ಹಚ್ಚುವ ಅವಕಾಶ ಸಿಕ್ಕಿದ್ದು ಅಲ್ಲು ಅರ್ಜುನ್ ಅಭಿನಯದ ಹ್ಯಾಪಿ ಸಿನಿಮಾದಲ್ಲಿ ಖಡಕ್ ಪೊಲೀಸ್ ಆಫಿಸರ್ ಪಾತ್ರದಲ್ಲಿ ಕಾಣಿಸಿಕೊಂಡು ತೆಲುಗು ಇಂಡಸ್ಟ್ರಿಯಲ್ಲಿಯೂ ಸಹ ಜನಮನ್ನಣೆ ಗಳಿಸಿದ್ರು. ನಂತರ ತಮಿಳಿನಲ್ಲಿ ಅಭಿನಯಿಸಿ ಅಲ್ಲಿಯೂ ಪ್ರಸಿದ್ದಿ ಪಡೆದರು.

[widget id=”custom_html-3″]


ಹೀಗೇ ಬೇರೆ ಬೇರೆ ಭಾಷೆಗಳಲ್ಲಿಯೂ ಸಹ ಬಹು ಬೇಡಿಕೆಯ ನಟನಾಗಿ ಗುರುತಿಸಿಕೊಂಡ ಕಿಶೋರ್ ಪೂರ್ಣ ಪ್ರಮಾಣದ ಹಿರೋ ಆಗಿ ಕಾಣಿಸಿಕೊಳ್ಳುವ ಮನಸ್ಸು ಮಾಡಿದ್ರು. ಅದರಂತೆ ಹುಲಿ ಸಿನಿಮಾದಲ್ಲಿ ಪೂರ್ಣ ಪ್ರಮಾಣದ ನಾಯಕನಾಗಿ ಗುರುತಿಸಿಕೊಂಡ್ರು ಸಹ ಸಿನಿಮಾ ಅಷ್ಟೇನು ಹಿಟ್ ಆಗಲಿಲ್ಲ. ನಂತರ ಮತ್ತೆ ವಿಲನ್ ಆಗಿಯೇ ಕಿಶೋರ್ ಅಭಿನಯಿಸಲಿಕ್ಕೆ ಆರಂಭಿಸಿದ್ರು. ತನಗೆ ಕೊಡುವ ಕ್ಯಾರೆಕ್ಟರ್‌ಗೆ ಜೀವ ತುಂಬುವ ಕಿಶೋರ್ ನೆಗೆಟಿವ್ ಶೇಡ್‌ಗಳಲ್ಲಿ ಕ್ರೂರತ್ವವನ್ನು ಮೈಗೂಡಿಸಿಕೊಂಡು ಅಭಿನಯಿಸ್ತಾಯಿದ್ರು. ಉಳಿದವರು ಕಂಡಂತೆ ಸಿನಿಮಾದಲ್ಲಿ ಲವರ್ ಬಾಯ್ ಆಗಿ ಕಾಣಿಸಿಕೊಂಡು ಚಿತ್ರಪ್ರೇಮಿಗಳಿಗೆ ಪ್ರೀತಿಯ ಕಚಗುಳಿ ಇಟ್ಟರು..

[widget id=”custom_html-3″]

ಹೀಗೆ ಬ್ಯುಟಿಫುಲ್ ಅಭಿನಯದ ಮೂಲಕ ಬ್ಯುಸಿಯಿರುವ ನಟ ಬೆಂಗಳೂರಿನ ಬನ್ನೇರುಘಟ್ಟ ಹತ್ತಿರದಲ್ಲಿ ಒಂದಷ್ಟು ಜಾಗ ತೆಗೆದುಕೊಂಡು ಸಾವಯವ ವ್ಯವಸಾಯದ ಮುಖೇನ ಒಂದಷ್ಟು ತರಕಾರಿ, ಹಣ್ಣುಗಳನ್ನು ಬೆಳೆದಿದ್ದಾರೆ. ವ್ಯವಸಾಯ ನನ್ನ ಕುಲ ಕಸುಬು ಅಂತ ಹೇಳ್ತಾ ಕೃಷಿ ಬದುಕನ್ನು ಮೈಗೂಡಿಸಿಕೊಂಡಿದ್ದಾರೆ. ತಾನು ಪ್ರೀತಿಸಿ ಮದುವೆಯಾದ ವಿಶಾಲಕ್ಷಿ ಎಂಬುವವರು ಸಹ ತನ್ನ ಕೃಷಿ ಬದುಕಿನ ಕೆಲಸಗಳಿಗೆ ಕೈ ಜೋಡಿಸ್ತಾರೆ ಅಂತ ಕಿಶೋರ್ ಹೆಮ್ಮೆಯಿಂದ ಹೇಳ್ತಾರೆ, ಹಾಗಂತ ಕಿಶೋರ್ ಏನು ಚಿತ್ರರಂಗದಿಂದ ದೂರ ಉಳಿದಿಲ್ಲ, ಅಭಿನಯದ ಜೊತೆ ಜೊತೆಗೆ ಕೃಷಿಯನ್ನು ಮಾಡ್ತಾ ಬದುಕನ್ನು ಸಾಗಿಸ್ತಾಯಿದ್ದಾರೆ.

ಗದ್ದೆಗಳಲ್ಲಿ ನಿಂತು ಫೋಟೊ ಹಾಕಿ ಶೋಕಿ ಜೀವನ ನಡೆಸುತ್ತಿರುವವರ ಮಧ್ಯೆ ಎಲ್ಲ ಆಡಂಬರದ ಬದುಕಿನ ಖುಷಿಯಿದ್ರು ನೆಮ್ಮದಿಗಾಗಿ ಕೃಷಿಯನ್ನು ಆಯ್ದುಕೊಂಡು ಬೆವರು ಸುರಿಸಿ ಬಿಸಿಲಲ್ಲಿ ದುಡಿದು ಸಂತಸದಿ ಬದುಕು ಸಾಗಿಸುತ್ತಿರುವ ಕಿಶೋರ್ ಅವರ ವ್ಯಕ್ತಿತ್ವವನ್ನು ಇಂದಿನ ಯುವ ಪೀಳಿಗೆ ಅಳವಡಿಸಿಕೊಳ್ಳಬೇಕು ಅಂದರೆ ಬಹುಶಃ ತಪ್ಪಾಗಲ್ಲ.. ತೆರೆ ಮೇಲೆ ಖ’ಳನಟನಾಗಿ, ಪೋಷಕನಟನಾಗಿ, ನಾಯಕನಟನಾಗಿ ಗುರುತಿಸಿಕೊಂಡಿದ್ದು, ನಿಜ ಜೀವನದಲ್ಲಿ ರೈತನಾಗಿ ಬದುಕು ಸಾಗಿಸುತ್ತಿರುವ ಕಿಶೋರ್ ಅವರ ಈ ಸಿಂಪಲ್ ಲೈಫ್ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ..