ನಮಸ್ತೇ ಸ್ನೇಹಿತರೆ, ಕನ್ನಡ ಚಿತ್ರರಂಗ ಕಂಡ ಖ್ಯಾತ ನಟರಲ್ಲಿ ರಾಮ್ ಕುಮಾರ್ ಕೂಡ ಒಬ್ಬರು. ಅವರ ಸುಂದರ ನೋಟ, ನಿಷ್ಕಲ್ಮಕ ನಗೆ, ಪ್ರೀತಿಯಿಂದ ತುಂಬಿದ ಆ ಮುಗ್ದ ನೋಟ ಇವೆಲ್ಲಾ ರಾಮ್ ಕುಮಾರ್ ಅಂದ ತಕ್ಷಣ ನೆನಪಿಗೆ ಬರುತ್ತವೆ. ಆಗಿನ ಕಾಲಕ್ಕೆ ಎಷ್ಟೋ ಹುಡುಗಿಯರ ಡ್ರೀಮ್ ಬಾಯ್ ಆಗಿದ್ದವರು ನಟ ರಾಮ್ ಕುಮಾರ್ ೧೯೯೦ರಲ್ಲಿ ಆವೇಶ ಚಿತ್ರದ ಮೂಲಕ ಸ್ಯಾಂಡಲ್ವುಡ್ ಗೆ ಎಂಟ್ರಿ ಕೊಟ್ಟ ರಾಮ್ ಕುಮಾರ್ ನಟನೆಯ ಜೊತೆಗೆ ನಿರ್ದೇಶಕರು ಹಾಗೂ ನಿರ್ಮಾಪಕರು ಆಗಿದ್ದಾರೆ. ಇನ್ನು ಅದೇ ವರ್ಷದಲ್ಲಿ ತೆರೆಕಂಡ ವಿಷ್ಣುವರ್ಧನ್ ರವರ ಮುತ್ತಿನ ಹಾರ ಚಿತ್ರದಲ್ಲಿಯೂ ಕೂಡ ನಟಿಸಿದ್ದಾರೆ.

ಇನ್ನು ರಾಮ್ ಕುಮಾರ್ ಅವರು ನಾಯಕ ನಟನ ಪಾತ್ರದಲ್ಲಿ ನಟಿಸಿದ ಚಿತ್ರಗಳಾದ ಗೆಜ್ಜೆನಾದ, ಕಾವ್ಯ, ತವರಿನ ತೊಟ್ಟಿಲು ಚಿತ್ರಗಳನ್ನ ಈಗಲೂ ಮತ್ತೆ ಮತ್ತೆ ನೋಡೋಣ ಎಂದೆನಿಸುವಷ್ಟರ ಮಟ್ಟಿಗೆ ಅದ್ಭುತವಾಗಿ ನಟಿಸಿದ್ದಾರೆ. ಇನ್ನು ಇವರ ತಂದೆ ಶೃಂಗಾರ್ ನಾಗರಾಜ್ ರವರು ಕೂಡ ಕನ್ನಡ ಚಿತ್ರರಂಗದಲ್ಲಿ ನಟ, ಛಾಯಾಗ್ರಾಹಕ ಹಾಗೂ ನಿರ್ಮಾಪಕರಾಗಿ ಕೆಲಸ ಮಾಡಿದವರು. ತಂದೆ ಸಿನಿಮಾ ರಂಗದಲ್ಲಿ ಇದ್ದ ಕಾರಣ ಚಿಕ್ಕಂದಿನಲ್ಲೇ ಸಿನಿಮಾಗಳ ಕಡೆ ಹೆಚ್ಚು ಒಲವು ಹೊಂದಿದ್ದ ರಾಮ್ ಕುಮಾರ್ ಆವೇಶ ಸೇರಿದಂತೆ ಕನ್ನಡದ ಹಲವಾರು ಚಿತ್ರಗಳಲ್ಲಿ ನಟಿಸಿ ಟಪ್ ನಟನಾಗಿ ಬೆಳೆಯುತ್ತಾರೆ. ಬಳಿಕ ಅಣ್ಣಾವ್ರು ರಾಜ್ ಕುಮಾರ್ ಅವರ ಮಗಳಾದ ಪೂರ್ಣಿಮಾ ಅವರಜೊತೆ ದಾಂಪತ್ಯ ಜೀವನಕ್ಕೆ ಕಾಲಿಡುತ್ತಾರೆ.

ರಾಮ್ ಕುಮಾರ್ ಪೂರ್ಣಿಮಾ ದಂಪತಿಗಳಿಗೆ ಮಗ ಧೀರನ್ ರಾಮ್ ಕುಮಾರ್ ಹಾಗೂ ಮಗಳು ಧನ್ಯ ರಾಮ್ ಕುಮಾರ್ ಇದ್ದಾರೆ. ಇನ್ನು ಇಬ್ಬರೂ ಮಕ್ಕಳು ಕೂಡ ಸ್ಯಾಂಡಲ್ವುಡ್ ಗೆ ಈಗಾಗಲೇ ಎಂಟ್ರಿ ಕೊಟ್ಟಿದ್ದಾರೆ. ಆದರೆ ಇದೆಲ್ಲದರ ಜೊತೆಗೆ ೨೦೧೦ರ ಬಳಿಕ ನಟ ರಾಮ್ ಕುಮಾರ್ ನಟಿಸಿದ ಚಿತ್ರಗಳು ಯಶಸ್ಸು ಕಾಣಲಿಲ್ಲ. ೨೦೧೩ರಲ್ಲಿ ಅವರು ನಟಿಸಿದ ಶ್ರೀ ಕ್ಷೇತ್ರ ಆದಿಚುಂಚನಗಿರಿ ಅವರ ಕೊನೆಯ ಚಿತ್ರವಾಗಿದೆ. ಇನ್ನು ನಟ ರಾಮ್ ಕುಮಾರ್ ಅವರು ಮತ್ತೆ ಸ್ಯಾಂಡಲ್ವುಡ್ ಗೆ ರೀ ಎಂಟ್ರಿ ಕೊಡಬೇಕೆಂಬುದು ಅಭಿಮಾನಿಗಳ ಬಯಕೆಯಾಗಿದೆ. ಇನ್ನು ರಾಮ್ ಕುಮಾರ್ ಅವರ ಮನೆ ಎಷ್ಟು ಸುಂದರವಾಗಿದೆ ಗೊತ್ತಾ ? ನೋಡಲು ಈ ವಿಡಿಯೋ ನೋಡಿ..