Advertisements

ರವಿಚಂದ್ರನ್ ಮಗ ಮನೋರಂಜನ್ ಮದುವೆ ಪಿಕ್ಸ್.. ಹುಡುಗಿ ಯಾರು ಗೊತ್ತಾ?

Cinema

ನಮಸ್ತೆ ಸ್ನೇಹಿತರೆ, ಕ್ರೇಜಿಸ್ಟಾರ್ ರವಿಚಂದ್ರನ್ ಅವರು 2019 ರಲ್ಲಿ ತಮ್ಮ ಮಗಳ ಮದುವೆಯನ್ನು ಅದ್ದೂರಿಯಾಗಿ ಮಾಡಿದ್ದರು. ಇದೀಗ ತಮ್ಮ ಪುತ್ರ ಮನೋರಂಜನ್ ಮದುವೆ ಬಗ್ಗೆ ಗಾಂಧಿ ನಗರದಲ್ಲಿ ಸುದ್ದಿಯೊಂದು ಹರಿದಾಡುತ್ತಿದೆ.. ಆದರೆ ನಿಜಕ್ಕೂ ಮನೋರಂಜನ್ ಮದುವೆ ಪಿಕ್ಸ್ ಆಯ್ತಾ ಹುಡುಗಿ ಯಾರು? ಇದರೆಲ್ಲದರ ಬಗ್ಗೆ ಸಂಪೂರ್ಣ ಮಾಹಿತಿಯನ್ನು ತಿಳಿದುಕೊಳ್ಳೋಣ ಬನ್ನಿ. ರವಿಚಂದ್ರನ್ ಅವರ ಪುತ್ರ ಮನೋರಂಜನ್. ಸಾಹೇಬ ಚಿತ್ರದ ಮೂಲಕ ಬೆಳ್ಳಿ ತೆರೆಗೆ ಪಾದಾರ್ಪಣೆ ಮಾಡಿದ್ದರು..

Advertisements

ಈಗ ಪ್ರಾರಂಭ ಹಾಗೂ ಮುಗಿಲ್ ಪೇಟೆ ಸಿನಿಮಾದ‌ ಮೂಲಕ ಪ್ರೇಕ್ಷಕರನ್ನು ರಂಜಿಸಲು ಮುಂದಾಗಿದ್ದಾರೆ. ಇದಕ್ಕೂ ಹೊಸ ವಿಷಯ ಏನೆಂದರೆ ದುನಿಯಾ ಸೂರಿ, ಬ್ಯಾಡ್ ಮ್ಯಾನರ್ಸ್ ಸಿನಿಮಾದ ನಂತರ ಕನಸುಗಾರನ ಪುತ್ರ ಮನೋರಂಜನ್ ಅವರಿಗೆ ಆ್ಯಕ್ಷನ್ ಕಟ್ ಹೇಳಲಿದ್ದಾರಂತೆ.. ಸೂರಿ ಸಿನಿಮಾದಲ್ಲಿ ಮನೋರಂಜನ್ ನಟಿಸಲಿರುವ ಬಗ್ಗೆ ಸ್ವತಃ ಮನೋರಂಜನ್ ಅವರೇ ಹೇಳಿಕೊಂಡಿದ್ದು.. ಈ ವರ್ಷದ ಮಧ್ಯ ಭಾಗದಲ್ಲಿ ಸೂರಿ, ಮನೋರಂಜನ್ ಚಿತ್ರ ಶುರುವಾಗೋ ಸಾಧ್ಯತೆ ಇದೆ..

ಇನ್ನೂ ಸಿಹಿ ಸುದ್ದಿ ಏನೆಂದರೆ ಮನೋರಂಜನ್ ಮದುವೆ ಆಗಲಿದ್ದಾರೆ. 2021 ರಲ್ಲಿ ಖಂಡಿತ ಮದುವೆಯಾಗುತ್ತೇನೆ.. ಮನೆಯಲ್ಲಿ ಸಿದ್ಧತೆಗಳು ನಡೆಯುತ್ತಿದೆ. ಆದರೆ ಹುಡುಗಿ ಮಾತ್ರ ತಂದೆ ತಾಯಿ ಒಪ್ಪಿದವರೇ ಆಗಿರುತ್ತಾರೆ ಎಂದು ಹೇಳಿದ್ದಾರೆ. ಈ ಮೂಲಕ ಲೌವ್ ಮ್ಯಾರೇಜ್ ಎನ್ನುವ ಊಹ ಪೋಹಕ್ಕೆ ತೆರೆ ಎಳೆದಿದ್ದಾರೆ‌.. ಇನ್ನೂ ನಿರಂಜನ್ ಅವರ ನಟನೆ ಬಗ್ಗೆ ನಿಮ್ಮ ಅನಿಸಿಕೆ ಹಾಗೂ ಅಭಿಪ್ರಾಯವನ್ನು ತಿಳಿಸಿ.