Advertisements

ನಟ ರಾಮ್ ಕುಮಾರ್ ಮಗ ಈಗ ಹೇಗಿದ್ದಾರೆ ಗೊತ್ತಾ? ಮಗನು ಕೂಡ ನಟಿಸುತ್ತಿದ್ದಾರೆ ನೋಡಿ..

Cinema

ನಮಸ್ತೆ ಸ್ನೇಹಿತರೆ, ರಾಮ್ ಕುಮಾರ್ ಎಂಬ ಹೆಸರು ಹೇಳಿದ ತಕ್ಷಣ ಪ್ರತಿಯೊಬ್ಬ ಕನ್ನಡಿಗನಿಗೂ ನೆನಪಾಗುವುದು ಅವರ ಸುಂದರವಾದ ಮುಖ, ನಿಶ್ಕಲ್ಮಶ ನಗು ಹಾಗೂ ಪ್ರೀತಿ ತುಂಬಿದ ನೋಟ ಎಂದು ಹೇಳಿದರೆ ತಪ್ಪಾಗಲಾರದು. ಅದೊಂದು ಕಾಲದಲ್ಲಿ ರಾಮ್ ಕುಮಾರ್ ಕೇವಲ ನಟ ಮಾತ್ರರಲ್ಲದೇ ಅದೇಷ್ಟೋ ಹುಡುಗಿಯರ ಡ್ರೀಮ್ ಬಾಯ್ ಕೂಡ ಆಗಿದ್ದರು. ಅವರ ಗೆಜ್ಜೆನಾದ, ಕಾವ್ಯ, ತವರಿನ ತೊಟ್ಟಿಲು.. ಮುಂತಾದ ಕೆಲವು ಚಿತ್ರಗಳನ್ನ ಈಗಲೂ ಸಹ ದೂರದರ್ಶನದಲ್ಲಿ ಪ್ರಸಾರವಾದ್ರೆ ಮನೆ ಮಂದಿಯೆಲ್ಲಾ ಕುಳಿತು ನೋಡುತ್ತಾರೆ..

Advertisements

ಇನ್ನೂ ರಾಮ್ ಕುಮಾರ್ ಅವರ ಮಗ ಎಷ್ಟು ದೊಡ್ಡವನಾಗಿ ಬೆಳೆದಿದ್ದಾನೆ ಗೊತ್ತಾ? ನೋಡೊಣ ಬನ್ನಿ. ಇನ್ನೂ ನಟ ರಾಮ್ ಕುಮಾರ್ ಅವರು ವರನಟ ಡಾಕ್ಟರ್ ರಾಜ್ ಕುಮಾರ್ ಅವರ ಪ್ರೀತಿಯ ಪುತ್ರಿಯಾದ ಪೂರ್ಣಿಮಾ ಅವರನ್ನು ಪ್ರೀತಿಸಿ ವಿವಾಹ ಆಗುತ್ತಾರೆ. ಈ ದಂಪತಿಗೆ ಒಬ್ಬ ಮಗ ಮತ್ತು ಮಗಳಿದ್ದು ಈ ಪೊಟೊಗಳಲ್ಲಿ ನೋಡಬಹುದು.. ವಿಶೇಷ ಏನೆಂದರೆ ರಾಮ್ ಕುಮಾರ್ ಅವರ ಮಗ ಹಾಗೂ ಮಗಳು. ಇಬ್ಬರೂ ಕೂಡ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ್ದಾರೆ. 2010 ರ ನಂತರ ರಾಮ್ ಕುಮಾರ್ ಅವರ ಯಾವ ಚಿತ್ರಗಳು ಕೂಡ ಉತ್ತಮ ಯಶಸ್ಸನ್ನು ಕೊಡೊದಿಲ್ಲ..

2013 ರಲ್ಲಿ ಬಂದ ಶ್ರೀ ಕ್ಷೇತ್ರ ಆದಿಚುಂಚನಗಿರಿ ಚಿತ್ರದ ನಂತರ ಮತ್ಯಾವ ಚಿತ್ರಗಳಲ್ಲಿಯೂ ಕೂಡ ರಾಮ್ ಕುಮಾರ್ ಅವರು ನಟಿಸಿಲ್ಲ. ಉತ್ತಮ ವ್ಯಕ್ತಿತ್ವ ಹಾಗೂ ಅದ್ಬುತ ಕಲೆಯನ್ನು ಹೊಂದಿರುವ ರಾಮ್ ಕುಮಾರ್ ಅವರಂತಹ ನಟರು ಕನ್ನಡ ಚಿತ್ರರಂಗಕ್ಕೆ ಬೇಕಾಗಿದ್ದಾರೆ.. ವಿಭಿನ್ನ ಪಾತ್ರ ಹಾಗೂ ಒಳ್ಳೆಯ ಕಥೆಯನ್ನು ಹೊಂದಿರುವಂತಹ ಸಿನಿಮಾ ಪಾತ್ರಗಳ ಮೂಲಕ ಅವರು ಚಿತ್ರರಂಗಕ್ಕೆ ಪುನಃ ಪಾದಾರ್ಪಣೆ ಮಾಡಲಿ ಅನ್ನೊದು ಅಭಿಮಾನಿಗಳ ಆಶಯವಾಗಿದೆ.. ರಾಮ್ ಕುಮಾರ್ ಅವರು ನಟಿಸಿದಂತಹ ಯಾವ ಚಿತ್ರ ನಿಮಗೆ ತುಂಬಾ ಇಷ್ಟ ಎಂಬುದನ್ನು ತಿಳಿಸಿ.