Advertisements

ಬ್ರೇಕಿಂಗ್ ನ್ಯೂಸ್ ನಟಿ ಸಂಜನಾ ಅರೆಸ್ಟ್. ಸಂಜನಾ ಮನೆಯಲ್ಲಿ ಏನೆಲ್ಲಾ ಸಿಕ್ಕಿದೆ ಗೊತ್ತಾ?

Cinema

ನಮಸ್ತೆ ಸ್ನೇಹಿತರೆ ನಟಿ ರಾಗಿಣಿಯ ಮನೆಯ ಮೇಲೆ ಪೊಲೀಸರು ರೇಡ್ ಮಾಡಿ ನಂತರ ಕೊನೆಗೆ ಅರೆಸ್ಟ್ ಮಾಡಿ ವಿಚಾರಣೆಗೆ ಹಾಜರಿಪಡಿಸಿದ್ದರು. ಇದರ ಬೆನ್ನಲ್ಲೇ ಈಗ ಪೊಲೀಸರು ನಟಿ ಸಂಜನಾ ಅವರನ್ನು ಅರೆಸ್ಟ್ ಮಾಡಿದ್ದಾರೆ. ಹೌದು ಸ್ನೇಹಿತರೆ ಸಂಜನಾ ಆಪ್ತ ರಾಹುಲ್ ತಿಳಿಸಿದ ಹೇಳಿಕೆಯ ಮೇರೆಗೆ ಇಂದು ಸಂಜನಾ ಮನೆಯ ಮೇಲೆ ಸಿಸಿಬಿ ಅಧಿಕಾರಿಗಳು ರೇಡ್ ಮಾಡಿದ್ದಾರೆ. ಹೌದು ನಿನ್ನೆ ಕೋರ್ಟ್ ನಲ್ಲಿ ಸರ್ಚ್ ವಾರೆಂಟ್ ಪಡೆದು ಈ ದಿನ ನೇರವಾಗಿ ಸಂಜನಾ ಮನೆಗೆ ಪೊಲೀಸರು ಆಗಮಿಸಿದ್ದಾರೆ. ಕಳೆದ ವಾರದಿಂದಲೂ ಕೂಡ ಪ್ರಶಾಂತ್ ಸಂಬರ್ಗಿ ಈ ಪ್ರಕರಣದಲ್ಲಿ ಸಂಜನಾ ಅವರು ಕೂಡ ಇದ್ದಾರೆ ಎಂದು ಹೇಳಿದ್ದರು. ಇನ್ನು ಸಂಜನಾ ಅವರು ಇದಕ್ಕೂ ನನಗು ಸಂಬಂಧವೇ ಇಲ್ಲ ಎಂದು ಹೇಳಿಕೆ ನೀಡಿದ್ದರು. ಆದರೆ ಪ್ರಶಾಂತ್ ನೀಡಿರುವ ಹೇಳಿಕೆ ಬಾರಿ ಚರ್ಚೆಗೆ ಗುರಿಯಾಗಿ ಇಂದು ಸಂಜನಾ ಗೆ ಯಾವುದೇ ನೋಟಿಸ್ ನೀಡದೆ ಏಕಾಏಕಿ ಪೊಲೀಸರು ಎಂಟ್ರಿ ಕೊಟ್ಟಿದ್ದಾರೆ.

Advertisements

ಇಂದು ಬೆಳಂ ಬೆಳಗ್ಗೆ ಇಂದಿರಾನಗರದ್ಲಲಿರುವ ನಟಿ ಸಂಜನಾ ಮನೆಯ ಮೇಲೆ ಇನ್ಸ್ ಪೆಕ್ಟರ್ ಪುನೀತ್ ಅವರ ನೇತೃತ್ವದಲ್ಲಿ ಮೂರು ವಾಹನಗಳಲ್ಲಿ ಬಂದ 10 ಕ್ಕೂ ಹೆಚ್ಚು ಪೊಲೀಸರು ದಾಳಿ ನಡೆಸಿ ಶೋಧ ಕಾರ್ಯವನ್ನು ನಡೆಸಿದ್ದಾರೆ. ಸತತವಾಗಿ 4 ಗಂಟೆಗಳ ಕಾಲ ಶೋಧ ಕಾರ್ಯಚರಣೆ ನಡೆಸಿದ್ದು ಸಂಜನಾ ಮೊಬೈಲ್, ಲ್ಯಾಪ್ಟಾಪ್, ಪೆನ್ಡ್ರೈವ್ ಹಾಗೂ ಪರ್ಸ್ ಗಳನ್ನು ವಶಪಡೆಸುಕೊಂಡು ಸಿಸಿಬಿ ಕಚೇರಿಗೆ ಕರೆದುಕೊಂಡು ಹೋಗುತ್ತಿದ್ದಾರೆ.

ಇನ್ನೂ ಅಧಿಕಾರಿಗಳು ನಟಿ ಸಂಜನಾ ಅವರನ್ನು ಕಸ್ಟಡಿಗೆ ತೆಗೆದುಕೊಳ್ಳುತ್ತಿದ್ದಂತೆ ಸಿಕ್ಕಾಪಟ್ಟೆ ರಂಪಾಟ ಮಾಡಿದ್ದಾರೆ. ಹೌದು ರೇಡ್ ಮಾಡಿದ ಪೊಲೀಸರು ಕೊನೆಗೆ ಸಂಜನಾ ಅವರಿಗೆ ಮೇಡಂ ಸಿಸಿಬಿ ಕೇಂದ್ರ ಕಚೇರಿಗೆ ಹೋಗಬೇಕೆಂದು ಹೇಳಿದ್ದಾರೆ ಆದರೆ ಸಂಜನಾ ನಾನು ಬರೋದಿಲ್ಲ ನೀವು ನನಗೆ ಯಾವುದೇ ನೋಟಿಸ್ ನೀಡಿಲ್ಲ, ಏಕಾಏಕಿ ನೀವು ದಾಳಿ ಮಾಡಿದ್ದೀರಾ? ನಾನೇನು ಆರೋಪಿ ಅಲ್ಲ ನಾನ್ಯಾಕೆ ಬರಲಿ ಎಂದು ನಾಟಕವಾಡಿದ್ದಾರೆ.

ಇನ್ನೂ ಅತಿರೇಖವಾಗಿ ಆಡುತಿದ್ದ ಸಂಜನಾ ಅವರ ಮೇಲೆ ಸಿಸಿಬಿ ಅಧಿಕಾರಿಗಳು ಗರಂ ಆಗಿದ್ದಾರೆ. ಹೌದು ನೀವು ನಮ್ಮ ವಶದಲ್ಲಿದ್ದೀರಾ ಹೀಗಾಗಿ ನಾವು ಹೇಳಿದ ಹಾಗೆ ಕೇಳಬೇಕು ನೀವು ಹೇಳಿದಂತೆ ಅಲ್ಲ ಎಂದು ಸಂಜನಾ ಅವರನ್ನು ಗದರಿಸಿದ್ದಾರೆ. ಇದಾದ ನಂತರ ಅತಿರೇಖವಾಗಿ ಕುಣಿಯುತ್ತಿದ್ದ ಸಂಜನಾ ತಣ್ಣಗಾಗಿದ್ದರೆ. ಸಂಜನಾ ಅವರು ಒಂದು ವಾರದಿಂದಲೂ ಕೂಡ ಅತಿರೇಖವಾಗಿ ಆಡುತ್ತಿದ್ದಾರೆ ಆರೋಪ ಮಾಡಿದವರ ಮೇಲೆ ಹಾಗೂ ಮಾಧ್ಯಮದವರ ಮೇಲೆ ಕಿಡಿಕಾರಿದ್ದರು ಆದರೆ ಈ ದಿನ ಬಾಲ ಮುದುರಿಕೊಂಡು ಸಿಸಿಬಿ ಕಚೇರಿಗೆ ಹೋಗುವ ಪರಿಸ್ಥಿತಿ ಬಂದಿದೆ. ಸಿಸಿಬಿ ಕಚೇರಿಗೆ ತೆರಳಿದ ನಂತರ ಸಂಜನಾ ಅವರನ್ನು ವಿಚಾರಣೆ ಮಾಡಲಾಗುತ್ತದೆ. ವಿಚಾರಣೆ ಮುಗಿದ ನಂತರ ಇನ್ನಷ್ಟು ಮಾಹಿತಿಗಳು ಹೊರಬೀಳುವ ಸಾಧ್ಯತೆ ಇದೆ.