Advertisements

ಕಣ್ಣೀರಿಟ್ಟು ಕೈ ಮುಗಿದ ನಟ ಮಿತ್ರ.. ಜೀ’ವ ಕಳೆದುಕೊಳ್ಳಲು ಮುಂದಾಗಿದ್ದ ಮಿತ್ರ ಇಂದು ಏನಾಗಿದ್ದರೆ ಗೊತ್ತಾ?

Cinema

ಸಿನಿಮಾ ಅದೊಂದು ಮಾಯಾಲೋಕ ಎಲ್ಲರನ್ನು ತನ್ನತ್ತ ಕೈ ಬೀಸಿ ಕರೆಯುತ್ತೆ, ಸಾಕಷ್ಟು ಅವಕಅಶಗಳನ್ನು ಒದಗಿಸಿಕೊಡುತ್ತೆ.. ಯಾರ ಬಳಿ ಪ್ರತಿಭೆ ಅನ್ನೋ ದೋಣಿ ಇದ್ಯೋ ಅಂತವರು ಈ ಬೃಹತ್ ಸಿನಿಮಾ ಅನ್ನೋ ಸಾಗರದಲ್ಲಿ ವಿಹರಿಸಬಹುದು, ಅಂದಹಾಗೇ ಪ್ರತಿಭೆ ಜೊತೆಗೆ ಲಕ್ ಅನ್ನೋ ಹುಟ್ಟು ಕೂಡ ಬೇಕಾಗುತ್ತೆ,, ಹುಟ್ಟಿಲ್ಲದೇ ದೋಣಿ ಹೇಗೆ ಸಾಗುತ್ತೆ ಹೇಳಿ? ಅಲ್ವಾ? ಬದುಕಿನಲ್ಲಿ ಸಾಸಿರ ಆಸೆ, ಕನಸು ಹೊತ್ತುಕೊಂಡು ಸಿನಿಮಾ ಇಂಡಸ್ಟ್ರಿಗೆ ಬರುವವರ ಸಂಖ್ಯೆ ಅಪಾರವಿದೆ.. ಆದ್ರೆ ಆ ಕನಸು ನನಸಾಗಿ ಖುಷಿಯಲ್ಲಿ ಒಂದೊಳ್ಳೆ ಭದ್ರ ಬದುಕನ್ನು ಕಟ್ಟಿಕೊಳ್ಳುವವರ ಸಂಖ್ಯೆಯೇ ಕಡಿಮೆಯಿದೆ. ಅಂದಹಾಗೇ ಸಿನಿಮಾ ಬಗ್ಗೆ ಯಾಕೆ ಹೇಳ್ತಾ ಇದೀವಿ ಅಂದುಕೊಳ್ಳಬೇಡಿ ಒಬ್ಬ ಕಲಾವಿದನ ಬದುಕಿನ ಕತೆಯನ್ನು ಇವತ್ತು ನಾವು ನಿಮಗೆ ಹೇಳ್ತಾಯಿದೀವಿ. ಒಂದು ಕಾಲದಲ್ಲಿ ಸಿಕ್ಕಾಪಟ್ಟೆ ಬ್ಯುಸಿ ಆಗಿದ್ದ ನಟ ಮಿತ್ರ ಅವರೂ ಸಹ ಅವಕಾಶಗಳಿಲ್ಲದೇ ಕಷ್ಟದಲ್ಲಿದ್ದು ಭಿ’ಕ್ಷು’ಕನ ಪಾತ್ರವಾದರೂ ಸರಿ ನನಗೆ ಅವಕಾಶ ಕೊಡಿ ಎಂದು ಕಣ್ಣೀರಿಟ್ಟಿದ್ದಾರೆ.

[widget id=”custom_html-3″]

Advertisements

ಹೌದು ಸಿಲ್ಲಿ ಲಲ್ಲಿ ಹಾಸ್ಯಮಯ ಧಾರಾವಾಹಿ ಮೂಲಕ ಜಾಣೇಶ ಪಾತ್ರದಲ್ಲಿ ಮಿಂಚಿ ಜನರ ಮನಗೆದ್ದಿದ್ದ ಮಿತ್ರ ಅವರು ನಂತರ ಸ್ಯಾಂಡಲ್ವುಡ್ ಗೆ ಕಾಲಿಟ್ಟು ನೂರಕ್ಕೂ ಹೆಚ್ಚು ಸಿನಿಮಾದಲ್ಲಿ ಅಭಿನಯಿಸಿ ಜನಮನ ಗೆದ್ದಿದ್ದಾರೆ. ಆದ್ರೂ ಕೂಡ ದೊಡ್ಡ ಮಟ್ಟದಲ್ಲಿ ಮಿತ್ರಾರ ಹೆಸರು ಸದ್ದು ಮಾಡಲಿಲ್ಲ. ನಂತರ ತಮ್ಮದೇ ನಿರ್ಮಾಣದಲ್ಲಿ ರಾಗ ಎಂಬ ಸಿನಿಮಾ ಮಾಡಿ ಕೊನೆಗೆ ಆ ಸಿನಿಮಾದಿಂದಲೂ ಕೈ ಸು’ಟ್ಟು’ಕೊಂಡ್ರು. ಇಷ್ಟೆಲ್ಲ ಆದಮೇಲೆ ಬದುಕಿ ಏನು ಪ್ರಯೋಜನ ಅಂತ ನಿರ್ಧರಿಸಿದ ಮಿತ್ರಾ ಜೀ’ವ ಕ’ಳೆ’ದುಕೊಳ್ಳಲು ಮುಂದಾಗಿದ್ರು. ಆದ್ರೆ ದೇವರ ದಯೆ, ಮಾಡಿದ ಒಳ್ಳೆ ಕೆಲಸದ ಫಲವಾಗಿ ಮಿತ್ರಾಗೆ ಏನು ಆಗಲಿಲ್ಲ. ಈ ಬಗ್ಗೆ ತಿಳಿಯುತ್ತಿದ್ದಂತೆ ಸಹಾಯ ಅಂದಾಗ ಮೊದಲು ಮಾಡುವವರು ಇಂಡಸ್ಟ್ರಿಯ ಕರ್ಣ ಅಂದ್ರೆ ಅದು ಚಾಲೆಂಜಿಂಗ್ ಸ್ಟಾರ್ ದರ್ಶನ್..

[widget id=”custom_html-3″]

[widget id=”custom_html-3″]

ಈ ಬಗ್ಗೆ ಮಿತ್ರಾ ಅವರೇ ಮಾಹಿತಿ ನೀಡಿದ್ದಾರೆ. ನನ್ನ ಕಷ್ಟಕ್ಕೆ ಸ್ಪಂದಿಸಿದ್ದು, ನೋವನ್ನು ಹಂಚಿಕೊಂಡಿದ್ದು ದರ್ಶನ್ ಮಾತ್ರ ಅಂತ ಮಾದ್ಯಮವೊಂದಕ್ಕೆ ಹೇಳ್ತಾ ಮಿತ್ರಾ ಭಾವುಕರಾದ್ರು. ಈಗ ಅವಕಾಶಕ್ಕಾಗಿ ಮಿತ್ರಾ ಕೈ ಮುಗಿದು ಬೇಡಿದ್ದಾರೆ. ನಾನೇನು ಹೀರೋ ಅಲ್ಲ.. ಹೀರೋ ಪಾತ್ರ ಮಾಡಲು ನನ್ನಿಂದ ಆಗುವುದು ಇಲ್ಲ ಒಪ್ಪುತ್ತೇನೆ. ಆದರೆ ನನ್ನ ಸಾಮರ್ಥ್ಯ ಏನು ಎಂದು ನನಗೆ ತಿಳಿದಿದೆ.. ನಾನೊಬ್ಬ ಕಲಾವಿದ.. ನನ್ನ ದೇಹದ ಗಾತ್ರಕ್ಕೆ.. ನನ್ನ ಬಣ್ಣಕ್ಕೆ ಯಾವ ಪಾತ್ರ ಹೊಂದುತ್ತದೆಯೋ ಅದೇ ಪಾತ್ರವನ್ನು ಕೊಡಿ.. ನಾನು ಮಾಡಲು ಸಿದ್ದನಿದ್ದೇನೆ.. ನನಗೆ ಅವಕಾಶ ಕೊಡಿ.. ನಾನು ಮಾಡಿ ತೋರಿಸುತ್ತೇನೆ.. ಭಿಕ್ಶುಕನ ಪಾತ್ರ ಕೊಟ್ಟರೂ ಸಹ ನಾನು ಮಾಡಲು ಸಿದ್ದನಿದ್ದೇನೆ ಪ್ರತಿಭೆಗೆ ಪ್ರೋತ್ಸಾಹಿಸಿ ಅಂತ ಕೈ ಮುಗಿದು ಬೇಡಿಕೊಂಡಿದ್ದಾರೆ.