ಸ್ನೇಹಿತರೇ, ಮಮತೆಯ ಮೂರ್ತಿ, ಕರುಣಾಮಯಿ, ತ್ಯಾಗಮಯಿ ಎಂದರೆ ಅದು ತಾಯಿ, ನಮ್ಮ ಕಣ್ಣಿಗೆ ಕಾಣುವ ನಿಜವಾದ ದೇವರು ಅಂದರೆ ಅದು ತಾಯಿ. ಮಿತ್ರರೇ, ತಾಯಿಯನ್ನ ವರ್ಣನೆ ಮಾಡಲು ಎಷ್ಟು ಪದಗಳಿದ್ದರೂ ಸಾಲೋದಿಲ್ಲ. ನಮ್ಮನ್ನ ತನ್ನ ಹೊಟ್ಟೆಯಲ್ಲಿ ಒಂಬತ್ತು ತಿಂಗಳು ಹೊತ್ತು ಸಾಕಿ ಜನ್ಮ ನೀಡುವ ತಾಯಿಯ ಋಣವನ್ನ ಯಾರಾದರೂ ತೀರಿಸಲು ಸಾಧ್ಯವೇ ಹೇಳಿ..ಅದಕ್ಕೆ ಹೇಳೋದು ತಾಯಿಯ ಮಮತೆ ವಾತ್ಸಲ್ಯಕ್ಕೆ ಬೆಲೆ ಕಟ್ಟೋದಕ್ಕೆ ಆಗೋದಿಲ್ಲ ಅಂತ.ಮಕ್ಕಳ ಪ್ರತಿಯೊಂದು ಹೆಜ್ಜೆಯಲ್ಲೂ ಅವರ ಹಿತವನ್ನ ಬಯಸವುದು ಯಾರೊದರೊಬ್ಬರು ಈ ಜಗದಲ್ಲಿ ಇದ್ದಾರಾ ಎಂದರೆ ಅದು ತಾಯಿ ಮಾತ್ರ. ಹೌದು, ಇಲ್ಲೊಬ್ಬ ಖ್ಯಾತ ನಟ ತನ್ನ ತಾಯಿಯ ಪ್ರೀತಿ ವಾತ್ಸಲ್ಯದ ಪ್ರತೀಕವಾಗಿ ಏನಾದರು ಮಾಡಲೇಬೇಕು ಎಂದು ಯೋಚಿಸಿ ಯಾರೂ ಮಾಡದ ಮಹತ್ವದ ಕಾರ್ಯ ಮಾಡಿ ಎಲ್ಲರ ಮೆಚ್ಚುಗೆಗೆ ಪಾತ್ರನಾಗಿದ್ದಾನೆ.

ಹೌದು, ಅಭಿಮಾನಿಗಳು ತಮ್ಮ ನಟ ನಟಿಯರಿಗೆ ದೇವಸ್ಥಾನ ಕಟ್ಟುವುದನ್ನ ನೋಡಿದ್ದೇವೆ. ಮತ್ತೆ ಕೆಲವರು ತಮ್ಮ ಪ್ರೀತಿಯ ಪ್ರಾಣಿಗಳಿಗೂ ಆಲಯ ಕಟ್ಟಿರುವುದನ್ನ ನಾವು ಕೇಳಿದ್ದೇವೆ. ಆದರೆ ಈ ನಟ ತನ್ನ ತಾಯಿಗಾಗಿ ಸುಂದರವಾದ ಗುಡಿಯನ್ನ ಕಟ್ಟಿಸಿ ದಿನನಿತ್ಯ ಪೂಜೆಮಾಡಿ ಅವರ ಆಶೀರ್ವಾದ ಪಡೆಯುತ್ತಿದ್ದಾರೆ. ಹೌದು, ತಾಯಿ ಹೆತ್ತ ಮಕ್ಕಳೆನ್ನಲ್ಲಾ ಬಿಟ್ಟು ಹೋದಮೇಲೂ ಸಹ ತಾಯಿಗಾಗಿ ಏನೆಲ್ಲಾ ಮಾಡುಬಹುದು ಎಂಬುದನ್ನ ಈ ನಟ ಮಾಡಿ ತೋರಿಸಿದ್ದಾರೆ. ಇಂದಿನ ತಾಂತ್ರಿಕ ಯುಗದಲ್ಲಿ ವಯಸ್ಸಾದ ತಂದೆ ತಾಯಿಗಳನ್ನ ಸಾಕಲಾಗದ ಅನೇಕರು ವೃದ್ದಾಶ್ರಮದಲ್ಲಿ ಬಿಟ್ಟು ಬರುವುದು, ಮನೆಯಿಂದ ಹೊರಗಡೆ ಹಾಕುವುದನ್ನೆಲ್ಲಾ ನಾವೆಲ್ಲಾ ದಿನ ನಿತ್ಯದ ಸುದ್ದಿಗಳಲ್ಲಿ ನೋಡುತ್ತಿರತ್ತೇವೆ.

ಆದರೆ ನಟ, ನಿರ್ದೇಶಕ ಹಾಗೂ ನಿರ್ಮಾಪಕರೂ ಆಗಿರುವ ರಾಜ್ ಶೇಖರ್ ಕೋಟ್ಯಾನ್ ಅವರು ತನ್ನ ತಾಯಿ ದಿವಂಗತ ಕಲ್ಯಾಣಿ ಪೂಜಾರ್ತಿ ಅವರಿಗಾಗಿ ಆಲಯ ಕಟ್ಟಿದ್ದು ಪ್ರತೀದಿನ ಪೂಜೆ ಸಲ್ಲಿಸಿ ತಾಯಿಯಿಂದ ಆಶೀರ್ವಾದ ಪಡೆಯುತ್ತಾರೆ. ಇನ್ನು ಈ ದೇವಾಲಯ ಕಟ್ಟಿರುವುದು ಉಡುಪಿ ಜಿಲ್ಲೆಯ ಸಾಂತೂರಿನಲ್ಲಿ ಇರುವ ಗರಡಿ ಮನೆಯಲ್ಲಿ. ರಾಜಸ್ಥಾನದ ಶಿಲ್ಪ ಕಲಾವಿದರಾಗಿರುವ ಪೃಥ್ವಿರಾಜ್ ಎಂಬುವರಿಂದ ತನ್ನ ತಾಯಿಯ ಸುಂದರವಾದ ಏಕಶಿಲಾ ವಿಗ್ರಹ ಕೆತ್ತನೆ ಮಾಡಿಸಿದ್ದು ಇದಕ್ಕಾಗಿ ಜೈಪುರದ ವೈಟ್ ಮಾರ್ಬಲ್ ಕಲ್ಲನ್ನ ಉಪಯೋಗಿಸಲಾಗಿದೆ. ಇನ್ನು ಈ ಏಕಶಿಲಾವಿಗ್ರಹವನ್ನ ರಾಜಸ್ಥಾನದಲ್ಲೇ ನಿರ್ಮಾಣ ಮಾಡಲಾಗಿದ್ದು ಇದಕ್ಕಾಗಿ ಆರು ತಿಂಗಳು ಸಮಯ ತೆಗೆದುಕೊಳ್ಳಲಾಗಿದೆ ಎಂದು ಹೇಳಲಾಗಿದೆ. ನಟ ರಾಜ್ ಶೇಖರ್ ಕೋಟ್ಯಾನ್ ಅವರ ತಾಯಿ ಕಲ್ಯಾಣಿ ಅವರ ಮೂರ್ತಿಯು ಥೇಟ್ ಫೋಟೋದಲ್ಲಿರುವಂತಯೇ ಮೂಡಿಬಂದಿದ್ದು ಶಿಲ್ಪಕಲಾವಿದನ ಕಲೆಗೆ ಹ್ಯಾಟ್ಸಾಪ್ ಹೇಳಲೇಬೇಕು.

ನಟ ರಾಜಶೇಖರ್ ಅವರು ತನ್ನ ತಾಯಿ ಇರುವಾಗಲೂ ಚೆನ್ನಾಗಿ ನೋಡಿಕೊಂಡಿದ್ದು, ತಾಯಿ ಗತಿಸಿದ ಮೇಲೂ ಸಹ ತಾಯಿಯ ನೆನಪು ಚಿರಕಾಲ ಉಳಿಯಬೇಕು ಎಂದು ಯೋಚಿಸಿ ಸುಂದರವಾದ ಮೂರ್ತಿಯನ್ನ ಮಾಡಿಸಿದ್ದಾರೆ. ಕನ್ನಡ ಸೇರಿದಂತೆ ತಮಿಳು ತೆಲುಗು ಭಾಷೆಗಳಲ್ಲೂ ಖಳನಾಯಕ ಸೇರಿದಂತೆ ವಿಭಿನ್ನ ಪಾತ್ರಗಳಲ್ಲಿ ಮಿಂಚಿರುವ ನಟ ರಾಜಶೇಖರ್ ಈಗ ರಾಜಕಾರಣಿಯೂ ಆಗಿದ್ದಾರೆ. ಒಟ್ಟಿನಲ್ಲಿ ವಯಸಾಗುತ್ತಲೇ ತಮ್ಮ ತಂದೆ ತಾಯಿಗಳನ್ನ ಅನಾಥಾಶ್ರಮಕ್ಕೋ, ವೃದ್ದಾಶ್ರಮಕ್ಕೋ ಕಳುಹಿಸುವ ಈ ಕಾಲದಲ್ಲಿ ತನ್ನ ತಾಯಿ ಪ್ರೀತಿಗೋಸ್ಕರ ಗುಡಿಯನ್ನೇ ಕಟ್ಟಿದ್ದ ನಟ ರಾಜಶೇಖರ್ ಅವರು ಎಲ್ಲರಿಗೂ ಮಾದರಿಯಾಗಿದ್ದಾರೆ. ಸ್ನೇಹಿತರೇ, ನಮಗೆ ತಾಯಿಗಾಗಿ ದೇಗುಲ ಕಟ್ಟದಿದ್ದರೂ ಪರವಾಗಿಲ್ಲ, ತಾಯಿ ಇರುವವರೆಗೂ ಅವರನ್ನ ಹೂವಿನಂತೆ ನೋಡಿಕೊಂಡರೆ ಅಷ್ಟೇ ಸಾಕು ಎಂಬುದು ನನ್ನ ಅಭಿಮತ. ಇನ್ನು ಇದರ ಬಗ್ಗೆ ನಿಮ ಅನಿಸಿಕೆ ಇಲ್ಲಿ ತಿಳಿಸಿ..