Advertisements

ನಟ ಕೋಮಲ್ ಮನೆಯ ಗೃಹ ಪ್ರವೇಶ ಹೇಗಿತ್ತು! ಮನೆ ಹೇಗಿದೆ ಗೊತ್ತಾ? ನೊಡಿ..

Cinema

ನಮಸ್ತೆ ಸ್ನೇಹಿತರೆ, ಯಾರಿಗಾದರೂ ಕೋಪ ತರಿಸಬಹುದು, ಅಳಿಸಬಹುದು, ಕಚಗುಳಿ ಬರುವಂತೆ ಮಾಡಬಹುದು ಆದರೆ ನಗಿಸುವುದು ಅಷ್ಟು ಸುಲಭದ ಮಾತೇ ಅಲ್ಲ.. ಆದರೆ ಕೆಲವರು ಮಾತನಾಡಿದರು, ಕೂತರು, ಏನು ಮಾಡಿದರು ಅವರನ್ನ ನೋಡಿ ನಗು ಬರುತ್ತದೆ ಯಾಕೆಂದರೆ.. ಅವರ ಮ್ಯಾನರಿಸಮ್ ಹಾಗೆ ಇರುತ್ತದೆ. ಮನಸ್ಸಿನಲ್ಲಿ ಎಷ್ಟೇ ಕಷ್ಟಗಳು ಇದ್ದರೂ ಬೇರೆಯವರನ್ನು ನಗಿಸುತ್ತಾರೆ ಅವರು. ಅಂತಹ ಅದ್ಬುತ  ಹಾಸ್ಯ ನಟ ಕೋಮಲ್ ಕುಮಾರ್.. ಮೊದಲು ಕೋಮಲ್ ಅವರು ಚಿತ್ರರಂಗಕ್ಕೆ ಎಂಟ್ರಿಕೊಟ್ಟಾಗ ಜಗ್ಗೇಶ್ ಅವರ ತಮ್ಮ ಎಂದು ಕರೆಯುತ್ತಿದ್ದರು.

Advertisements

ಆದರೆ ಕೆಲವೇ ವರ್ಷಗಳಲ್ಲಿ ತಮ್ಮ ವಿಭಿನ್ನ ನಟನೆಯ ಮೂಲಕ ಕನ್ನಡಿಗರನ್ನು ನಕ್ಕು ನಗಿಸಿದ ಕೋಮಲ್ ತಮ್ಮದೇ ಆದ ಬ್ರಾಂಡ್ ಕ್ರಿಯೇಟ್ ಮಾಡಿಕೊಂಡರು. ಪೋಸ್ಟರ್ ನಲ್ಲಿ ಕೋಮಲ್ ಮುಖ ನೋಡಿ ಸಿನಿಮಾ ಥಿಯೇಟರ್ ಗೆ ನುಗ್ಗುತ್ತಿದ್ದ ಅದೆಷ್ಟೋ ಜನ ಅವರ ನಟನೆ ನೋಡಿ ನಗಾಡುತ್ತಾ ತಮ್ಮ ಕಷ್ಟಗಳನ್ನು ಮರೆಯುತ್ತಿದ್ದರು.‌. ಒಂದು ಹಂತದಲ್ಲಿ ಕನ್ನಡದ ಟಾಪ್ ನಟನಾಗಿ ಮಿಂಚಿದರು ನಟ ಕೋಮಲ್. ಯಾವುದರಲ್ಲೂ ಅನಾವಶ್ಯಕವಾಗಿ ಕೈ ಹಾಕದ ನಟ ಕೋಮಲ್ ಅವರು ತಾವಾಯಿತು ತಮ್ಮ ಕೆಲಸವಾಯಿತು ಎಂದು ಕುಟುಂಬಕ್ಕೆ ಹೆಚ್ಚು ಹೊತ್ತು ಕೊಡುವ ಒಬ್ಬ ಸಭ್ಯ ನಟ..

ಇದರ ಮಧ್ಯೆ ತಮ್ಮ ಇಷ್ಟದಂತೆ, ತಮ್ಮ ಆಸೆಯಂತೆ ಒಂದು ಸುಂದರವಾದ ಮನೆಯನ್ನು ಕಟ್ಟಿ ಕುಟುಂಬಸ್ತರ ಮಧ್ಯೆ ಗೃಹಪ್ರವೇಶ ಮಾಡಿಕೊಂಡರು. ತಮ್ಮ ಕುಟುಂಬದ ಎಲ್ಲಾ ಸದಸ್ಯರು ಗೃಹಪ್ರವೇಶದಲ್ಲಿ ಪಾಲ್ಗೊಂಡಿದ್ದ ಕಾರಣ.. ಕುಟುಂಬದ ಕಲರವ ಮೂಡಿತ್ತು. ತಮ್ಮ ಕನಸಿನ ಮನೆಗೆ ಎಂಟ್ರಿಕೊಟ್ಟ ಕೋಮಲ್ ಕುಮಾರ್ ಈಗ ಅದೇ ಮನೆಯಲ್ಲಿ ವಾಸವಿದ್ದಾರೆ.. ಚಿತ್ರರಂಗದಲ್ಲಿ ಫುಲ್ ಬ್ಯುಸಿಯಾಗಿರುವಾಗಲೇ ಬ್ರೇಕ್ ತೆಗೆದುಕೊಂಡ ನಟ ಕೋಮಲ್ ಪಿಟ್ನೆಸ್ ಕಡೆ ಹೆಚ್ಚು ಹೊಲವು ಕೊಟ್ಟು ಅದಕ್ಕೆ ಹೊಂದುವಂತೆ ಕಾಮಿಡಿ ಬಿಟ್ಟು..

ಬೇರೆ ಜೋನ್ ಗೆ ಹೋಗಿ ಕೆಂಪೇಗೌಡ 2 ಚಿತ್ರದಲ್ಲಿ ನಟಿಸಿದರು. ಚಿತ್ರ ಉತ್ತಮವಾಗಿ ಮೂಡಿ ಬಂದಿದ್ದರು.. ಕಾರಣಾಂತರದಿಂದ  ಹೆಚ್ಚು ಜನಕ್ಕೆ ರೀಚ್ ಆಗಲಿಲ್ಲ. ಹಾಗೆ ಅಂದುಕೊಂಡಷ್ಟು ಹಣ ಗಳಿಸಾಗಲಿಲ್ಲ.. ಕೋಮಲ್ ಅವರ ಹಾಸ್ಯ ನಟನೆಗೆ  ಕರ್ನಾಟಕದಲ್ಲಿ ದೊಡ್ಡ ಅಭಿಮಾನಿ ಬಳಗವೇ ಇದೆ. ಹಾಗಾಗಿ ಹೆಚ್ಚು ಗ್ಯಾಪ್ ತೆಗೆದುಕೊಳ್ಳದೇ ಆದಷ್ಟು ಬೇಗ ವಿಭಿನ್ನ ಹಾಗು ಹೊಸ ಕಥೆಯೊಂದಿಗೆ ಸಿನಿಮಾ ತೆಗೆಯಲಿ ಹಾಗೆ ಕನ್ನಡಿಗರನ್ನು ನಗಿಸಲಿ ಎಂದು ಆಶಿಸೋಣ. ಯಾಕೆಂದರೆ ಕನ್ನಡ ಚಿತ್ರರಂಗ ಕಂಡ ಅತ್ಯತ್ತಮ ಹಾಸ್ಯ ನಟರಲ್ಲಿ ನಟ ಕೋಮಲ್ ಕೂಡ ಒಬ್ಬರು.